ಶ್ರೀ ಶಾಸ್ತಾವು ದೇವಸ್ಥಾನ, ಪೆರಾಜೆ: ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು. Peraje

Reading Time: 6 minutes

ಶ್ರೀ ಶಾಸ್ತಾವು ದೇವಸ್ಥಾನ, ಪೆರಾಜೆ

ದೇವಾಲಯದ ಬಗ್ಗೆ

ಶ್ರೀ ಶಾಸ್ತಾವು ದೇವಸ್ಥಾನ, ಪೆರಾಜೆ: ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು.

ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನವು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 2000 ವರ್ಷಗಳಷ್ಟು ಪುರಾತನವೆಂಬ ನಂಬಿಕೆಯಿದೆ. ಒಂದು ದಿಕ್ಕಿನಲ್ಲಿ ತಲಕಾವೇರಿಯ ಬ್ರಹ್ಮಗಿರಿಯೊಂದಿಗೆ ಸ್ಪರ್ಧಿಸುವಷ್ಟು ಎತ್ತರದ ಕೋಳಿಕಮಲೆ. ಇನ್ನೊಂದು ದಿಕ್ಕಿನಲ್ಲಿ ಸಂಪತ್‌ ಸಮೃದ್ಧ ಪೂಮಲೆ. ಮುಂದೆ-ಹಿಂದೆ ಸುತ್ತಲೂ ಇರುವ ಹಳ್ಳ-ಕೊಳ್ಳ ಕಾಡು ಬೆಟ್ಟಗಳೆಡೆಯಲ್ಲಿ ಕೃಷಿಕ ಸಮುದಾಯದ ಪರಿಶ್ರಮದಿಂದ ತಲೆಯೆತ್ತಿದ ಹಸಿರು ತೋಟಗಳು ಇವೆಲ್ಲವುಗಳ ಜೀವರಸವಾಹಿನಿಯಾಗಿ ಹರಿಯುವ ಪಯಸ್ವಿನಿ ನದಿಯ ತಟದಲ್ಲಿ ಪ್ರಶಾಂತ ವಾತಾವರಣ ಹೊಂದಿದ ಶ್ರೀ ಶಾಸ್ತಾವು ದೇವಸ್ಥಾನವು ಈ ಊರಿನ ಮತ್ತು ಪರವೂರಿನ ಜನರ ಆಸ್ತಿಕ ಭಾವನೆಗಳನ್ನು ಪ್ರಕಾರಗೊಳಿಸುವ ಕೇಂದ್ರವಾಗಿದೆ . 

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಈ ಹಿಂದೆ ಮೂರು ಬಾರಿ ಸಂಪೂರ್ಣ ನಶಿಸಿ ಮತ್ತೆ ಪುನರ್‌ನವೀಕರಣಗೊಂಡಂತಹ ಕ್ಷೇತ್ರವೆಂಬುದು ಅಷ್ಟಮಂಗಲ ಪ್ರಶ್ನೆಯ ಆಧಾರದಲ್ಲಿ ತಿಳಿದು ಬಂದಿರುವುದು. ಸುಮಾರು 300 ವರ್ಷಗಳಿಂದೀಚೆಗೆ ಹುಲ್ಲು ಹಾಸಿನ ಮಾಡಿನಿಂದ ಇದ್ದಿರುವ ದೇವಸ್ಥಾನವನ್ನು ನಂತರ ಹೆಂಚು ಹಾಕಿ ನಿರ್ಮಿಸಿರುವುದಕ್ಕೆ ಸಾಕಷ್ಟು ಪುರಾವೆ ಆಧಾರ ಕಂಡು ಬರುವುದು. ಹಾಲೇರಿ ವಂಶದ ಲಿಂಗರಾಜನೆಂಬ ಅರಸನು ಆನೆಯ ಮೇಲೆ ಬಂದು ಜಾತ್ರೆಯನ್ನು ನಡೆಸುತ್ತಿದ್ದನು ಎಂಬುದು ಹಿರಿಯರ ಅಭಿಪ್ರಾಯ.

