ಕೊಡಗಿನ ಪ್ರಸಿದ್ಧ ರೇಡಿಯಾಲಾಜಿಸ್ಟ್(ವಿಕಿರಣಶಾಸ್ತ್ರಜ್ಞ) ಡಾ. ಚೌರೀರ ಶ್ಯಾಮ್ ಅಪ್ಪಣ್ಣ

Reading Time: 7 minutes

ಕೊಡಗಿನ ಪ್ರಸಿದ್ಧ ರೇಡಿಯಾಲಾಜಿಸ್ಟ್ ಡಾ. ಚೌರೀರ ಶ್ಯಾಮ್ ಅಪ್ಪಣ್ಣ ಅವರ ವಿಶೇಷ ಸಂದರ್ಶನ

[Image of Dr. Chowrira Shyam Appanna]

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಡಾ. ಚೌರೀರ ಶ್ಯಾಮ್ ಅಪ್ಪಣ್ಣ: ಪರಿಚಯ ಮತ್ತು ಶೈಕ್ಷಣಿಕ ಹಿನ್ನೆಲೆ

ಕೊಡಗು ಜಿಲ್ಲೆಯಲ್ಲಿ ರೇಡಿಯಾಲಜಿ ಕ್ಷೇತ್ರದಲ್ಲಿ ಒಂದು ಪ್ರಮುಖ ಹೆಸರು, ಸುಮಾರು 29 ವರ್ಷಗಳ ಸುದೀರ್ಘ ಸೇವೆ ಮೂಲಕ ಸಾವಿರಾರು ಜನರ ಆರೋಗ್ಯಕ್ಕೆ ಆಶಾಕಿರಣವಾಗಿರುವ ಡಾ. ಶ್ಯಾಮ್ ಅಪ್ಪಣ್ಣ ಅವರ ವೈದ್ಯಕೀಯ ಪಯಣ, ಸಮಾಜಕ್ಕೆ ನೀಡಿದ ಕೊಡುಗೆ, ಮತ್ತು ಕುಟುಂಬದ ಬೆಂಬಲದ ಕುರಿತು ಸಮಗ್ರ ವಿವರ ಇಲ್ಲಿದೆ.

ಶೈಕ್ಷಣಿಕ ಹಿನ್ನಲೆ ಮತ್ತು ವೃತ್ತಿಜೀವನದ ಆರಂಭ:
ಡಾ. ಶ್ಯಾಮ್ ಅಪ್ಪಣ್ಣ ಅವರು 1987 ರಲ್ಲಿ ಮಂಗಳೂರಿನ ಕೆಎಂಸಿಯಿಂದ (Kasturba Medical College (KMC) Mangalore) ತಮ್ಮ ಎಂಬಿಬಿಎಸ್ ಪದವಿಯನ್ನು ಪಡೆದರು. ತದನಂತರ, ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜಿನಲ್ಲಿ 1993-1996 ರ ಅವಧಿಯಲ್ಲಿ ಡಿಎಂಆರ್‌ಡಿ (ರೇಡಿಯೊ ಡಯಾಗ್ನೋಸಿಸ್) ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಡಿಎಂಆರ್‌ಡಿ ಆಯ್ಕೆ ಮಾಡಿಕೊಳ್ಳಲು ಒಂದು ಮಹತ್ವದ ಕಾರಣವಿತ್ತು; ಆ ಸಮಯದಲ್ಲಿ ಕೊಡಗು ಜಿಲ್ಲೆಯಲ್ಲಿ ರೇಡಿಯಾಲಜಿಯಲ್ಲಿ ಪರಿಣತಿ ಹೊಂದಿದ ಯಾವುದೇ ವೈದ್ಯರು ಇರಲಿಲ್ಲ, ಹೊರಗಿನಿಂದಲೂ ಯಾರೂ ಬರುವುದಕ್ಕೆ ಸಿದ್ಧರಿರಲಿಲ್ಲ. ಈ ಕೊರತೆಯನ್ನು ನೀಗಿಸುವ ದೃಢ ಸಂಕಲ್ಪದಿಂದ, ಡಾ. ಶ್ಯಾಮ್ ಅಪ್ಪಣ್ಣ ಅವರು ಕೊಡಗಿನಲ್ಲಿ ರೇಡಿಯಾಲಜಿಯ ಮೊದಲಿಗರಾಗಿ ಹೊರಹೊಮ್ಮಿದರು.

