ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿನಂ. 304 ನೇ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ನಿ., ವಿರಾಜಪೇಟೆ.
Coorg Honey and Wax Producer’s Co-Operative Society Ltd,.Virajpet
ಪ್ರಾಸ್ತವಿಕ:-
ಕೊಡಗಿನಲ್ಲಿ ಜೇನು ಉತ್ಪಾದನ ಕೈಗಾರಿಕೆಯ ಸ್ಥಾಪನೆ:
ಕೊಡಗಿನ ಸುಪುತ್ರರಲ್ಲಿ, ಕೊಡಗಿಗೆ ಕೀರ್ತಿ ತಂದವರಲ್ಲಿ, ಕೊಡಗಿನಲ್ಲಿ ಧಾರ್ಮಿಕ ವಿಷಯಗಳನ್ನು ಪ್ರಚಾರ ಪಡಿಸಿದವರಲ್ಲಿ, ಕೊಡಗಿನ ಸಮಾಜ ಸೇವಾ ನಿರತರಲ್ಲಿ, ಶ್ರೀ ಸ್ವಾಮಿ ಶಾಂಭವಾನಂದಾಜಿಯವರು ಒಬ್ಬರು.
(ಸ್ವಾಮಿ ಶಾಂಭವಾನಂದ)
ಸ್ವಾಮಿಗಳು ಮಡಿಕೇರಿಯಿಂದ 13 ಮೈಲಿ ದಕ್ಷಿಣಕ್ಕೆ, ವೀರರಾಜಪೇಟೆಯಿಂದ 7 ಮೈಲಿ ಉತ್ತರಕ್ಕೆ ಕಾವೇರಿ ನದಿಯ ಬಲ ದಂಡೆಯ ಮೇಲೆ ಹಬ್ಬಿಕೊಂಡಿರುವ ಹಾಲುಗುಂದ ಎಂಬ ಊರಿನಲ್ಲಿ 1894 ರ ಉತ್ತರಾರ್ಧದಲ್ಲಿ ಜನಿಸಿದರು. ಇವರು ತೇಲಪಂಡ ಕುಟುಂಬದ ಮುತ್ತಣ್ಣ ಮತ್ತು ಚಿನ್ನವ್ವ ಎಂಬ ದಂಪತಿಗಳ ಸುಪುತ್ರರು.
ಸ್ವಾಮಿಗಳು ವಿರಾಜಪೇಟೆಯ ಪ್ರಾಥಮಿಕ ಶಾಲೆಯಲ್ಲಿ ಲೋವರ್ ಸೆಕೆಂಡರಿ ಪರೀಕ್ಷೆಯನ್ನು ಮುಗಿಸಿದರು. ಬೆಂಗಳೂರಿನ ಸೆಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷೆಯನ್ನು ಮುಗಿಸಿಕೊಂಡು ಅಲ್ಲಿಯೇ ಕಾಲೇಜಿಗೆ ಸೇರಿಕೊಂಡರು.
ಕೊಡಗಿನ ಪೊನ್ನಂಪೇಟೆಯಲ್ಲಿ 1928 ರಲ್ಲಿ ಶ್ರೀ ರಾಮಕೃಷ್ಣ ಶಾರದಾಶ್ರಮವನ್ನು ಸ್ಥಾಪಿಸಿದರು.
ಜೇನು ಸಂಘ ಸ್ಥಾಪನೆ:-
ಸ್ವಾಮಿಜಿಯವರು ಫಲಪ್ರದಾಯಕವಾದ ಜೇನು ಕೃಷಿಯು ಕೇವಲ ಅನಾಗರಿಕ ರೀತಿ ನಡೆಯುತ್ತಿರುವದನ್ನು ಕಂಡು ಬೇಸರ ಪಟ್ಟರು. ಇದರ ಸುಧಾರಣೆಯ ಬಗ್ಗೆ ಆಲೋಚಿಸಿ ಶ್ರಮ ಸಾಧ್ಯ ಸಹಕಾರ ಸಂಘದಿಂದಲೇ ಕಾರ್ಯಸಿದ್ದಿ ಎಂದು ಕಂಡು, ನವೀನ ಕಾಲಕ್ಕೆ ಸಹಕಾರ ಸಂಘವೇ ಆರ್ಥಿಕ ಬೆಳವಣಿಗೆಗೆ ಸುಲಭಮಾರ್ಗವೆಂದು ಆಗಿನ ಸಹಕಾರ ಇಲಾಖೆಯ ರಿಜಿಸ್ಟ್ರಾರವರನ್ನು ಕೇಳಿದಲ್ಲಿ ಅವರು ಸಹಕಾರ ಸಂಘವೊಂದನ್ನು ಸ್ಥಾಪನೆ ಮಾಡಲು ಸಮ್ಮತಿಸಿದರು.
