Reading Time: < 1 minute
ನಾಪೋಕ್ಲು : ಮೈಸೂರಿನಲ್ಲಿ ನಡೆದ 6ನೇ ವರ್ಷದ ನ್ಯಾಷನಲ್ ಓಪನ್ ಕರಾಟೆ ಚಾಂಪಿಯನ್ ಶಿಪ್ ನ ಬ್ಲೂ ಬೆಲ್ಟ್ ಕಥಾ ವಿಭಾಗದಲ್ಲಿ ಪ್ರಥಮ ಮತ್ತು ಕುಮಿತಿ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ನಾಪೋಕ್ಲುವಿನ ಶ್ರೀ ರಾಮ ಟ್ರಸ್ಟ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಪ್ರಾರ್ಥನಾ ಪೊನ್ನಮ್ಮ ಸಾಧನೆ ಮಾಡಿದ್ದಾಳೆ.
ನಾಪೋಕ್ಲುವಿನ ಬೇತು ಗ್ರಾಮದ ಬೊಳ್ಳೆಪಂಡ ಅನೀಶ್ ಹಾಗೂ ಸುಮಾ ದಂಪತಿಯ ಪುತ್ರಿಯಾಗಿರುವ ಇವಳು ಚಂದನ್ ಸೆನ್ ಸೈ ಅವರಲ್ಲಿ ತರಬೇತಿ ಪಡೆದುಕೊಂಡಿದ್ದಾಳೆ.