ಕೊಡಗಿನ ರಾಜಕೀಯ ಕ್ಷೇತ್ರದಲ್ಲಿ ಭರವಸೆಯ ನಾಯಕಿ ಕುಪ್ಪಣಮಾಡ ನಿವ್ಯ ಕಾವೇರಮ್ಮ
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಕುಪ್ಪಣಮಾಡ ನಿವ್ಯ ಕಾವೇರಮ್ಮ ಅವರು ಗ್ರಾಮೀಣಾಭಿವೃದ್ಧಿಯ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿರುವ ದಕ್ಷ ನಾಯಕಿ. ಪ್ರಧಾನಿ ನರೇಂದ್ರ ಮೋದಿಯವರ ‘ವಿಕಸಿತ ಭಾರತ’ದ ಸಂಕಲ್ಪವನ್ನು ಗ್ರಾಮ ಮಟ್ಟದಲ್ಲಿ ಸಾಕಾರಗೊಳಿಸಲು ಹಗಲಿರುಳು ಶ್ರಮಿಸುತ್ತಿರುವ ಇವರು, ಇಂದು ರಾಜ್ಯದ ಗಮನ ಸೆಳೆದಿರುವ ಯುವ ನಾಯಕಿಯಾಗಿ ಹೊರಹೊಮ್ಮಿದ್ದಾರೆ.
2020ರಲ್ಲಿ ಹುದಿಕೇರಿ ಪಂಚಾಯಿತಿಯ ಕೋಣಗೇರಿ ವಾರ್ಡ್ನಿಂದ ಅತಿ ಕಿರಿಯ ವಯಸ್ಸಿನಲ್ಲಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾದ ನಿವ್ಯ ಅವರು, 2023ರಲ್ಲಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಅಂದಿನಿಂದ ಇಂದಿನವರೆಗೆ ಹುದಿಕೇರಿ ಪಂಚಾಯಿತಿ ಕಂಡಿರುವ ಅಭಿವೃದ್ಧಿ ಪಥವು ಜಿಲ್ಲೆಯ ಇತರೆ ಪಂಚಾಯಿತಿಗಳಿಗೆ ಮಾದರಿಯಾಗಿದೆ.
- ✔
ರಾಷ್ಟ್ರೀಯ ಮಾನ್ಯತೆ: ಇವರ ದಕ್ಷ ಆಡಳಿತದ ಫಲವಾಗಿ ಹುದಿಕೇರಿ ಪಂಚಾಯಿತಿಯ ಡಿಜಿಟಲೀಕರಣಕ್ಕೆ (Digitalization) 2025ರ ಆಗಸ್ಟ್ 15ರಂದು ನವದೆಹಲಿಯ ಕೆಂಪುಕೋಟೆಯಲ್ಲಿ ನಡೆದ 79ನೇ ಸ್ವಾತಂತ್ರ್ಯೋತ್ಸವದ ಅಧಿಕೃತ ಕಾರ್ಯಕ್ರಮಕ್ಕೆ ಕರ್ನಾಟಕದ ಕೇವಲ 7 ಪಂಚಾಯಿತಿಗಳ ಪೈಕಿ ಕೊಡಗಿನ ಏಕೈಕ ಜನ ಪ್ರತಿನಿಧಿಯಾಗಿ ನಿವ್ಯ ಕಾವೇರಮ್ಮ ಹಾಗೂ ಏಕೈಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾದ ಪುಟ್ಟುರಾಜುರವರು ಆಯ್ಕೆಯಾಗಿದ್ದು ಇತಿಹಾಸ. ಇದು ಕೇವಲ ಹುದಿಕೇರಿಗಷ್ಟೇ ಅಲ್ಲದೆ ಇಡೀ ಕೊಡಗು ಜಿಲ್ಲೆಗೆ ಸಂದ ಗೌರವವಾಗಿದೆ.
