Reading Time: < 1 minute
ಚೆಯ್ಯ0ಡಾಣೆ ಡಿ 15. ಚೇಯ್ಯ೦ಡಾಣೆ ನರಿಯಂದಡ ಗ್ರಾಮದ ಎಡಪಾಲಕೇರಿ ಅಯ್ಯಪ್ಪ ದೇವರ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. 28 ದಿನ ಪೂಜೆಯನ್ನು ಅರ್ಚಕರಾದ ಶಿವಶರ್ಮ ನೆರವೇರಿಸಿ 29ನೇ ದಿನದ ಮಹಾ ಪೂಜೆಯನ್ನು ಕೆದಮುಳೂರು ಈಶ್ವರ ದೇವಸ್ಥಾನದ ಅರ್ಚಕರಾದ ರಾಧಾ ಕೃಷ್ಣ ನೆರವೇರಿಸಿದರು.
ಭಕ್ತಾದಿಗಳಿಗೆ ಮಧ್ಯಾಹ್ನದ ಭೋಜದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪೋಲ್ಗೊಂಡಿದರು.