ತದ್ವಿಷಯ ಕುರಿತು ಪ್ರಥಮವಾಗಿ ಒಂದು ಆಲೋಚನಾ ಸಭೆಯನ್ನು 1936ರ ಜನವರಿ 2ರಲ್ಲಿ ಕರೆಯಲಾಯಿತು. ಆಗಿನ ಪ್ರಾಂತ್ಯದ ಸಹಕಾರಿ ಸೆಂಟ್ರಲ್ ಬ್ಯಾಂಕ್ ಪ್ರೆಸಿಡೆಂಟ್ ಶ್ರೀ ಪಂದ್ಯಂಡ ಬೆಳ್ಯಪ್ಪನವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕಿನ ಮಹಡಿಯಲ್ಲಿ ಕೂಡಿದರು. ಸೇರಿದವರೆಲ್ಲ ಜೇನು ವ್ಯವಸಾಯದ ಅಭಿವೃದ್ಧಿಗಾಗಿ ಒಂದು ಸಂಘವನ್ನು ಸ್ಥಾಪನೆ ಮಾಡಲು ಒಪ್ಪಿದರು. ನಂತರ ಹಂಗಾಮಿ ಕಾರ್ಯಕಾರಿ ಮಂಡಳಿಯ ಸಭೆಯು 1936ರ ಫೆಬ್ರುವರಿ 2ರಲ್ಲಿ ಆಗಿನ ರಿಜಿಸ್ಟ್ರಾರ್ ಶ್ರೀ ಕೆ. ಜೆ. ಚಂಗಪ್ಪ ಇವರ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲು ನಗರ ಮಂದಿರದಲ್ಲಿ ನಡೆಯಿತು. “ಕೊಡಗಿನ ಜೇನುಮೇಣ ಉತ್ಪಾದಕರ ಸಹಕಾರ ಸಂಘ” ಎಂದು ನಾಮಕರಣವಾಯಿತು. ಇದರ ಮುಖ್ಯ ಕಛೇರಿಯು ವಿರಾಜಪೇಟೆಯಲ್ಲಿ ಸ್ಥಾಪನೆಯಾಗತಕ್ಕದೆಂದು ತೀರ್ಮಾನಿಸಲಾಯಿತು. ಸ್ವಾಮಿಜಿಯವರು ಶ್ರೀ ಪಿ. ಎಂ. ಉತ್ತಪ್ಪ ಬಿ. ಎ., ಎಲ್. ಟಿ., ಆಗಿನ ಸಹಕಾರ ಸೀನಿಯರ್ ಆಫೀಸರ್‌ರಾದ ಶ್ರೀ ಪಿ. ಎಂ. ಚಂಗಪ್ಪ ಇವರು ಸಂಘದ ಬೈಲಾವನ್ನು ತಯಾರಿಸಲು ನಿಯಮಿತವಾದರು. ಸಂಘದ ಕಾರ್ಯಕಲಾಪಗಳು ವಿರಾಜಪೇಟೆಯ ಕೊಡಗು ಉಪಾಧ್ಯಾಯರ ಸಹಕಾರ ಸಂಘದ ಕಟ್ಟಡದಲ್ಲಿ ಪ್ರಾರಂಭವಾಯಿತು. ಶ್ರೀ ಪಿ. ಎಂ. ಉತ್ತಪ್ಪ ಬಿ. ಎ., ಎಲ್. ಟಿ., ಇವರು ಸಂಘದ ಪ್ರಥಮ ಪ್ರೆಸಿಡೆಂಟರಾದರು. ಸ್ವಾಮಿಜಿಯವರು ಪಂಚರಲ್ಲಿ ಒಬ್ಬರಾಗಿ ಮುಖ್ಯ ಚಾಲಕರಾದರು. ಶ್ರೀ ಪಿ. ಯಂ. ಉತ್ತಪ್ಪನವರು ಮತ್ತು ಸ್ವಾಮಿಗಳು ಏಕಮತದಿಂದ ಸಂಘದ ಸರ್ವ ವಿಷಯಗಳನ್ನೂ ನೋಡಿಕೊಳ್ಳುತ್ತಿದ್ದರು.
