ಶ್ರೀ ಕಾವೇರಿ ದಸರಾ 2026 - Top Bar

ಶ್ರೀ ಕಾವೇರಿ ದಸರಾ ಸಮಿತಿ(ರಿ), ಗೋಣಿಕೊಪ್ಪ

48ನೇ ವಾರ್ಷಿಕ ದಸರಾ ಜನೋತ್ಸವ - 2026

Oct 11 - 21
ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಗೋಣಿಕೊಪ್ಪಲು ದಸರಾ - ದಶ ಮಂಟಪ ಸಮಿತಿಗಳು
ಗೋಣಿಕೊಪ್ಪಲು ದಸರಾ ಮಹೋತ್ಸವ - 2026

ದಶ ಮಂಟಪ ಸಮಿತಿಗಳು

ಶ್ರೀ ಕಾವೇರಿ ನೆಲದ ಐತಿಹಾಸಿಕ ವಿಜಯದಶಮಿ ಉತ್ಸವ

ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ. ದಯವಿಟ್ಟು ಬೇರೆ ಪದವನ್ನು ಹುಡುಕಿ.
1

ಶ್ರೀ ಕಾವೇರಿ ದಸರಾ ಸಮಿತಿ

48 ನೇ ವರ್ಷ
1979ರ ಸ್ಥಾಪಕ ಅಧ್ಯಕ್ಷರು: ಎಂ.ಜಿ.ಪದ್ಮನಾಭ ಕಾಮತ್
2026ರ ಪ್ರಸ್ತುತ ಅಧ್ಯಕ್ಷರು: —

1979 ರಲ್ಲಿ ಗೋಣಿಕೊಪ್ಪಲಿನ ಎಂ.ಜಿ.ಪದ್ಮನಾಭ ಕಾಮತ್ ಮತ್ತು ಕೆಲವು ಸ್ನೇಹಿತರು ಸೇರಿ ಶ್ರೀ ಕಾವೇರಿ ದಸರಾ ಸಮಿತಿ ಎಂಬ ಹೆಸರಿನಲ್ಲಿ ಗೋಣಿಕೊಪ್ಪಲಿನಲ್ಲಿ ದಸರಾ ನಾಡಹಬ್ಬವನ್ನು ಪ್ರಾರಂಭಿಸಿದರು.

2

ನಾಡಹಬ್ಬ ದಸರಾ ಸಮಿತಿ

38 ನೇ ವರ್ಷ
1989ರ ಸ್ಥಾಪಕ ಅಧ್ಯಕ್ಷರು: ಬಿ.ಎ. ಗಣಪತಿ
2026ರ ಪ್ರಸ್ತುತ ಅಧ್ಯಕ್ಷರು: —
ದಸರಾ ಹಬ್ಬ ನಾಡಹಬ್ಬ • ಭೇದ ಭಾವ ಮರೆವ ಹಬ್ಬ
ಸ್ನೇಹ ಪ್ರೀತಿ ಮೆರವ ಹಬ್ಬ • ದಸರಾ ಹಬ್ಬ ನಾಡಹಬ್ಬ

1989ರಲ್ಲಿ ಗೋಣಿಕೊಪ್ಪಲಿನ ಮೊದಲನೇ ವಿಭಾಗದ ಬಿ.ಎ. ಗಣಪತಿ ಹಾಗೂ ಮಿತ್ರರ ನೇತೃತ್ವದಲ್ಲಿ ಸ್ಥಾಪನೆಯಾಯಿತು. ದಸರಾ ಉತ್ಸವಕ್ಕೆ ಮೆರಗು ನೀಡಿದ್ದು ಗೋಣಿಕೊಪ್ಪಲಿನ ಸ್ಥಬ್ಧಚಿತ್ರ ಮೆರವಣಿಗೆ. ಶ್ರೀ ಕಾವೇರಿ ದಸರಾ ಸಮಿತಿ ಪ್ರಾರಂಭಿಸಿದ ಸ್ಥಬ್ಧಚಿತ್ರ ಮೆರವಣಿಗೆಯನ್ನು ನಾಡಹಬ್ಬ ದಸರಾ ಸಮಿತಿಯು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದು, ಹಲವು ವರ್ಷಗಳಿಂದ ಅನ್ನದಾನ ಕಾರ್ಯಕ್ರಮವನ್ನು ನಡೆಸುತ್ತಿದೆ.