ವೈದ್ಯರಾಗಬೇಕೆಂಬುದು ಡಾ. ಶ್ಯಾಮ್ ಅಪ್ಪಣ್ಣ ಅವರ ಬಾಲ್ಯದ ಕನಸಾಗಿತ್ತು. ಅವರ ಚೌರೀರ ಕುಟುಂಬದಲ್ಲಿ ವೈದ್ಯಕೀಯ ತರಬೇತಿ ಪಡೆದ ಮೊದಲಿಗರು ಇವರೇ. 1997 ರಿಂದ ಅವರು ವೈದ್ಯಕೀಯ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ಕೆಎಂಸಿಯಲ್ಲಿ ಆರು ತಿಂಗಳ ಕಾಲ ಪ್ರಾಕ್ಟೀಸ್ ಮಾಡಿದ ನಂತರ, ಅಮ್ಮತ್ತಿಯಲ್ಲಿರುವ RIHP (Rural India Health Project Hospital, Ammathi, Kodagu) ನಲ್ಲಿ ಕೆಲವು ತಿಂಗಳುಗಳ ಕಾಲ ಸೇವೆ ಸಲ್ಲಿಸಿದರು. ತದನಂತರ, ತಮ್ಮದೇ ಆದ ರೋಹಿಣಿ ಡಯಾಗ್ನೋಸ್ಟಿಕ್ ಸೆಂಟರ್ ಅನ್ನು ಸ್ಥಾಪಿಸಿ, ಕೊಡಗಿನ ಜನರಿಗೆ ಸುಸಜ್ಜಿತ ರೋಗನಿರ್ಣಯ ಸೇವೆಗಳನ್ನು ಒದಗಿಸಲು ಅಡಿಪಾಯ ಹಾಕಿದರು.

ಸೇವಾ ಕ್ಷೇತ್ರಗಳು ಮತ್ತು ರೋಗನಿರ್ಣಯ ಸೇವೆಗಳು

ಡಾ. ಶ್ಯಾಮ್ ಅಪ್ಪಣ್ಣ ಅವರು ರೋಹಿಣಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಪ್ರಮುಖ ರೇಡಿಯಾಲಜಿಸ್ಟ್ ಮತ್ತು ಸೋನಾಲಜಿಸ್ಟ್ ಆಗಿ ಕಾರ್ಯನಿರ್ವಹಿಸುವುದರ ಜೊತೆಗೆ, ಕೊಡಗಿನ ಹಲವು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ:

  • ವಿರಾಜಪೇಟೆಯ ಅತ್ರೇಯ ಆಸ್ಪತ್ರೆ
  • ಕುಶಾಲನಗರದ ಆರತಿ ಹೆಲ್ತ್ ಸೆಂಟರ್
  • ಗೋಣಿಕೊಪ್ಪದ ಲೋಪಮುದ್ರ ಹಾಸ್ಪಿಟಲ್
  • ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾ ಸೇವಾ ಆಶ್ರಮ ಆಸ್ಪತ್ರೆ

ಕಳೆದ 29 ವರ್ಷಗಳಿಂದ ಡಾ. ಶ್ಯಾಮ್ ಅಪ್ಪಣ್ಣ ಅವರು ವೈದ್ಯಕೀಯ ಸೇವೆಯಲ್ಲಿ ನಿರಂತರವಾಗಿ ಸಕ್ರಿಯರಾಗಿದ್ದಾರೆ.

ರೋಹಿಣಿ ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ಆಧುನಿಕ ವೈದ್ಯಕೀಯ ತಂತ್ರಜ್ಞಾನಗಳನ್ನು ಬಳಸಿ ಸುಧಾರಿತ ರೋಗನಿರ್ಣಯ ಸೇವೆಗಳನ್ನು ಒದಗಿಸಲಾಗುತ್ತದೆ. ಇಲ್ಲಿ ಎಕ್ಸ್‌ರೇ, ಅಲ್ಟ್ರಾಸೌಂಡ್, ಐ.ವಿ.ಯು, ಕಿಡ್ನಿ, ಬೇರಿಯಂ, ಸೋಡಿಯಂ ಅಲ್ಟ್ರಾಸೌಂಡ್ ಮತ್ತು ಎಂಆರ್‌ಐ ಸೇವೆಗಳು ಲಭ್ಯವಿವೆ.