ಪೆರಾಜೆ ಎಂಬ ದೇವ ಭೂಮಿಯಲ್ಲಿ ಅತೀ ಪೌರಾಣಿಕ ಕಾಲದಿಂದಲೇ ಪ್ರಭಾ, ಸತ್ಯಕ, ಶಾಸ್ತಾವು ದೇವ ಸಾನಿಧ್ಯಗಳ ಮತ್ತು ದೈವಗಳ ಆರಾಧನೆಯು ಊರ ಮಹಾಜನರ ಐಕ್ಯ, ಮತ್ಯ ಬುದ್ಧಿಯಿಂದಲೂ, ಭಕ್ತಿ, ವಿಶ್ವಾಸ, ಶ್ರದ್ಧೆ ಮತ್ತು ನಂಬಿಕೆಯಿಂದ ನಡೆದು ಬಂದಿರುತ್ತದೆ. ಇಲ್ಲಿ ಶ್ರೀ ಶಾಸ್ತಾವು ದೇವರು ಪ್ರಧಾನವಾಗಿದ್ದು ʼಶನಿಗೆ ವಿಶೇಷʼ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿರುವುದು. ದೈವಗಳ ಆರಾಧನೆಯಲ್ಲಿ  ʼಶ್ರೀ ಕರಿಭೂತ ಕೋಮಾಳಿʼ ಭಕ್ತರ ನಂಬಿಕೆಯ ದೈವವಾಗಿದ್ದು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ನೆಮ್ಮದಿಯನ್ನು ಕಾಣುವುದಕ್ಕೆ ಸಾಧ್ಯವಾಗಿರುವುದರಿಂದ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯೇ ಹೆಚ್ಚಾಗಿರುವುದು ಮತ್ತು ಧನಕನಕ ಒದಗಿ ಬರುವುದು ವಾಸ್ತವ ವಿಚಾರವಾಗಿದೆ.

ಸೇವೆಗಳು


ಸೇವೆಗಳ ವಿವರ:

 

ರುದ್ರಾಭಿಷೇಕ         50-00

ಶನಿಪೂಜೆ         100-00

ಮಹಾಪೂಜೆ         350-00

ಕಾರ್ತಿಕ ಪೂಜೆ ದೊಡ್ಡದು         200-00 

ಕಾರ್ತಿಕ ಪೂಜೆ ಸಣ್ಣದು         200-00

ಕಡು ಪಾಯಸ         50-00

ಪಂಚಕಜ್ಜಾಯ         10-00

ಅಪ್ಪ ಕಜ್ಜಾಯ         75-00

ಶಾಸ್ತಾವು ಹಣ್ಣುಕಾಯಿ 2-00

ಗಣಪತಿ ಹಣ್ಣುಕಾಯಿ 2-00

ಅನ್ನಪೂರ್ಣೇಶ್ವರಿ ಹಣ್ಣುಕಾಯಿ 2-00

ಕರಿಭೂತ ಹಣ್ಣುಕಾಯಿ 4-00

ಕರಿಭೂತ ನಗದು ಹಣ್ಣುಕಾಯಿ 60-00

ಕರಿಭೂತ ಹರಕೆ ಕೋಲ(1ರ) 200-00

ಹಣ್ಣುಕಾಯಿ ನಗದು         30-00

ನಗದು ಬಲಿವಾಡ         50-00

ಬಲಿವಾಡ ರಶೀದಿ         5-00

ಮಂಗಳಾರತಿ         3-00

ಸತ್ಯನಾರಾಯಣ ಪೂಜೆ 1200-00

ಅನ್ನಸಂತರ್ಪಣೆ         50-00 

(ಒಂದು ಎಲೆಗೆ)

ಕುಂಕುಮಾರ್ಚನೆ         25-00

ಗರಿಕೆ ಹೋಮ         250-00

ಗಣಪತಿ ಹೋಮ         500-00

ಹೂನಿನ ಪೂಜೆ         50-00

ಕಲಶ ಸ್ನಾನ         10-00

ವಾಹನ ಪೂಜೆ         50-00 ,100-00

ನಿತ್ಯ ಪೂಜೆ         200-00

(ಒಂದು ಹೊತ್ತಿನ)

ತ್ರಿಮಧುರ ನೈವೇದ್ಯ         60-00

ಕ್ಷೀರಾಭಿಷೇಕ         50-00

ಬಿಲ್ವಾರ್ಚನೆ         50-00

ಪಂಚಾಮೃತ ಅಭಿಷೇಕ 50-00

ಕ್ಷೀರ ಪಾಯಸ         75-00

ನಾಗ ತಂಬಿಲ         250-00 

(ನಾಗರ ಪಂಚಮಿಯಂದು)

ನಾಗ ತಂಬಿಲ         500-00

(ಇತರ ದಿನದಂದ)