ನಂತರ ಸಂಘದಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷರುಗಳ ವಿವರ ಈ ಕೆಳಗಿನಂತಿರುತ್ತದೆ.
1. ಶ್ರೀ ಪಟ್ಟಡ ಎಂ. ಉತ್ತಪ್ಪನವರು (1936-1942, 1959-1965)
2. ಶ್ರೀ ಕುಟ್ಟಂಡ ಎಸ್. ಮುತ್ತಣ್ಣನವರು (1942-1947)
3. ಶ್ರೀ ಪಂದ್ಯಂಡ ಐ. ಬೆಳ್ಯಪ್ಪನವರು (1947-1948)
4. ಶ್ರೀ ತೇಲಪಂಡ. ಎಂ. ಕಾರ್ಯಪ್ಪನವರು (1948-1953)
5. ಶ್ರೀ ನಾಯಡ. ಸಿ. ಚಿಣ್ಣಪ್ಪನವರು (1953-1956)
6. ಶ್ರೀ ಕೋದಂಡ. ಎಸ್. ನಂಜಪ್ಪನವರು (1956-1959)
7. ಶ್ರೀ ಬಿದ್ದಂಡ ಎ. ಪೂವಯ್ಯನವರು (1965-1967)
8. ಶ್ರೀ ಮುಕ್ಕಾಟರ ಪಿ. ನಾಚಯ್ಯನವರು (1967-1975)
9. ಶ್ರೀ ಬಲ್ಲಾಡಿಚಂಡ. ಪಿ. ಬೋಪಯ್ಯನವರು (1975-1977)
10. ಶ್ರೀ ಚಕ್ಕೆರ ಎಂ. ಪೊನ್ನಪ್ಪನವರು (1977-1985)
11. ಶ್ರೀ ಮಾದಂಡ ಎಸ್. ಪೂವಯ್ಯನವರು (1985-1987)
12. ಶ್ರೀ ತಾತಂಡ ಎಂ. ನಂಜಪ್ಪನವರು (1987-1993)
13. ಶ್ರೀ ತೀತಿರ ಎಂ. ಪೊನ್ನಪ್ಪನವರು (1993-1995)
14. ಶ್ರೀ ಚಂಬಾಂಡ ಎಸ್. ಕಾವೇರಪ್ಪನವರು (1995-2001)
15. ಶ್ರೀ ಚಿರಿಯಪಂಡ ಎಂ. ರಾಜ ನಂಜಪ್ಪನವರು(2001-2005)(ಹಾಲಿನಿರ್ದೇಶಕರು)
16. ಶ್ರೀ ಕಂಜಿತಂಡ ಕೆ. ಮಂದಣ್ಣನವರು (2005-2010)
17. ಶ್ರೀ ಮುಕ್ಕಾಟಿರ ಎಂ. ಪೂವಣ್ಣನವರು (2010-2015)
18. ಶ್ರೀ ಕೋಡಿರ ಎಂ. ಪ್ರವೀಣ್ ಚಂಗಪ್ಪನವರು ((2015-2020)
ಪ್ರಸ್ತುತ ಶ್ರೀ ಕಂಜಿತಂಡ ಕೆ. ಮಂದಣ್ಣನವರು 2020 ರಿಂದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಅಭಿವೃದ್ಧಿಯ ಮುನ್ನೋಟ:-
ಜೇನು ಸಂಘದ ಈಗಿನ ಕಟ್ಟಡ:-
ಉಪಾಧ್ಯಾಯರ ಕಟ್ಟಡದ ಮಳಿಗೆಗಳು ಈ ಸಂಘದ ಕಾರ್ಯಕಲಾಪಗಳಿಗೆ ಸ್ಥಳ ಸಾಲದೆ ಇದ್ದುದರಿಂದ ಬೇರೆ ಯೋಗ್ಯವಾದ ಕಟ್ಟಡವನ್ನು ಹುಡುಕಲಾಯಿತು. 1938ರಲ್ಲಿ ಸಂಘವು ಈಗ ಇರುವ ಕಟ್ಟಡವನ್ನು ರೂ. 4,000-00 ಕ್ಕೆ ಪಡೆದುಕೊಂಡು ಸ್ವಾಮಿಜಿಯವರು ಅವಶ್ಯಕತೆಗೆ ಬೇಕಾದ ಹಾಗೆ ದುರಸ್ತಿ ಮಾಡಿಸಿದರು.