3

ಸ್ನೇಹಿತರ ಬಳಗ ಕೊಪ್ಪ ದಸರಾ ಸಮಿತಿ

38 ನೇ ವರ್ಷ
1989ರ ಸ್ಥಾಪಕ ಅಧ್ಯಕ್ಷರು: ಸಿ.ಟಿ.ಪ್ರೇಮ್ ಗಣಪತಿ
2026ರ ಪ್ರಸ್ತುತ ಅಧ್ಯಕ್ಷರು: —

ಪಾಲಿಬೆಟ್ಟ ರಸ್ತೆಯ ಹಲವು ಸ್ನೇಹಿತರು ಒಟ್ಟುಗೂಡಿ ಸಿ.ಟಿ.ಪ್ರೇಮ್ ಗಣಪತಿರವರ ನೇತೃತ್ವದಲ್ಲಿ ಸ್ನೇಹಿತರ ಬಳಗ ಕೊಪ್ಪ ಎಂಬ ಹೆಸರಿನಲ್ಲಿ ಈ ಸಮಿತಿಯನ್ನು ಪ್ರಾರಂಭಿಸಿದರು. ಪ್ರೇಮ್ ಗಣಪತಿಯವರೊಂದಿಗೆ ಡಿ.ವಿ.ಪ್ರೇಮ್ ಮಣಿ, ಗೋಪಿ, ರಾಜಶೇಖರ್ ಮುಂತಾದವರು ಪ್ರಮುಖರು.

4

ನವಚೇತನ ದಸರಾ ಸಮಿತಿ

37 ನೇ ವರ್ಷ
1990ರ ಸ್ಥಾಪಕ ಅಧ್ಯಕ್ಷರು: ಕೆ.ಎಂ. ಗಣೇಶ್ ತಿಮ್ಮಯ್ಯ
2026ರ ಪ್ರಸ್ತುತ ಅಧ್ಯಕ್ಷರು: —

1990ರಲ್ಲಿ ಗೋಣಿಕೊಪ್ಪಲಿನ ಮಾರುಕಟ್ಟೆಯ ವ್ಯಾಪಾರಿಗಳು ಆಗಿನ ಪುರಸಭಾ ಉಪಾಧ್ಯಕ್ಷ ಕೆ.ಎಂ.ಗಣೇಶ್ ತಿಮ್ಮಯ್ಯರವರ ಅಧ್ಯಕ್ಷತೆಯಲ್ಲಿ ನವಚೇತನ ದಸರಾ ಸಮಿತಿ ಪ್ರಾರಂಭಿಸಿದರು. ಆಯುಧಪೂಜೆ ದಿನದಂದು ಅನ್ನಸಂತರ್ಪಣೆ ನಡೆಸಿ ವಿಜಯದಶಮಿಯಂದು ವಿಜೃಂಭಣೆಯ ಉತ್ಸವ ನಡೆಸುತ್ತಿದ್ದಾರೆ.

5

ಶ್ರೀ ಶಾರದಾಂಬ ದಸರಾ ಸಮಿತಿ

ಸಕ್ರಿಯ ಸಮಿತಿ
ಸ್ಥಾಪಕ ಅಧ್ಯಕ್ಷರು: ಟಿ.ಕೆ.ಪುರುಷೋತ್ತಮ್
2026ರ ಪ್ರಸ್ತುತ ಅಧ್ಯಕ್ಷರು: —

ಅರುವತ್ತೊಕ್ಕಲು ಗ್ರಾಮದಿಂದ ಗೋಣಿಕೊಪ್ಪಲಿನ ದಸರಾ ಉತ್ಸವಕ್ಕೆ ಸಹಕಾರಿಯಾಗಿ ಶ್ರೀ ಶಾರದಾಂಬ ದಸರಾ ಸಂಸ್ಥೆಯನ್ನು ಎ.ಜೆ.ಬಾಬು, ಫಿಲಿಫೋಸ್ ಮ್ಯಾಥ್ಯು, ಜಗನ್ನಿವಾಸ್ ಇನ್ನಿತರ ಸ್ನೇಹಿತರು ಟಿ.ಕೆ.ಪುರುಷೋತ್ತಮ್‍ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದರು.