- ✔
ರಸ್ತೆಗಳ ಅಭಿವೃದ್ಧಿ: ಪಂಚಾಯತ್ ವ್ಯಾಪ್ತಿಯ ಸ್ಥಳೀಯ ರಸ್ತೆಗಳು ಶೇಕಡಾ 90 ರಷ್ಟು ಉತ್ತಮವಾಗಿ ರೂಪುಗೊಂಡಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿವೆ. ಕೊಡಗಿನ ಮಲೆನಾಡಿನ ಕಠಿಣ ಭೌಗೋಳಿಕ ಪರಿಸ್ಥಿತಿಯಲ್ಲೂ ರಸ್ತೆಗಳ ಗುಣಮಟ್ಟ ಕಾಯ್ದುಕೊಳ್ಳುವುದು ಇವರ ಆದ್ಯತೆಯಾಗಿತ್ತು.
- ✔
ಜಲ ಜೀವನ್ ಮಿಷನ್ (JJM): ಹುದಿಕೇರಿ, ಕೋಣಗೇರಿ ಎಸ್.ಸಿ ಕಾಲೋನಿ, ಹೈಸೆಡ್ಲೂರು ಮತ್ತು ಬೇಗೂರು ಭಾಗಗಳಲ್ಲಿ ಶೇಕಡಾ 100ರಷ್ಟು ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಗಿಸಿರುವುದು ಇವರ ಆಡಳಿತಾತ್ಮಕ ದಕ್ಷತೆಗೆ ಪ್ರಬಲ ನಿದರ್ಶನ.
- ✔
ನರೇಗಾ ಮತ್ತು ದಿಸಾ ಸಮಿತಿ: 2024ರಲ್ಲಿ ನರೇಗಾ ಯೋಜನೆಯಡಿ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಇವರ ಪಂಚಾಯಿತಿ ಗುರುತಿಸಲ್ಪಟ್ಟಿದೆ. ಇವರ ಜನಪರ ಕೆಲಸಗಳನ್ನು ಕಂಡು ಸಂಸದರಾದ ಯದುವೀರ್ ಒಡೆಯರ್ ಅವರು ಜಿಲ್ಲಾ ಮಟ್ಟದ ಅತ್ಯುನ್ನತ ‘ದಿಸಾ’ (DISHA) ಸಮಿತಿಯ ಸದಸ್ಯರನ್ನಾಗಿ ಇವರನ್ನು ನೇಮಿಸಿದ್ದಾರೆ.
ಮತದಾನದ ಹಕ್ಕು ಪಡೆದ ದಿನದಿಂದಲೇ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಿದ್ಧಾಂತಗಳಿಗೆ ಆಕರ್ಷಿತರಾಗಿದ್ದ ಶ್ರೀಮತಿ ನಿವ್ಯ ಕಾವೇರಮ್ಮ ಅವರು, ಇಂದು ಓರ್ವ ದಕ್ಷ ಆಡಳಿತಗಾರ್ತಿಯಾಗಿ ಹೊರಹೊಮ್ಮಿದ್ದಾರೆ. ಇವರು ರಾಜಕೀಯವನ್ನು ಕೇವಲ ಅಧಿಕಾರವೆಂದು ಪರಿಗಣಿಸದೆ, ಅದನ್ನು ಸಮಾಜ ಸೇವೆಯ ವೇದಿಕೆಯನ್ನಾಗಿ ಸ್ವೀಕರಿಸಿದ್ದಾರೆ.
ರಾಷ್ಟ್ರೀಯ ಪ್ರೇರಣೆ
ಅಟಲ್ ಬಿಹಾರಿ ವಾಜಪೇಯಿ ಅವರ ಮೌಲ್ಯಗಳು, ನರೇಂದ್ರ ಮೋದಿಯವರ ಕರ್ತವ್ಯನಿಷ್ಠೆ, ಯೋಗಿ ಆದಿತ್ಯನಾಥ್ ಅವರ ದೃಢತೆ ಹಾಗೂ ಹಿಮಂತ್ ಬಿಸ್ವಾ ಶರ್ಮಾ ಅವರ ಆಡಳಿತಾತ್ಮಕ ಚತುರತೆಗಳು ಇವರಿಗೆ ಸ್ಪೂರ್ತಿಯಾಗಿವೆ.
ಸ್ಥಳೀಯ ಮಾರ್ಗದರ್ಶನ
ಮಾಜಿ ಶಾಸಕರಾದ ಕೆ.ಜಿ. ಬೋಪಯ್ಯ ಅವರ ಮಾರ್ಗದರ್ಶನ ಬೆನ್ನೆಲುಬಾಗಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಹಾಲಿ ಸಂಸದ ಯದುವೀರ್ ಒಡೆಯರ್ ಅವರು ಇವರ ಸಂಘಟನಾ ಚಾತುರ್ಯವನ್ನು ಸದಾ ಪ್ರೋತ್ಸಾಹಿಸುತ್ತಿದ್ದಾರೆ.