ಇದು ಭಾರತದಲ್ಲಿಯೇ ಪ್ರಪ್ರಥಮವಾಗಿ ಸ್ಥಾಪನೆಗೊಂಡಂತಹ ಸಂಘವಾಗಿರುತ್ತದೆ. ಬರೇ 53 ಸದಸ್ಯರುಗಳಿಂದ ಸ್ಥಾಪನೆಗೊಂಡ ಸಂಘವು ಇಂದು 2146 ಸದಸ್ಯರುಗಳನ್ನು ಹೊಂದಿರುತ್ತದೆ. ಮತ್ತು ಅವರ ಪಾಲು ಬಂಡವಾಳ ರೂ. 9 ಲಕ್ಷ ಇರುತ್ತದೆ. ಸಂಘದ ಉದ್ದೇಶವು ಜೇನು ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಸಂಘದಿಂದ ರಿಯಾಯಿತಿ ದರದಲ್ಲಿ ಜೇನು ಪೆಟ್ಟಿಗೆಗಳನ್ನು ಜೇನು ಕೃಷಿಯಲ್ಲಿ ಆಸಕ್ತಿ ಇರುವ ಸದಸ್ಯರುಗಳಿಗೆ ನೀಡುವುದು ಅಲ್ಲದೆ ಅವರು ಉತ್ಪಾದಿಸಿದ ಜೇನನ್ನು ಹೆಚ್ಚಿನ ಬೆಲೆ ನೀಡಿ ಖರೀದಿಸಿ, ಅದನ್ನು ಪ್ರೋಸೆಸ್ ಮಾಡಿ, ಜೇನು ವರ್ಗೀಕರಣ ಕೇಂದ್ರ ಅದರ ಗುಣಮಟ್ಟದ ಬಗ್ಗೆ ಪರೀಕ್ಷಿಸಲು ಕಳುಹಿಸಿ, ಒಳ್ಳೆಯ ಗುಣಮಟ್ಟದ ಜೇನೆಂದು ಅವರಿಂದ ರಿಪೋರ್ಟು ಬಂದ ನಂತರ ಬಾಟಲಿಗಳಲ್ಲಿ ತುಂಬಿಸಿ ಆಗ್‌ಮಾರ್ಕ್ ಮುದ್ರೆಯೊಂದಿಗೆ ಮಾರಾಟ ಮಾಡಲಾಗುವುದು. ಸಂಘಕ್ಕೆ ತನ್ನದೇ ಆದ ಎರಡು ಶಾಖೆಗಳಿದ್ದು ಒಂದು ವಿರಾಜಪೇಟೆಯ ಮುಖ್ಯ ರಸ್ತೆಯಲ್ಲಿದ್ದು ಮತ್ತೊಂದು ಗೋಣಿಕೊಪ್ಪ ಪಟ್ಟಣದ ಮುಖ್ಯ ರಸ್ತೆಯಲ್ಲಿದ್ದು ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದೆ. ಮತ್ತು ರೂ 5.08 ಕೋಟಿ ಮೌಲ್ಯದ ಸ್ಥಿರ ಮತ್ತು ಚರ ಆಸ್ತಿಗಳನ್ನು ಹೊಂದಿರುತ್ತದೆ.
