ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಪ್ರತಿಯೊಬ್ಬ ಮನುಷ್ಯನು ಮತ್ತೊಬ್ಬ ಮನುಷ್ಯನ ಜೊತೆ ಒಳ್ಳೆಯ ಸಹ ಜೀವನವನ್ನು ಹೊಂದಿರಬೇಕು. ಸಹೃದಯತೆಯಿಂದ ಇರಬೇಕು ಎನ್ನುವುದೇ ಸಾಮರಸ್ಯ. ಸಾಮರಸ್ಯವೆಂದರೆ, ಒಗ್ಗಟ್ಟಾಗಿ ಇರುವುದು. ನಾವೆಲ್ಲರೂ ಒಂದೇ. ನಮ್ಮ ಅಭಿಪ್ರಾಯಗಳಲ್ಲಿ ಬೇಧ ಇರಬಹುದು. ಆದರೇ ನಾವೆಲ್ಲರೂ ಮೂಲಭೂತವಾಗಿ ಒಂದೇ. ನಾವು ಪರಸ್ಪರ ಕಿತ್ತಾಡಲು ಬಯಸುವುದಿಲ್ಲ. ನಾವು ಪರಸ್ಪರ ಸಾಮರಸ್ಯದಿಂದ ಇರಬೇಕು. ವೈಯಕ್ತಿಕ ಅಭಿಪ್ರಾಯವೇನಾದರೂ ಇರಬಹುದು. ಆದರೆ ಈ ಒಂದು ರಾಮೋತ್ಸವದಿಂದ ನಮ್ಮೆಲ್ಲರಲ್ಲೂ ಸಹೃದಯತೆ ಮೂಡುತ್ತದೆ.
ಇಷ್ಟೆಲ್ಲಾ ಪೀಠಿಕೆ ಏಕೆಂದರೆ?….ಮಡಿಕೇರಿಯ ಮಲ್ಲಿಕಾರ್ಜುನ ನಗರದ ಶ್ರೀ ಕೋದಂಡ ರಾಮ ದೇವಾಲಯದಲ್ಲಿ ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ 35ನೇ ವರ್ಷದ ರಾಮೋತ್ಸವ ಕಾರ್ಯಕ್ರಮಗಳು ಎರಡು ದಿನಗಳ ಕಾಲ ಶ್ರದ್ಧಾಭಕ್ತಿ ಮತ್ತು ವಿಜೃಂಭಣೆಯಿಂದ ನಡೆಯಿತು.
ಏಪ್ರಿಲ್ 5 ರಂದು ಸಂಜೆ ಮಡಿಕೇರಿ ನಗರದ ಗಾಂಧಿ ಮೈದಾನದಿಂದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೆರವಣಿಗೆ ಸಾಗಿತು. ಮೆರವಣಿಗೆಯಲ್ಲಿ ಚಂಡೆ, ತೈಯಂ ಕುಣಿತ, ಫ್ಲವರ್ ಡ್ಯಾನ್ಸ್, ತಮಟೆ, ರಾಮ, ಆಂಜನೇಯ ವೇಷಧಾರಿಗಳು, ಹುಲಿ ವೇಷ, ಭಜನಾ ತಂಡಗಳು, ಕಳಸ ಹಾಗೂ ರಾಮನ ಪಲ್ಲಕ್ಕಿ ಮೆರವಣಿಗೆ ಆಕರ್ಷಿಸಿತು. ಮೆರವಣಿಗೆಯು ನಗರದ ಗಾಂಧಿ ಮೈದಾನ, ಜನರಲ್ ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಚೌಕಿ, ಮಹದೇವಪೇಟೆ, ಮಾರುಕಟ್ಟೆ, ಶ್ರೀಚೌಡೇಶ್ವರಿ ದೇವಾಲಯ ಮೂಲಕ ಎ.ವಿ ಶಾಲೆ ಹಿಂಭಾಗ, ಶ್ರೀಮುತ್ತಪ್ಪ ದೇವಾಲಯ ರಸ್ತೆಯಿಂದ ಶ್ರೀಕೋದಂಡರಾಮ ದೇವಾಲಯ ಸೇರಿತು.
ದೇವಾಲಯದಲ್ಲಿ ಪಲ್ಲಕ್ಕಿಯನ್ನು ಹೊತ್ತು ಪೂಜೆ ಸಲ್ಲಿಸಿದ ನಂತರ ಅನ್ನದಾನ ನೆರವೇರಿತು. ರಾತ್ರಿ ವಿವಿಧ ಸಮುದಾಯಗಳಿಂದ ಆಕರ್ಷಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಎರಡು ದಿನಗಳ ಪೂಜಾ ಕೈಂಕರ್ಯಗಳಲ್ಲಿ ಸಾವಿರಾರು ಭಕ್ತರು ಜಾತಿ, ಮತ, ಪಂಥ ಭೇದಗಳನ್ನು ಮರೆತು ರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾಜದಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಶ್ರೀ ಕೋದಂಡ ರಾಮೋತ್ಸವ ಸಮಿತಿ ವತಿಯಿಂದ ರಾಮೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅರ್ಥಪೂರ್ಣವಾಗಿ ಮೂಡಿಬಂತು. ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವ ಮೂಡಲು ಮೊದಲು ಮೇಲು, ಕೀಳು, ಅಸ್ಪೃಶ್ಯತೆ ದೂರವಾಗಬೇಕಿದೆ. ಈ ನಿಟ್ಟಿನಲ್ಲಿ ಐಕ್ಯ ಭಾವ ಮೂಡಿಸುವ ಕಾರ್ಯಕ್ರಮಗಳು ಇನ್ನಷ್ಟು ಮೂಡಿಬರಲಿ.