ಸರ್ವಸೇವೆ         125-00

ರಂಗಪೂಜೆ         2501-00

ತೀರ್ಥ ಬಾಟ್ಲಿ         10-00

ಎಳ್ಳಣ್ಣೆ(100 ML)         30-00

ಪಂಚಮಿ ಪೂಜೆ         150-00

ನಾಗನಿಗೆ ಹಾಲು         10-00

ಗಣಪತಿ ಪೂಜೆ         60-00

ದತ್ತಿ ಪೂಜೆ         1001-00

ಏಕಾದಶ ರುದ್ರಾಭಿಷೇಕ 750-00 

ಸ್ಥಳ ಕಾಣಿಕೆಗಳು :

ರಾಹು ಜಪ         50-00

ಕೇತು ಜಪ         50-00

ಶನಿ ಜಪ                  50-00

ಮೃತ್ಯುಂಜಯ ಹೋಮ         1000-00

ನವಗ್ರಹ ಶಾಂತಿ ಹೋಮ         1000-00

ದುರ್ಗಾ ಪೂಜೆ         250-00

ಮೃತ್ಯುಂಜಯ ಜಪ         150-00 

ಬಣಲೆ ಸೇರಿ

ಸರಸ್ವತಿ ಪೂಜೆ         250-00

ತುಲಾಭಾರ         501-00

(ದೇವರ ದರ್ಶನ ಬಲಿ ದಿನ ಮಾತ್ರ) 

ಪ್ರಾರ್ಥನ ಕಾಣಿಕೆ         200-00

ಶುಭ ಕಾರ್ಯಗಳಿಗೆ         500-00

ಉತ್ಸವಗಳು

ಸ್ವಸ್ತಿ ಶ್ರೀ ಭವನಾಮ ಸಂವತ್ಸರದ ಕುಂಭ ಮಾಸ 25 ರಿಂದ ಮೀನ ಮಾಸ 27 ಸಲುವ ದಿನಾಂಕಗಳಲ್ಲಿ 
ಕೊಡಗಿನ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯಲಿದೆ

ಪೂಜಾ ಸಮಯ


ಪ್ರತಿ ನಿತ್ಯ ಬೆಳಿಗ್ಗೆ: 5 ಗಂಟೆಯಿಂದ 10 ಗಂಟೆಯವರಗೆ

ಪ್ರತಿ ನಿತ್ಯ ಸಾಯಂಕಾಲ: 4 ಗಂಟೆಯಿಂದ 8 ಗಂಟೆಯವರಗೆ

ವ್ಯವಸ್ಥಾಪನ ಸಮಿತಿ

ಹೊನ್ನಪ್ಪ ಕೊಳಂಗಾಯ ಆಡಳಿತ ಕಾರ್ಯದರ್ಶಿ 

ನಿಡ್ಯಮಲೆ ಜೋಯಪ್ಪ ಸಹ ಕಾರ್ಯದರ್ಶಿ 

ರಾಜಗೋಪಾಲ ರಾಮಕಜೆ ದೇವತಕ್ಕರು 

ಭಾಸ್ಕರ ಕೋಡಿ

ವಿಶ್ವನಾಥ ಮೂಲೆಮಜಲು

ಪ್ರಭಾಕರ ಕೋಡಿ

ಗಣಪತಿ ಕುಂಬಳಚೇರಿ

ಪುರುಷೋತ್ತಮ ನಿಡಮಲೆ ತಕ್ಕ ಮುಖ್ಯಸ್ಥರು

ವಿಶ್ವನಾಥ ಕುಂಬಳಚೇರಿ ಆಡಳಿತ ಮೊತ್ತೇಸರರು 

ಆಡಳಿತ ಸಮಿತಿ ಸದಸ್ಯರುಗಳು ಹಾಗೂ ಗ್ರಾಮಸ್ಥರು 

ದೇಣಿಗೆ

ಅಕೌಂಟ್‌ ಡಿಟೈಲ್ಸ್:‌
Name: 
A/C. No: 
Bank Name: 
IFSC Code: 

ಸಂಪರ್ಕ


ಶ್ರೀ ಶಾಸ್ತಾವು ದೇವಸ್ಥಾನ, ಪೆರಾಜೆ
ಪೆರಾಜೆ ಅಂಚೆ – 574314
ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಕೊಡಗು.
ಮಡಿಕೇರಿ ತಾಲ್ಲೂಕು
ಕೊಡಗು.
ಮೊ: 9449756625

Search Coorg Media

Coorg’s Largest Online Media Network

“ಸರ್ಚ್‌ ಕೂರ್ಗ್‌ ಮೀಡಿಯಾ”

ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ, ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x