Reading Time: < 1 minute
ನಾಪೋಕ್ಲು : ನಾಪೋಕ್ಲುವಿನ ಇಂದಿರಾನಗರದ ವಿವೇಕಾನಂದ ಸಂಘದ ನೂತನ ಅಧ್ಯಕ್ಷರಾಗಿ ಕೆ.ಬಿ.ಸುದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಳೇ ತಾಲೂಕುವಿನ ಶ್ರೀ ಭಗವತಿ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷರಾದ ಯು.ಕೆ. ಶಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್.ಸಂದೇಶ್, ಉಪಾಧ್ಯಕ್ಷರಾಗಿ ಯು.ಕೆ. ಶಶಿ, ಸಹಕಾರ್ಯದರ್ಶಿಯಾಗಿ ಸಜಿತ್, ಖಜಾಂಚಿಯಾಗಿ ಡಿ.ಆರ್. ಜಲೇಂದ್ರ, ಸಮಿತಿ ಸದಸ್ಯರಾಗಿ, ವಿಕ್ರಂ, ಪ್ರಕಾಶ್, ಪವನ್, ಹರಿದಾಸ್, ಸುನಿಲ್, ಶರವಣ, ಮಣಿಕಂಠ, ಚಂದ್ರಶೇಖರ್ ಆಯ್ಕೆಯಾದರೆ ಗೌರವಾಧ್ಯಕ್ಷರಾಗಿ ಟಿ.ಆರ್. ರಾಜಪ್ಪ, ಸಲಹೆಗಾರರಾಗಿ ಸುಬ್ರಮಣಿ, ವಿನಾಯಕ, ವಿನಿಲ್ ಆಯ್ಕೆಯಾದರು.