ನಿಟ್ಟೂರು: ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಲಕ್ಷ್ಮಣ ತೀರ್ಥ ನದಿಗೆ ನಿರ್ಮಿಸಲಾಗಿರುವ ಮಲ್ಲೂರು ಸೇತುವೆಯನ್ನು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಲೋಕಾರ್ಪಣೆಗೊಳಿಸಿದರು.
9.5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆ ಎರಡು ಗ್ರಾಮಗಳಿಗೆ ಸಂಪರ್ಕ ಸೇತುವೆಯಾಗಿದೆ. ಲೋಕಾರ್ಪಣೆ ಬಳಿಕ ಸಂಸದರು ಸೇತುವೆ ವೀಕ್ಷಿಸಿದರು. ಬಳಿಕ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು. ಹಾಗೆ ಗ್ರಾಮಾಭಿವೃದ್ಧಿಯ ಮೂಲಕ ಭಾರತದ ಉದ್ದಾರ ಮಂತ್ರವಾದ ವೀಕ್ಷೀತ್ ಭಾರತ್ ಯೋಜನೆಯ ಬಗ್ಗೆ ಮಾತನಾಡಿದರು.
ಪ್ರಾಸ್ಥವಿಕವಾಗಿ ಮಾತನಾಡಿದ ಬಾಳೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿಮ್ಮಣಮಾಡ ಕೃಷ್ಣ ಗಣಪತಿಯವರು ಸೇತುವೆಯ ಹರಿಕಾರರಾದ ಮಾಜಿ ವಿಧಾನಸಭಾಧ್ಯಕ್ಷರಾದ ಕೆಜಿ.ಬೊಪ್ಪಯ್ಯ, ನಿಟ್ಟೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿಸದಸ್ಯರಾದ ಚಕ್ಕೇರ ಸೂರ್ಯ ಅಯ್ಯಪ್ಪನವರು ಮಲ್ಲೂರು ಸೇತುವೆ ನಿರ್ಮಾಣಕ್ಕೆ ಶ್ರಮಿಸಿದ ಕಾರ್ಯವೈಖರಿಯ ಬಗ್ಗೆ ಶ್ಲಾಘಿಸಿದರು. ಈ ಸಂದರ್ಭ ಗ್ರಾಮದ ಎಲ್ಲಾ ಪರಿವಾರ ದೇವರುಗಳ ಅನುಗ್ರಹವನ್ನು ಬೇಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲ್ಲೂರು ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಚಕ್ಕೇರ ಸೂರ್ಯ ಅಯ್ಯಪ್ಪನವರು ನಮ್ಮ ಗ್ರಾಮಕ್ಕೆ ಸಂಪರ್ಕವಿರುವ ಪ್ರಮುಖ ರಸ್ತೆಗಳು ಮಳೆಗಾಲದಲ್ಲಿ ಸಂಪೂರ್ಣ ನೀರಿನಿಂದ ಜಲಾವೃತಗೊಂಡು ನಮ್ಮ ಗ್ರಾಮ ದ್ವೀಪದಂತೆ ಆಗುತ್ತಿತ್ತು. ಆದರಿಂದ ಗ್ರಾಮಸ್ಥರಿಗೆ ತುರ್ತು ಪರಿಸ್ಥತಿಗಳಲ್ಲಿ ಪ್ರಯಾಣಿಸಲು ಸಾಧ್ಯವಾಗದೆ, ಹಲವಾರು ಸಾವು ನೋವುಗಳು ಸಂಭವಿಸಿತ್ತು. ಇದರ ಪರಿಹಾರಕ್ಕಾಗಿ ದಶಕಗಳಿಂದ ಬೇಡಿಕೆ ಇದ್ದೂ, ಹಲವಾರು ಮುಖಂಡರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ನಾನು ಪಂಚಾಯಿತಿಯ ಸದಸ್ಯನಾದ ಮೇಲೆ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸಲು ಪಣತೊಟ್ಟು. ಮಾನ್ಯ ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಅವರನ್ನು ವಿಧಾನ ಸೌಧದ ಒಳಗೂ – ಹೊರಗೂ ಶಾಸಕರಿಗೆ ಮನವಿ ಮಾಡಿ ಕೊರೋನ ಕಾಲದಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 270 ಸೇತುವೆಗಳ ನಿರ್ಮಾಣದ ಬೇಡಿಕೆಯಿದ್ದರೂ, ನಮ್ಮ ಕೊಡಗು ಜಿಲ್ಲೆಯ ನಿಟ್ಟೂರಿನ ಮುಲ್ಲೂರು ಗ್ರಾಮಕ್ಕೆ ಸೇತುವೆಯನ್ನು ನಿರ್ಮಾಣ ಮಾಡಲು ಅನುಮತಿಯನ್ನು ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯನವರು ಕೊಡಿಸಿ, ಕೆ.ಆರ್.ಡಿ.ಸಿ ಇಲಾಖೆಯ ಮೂಲಕ 9.5 ಕೋಟಿ ರೂ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಶಾಸಕರ ಈ ಕಾರ್ಯ ತುಂಬಾ ಶ್ಲಾಘನೀಯವಾಗಿದ್ದು, ಗ್ರಾಮದ ಜನರ ಪರವಾಗಿ ನಾನು ಕೆ.ಜಿ. ಬೋಪಯ್ಯನವರಿಗೆ ಈ ಸಂದರ್ಭದಲ್ಲಿ ಧನ್ಯವಾದವನ್ನು ಅರ್ಪಿಸುತ್ತಿದ್ದೇನೆ ಎಂದರು.
ಸಮಾರಂಭದಲ್ಲಿ ಮಾಜಿ ಶಾಸಕ ಕೆ.ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ನಿಟ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್. ಅಮ್ಮಣ್ಣಿ, ಉಪಾಧ್ಯಕ್ಷರಾದ ಕಾಟಿಮಾಡ ಸರೀನ್ ಮುತ್ತಣ್ಣ, ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಒಲಂಪಿಯನ್ ಲೆಪ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ, ಬಾಳೆಲೆ ಏಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಅಳಮೇಗಂಡ ಬೋಸ್ ಮಂದಣ್ಣ ಸೇರಿದಂತೆ ಇನ್ನಿತರರು ಗಣ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.