ಸಂಘಕ್ಕೆ ಗ್ರಾಮಾಂತರ ಪ್ರದೇಶಗಳಾದ ಬಿರುನಾಣಿ, ಸಣ್ಣಪುಲಿಕೋಟು, ಭಾಗಮಂಡಲದಲ್ಲಿ ಜೇನು ಖರೀದಿ ಕೇಂದ್ರಗಳಿದ್ದು, ಅಲ್ಲಿ ಜೇನು ಕೃಷಿಗೆ ಬೇಕಾದ ಮೇಣದ ಹಾಳೆ, ರಾಣಿ ಗೇಟು, ಜೇನು ಪೆಟ್ಟಿಗೆಗಳನ್ನು ಮಾರಾಟ ಮಾಡಲಾಗುತ್ತಿದೆ. ಮತ್ತು ಕೃಷಿಕರಿಗೆ ಜೇನು ಪೆಟ್ಟಿಗೆಗಳ ಮೇಲೆ ಸಹಾಯಧನ ನೀಡಲಾಗುತ್ತದೆ ಹಾಗೂ ಉಚಿತವಾಗಿ ಜೇನು ಪೆಟ್ಟಿಗೆ ನಿರ್ವಹಣೆ ಸೇವೆಯನ್ನು ಒದಗಿಸಲಾಗುವುದು.
ಸಂಘದ ಕಾರ್ಯವ್ಯಾಪ್ತಿ:-
ಕೊಡಗು ಜಿಲ್ಲೆಯಲ್ಲಿ ಹರಿಯುತ್ತಿರುವ ಕಾವೇರಿ ನದಿಯ ದಕ್ಷೀಣ ಭಾಗದ ಕೊಡಗು ಜಿಲ್ಲಾ ಪ್ರದೇಶಕ್ಕೆ ಒಳಪಟ್ಟಿರುತ್ತದೆ.
ಸಂಘದ ಕಾರ್ಯ ಚಟುವಟಿಕೆಗಳು:-
ಸಂಘದ ಮುಖ್ಯ ಉದ್ದೇಶಗಳು/ಚಟುವಟಿಕೆಗಳು (ಸಂಘದ ಉಪನಿಯಮ ಸಂಖ್ಯೆ 4ರಂತೆ ವಿವರಗಳು)
1. ಶಾಸ್ತ್ರೀಯ ರೀತಿಯಲ್ಲಿ ಜೇನು ಮತ್ತು ಮೇಣವನ್ನು ಹೆಚ್ಚಿನ ಅನುಕೂಲತೆಗಾಗಿ ಲಾಭದಾಯಕವಾಗಿ ಕೊಂಡುಕೊಳ್ಳುವುದು ಮತ್ತು ಅವುಗಳ ಮಾರಾಟಕ್ಕೆ ತಕ್ಕ ವ್ಯವಸ್ಥೆ ಮಾಡುವುದು.
2. ಸದಸ್ಯರಿಗೆ ಜೇನು ಉತ್ಪಾದನೆ ಆಧಾರವಾಗಿ ಮುಂಗಡವಾಗಿ ಸಾಲ ನೀಡುವುದು.
3. ತನ್ನದೇ ಅಥವಾ ಬಾಡಿಗೆಗೆ ಗೋದಾಮು ಕಟ್ಟಡ ಮತ್ತು ಉಗ್ರಾಣ ಹೊಂದುವುದು.
4. ಜೇನು ಪರಿಷ್ಕರಣೆಗಾಗಿ ತಕ್ಕ ಕಾರ್ಯಕ್ರಮವನ್ನು ಕೈಗೊಳ್ಳುವುದು.
5. ಪರಿಷ್ಕರಿಸಿದ ಜೇನನ್ನು, ಮೇಣವನ್ನು ಮತ್ತು ಇತರ ಸಾಮಾಗ್ರಿಗಳನ್ನು ರಫ್ತು ಮಾಡುವುದು.
6. ಜೇನು ಮತ್ತು ಮೇಣವನ್ನು ವರ್ಗೀಕರಿಸುವುದು ಮತ್ತು ಪ್ಯಾಕ್ ಮಾಡುವುದು.
