ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಗೋಣಿಕೊಪ್ಪಲು: ನಂ.399ನೇ ಶ್ರೀಮಂಗಲ ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದ್ದು ಸ್ಥಳಿಯ ಕೃಷಿಕರ ಜನಾನುರಾಗಿ ಸಹಕಾರ ಸಂಘವಾಗಿ ಮುಂದುವರಿದಿದೆ ಎಂದು ಸಂಘದ ಅಧ್ಯಕ್ಷ ಅಜ್ಜಮಾಡ ಎಸ್.ಕುಶಾಲಪ್ಪ (ಲವ) ಅಭಿಪ್ರಾಯ ಪಟ್ಟರು.
ಸದರಿ ಸಂಘಕ್ಕೆ ಸುಮಾರು ಒಂದೂವರೆ ಎಕರೆ ಜಾಗವಿದ್ದು ಇಂದು ನೂತನ ಬಿಪಿಸಿಎಲ್ ಪೆಟ್ರೋಲ್ ಪಂಪ್ ಉದ್ಘಾಟಿಸಿ ಅವರು ಮಾತನಾಡಿದರು.
1957 ರಲ್ಲಿ ಆರಂಭಗೊಂಡ ಸಂಘ ಲಾಭದ ಉದ್ಧೇಶ ಹೊಂದದೆ ಕೃಷಿಕರು ಹಾಗೂ ರೈತರ ಅಭ್ಯುದಯಕ್ಕೆ ಮೊದಲ ಆದ್ಯತೆ ನೀಡುವ ಮೂಲಕ ಸಹಕಾರಿಯಾಗಿದೆ. ಅಕ್ಕಿ ಮಿಲ್,ಕಾಫಿ ಮಿಲ್ ಮೂಲಕ ಹಾಗೂ ಸುಮಾರು 1200 ಮೆಟ್ರಿಕ್ ಟನ್ ದಾಸ್ತಾನು ಇರುವ ಸುಸಜ್ಜಿತ ಗೋದಾಮು ವ್ಯವಸ್ಥೆಯನ್ನು ಸಂಘ ಹೊಂದಿದ್ದು ರೈತರು ಬೆಳೆದ ಭತ್ತ ದಾಸ್ತಾನು ಹಾಗೂ ಕಾಫಿ ಶೇಖರಣೆಗೆ ಒತ್ತು ನೀಡಲಾಗಿದೆ ಎಂದರು.
ಹತ್ಯಾರು ವಿಭಾಗ, ಗೊಬ್ಬರ ಮಾರಾಟ, ಕೀಟ ನಾಶಕ ಮಾರಾಟ ಮೂಲಕ ಲಾಭದಾಯಕವಾಗಿ ಮುನ್ನಡೆಯುತ್ತಿರುವ ಸಂಘ ಕೃಷಿಕರ ಅವಶ್ಯಕತೆಯನ್ನು ಮನಗಂಡು ಇಂದು ಭಾರತ್ ಪೆಟ್ರೋಲಿಯಂ ಕಂಪನಿಯ ಪಂಪ್ ಉದ್ಘಾಟನೆ ಮೂಲಕ ಉತ್ಕೃಷ್ಟ ಪೆಟ್ರೋಲ್, ಡೀಸಲ್ ಸರಬರಾಜು ಆರಂಭಿಸಿದೆ ಎಂದರು.
ಉಪಾಧ್ಯಕ್ಷ ತಡಿಯಂಗಡ ಕರುಂಬಯ್ಯ (ಕಂಬ) ಇದೇ ಸಂದರ್ಭ ಪಂಪ್‌ನ ಕಚೇರಿ ಉದ್ಘಾಟಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣ್ ಭೀಮಯ್ಯ, ಶ್ರೀಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅಜ್ಜಮಾಡ ಟಿ.ಚಂಗಪ್ಪ, ವಕೀಲ ಎಂ.ಟಿ.ಕಾರ್ಯಪ್ಪ, ತೀತಿರ ಸೋಮಣ್ಣ, ಮಾಜಿ ಅಧ್ಯಕ್ಷ ವಿಶ್ವನಾಥ್, ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣ ಎನ್.ಕೆ., ಡಿಸಿಸಿ ಬ್ಯಾಂಕ್ ನ ಬಸವರಾಜು, ನಾಲ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಅಲ್ಲುಮಾಡ ಪ್ರಕಾಶ್, ಸಂಘದ ನಿರ್ದೇಶಕರಾದ ಮುತ್ತಪ್ಪ, ಡಿ.ಪಾರ್ಥ, ಚೋಕಿರ ಗೀತಾ, ಡೇಸಿ ತಿಮ್ಮಯ್ಯ, ವೆಂಕಟೇಶ್ ಪ್ರಸಾದ್, ವಾಣಿ, ಪರಶಿವ, ಕೇತು, ಉಣ್ಣಿ ಮುಂತಾದವರು ಉಪಸ್ಥಿತರಿದ್ದರು.