ಸಮಾಜಮುಖಿ ಚಿಂತನೆ ಮತ್ತು ಶಿಕ್ಷಣಕ್ಕೆ ಒತ್ತು
ಬಜೆಟ್ ಕೊರತೆ ಎಂಬ ನೆಪವೊಡ್ಡದೆ, ಸ್ವಂತ ಇಚ್ಛಾಶಕ್ತಿಯಿಂದ ಮತ್ತು ದಾನಿಗಳ ಸಹಕಾರದೊಂದಿಗೆ ಇವರು ಹಲವಾರು ನವೀನ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ:
📚 ಶೈಕ್ಷಣಿಕ ಕ್ರಾಂತಿ
ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಶ್ರಮಿಸುತ್ತಿರುವ ಇವರು, ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡುವುದರ ಜೊತೆಗೆ ಅಂಗನವಾಡಿಗಳಿಗೆ ‘ಟಾಕಿಂಗ್ ಪೆನ್’ ಮತ್ತು ಆಧುನಿಕ ಪೀಠೋಪಕರಣಗಳನ್ನು ನೀಡಿದ್ದಾರೆ. ಡಾ. ಧನಂಜಯ ಸರ್ಜಿ ಅವರು ಇವರ ಕಾಳಜಿಗೆ ಸ್ಪಂದಿಸಿ ಸ್ಮಾರ್ಟ್ ಕ್ಲಾಸ್ ಕಿಟ್ಗಳ ಭರವಸೆ ನೀಡಿದ್ದಾರೆ.
👩 ಮಹಿಳಾ ಸಬಲೀಕರಣ ಮತ್ತು ಆರೋಗ್ಯ
ಮಹಿಳೆಯರ ಆರೋಗ್ಯದ ಬಗ್ಗೆ ವಿಶೇಷ ಕಳಕಳಿ ಹೊಂದಿರುವ ಇವರು ಪಂಚಾಯಿತಿಯನ್ನು ‘ಸ್ಯಾನಿಟರಿ ಫ್ರೀ ಜೋನ್’ ಮಾಡಲು ಮುಂದಾಗಿದ್ದಾರೆ. ಉಚಿತ ಮೆನ್ಸ್ಟ್ರುವಲ್ ಕಪ್ ಮತ್ತು ರಿಯಾಯಿತಿ ದರದ ನ್ಯಾಪ್ಕಿನ್ ವಿತರಣೆ ಇವರ ಪ್ರಗತಿಪರ ಚಿಂತನೆಯ ಭಾಗವಾಗಿದೆ.ಅನಾರೋಗ್ಯದಿಂದ ಹಾಸಿಗೆ ಹಿಡಿದವರಿಗೆ, ಗರ್ಭಿಣಿಯರಿಗೆ ಹಾಗೂ ಅಂಗವಿಕಲರಿಗೆ ಮನೆ ಮನೆಗೆ ಸೇವೆಗಳನ್ನು ನೀಡುವ ಉದ್ದೇಶದಿಂದ ಆಶಾ ಕಾರ್ಯಕರ್ತೆಯರಿಗೆ ಉಚಿತ ಮೆಡಿಕಲ್ ಕಿಟ್ ನೀಡಿರುವುದು ಗಮನಾರ್ಹ.
🏙 ಮೂಲಸೌಕರ್ಯ
ಹುದಿಕೇರಿ ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಯ ನಿಟ್ಟಿನಲ್ಲಿ 3 ಹೈಮಾಸ್ಟ್ ದೀಪಗಳ ಅಳವಡಿಕೆ ಹಾಗೂ ಕೊಡವ ಸಮಾಜದ ಏಳಿಗೆಗಾಗಿ 25 ಲಕ್ಷ ರೂ.ಗಳ ವಿಶೇಷ ಅನುದಾನ ನೀಡಲು ಸಂಸದರಾದ ಶ್ರೀ ಯದುವೀರ್ ಒಡೆಯರ್ ಅವರು ಭರವಸೆ ನೀಡಿದ್ದಾರೆ. ಈ ಭರವಸೆ ದೊರಕಿಸಿಕೊಡುವಲ್ಲಿ ಇವರು ವಹಿಸಿದ ಶ್ರಮ ಮತ್ತು ಕಾಳಜಿ ಪ್ರಶಂಸನೀಯವಾಗಿದೆ.
ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾಗಿ
ಇವರ ನಾಯಕತ್ವದ ಕೀರ್ತಿಯು ಜಿಲ್ಲೆ, ರಾಜ್ಯ ದಾಟಿ ರಾಷ್ಟ್ರೀಯ ಮಟ್ಟಕ್ಕೂ ತಲುಪಿದೆ. 2025ರ ಡಿಸೆಂಬರ್ನಲ್ಲಿ ದೆಹಲಿಯಲ್ಲಿ ನಡೆದ ಕೇಂದ್ರ ಸರ್ಕಾರ ಹಾಗೂ UN Women ಸಹಯೋಗದಲ್ಲಿ ಆಯೋಜಿಸಲಾಗಿದ್ದ “SHE LEADS” ರಾಷ್ಟ್ರೀಯ ಕಾರ್ಯಾಗಾರದಲ್ಲಿ ನಿವ್ಯ ಕಾವೇರಮ್ಮ ಭಾಗವಹಿಸಿ, ಗ್ರಾಮೀಣ ಮಹಿಳಾ ನಾಯಕತ್ವದ ಶಕ್ತಿಯನ್ನು ಅಂತರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರಚುರಪಡಿಸಿದ್ದಾರೆ.
“ಅಧಿಕಾರವೆಂಬುದು ಜನರ ಸೇವೆಗೆ ಸಿಕ್ಕ ಅವಕಾಶ. ನನ್ನ ಈ ಎಲ್ಲಾ ಕಾರ್ಯಗಳಿಗೆ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗಳು ಹಾಗೂ ಗ್ರಾಮಸ್ಥರ ಸಹಕಾರವು ಉತ್ತಮವಾಗಿ ದೊರಕುತ್ತಿದೆ. ಇವರೆಲ್ಲರ ವಿಶ್ವಾಸವೇ ನನ್ನ ಈ ಎಲ್ಲಾ ಯಶಸ್ಸಿಗೆ ಕಾರಣ.”
— ಕುಪ್ಪಣಮಾಡ ನಿವ್ಯ ಕಾವೇರಮ್ಮ
ಕುಟುಂಬ ಹಿನ್ನೆಲೆ
ತಂದೆ-ತಾಯಿ: ದಿವಂಗತ ದೇಯಂಡ ಗಣೇಶ್ (ಮಾಜಿ ಸೈನಿಕರು) ಹಾಗೂ ವಸಂತಿ.
ಅತ್ತೆ-ಮಾವ: ಮಾವ ದಿವಂಗತ ಕುಪ್ಪಣಮಾಡ ಭಿಮಯ್ಯ (APCMS ಮಾಜಿ ವ್ಯವಸ್ಥಾಪಕರು) ಹಾಗೂ ಅತ್ತೆ ಪೂವಮ್ಮ.
ಪತಿ: ಕುಪ್ಪಣಮಾಡ ಕುಶ (ಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರು).
ಮಕ್ಕಳು: ಪುತ್ರಿ ನಕ್ಷಾ ಬೋಜಮ್ಮ ಹಾಗೂ ಪುತ್ರ ಶಾಸ್ವತ್ ಭಿಮಯ್ಯ.
ಪ್ರಸ್ತುತ ಕೊಡಗಿನ ಕೋಣಗೇರಿ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ.
ಮುಂದಿನ ಗುರಿ
ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಶ್ರೀಮತಿ ನಿವ್ಯ ಅವರು, ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರ ಸಂಪೂರ್ಣ ವಿಶ್ವಾಸವನ್ನು ಗಳಿಸಿದ್ದಾರೆ. ಇದೇ ವೇಳೆ, ಬಿಜೆಪಿ ಪಕ್ಷವು ತಮಗೆ ಹೆಚ್ಚಿನ ಜವಾಬ್ದಾರಿ ನೀಡಿದರೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುವ ಆಕಾಂಕ್ಷೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

