ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಶ್ರೀ. ಕಾವೇರಿ ದಸರಾ ಸಮಿತಿ (ರಿ), ಗೋಣಿಕೊಪ್ಪಲು.
(ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಕರ್ನಾಟಕ ಸರ್ಕಾರ)
41ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವ
ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 08ರ ವರೆಗೆ

ಗೋಣಿಕೊಪ್ಪಲು ದಸರಾ-2019
ಹತ್ತು ದಿನಗಳ ಕಾಲ ಆಚರಿಸಲಾಗುವ ಗೋಣಿಕೊಪ್ಪಲು ದಸರಾ ಮಹೋತ್ಸವವು ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಈ ಬಾರಿಯ ಸಂಭ್ರಮಾಚರಣೆಗಳಿಗಾಗಿ ಇಡೀ ಗೋಣಿಕೊಪ್ಪಲು ನಗರವೇ ಸಜ್ಜಾಗಿದೆ. ಈ ನಮ್ಮ ನಾಡಹಬ್ಬಕ್ಕೆ ನಿಮ್ಮನ್ನೂ ಸ್ವಾಗತಿಸುತ್ತಾ ನಮ್ಮ ಸಂಭ್ರಮದಲ್ಲಿ ನೀವೂ ಭಾಗಿಯಾಗಿರಿ ಎಂದು ಆಹ್ವಾನಿಸುತ್ತೇವೆ.
ಶ್ರೀ ಕೆ. ಜಿ. ಬೋಪಯ್ಯ
ಗೌರವಾಧ್ಯಕ್ಷರು:
ಶ್ರೀ ಕಾವೇರಿ ದಸರಾ ಸಮಿತಿ, ಗೋಣಿಕೊಪ್ಪಲು, ಕೊಡಗು
ಮಾನ್ಯ ಶಾಸಕರು ವಿರಾಜಾಪೇಟೆ ವಿಧಾನ ಸಭಾ ಕ್ಷೇತ್ರ, ಕರ್ನಾಟಕ ಸರ್ಕಾರ
ಹಾಗೂ
ಕರ್ನಾಟಕ ವಿಧಾನಸಭೆ ಮಾಜಿ ಸ್ಪೀಕರ್

ಅಧ್ಯಕ್ಷರು
ಕೆ.ಜಿ. ರಾಮಕೃಷ್ಣ

ಕಾರ್ಯಧ್ಯಕ್ಷರು
ಕುಲ್ಲಚಂಡ ಬೋಪಣ್ಣ

ಪ್ರಧಾನ ಕಾರ್ಯದರ್ಶಿ
ಜಪ್ಪು ಸುಬ್ಬಯ್ಯ

ತಾ|| 29-09-2019ರಂದು ಗೋಣಿಕೊಪ್ಪಲು ದಸರಾ ಜನೋತ್ಸವದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಸಮಾರಂಭದ ವೇದಿಕೆಯಲ್ಲಿ ಶಕ್ತಿ ಸ್ವರೂಪಿಣಿ ಶ್ರೀ ಚಾಮುಂಡೇಶ್ವರಿ ಮಾತೆಯ ಉತ್ಸವ ಮೂರ್ತಿಯ ಕಲಾಕೃತಿಯನ್ನು ಪ್ರತಿಷ್ಠಾಪಿಸಿ. ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ಚಾಲನೆ ದೊರೆಯಲಿದೆ. ತದ ನಂತರ 9 ದಿನಗಳ ನವರಾತ್ರಿ ಉತ್ಸವ ಆಚರಣೆಯು ವೈಭವದಿಂದ ನಡೆಯಲ್ಪಡುತ್ತದೆ. ತಾ|| 07-10-2019ರಂದು ಆಯುಧಪೂಜಾ ಸಮಾರಂಭವು ನಡೆಯಲಿದ್ದು, 08-10-2019ರಂದು ಮದ್ಯಾಹ್ನ 2 ಗಂಟೆಗೆ ಸ್ಥಬ್ದಚಿತ್ರಗಳ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಲಿದೆ. ರಾತ್ರಿ 10 ಗಂಟೆಗೆ ದಶಮಂಟಪಗಳ ಭವ್ಯ ಶೋಭಾಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಸಾಗಲಿದ್ದು. ಲಕ್ಷಾಂತರ ಜನ ಸಮೂಹ ಪಾಲ್ಗೊಂಡು, ಗೋಣಿಕೊಪ್ಪಲು ದಸರಾ ಜನೋತ್ಸವಕ್ಕೆ ತಾ|| 09-10-2019ರಂದು ತೆರೆಬೀಳಲಿದೆ.