ದಂತ ಶಸ್ತ್ರ ಚಿಕಿತ್ಸಕರಾದ ಡಾ. ಪ್ರವೀಣ್‌ ದೇವರಗುಂಡ ಸೋಮಪ್ಪ ಅವರೊಂದಿಗಿನ ಸಂದರ್ಶನ

WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: 5 minutes

ಡಾ. ಪ್ರವೀಣ್‌ ದೇವರಗುಂಡ ಸೋಮಪ್ಪ ಅವರ ವಿಶೇಷ ಸಂದರ್ಶನ

[Image of Dr. Praveen Devaragunda Somappa]

1. ನಿಮ್ಮ ಹೆಸರು, ಶೈಕ್ಷಣಿಕ ವಿವರಗಳನ್ನು ಕುರಿತು ತಿಳಿಸುವಿರಾ?

ನನ್ನ ಹೆಸರು ಡಾ. ಪ್ರವೀಣ್‌ ದೇವರಗುಂಡ ಸೋಮಪ್ಪ. ನಾನು ಕೆ.ಜಿ.ಎಫ್.‌ ಡೆಂಟಲ್‌ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಅಂಬೇಡ್ಕರ್ ಕಾಲೇಜು ಬೆಂಗಳೂರು ಇಲ್ಲಿ ಇಂಟರ್ನ್‌ಶಿಪ್ ಮುಗಿಸಿ ಬೆಂಗಳೂರು ಹಾಗೂ ದೆಹಲಿಯಲ್ಲಿ‌ ಒಂದೂವರೆ ವರ್ಷಗಳ ಕಾಲ ಪ್ರಾಕ್ಟೀಸ್ ಮಾಡಿ ಯುರೋಪಿಯನ್ ಯೂನಿಯನ್‌ನ ರೋಮೇನಿಯಾ ದೇಶಕ್ಕೆ ತೆರಳಿ ಐದು ವರ್ಷಗಳ ಕಾಲ Oral and Maxillofacial Surgery (OMFS) (ಬಾಯಿ, ದವಡೆಗಳು, ಮುಖ ಮತ್ತು ಕುತ್ತಿಗೆಯ ರೋಗಗಳು, ಕ್ಯಾನ್ಸರ್ ಗಾಯಗಳ ಶಸ್ತ್ರ ಚಿಕಿತ್ಸೆ). ಈ ಪದವಿಯನ್ನು ಪಡೆದು, 2008 ರಲ್ಲಿ ನನ್ನ ಸ್ವಂತ ಊರಾದ ಕುಶಾಲನಗರಕ್ಕೆ ಬಂದು ಕಳೆದ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇನೆ.

2. ನೀವು ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ?

ಬಾಲ್ಯದ ದಿನಗಳಲ್ಲಿ ವೈದ್ಯರ ಸೇವೆಗಳನ್ನು ಕಂಡು ಪ್ರೇರಣೆಯಾಗಿದ್ದು, ಸಮಾಜದ ಆರೋಗ್ಯಕ್ಕಾಗಿ ಕೆಲಸ ಮಾಡುವ ಇಚ್ಛೆ ನನ್ನನ್ನು ಈ ವೃತ್ತಿಗೆ ತಂದುಕೊಂಡಿತು.

3. ವೈದ್ಯಕೀಯ ಕ್ಷೇತ್ರದಲ್ಲಿ ನೀವು ಎಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದೀರಿ?

ನಾನು ಸರಿ ಸುಮಾರು 30 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿ ಕೊಂಡಿದ್ದೇನೆ.

4. ಪ್ರಸ್ತುತ ನಿಮ್ಮ ಆಸ್ಪತ್ರೆ ಅಥವಾ ಕ್ಲಿನಿಕ್‌ನಲ್ಲಿ ಯಾವ ರೀತಿಯ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದಿರಿ?

ನಾನು ಪ್ರಸ್ತುತ ದಂತಕ್ಕೆ ಸಂಬಂಧಿಸಿದ ಎಲ್ಲಾ ರೀತೀಯ ಸೇವೆಗಳಾದ ದಂತ, ಬಾಯಿ, ದವಡೆಗಳು, ಮುಖ ಮತ್ತು ಕುತ್ತಿಗೆಯ ರೋಗಗಳು, ಟ್ರೌಮ ಹಾಗೂ ಕ್ಯಾನ್ಸರ್ ಗಾಯಗಳ ವಿಶೇಷ ಶಸ್ತ್ರಚಿಕಿತ್ಸೆಗಳ ಸೇವೆಗಳನ್ನು ನೀಡುತ್ತಿದ್ದೇವೆ.

5. ನೀವು ಪರಿಹರಿಸಿದ ಅತ್ಯಂತ ಸವಾಲಿನ ಅಥವಾ ವಿಶೇಷ ಪ್ರಕರಣವನ್ನು ಹಂಚಿಕೊಳ್ಳುತ್ತೀರಾ?

