Reading Time: < 1 minute
ವಿರಾಜಪೇಟೆ ಅ.1: ಮುನೇಶ್ವರ ಸೇವಾ ಸಮಿತಿ ತಟ್ಟಹಳ್ಳಿ ವತಿಯಿಂದ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿರಾಜಪೇಟೆ ತಾಲ್ಲೂಕಿನ ಮಲ್ದಾರೆ ಪಂಚಾಯ್ತಿ ತಟ್ಟಹಳ್ಳಿ ಹಾಡಿಯಲ್ಲಿ ಪ್ರಾತಃಕಾಲ
ಗಣಪತಿ ಹೋಮ ನಡೆಸಿ,ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳನ್ನು ನಡೆಸಿ ಮದ್ಯಾಹ್ನ ಅನ್ನ ಸಂತರ್ಪಣೆ ನಡೆಸಲಾಯಿತು. ನಂತರ ಸಂಜೆ ಅಲಂಕೃತ ಮಂಟಪದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಮೂರ್ತಿ ವಿಸರ್ಜನೆ ಮಾಡಲಾಯಿತು.
ಈ ಉತ್ಸವದಲ್ಲಿ ವನವಾಸಿ ಕಲ್ಯಾಣದ ರಾಜ್ಯ ಅಧ್ಯಕ್ಷರು ಚಕ್ಕೇರ ಮನು ಕಾವೇರಪ್ಪನವರು ಸೇರಿದಂತೆ ಗ್ರಾಮದ ಜನತೆಯು ಹರ್ಷದಿಂದ ಹಾಗೂ ಭಕ್ತಿಯಿಂದ ಪಾಲ್ಗೊಂಡಿದ್ದರು.