ಇದಲ್ಲದೆ, ಸೆಂಟರ್‌ನಲ್ಲಿ ವಿವಿಧ ವೈದ್ಯಕೀಯ ವಿಭಾಗಗಳಲ್ಲಿ ಪರಿಣಿತ ತಜ್ಞರ ಸೇವೆಗಳು ಲಭ್ಯವಿವೆ:

  • ಲ್ಯಾಬ್ ಫೆಸಿಲಿಟೀಸ್ ಮತ್ತು ಪ್ಯಾಥೋಲಜಿಸ್ಟ್
  • ನ್ಯೂರಾಲಜಿಸ್ಟ್
  • ಆರ್ಥೋಪೆಡಿಕ್
  • ಗ್ಯಾಸ್ಟ್ರೋಎಂಟರಾಲಜಿಸ್ಟ್
  • ಗೈನಕಾಲಜಿಸ್ಟ್ ಮತ್ತು ಇನ್‌ಫರ್ಟಿಲಿಟಿ ಸ್ಪೆಷಲಿಸ್ಟ್
  • ಯೂರಾಲಜಿಸ್ಟ್
  • ಕಾರ್ಡಿಯಾಲಜಿಸ್ಟ್
  • ಡೆಂಟಿಸ್ಟ್

“ಎಣಿಕೆಗೂ ಸಿಗದಷ್ಟು ರೋಗಿಗಳಿಗೆ ಚಿಕಿತ್ಸೆ ನೀಡಿದ್ದು, ಇದು ನನಗೆ ಅಪಾರ ಮಾನಸಿಕ ತೃಪ್ತಿಯನ್ನು ತಂದಿದೆ” ಎಂದು ಡಾ. ಶ್ಯಾಮ್ ಅಪ್ಪಣ್ಣ ಅವರು ನುಡಿಯುತ್ತಾರೆ.
“ಡಾ. ಶ್ಯಾಮ್ ಅಪ್ಪಣ್ಣ ರವರು ಕೇವಲ ರೋಗಿಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಅವರ ಮಾನಸಿಕ ಭಾವನೆಗಳಿಗೆ ಸ್ಪಂದಿಸಿ, ಸೂಕ್ತ ಮಾಹಿತಿ ಮತ್ತು ಅಮೂಲ್ಯ ಸಲಹೆಗಳನ್ನು ನೀಡುತ್ತಾರೆ ಎಂದು ಅವರ ಬಳಿ ಚಿಕಿತ್ಸೆ ಪಡೆದಿರುವವರ ಸಂತೃಪ್ತಿಯ ಮಾತುಗಳು.”

ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಮಾನವೀಯತೆ

ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಕೃತಕ ಬುದ್ಧಿಮತ್ತೆ (AI) ಪ್ರಮುಖ ಪಾತ್ರ ವಹಿಸುತ್ತಿದ್ದರೂ, ವೈದ್ಯರು ಮಾನವೀಯ ನೆಲೆಗಟ್ಟಿನ ಮೇಲೆ ಸೇವೆ ಸಲ್ಲಿಸುವುದು ಅತಿ ಮುಖ್ಯ ಎಂದು ಡಾ. ಶ್ಯಾಮ್ ಅಪ್ಪಣ್ಣ ದೃಢವಾಗಿ ಒತ್ತಿ ಹೇಳುತ್ತಾರೆ. ಕೃತಕ ಬುದ್ಧಿಮತ್ತೆಯಲ್ಲಿ ಮಾನವೀಯ ಸ್ಪರ್ಶ ಇರುವುದಿಲ್ಲ, ಆದರೆ ವೈದ್ಯರಿಗೆ ಮಾನವೀಯತೆ ಅತೀ ಮುಖ್ಯವಾದ ಗುಣವಾಗಿದೆ ಎಂದು ಅವರು ನಂಬುತ್ತಾರೆ.

ತುರ್ತು ಸಂದರ್ಭಗಳಲ್ಲಿ ರೋಗಿಗಳ ಅವಶ್ಯಕತೆಗಳನ್ನು ಅರಿತುಕೊಂಡು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ವೈದ್ಯರಿಗೆ ಇರಬೇಕು. ಯಾವುದೇ ಸಂದೇಹಗಳು ಬಂದಾಗ, ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ. ಜೊತೆಗೆ, ರೋಗಿಗಳು ತಮ್ಮ ದೇಹಕ್ಕೆ ಅನುಗುಣವಾಗಿ ಸಮತೋಲಿತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಅವರು ಕಿವಿಮಾತು ಹೇಳುತ್ತಾರೆ.