ಅಂತಹ ವಿಶೇಷ ಪ್ರಕರಣಗಳು ತುಂಬಾ ಇದೆ. ಆದರೂ ಕೊಡಗಿನಲ್ಲೆ ಆದ ಒಂದು ಸವಾಲಿನ ಪ್ರಕರಣವನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಅದು ಯಾವುದೆಂದರೆ ಕೆ.ಜಿ. ಬೋಪ್ಪಯ್ಯನವರು ವಿಧಾನ ಸಭಾ ಸ್ಪೀಕರ್‌ ಆದಂತ ಸಮಯದಲ್ಲಿ ಕುಶಾಲನಗರದ ಸಮೀಪ ಬಸವನಹಳ್ಳಿಯ ಹೆದ್ದಾರಿಯಲ್ಲಿ ಅವರ ಎಸ್ಕಾರ್ಟ್‌ ವಾಹನಕ್ಕೆ ಲಾರಿ ಡಿಕ್ಕಿ ಆದ ಭೀಕರ ಅಪಘಾತದಲ್ಲಿ ಬದುಕುಳಿದ ಮೂರು ಜನ ಪೋಲಿಸ್‌ ಸಿಬ್ಬಂದಿಗಳಿಗೆ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡುವಲ್ಲಿ ಸರಿ ಸುಮಾರು ಎರಡು ಘಂಟೆಗಳ ಕಾಲ ನಿರಂತರ ಚಿಕಿತ್ಸೆ ನೀಡಿ, ದವಡೆಗಳಲ್ಲಿ ಆಗುತ್ತಿದ್ದಂತಹ ಹೆಚ್ಚಿನ ರಕ್ತಶ್ರಾವವನ್ನು ನಿಲ್ಲಿಸುವಲ್ಲಿ ಸಫಲನಾದೆ. ಆ ಸಂದರ್ಭದಲ್ಲಿ ನಾನು ಯಾವುದೇ ರೀತೀಯ ಶುಲ್ಕವನ್ನು ಪಡೆದುಕೊಳ್ಳದೆ ಉಚಿತವಾಗಿ ನನ್ನ ವೈದ್ಯಕೀಯ ಸೇವೆಯನ್ನು ಮಾಡಿದ ತೃಪ್ತಿ ನನಗೆ ಇದೆ.

6. ನಿಮ್ಮ ಅನುಭವದಲ್ಲಿ, ಹೊಸ ತಂತ್ರಜ್ಞಾನದ ಅನುಕೂಲ ಹಾಗೂ ಅನಾನುಕೂಲತೆಗಳ ಬಗ್ಗೆ ತಿಳಿಸುವಿರಾ?

AI ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ಗೆ ಆರನೇಯ ಇಂದ್ರೀಯ (6th sense)ಇರುವುದಿಲ್ಲ. ಹಾಗಾಗಿ ಒಳ್ಳೆಯ ನುರಿತ ವೈದ್ಯರಿಗೆ ಕೃತಕ ಬುದ್ದಿಮತೆಯ ಅವಶ್ಯಕತೆ ಅಷ್ಟಾಗಿ ಅಗತ್ಯವಿಲ್ಲವೆಂಬುವುದು ನನ್ನ ಅನಿಸಿಕೆ. ಅತ್ಯಾಧುನಿಕ ಯಂತ್ರಗಳು ಕೆಲವೊಂದು ಉಪಯೋಗಕ್ಕೆ ಯೋಗ್ಯವಾಗಿದೆ. ಹಾಗೆ conventional practices(ಸಂರಕ್ಷಣಾ ಪದ್ಧತಿಗಳು) ಮಾಡಿದಂತಹ ಯಂತ್ರಗಳು ಇನ್ನು ಕೂಡ ಉಪಯೋಗಕ್ಕೆ ಯೋಗ್ಯವಾಗಿದೆ ಎಂಬುದು ನನ್ನ ಅನುಭವದಲ್ಲಿ ಬಂದಿದೆ. ಹಳೆಯ ಕಾಲದ ಸಂಶೋಧನೆಗಳು ಇಂದು ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಲಿದೆ.

7. ತುರ್ತು ಸಂದರ್ಭಗಳನ್ನು ನೀವು ಹೇಗೆ ನಿಭಾಯಿಸುತ್ತಿರಿ?