7. ಸಂಘದ ಸದಸ್ಯರಿಗೆ ಜೇನು ಗೂಡು, ಜೇನು ಕೃಷಿ ಸಲಕರಣೆಗಳು ಮತ್ತು ಇತರ ಉಪಕರಣಗಳನ್ನು ಒದಗಿಸುವುದು.
8. ವೈಜ್ಞಾನಿಕವಾಗಿ ಜೇನನ್ನು ಉತ್ಪಾದಿಸಲು ಸದಸ್ಯರಿಗೆ ಪ್ರೋತ್ಸಾಹ ನೀಡುವುದು.
9. ವ್ಯಾಪಾರಾಭಿವೃದ್ಧಿ ಉದ್ದೇಶದಿಂದ ಲಾಭದಾಯಕ ಇತರೆ ವ್ಯಾಪಾರವನ್ನು ಕೈಗೊಳ್ಳುವುದು.
10. ಕೃಷಿಕರ ಕೃಷಿ ರಕ್ಷಣೆಗೆ ಬೇಕಾಗುವ ಮದ್ದುಗುಂಡು ಹಾಗೂ ಕೋವಿತೋಟ ಮಾರಾಟ ಕೈಗೊಳ್ಳುವುದು.
ಸಂಘದ ಸದಸ್ಯತ್ವ:-
53 ಸದಸ್ಯರುಗಳಿಂದ ಸ್ಥಾಪನೆಗೊಂಡ ಸಂಘವು ಇಂದು 2146 ಸದಸ್ಯರುಗಳನ್ನು ಹೊಂದಿರುತ್ತದೆ.
ಪಾಲು ಬಂಡವಾಳ:-
ರೂ. 17.26 ಲಕ್ಷಗಳು
ಠೇವಣಿಗಳು:-
ರೂ. 33.49 ಲಕ್ಷಗಳು
ನಿಧಿಗಳು :-
ರೂ. 588.46 ಲಕ್ಷಗಳು
ಧನವಿನಿಯೋಗಗಳು:-
ರೂ. 174.91 ಲಕ್ಷಗಳು
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:-
ರೂ. 11.15 ಲಕ್ಷಗಳು (2023-24)
ಡಿವಿಡೆಂಡ್ 10%
ಆಡಿಟ್ ವರ್ಗ:-
“ಬಿ”
ಸಂಘದ ಸ್ಥಿರಾಸ್ತಿಗಳು:-
1. ಮುಖ್ಯ ಕಛೇರಿ ಮತ್ತು ಗೋದಾಮು ವಸತಿ ಗೃಹ
2. ನಗರ ಶಾಖೆ ಕಟ್ಟಡ ಮತ್ತು ನೀವೇಶನ
3. ಮರಘಟಕ ಕಟ್ಟಡ ಮತ್ತು ನಿವೇಶನ
4. ಬಿರುನಾಣಿ ಕಟ್ಟಡ ಮತ್ತು ನೀವೇಶನ
5. ಸಣ್ಣಪುಲಿಕೋಟು ಕಟ್ಟಡ ಮತ್ತು ನಿವೇಶನ
6. ಭಾಗಮಂಡಲ ನಿವೇಶನ
7. ವಿರಾಜಪೇಟೆಯ ಮಲಬಾರ್ ರಸ್ತೆಯಲ್ಲಿ ಕಟ್ಟಡ ಮತ್ತು ನಿವೇಶನ
ಗೌರವ ಮತ್ತು ಪ್ರಶಸ್ತಿ:-
ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯಿಂದ ಮಾನ್ಯತೆ ಪಡೆದಿರುತ್ತದೆ.
