Reading Time: < 1 minute
ಮಡಿಕೇರಿ ನ.24: ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷದ ರೂಢಿ ಸಂಪ್ರದಾಯದಂತೆ ನವೆಂಬರ್, 27 ರಂದು ಸಂಜೆ 5.30 ಗಂಟೆಯಿಂದ “ತೆಪ್ಪೋತ್ಸವ, ಪಲ್ಲಕಿ ಉತ್ಸವ, ದಟ್ಟೋತ್ಸವ” ಹಾಗೂ ಅಂದು ಕೊಡಗಿನ ಸಾಂಪ್ರಾದಾಯಿಕ ಹಬ್ಬ “ಹುತ್ತರಿ ಹಬ್ಬದ” ಪ್ರಯುಕ್ತ ದೇವಾಲಯ ಹಾಗೂ ಕೊಡವ ಸಮಾಜದ ವತಿಯಿಂದ ರಾತ್ರಿ 8.45ಕ್ಕೆ ದೇವಾಲಯದ ಗದ್ದೆಯಲ್ಲಿ ಕದಿರು ಕುಯ್ಯುವುದು ಕಾರ್ಯಕ್ರಮವಿದ್ದು, ಸಾರ್ವಜನಿಕ ಭಕ್ತಾಧಿಗಳು ದೇವಾಲಯದಲ್ಲಿ ಜರುಗುವ ಪೂಜೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ದೇವಾಲಯದ ವತಿಯಿಂದ ಕೋರಿದೆ.