Reading Time: < 1 minute
ಕೆದಮುಳ್ಳೂರು: ಕೆದಮುಳ್ಳೂರುವಿನ ಶ್ರೀ ಮಹಾದೇವರ ದೇವಾಲಯದಲ್ಲಿ ಅಯೋಧ್ಯೆಯ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಲಾಯಿತು.
ಹಿಂದೂ ಸಂಘಟನೆಯ ಪ್ರಮುಖರು ಕಳೆದ ಒಂದು ವಾರಗಳ ಕಾಲ ದೇವಾಲಯದಲ್ಲಿ ಮಂತ್ರಾಕ್ಷತೆ ಹಾಗೂ ಕಳಶವನ್ನು ಇಟ್ಟು ಪೂಜೆ ಸಲ್ಲಿಸಿದರು. ಅಲ್ಲದೇ ಮಹಾದೇಶ್ವರನಿಗೆ ಅಭಿಷೇಕ ಹಾಗೂ ವಿಶೇಷ ಪೂಜೆಯನ್ನು ನೆರವೇರಿಸಿದರು.
ನಂತರ ಗ್ರಾಮದ ಎಲ್ಲ ಮನೆಗಳಿಗೆ ಮಂತ್ರಾಕ್ಷತೆಯನ್ನು ವಿತರಿಸಲು ಸಜ್ಜುಗೊಳಿಸಿದರು. ಈ ಸಂದರ್ಭ ಸಂಘ ಪರಿವಾರದ ಪ್ರಮುಖರು ಹಾಗೂ ಬಿಜೆಪಿಯ ಸ್ಥಳೀಯ ಪ್ರಮುಖರು, ಮಹಾದೇವ ದೇವಾಲಯದ ಅರ್ಚಕರಾದ ರಾಧಕೃಷ್ಣ ಹಾಜರಿದ್ದರು.