Reading Time: 2 minutes
ಆದೂರು ಶ್ರೀ ಭಗವತೀ ಕ್ಷೇತ್ರದಲ್ಲಿ 2025 ಜನವರಿ 19 ರಿಂದ 25 ರ ತನಕ ಜರಗಲಿರುವ “ಪೆರುಂ ಕಳಿಯಾಟ್ಟ ಮಹೋತ್ಸವ”ದ ಯಶಸ್ವಿಗಾಗಿ ಕೊಯಕೂಡೆಲ್ ಪ್ರಾದೇಶಿಕ ಸಮಿತಿಯ ವಡೆಯಿಂದ ಬೆಳೆದ ಸಾವಯವ ಕುಂಬಳಕಾಯಿ ಕೃಷಿಯ ಒಂದನೇ ಬೆಲೆ ಕ್ಯೊಯಿಲು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಹೋತ್ಸವ ಸಮಿತಿಯ ಉಪಾಧ್ಯಕ್ಷ ಶ್ರೀ ಎ.ಜಿ. ಪ್ರಕಾಶ ಭಂಡಾರಿ, ಹಿರಿಯ ಕೃಷಿಕ ಶ್ರೀ ಜಯರಾಮ ರೈ, ಹಿರಿಯ ಕೃಷಿಕೆ ಅನಸೂಯ ಕೆ.ಭಂಡಾರಿ, ಮಹೊತ್ಸವ ಮಾತೃ ಸಮಿತಿ ಉಪಾಧ್ಯಕ್ಷೆ ಶ್ರೀಮತಿ .ಎ.ವಿ. ರಾಧಾ ಶಶಿಧರನ್, ಶ್ರೀಮತಿ ಎಸ್.ಸೀತಾ ರೈ, ಸಿ.ಡಿ.ಎಸ್. ಸದಸ್ಯೆ ಶ್ರೀಮತಿ ದೀಪಾ ಪಣಿಕ್ಕರ್, ಶಾರದಾ ಸಿಎಚ್, ಯಶೋದ ನಾರಾಯಣನ್, ಪುಷ್ಪಾ ರಾಧಾಕೃಷ್ಣ, ಬೇಬಿ ಚಂದ್ರ, ಚಂದ್ರನ್ ಹೊಸಮನೆ ಬಳಿ, ಪೂರ್ಣಿಮಾ ಶಶಿಕಾಂತ, ಲಕ್ಷ್ಮಿ ಕೊಯಕೂಡೆಲ್, ಕು|ಆರ್ಯ, ರಾಮ, ಕೆ.ಶಶಿಕಾಂತ, ಪ್ರಶಾಂತ, ಗಂಗಾಧರ ಕೆ. ಮೊದಲಾದವರು ಭಾಗವಹಿಸಿದರು. ಈ ಸಂದರ್ಭ ಒಟ್ಟು 650 ಕುಂಬಳಕಾಯಿಯ ಕೊಯಿಲು ನಡೆಯಿತು.