ಎಮ್ಮೆಮಾಡು ಅನಿವಾಸಿ ಒಕ್ಕೂಟ ಹಾಗೂ ಕಣಚೂರ್ ಮೆಡಿಕಲ್ ಆಸ್ಪತ್ರೆ ಮತ್ತು ಸಂಶೋಧನ ಕೇಂದ್ರ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಅರೋಗ್ಯ ತಪಾಸಣೆ ಶಿಬಿರ ಡಿಸೆಂಬರ್ 3 ರಂದು ಎಮ್ಮೆಮಾಡುವಿನ ಶಾದಿ ಮಹಲ್ ನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಅಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1.30 ರ ವರೆಗೆ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ.
ಶಿಬಿರದಲ್ಲಿ ಜನರಲ್ ಮೆಡಿಸನ್, ಮಕ್ಕಳ, ಸ್ತ್ರೀರೋಗ ಮತ್ತು ಪ್ರಸೂತಿ, ಮೂಳೆ, ಶಸ್ತ್ರಚಿಕಿತ್ಸಾ, ಕಿವಿ ಮೂಗು ಗಂಟಲು, ಚರ್ಮರೋಗ, ಮಧುಮೇಹ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಕೂಡ ನಡೆಯಲಿದೆ.
ಹೆಸರು ನೋಂದಾವಣೆಗೆ ಹಾಗೂ ಮಾಹಿತಿಗಾಗಿ :87624 81530, 9632000185 ನಂಬರನ್ನು ಸಂಪರ್ಕಿಸುವಂತೆ ಕೊರಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯಲ್ಲಿ ಸಾಮಾಜಿಕ,ರಾಜ್ಯಕೀಯ ನೇತಾರರು ಭಾಗವಹಿಸಲಿದ್ದಾರೆ. ಉಚಿತ ಅರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದು ಕೊಳ್ಳುವಂತೆ ಅನಿವಾಸಿ ಒಕ್ಕೂಟದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