ಪ್ರಾಣಾಪಾಯ ಯಾರಿಗೆ ಹೆಚ್ಚಿದೆ ಎಂಬ ಬಗ್ಗೆ ನಿರ್ಣಯ ಕೈಗೊಂಡು ತುರ್ತು ಸಂದರ್ಭಗಳಲ್ಲಿ ಶಾಂತ ಮನಸ್ಸಿನಿಂದ ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡುತ್ತೇನೆ. ನಮ್ಮಲ್ಲಿ ನೀಡಬಹುದಾದ ಚಿಕಿತ್ಸೆಗಳನ್ನು ನಾವು ನೀಡಿ ಹೆಚ್ಚಿನ ಚಿಕಿತ್ಸೆ ರೋಗಿಗಳಿಗೆ ಬೇಕಿದ್ದಲ್ಲಿ ಆ ಚಿಕಿತ್ಸೆ ಲಬ್ಯವಿರುವ ಆಸ್ಪತ್ರೆಗೆ ಕಳುಹಿಸಿ ಕೊಡುತ್ತೇವೆ.

8. ಸಾರ್ವಜನಿಕರಿಗೆ ಆರೋಗ್ಯ ಕಾಪಾಡಿಕೊಳ್ಳಲು ನೀಡಬಹುದಾದ ಪ್ರಮುಖ ಸಲಹೆಗಳು ಯಾವುವು?

  • ಆರೋಗ್ಯದ ಬಗ್ಗೆ ಕಾಳಜಿ, ಆಹಾರ ಪದ್ದತಿಯಲ್ಲಿ ಶಿಸ್ತು ಹಾಗು ಕ್ರಮ ಬದ್ದತೆ ಇರಬೇಕು. ದೇಹದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ನಿಯಮಿತ ವ್ಯಾಯಾಮ, ಸಮತೋಲನ ಆಹಾರ, ಉತ್ತಮ ನಿದ್ರೆ ಮತ್ತು ಮಾನಸಿಕ ನೆಮ್ಮದಿಗೆ ಗಮನ ಕೊಡಬೇಕು. ದಂತ ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದಲ್ಲಿ ಭಯಪಡದೆ, ದಂತ ವ್ಯದ್ಯರನ್ನು ಸಂಪರ್ಕಿಸಬೇಕು.

9. ವೃತ್ತಿ ಮತ್ತು ನಿಮ್ಮ ಕುಟುಂಬ ಸಂಬಂಧಗಳ ಹೊಂದಾಣಿಕೆ ಹೇಗೆ?

ಪತ್ನಿ ಡಾ. ಚಿತ್ರರೇಖಾ ಪ್ರವೀಣ್‌ ಇವರು ಕೂಡ Endodontics and Dental Implantology ಕೋರ್ಸನ್ನು ಮಾಡಿ Dental Specialist ಆಗಿದ್ದು, ನಮ್ಮ ಕ್ಲಿನಿಕ್‌ನಲ್ಲಿ ನನ್ನ ಜೊತೆಗೂಡಿ ವೈದ್ಯಕೀಯ ಸೇವೆಯನ್ನು ನಿರ್ವಹಿಸುತ್ತಿದ್ದಾರೆ. ಇವರು ಸರಿ ಸುಮಾರು 20 ವರ್ಷಗಳಿಂದ ವೈದ್ಯಕೀಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಮಯ ನಿರ್ವಹಣೆ ಮತ್ತು ಕುಟುಂಬದ ಬೆಂಬಲದಿಂದ ವೃತ್ತಿ ಹಾಗೂ ವೈಯಕ್ತಿಕ ಜೀವನದ ಸಮತೋಲನ ಕಾಯ್ದುಕೊಳ್ಳುತ್ತಿದ್ದೆನೆ.

ಸಾಮಾಜಿಕ ಕ್ಷೇತ್ರದಲ್ಲಿ:

2024-25ರ ಸಾಲಿನ‌ ಕುಶಾಲನಗರ ಲಯನ್ಸ್ ಸಂಸ್ಥೆಯ ಅಧ್ಯಕ್ಷನಾಗಿ, ಕುಶಾಲನಗರ ಲಯನ್ಸ್‌ ಕ್ಲಬ್‌ ಟ್ರಸ್ಟ್‌ನ ಅಧ್ಯಕ್ಷನಾಗಿಯೂ, ಹಾಗೂ ಭಾರತ್ ಸ್ಕೌಟ್‌ ಅಂಡ್‌ ಗೈಡ್ಸ್‌ ಸ್ಥಳೀಯ ಸಂಸ್ಥೆ ಕುಶಾಲನಗರ ಇದರ ಅಧ್ಯಕ್ಷನಾಗಿಯೂ ಕೂಡ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ.

ಸಂಪರ್ಕ ಮಾಹಿತಿ

ನಮ್ಮ ವಿಳಾಸ: ENOMYTH MULTI SPECIALITY DENTAL ORAL AND MAXILLOFACIAL SURGICAL CLINIC
ಬೈಪಾಸ್‌ ರಸ್ತೆ, ಮೈಲಾರ್‌ ಕೆಫೆ ಎದರು, ಕುಶಾಲನಗರ – ಕೊಡಗು

ಸಂಪರ್ಕ ಸಂಖ್ಯೆ: 9739861983

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x