6

ನಮ್ಮ ದಸರಾ ಸಮಿತಿ

ಸಕ್ರಿಯ ಸಮಿತಿ
ಸ್ಥಾಪಕ ಅಧ್ಯಕ್ಷರು: ಕುಪ್ಪಂಡ ಅಶೋಕ್
2026ರ ಪ್ರಸ್ತುತ ಅಧ್ಯಕ್ಷರು: —

ಹರಿಶ್ಚಂದ್ರ ಪುರದ ಹಲವು ಸ್ನೇಹಿತರು ಸೇರಿ ನಮ್ಮ ದಸರಾ ಸಮಿತಿ ಎಂಬ ಹೆಸರಿನಲ್ಲಿ ಕುಪ್ಪಂಡ ಅಶೋಕ್‍ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದರು. ನಂತರ ಸುಂದರ್, ಕೊಪ್ಪಿರ ಸೋಮಯ್ಯ, ದಾಮೋದರ ಹಾಗೂ ಇನ್ನಿತರರ ಪ್ರಯತ್ನದಿಂದ ವಿಜೃಂಭಣೆಯಿಂದ ಮುನ್ನಡೆಯುತ್ತಿದೆ.

7

ಸರ್ವರ ದಸರಾ ಸಮಿತಿ

ಸಕ್ರಿಯ ಸಮಿತಿ
ಸ್ಥಾಪಕ ಅಧ್ಯಕ್ಷರು: ಅಬ್ದುಲ್ ಸಲಾಂ
2026ರ ಪ್ರಸ್ತುತ ಅಧ್ಯಕ್ಷರು: —

ಗೋಣಿಕೊಪ್ಪಲಿನ ಎರಡನೇ ವಿಭಾಗದ ಸ್ನೇಹಿತರು ಸರ್ವರ ದಸರಾ ಸಮಿತಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಸೌಹಾರ್ದತೆ ಮತ್ತು ಸಾಂಸ್ಕೃತಿಕ ಏಕತೆಯೊಂದಿಗೆ ವಿಜಯದಶಮಿ ಉತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿದೆ.

8

ಯುವ ದಸರಾ ಸಮಿತಿ

ಸಕ್ರಿಯ ಸಮಿತಿ
ಸ್ಥಾಪಕ ಅಧ್ಯಕ್ಷರು: —
2026ರ ಪ್ರಸ್ತುತ ಅಧ್ಯಕ್ಷರು: —

ಗೋಣಿಕೊಪ್ಪಲಿನ ಯುವ ಶಕ್ತಿಯನ್ನು ಒಗ್ಗೂಡಿಸಿ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ದಸರಾ ವೈಭವವನ್ನು ಇಮ್ಮಡಿಗೊಳಿಸಲು ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತಿರುವ ಯುವ ದಸರಾ ಸಮಿತಿ.

9

ಭಗವತಿ ದಸರಾ ಸಮಿತಿ

ಸಕ್ರಿಯ ಸಮಿತಿ
ಸ್ಥಾಪಕ ಅಧ್ಯಕ್ಷರು: —
2026ರ ಪ್ರಸ್ತುತ ಅಧ್ಯಕ್ಷರು: —

ಶ್ರೀ ಭಗವತಿ ದೇವಿಯ ಕೃಪಾಶೀರ್ವಾದದೊಂದಿಗೆ ಸಾಂಪ್ರದಾಯಿಕ ವೈಭವ ಮತ್ತು ಶ್ರದ್ಧಾಭಕ್ತಿಗಳಿಂದ ದಸರಾ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಭಗವತಿ ದಸರಾ ಸಮಿತಿ.

10

ಕಾಡ್ಲ ಅಯ್ಯಪ್ಪ ದಸರಾ ಸಮಿತಿ

ಸಕ್ರಿಯ ಸಮಿತಿ
ಸ್ಥಾಪಕ ಅಧ್ಯಕ್ಷರು: —
2026ರ ಪ್ರಸ್ತುತ ಅಧ್ಯಕ್ಷರು: —

ಕಾಡ್ಲ ಅಯ್ಯಪ್ಪ ಭಕ್ತವೃಂದ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ದಸರಾ ನಾಡಹಬ್ಬದಲ್ಲಿ ಶೋಭಾಯಾತ್ರೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡುತ್ತಿರುವ ಸಮಿತಿ.

© 2026 ಗೋಣಿಕೊಪ್ಪಲು ದಸರಾ ಮಹೋತ್ಸವ ಸಮಿತಿ | SearchCoorg
Designed & Developed by Search Coorg Media
0
Would love your thoughts, please comment.x
()
x