ಸಂಘದ ಆಡಳಿತ ಮಂಡಳಿ:-
ಒಟ್ಟು 17 ಆಡಳಿತ ಮಂಡಳಿ ಸದಸ್ಯರು
1. ಶ್ರೀ ಕಂಜಿತಂಡ. ಕೆ. ಮಂದಣ್ಣನವರು: ಅಧ್ಯಕ್ಷರು
2. ಶ್ರೀ ಚೇನಂಡ, ಎಂ. ಸುರೇಶ್ ನಾಣಯ್ಯನವರು: ಉಪಾಧ್ಯಕ್ಷರು
3. ಶ್ರೀ ಚೆರಿಯಪಂಡ ಎಂ. ರಾಜ ನಂಜಪ್ಪನವರು: ನಿರ್ದೇಶಕರು
4. ಶ್ರೀ ಕಾದಿರ ಯು. ಪಳಂಗಪ್ಪನವರು (ಉಮೇಶ್): ನಿರ್ದೇಶಕರು
5. ಶ್ರೀ ಮೊಳ್ಳೇರ. ಪಿ. ಪೂಣಚ್ಚನವರು: ನಿರ್ದೇಶಕರು
6. ಶ್ರೀ ಕಾಟುಮಣಿಯಂಡ ಎಂ. ಉಮೇಶ್‌ರವರು: ನಿರ್ದೇಶಕರು
7. ಶ್ರೀ ಕೊಲ್ಲೀರ ಎಮ್. ಗೋಪಿ ಚಿಣ್ಣಪ್ಪನವರು: ನಿರ್ದೇಶಕರು
8. ಶ್ರೀಮತಿ ಅಮ್ಮೆಕಂಡ ಸಿ. ದಮಯಂತಿಯವರು: ನಿರ್ದೇಶಕರು
9. ಶ್ರೀಮತಿ ಪೊರ್ಕೊಂಡ ಸವಿತ ಬೋಪಣ್ಣನವರು: ನಿರ್ದೇಶಕರು
10. ಶ್ರೀಮತಿ ಮುಂಡಿಯೋಳಂಡ ಕುಸುಮ ಸೋಮಣ್ಣನವರು: ನಿರ್ದೇಶಕರು
11. ಶ್ರೀ ಬಾಚಮಂಡ ಕೆ. ಸುಬ್ರಮಣಿಯವರು: ನಿರ್ದೇಶಕರು
12. ಶ್ರೀಮತಿ ನಡಿಕೇರಿಯಂಡ ಟಿ. ಶಿಲ್ಪನವರು: ನಿರ್ದೇಶಕರು
13. ಶ್ರೀ ಕುಡಿಯರ ಎ. ತಮ್ಮಯ್ಯರವರು: ನಿರ್ದೇಶಕರು
14. ಶ್ರೀ ಕೆ. ಬಿ. ವಿಜಯನ್‌ರವರು: ನಿರ್ದೇಶಕರು
15. ಶ್ರೀ ಹೆಚ್. ಪಿ. ಉದಯರವರು: ನಿರ್ದೇಶಕರು
16. ಶ್ರೀ ಹೆಚ್. ಆರ್. ರಾಮಕೃಷ್ಣರವರು: (ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ ಮಡಿಕೇರಿ)
17. ಶ್ರೀ ಕುಯ್ಯಮುಡಿ ಕೆ. ತೀರ್ಥಕುಮಾರರವರು: ಆಹ್ವಾನಿತ ನಿರ್ದೇಶಕರು
ಉದ್ಯೋಗ ಮಳಿಗೆಗಳು:-
1. ವಿರಾಜಪೇಟೆ.
2. ಗೋಣಿಕೊಪ್ಪ
ಜೇನು ಸಂಗ್ರಹಣಾ ಕೇಂದ್ರಗಳು:-
1. ಸಣ್ಣಪುಲಿಕೋಟು.
2. ಬಿರುನಾಣಿ
3. ಭಾಗಮಂಡಲ
ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-
ನಂ. 304 ನೇ ಕೊಡಗು ಜೇನು ಮತ್ತು ಮೇಣ ಉತ್ಪಾದಕರ ಸಹಕಾರ ಮಾರಾಟ ಸಂಘ ನಿ.,
Coorg Honey and Wax Producer’s Co-Operative Society Ltd,.
ವಿರಾಜಪೇಟೆ – 571218, ದ. ಕೊಡಗು.
ಫೋನ್ ನಂ: 08274257361,
ಮೊ: 8050217369
Email: coorghoney1936@yahoo.in