Reading Time: < 1 minute
ಮಡಿಕೇರಿ: ಜ.26ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸರಕಾರದ ವಿಶೇಷ ಅತಿಥಿಯಾಗಿ ಆಯ್ಕೆಯಾಗಿರುವ ಮರ್ಕಝಲ್ ಹಿದಾಯ ಕೊಟ್ಟಮುಡಿ ಡೈರೆಕ್ಟರ್ ಹಾಗೂ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಚ್.ಎ ಹಂಸ ಕೊಟ್ಟಮುಡಿ ರವರನ್ನು ಸಂಸ್ಥೆಯ ವತಿಯಿಂದ ಬೀಳ್ಕೊಡಲಾಯಿತು.
ಸಂಸ್ಥೆಯ ಕೋಶಾಧಿಕಾರಿಗಳಾದ ಅಬ್ದುಲ್ಲ ಎಮ್. ಎ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ಯೂಸುಫ್ ಹಾಜಿ ಕೊಂಡಂಗೇರಿ, ಶಾಲೆ ಮತ್ತು ಕಾಲೇಜು ಕಾರ್ಯದರ್ಶಿಗಳಾದ ಅದವೇಲ್ ಮಮ್ಮದ್ ಹಾಜಿ ಕುಂಜಿಲ, ಆಡಳಿತಧಿಕಾರಿ ಹಮೀದ್ ಕಬಡಕ್ಕೇರಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ದಹವಾ ಕಾಲೇಜು ಉಪನ್ಯಾಸಕರು, ಮರ್ಕಝ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ನಸ್ರಿಯ ಉಸ್ಮಾನ್, ಶಿಕ್ಷಕವೃಂದದವರೂ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.