ಕುಟುಂಬದ ಬೆಂಬಲ ಮತ್ತು ಸಾಮಾಜಿಕ ಸೇವೆ

ಡಾ. ಶ್ಯಾಮ್ ಅಪ್ಪಣ್ಣ ಅವರ ವೈದ್ಯಕೀಯ ವೃತ್ತಿ ಪಯಣದಲ್ಲಿ ಕುಟುಂಬದ ಹೊಂದಾಣಿಕೆ ಸುಲಲಿತವಾಗಿ ಸಾಗಿದೆ. ಅವರ ಪತ್ನಿ ಮತ್ತು ಮಕ್ಕಳು ಅವರ ಸೇವೆಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಾರೆ ಮತ್ತು ಅವರ ಸಾಮಾಜಿಕ ಸೇವೆಯಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ.

ಡಾ. ಶ್ಯಾಮ್ ಅಪ್ಪಣ್ಣ ಅವರ ಕುಟುಂಬದ ಪರಿಚಯ:

  • ತಂದೆ: ದಿ. ಚೌರೀರ. ಅಪ್ಪಣ್ಣ ಕಾಫಿ ಬೆಳೆಗಾರರಾಗಿದ್ದರು.
  • ತಾಯಿ: ಶ್ರೀಮತಿ ರೋಹಿಣಿ ಅಪ್ಪಣ್ಣ
  • ಪತ್ನಿ: ಶ್ರೀಮತಿ ರಿಪಿಕಾ ಶ್ಯಾಮ್‌ ಅಪ್ಪಣ್ಣ, ಲಿಟಲ್ ಸ್ಟಾರ್ ಪ್ಲೇ ಸ್ಕೂಲ್ (ಮಾಂಟೆಸರಿ ಸ್ಕೂಲ್) ನಡೆಸುತ್ತಿದ್ದಾರೆ.
  • ಹಿರಿಯ ಮಗ: ಸಿ. ಎಸ್. ಬೋಪಣ್ಣ , ಎಂಬಿಬಿಎಎಸ್ ಪದವಿ ಪಡೆದು‌ ಮಂಗಳೂರಿನ ಕೆ.ಎಸ್. ಹೆಗ್ಗಡೆ ಮೆಮೋರಿಯಲ್ ಕಾಲೇಜಿನಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ.
  • ಎರಡನೇ ಮಗ: ಹರ್ಷ ಪೊನ್ನಪ್ಪ, ಹೊಸ ದೆಹಲಿಯ ಜಿಂದಾಲ್ ಗ್ಲೋಬಲ್ ಲಾ ಸ್ಕೂ (JGLS)ನಲ್ಲಿ 3ನೇ ವರ್ಷದ ಎಲ್‌ಎಲ್‌ಬಿ ವ್ಯಾಸಂಗ ಮಾಡುತ್ತಿದ್ದಾರೆ.
  • ಮೂರನೇ ಮಗ: ಕೃಷ್ ಗಣಪತಿ, ಮೈಸೂರಿನ ರಾಮಕೃಷ್ಣ ವಿದ್ಯಾ ಮಂದಿರದಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
  • ಸಹೋದರಿ: ಡಾ. ವಿನಿತಾ ಕಾರ್ಯಪ್ಪ, ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತಿ ಪೀಟು ಕಾರ್ಯಪ್ಪ ಪ್ರಸಿದ್ದ ಕಾಫಿ ಬೆಳೆಗಾರರಾಗಿದ್ದಾರೆ.
  • ಪತ್ನಿಯ ಸಹೋದರ: ಡಾ. ಬೆಳ್ಯಪ್ಪ ಚರ್ಮರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಶ್ಯಾಮ್ ಅಪ್ಪಣ್ಣ ಅವರು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಕೊಡಗು ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಫ್ರೀಮೇಸನ್ರಿ (Freemasonry) ಸಂಸ್ಥೆಯ ಗೌರವಾನ್ವಿತ ಸದಸ್ಯರಾಗಿದ್ದಾರೆ. ಅವರ ಈ ಬಹುಮುಖಿ ಸೇವೆ ಮತ್ತು ಬದ್ಧತೆ ಕೊಡಗು ಜಿಲ್ಲೆಗೆ ಅನನ್ಯ ಕೊಡುಗೆಯಾಗಿದೆ.

ಸಂಪರ್ಕ ಮಾಹಿತಿ

ವಿಳಾಸ: Rohini Diagnostic Centre, Behind SBI, Kohinoor Road, Madikeri, Kodagu, Madikeri – 571201, Kodagu, Karnataka.

ಸಂಪರ್ಕ ಸಂಖ್ಯೆ: 08272-228180, 9353760153

 

ಹಂಚಿಕೊಳ್ಳಿ
5 1 vote
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x