ಶ್ರೀ ಕಾವೇರಿ ದಸರಾ ಸಮಿತಿ(ರಿ), ಗೋಣಿಕೊಪ್ಪ
48ನೇ ವಾರ್ಷಿಕ ದಸರಾ ಜನೋತ್ಸವ - 2026
ದಶ ಮಂಟಪ ಸಮಿತಿಗಳು
ಶ್ರೀ ಕಾವೇರಿ ನೆಲದ ಐತಿಹಾಸಿಕ ವಿಜಯದಶಮಿ ಉತ್ಸವ
ಶ್ರೀ ಕಾವೇರಿ ದಸರಾ ಸಮಿತಿ
1979 ರಲ್ಲಿ ಗೋಣಿಕೊಪ್ಪಲಿನ ಎಂ.ಜಿ.ಪದ್ಮನಾಭ ಕಾಮತ್ ಮತ್ತು ಕೆಲವು ಸ್ನೇಹಿತರು ಸೇರಿ ಶ್ರೀ ಕಾವೇರಿ ದಸರಾ ಸಮಿತಿ ಎಂಬ ಹೆಸರಿನಲ್ಲಿ ಗೋಣಿಕೊಪ್ಪಲಿನಲ್ಲಿ ದಸರಾ ನಾಡಹಬ್ಬವನ್ನು ಪ್ರಾರಂಭಿಸಿದರು.
ನಾಡಹಬ್ಬ ದಸರಾ ಸಮಿತಿ
ಸ್ನೇಹ ಪ್ರೀತಿ ಮೆರವ ಹಬ್ಬ • ದಸರಾ ಹಬ್ಬ ನಾಡಹಬ್ಬ
1989ರಲ್ಲಿ ಗೋಣಿಕೊಪ್ಪಲಿನ ಮೊದಲನೇ ವಿಭಾಗದ ಬಿ.ಎ. ಗಣಪತಿ ಹಾಗೂ ಮಿತ್ರರ ನೇತೃತ್ವದಲ್ಲಿ ಸ್ಥಾಪನೆಯಾಯಿತು. ದಸರಾ ಉತ್ಸವಕ್ಕೆ ಮೆರಗು ನೀಡಿದ್ದು ಗೋಣಿಕೊಪ್ಪಲಿನ ಸ್ಥಬ್ಧಚಿತ್ರ ಮೆರವಣಿಗೆ. ಶ್ರೀ ಕಾವೇರಿ ದಸರಾ ಸಮಿತಿ ಪ್ರಾರಂಭಿಸಿದ ಸ್ಥಬ್ಧಚಿತ್ರ ಮೆರವಣಿಗೆಯನ್ನು ನಾಡಹಬ್ಬ ದಸರಾ ಸಮಿತಿಯು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದು, ಹಲವು ವರ್ಷಗಳಿಂದ ಅನ್ನದಾನ ಕಾರ್ಯಕ್ರಮವನ್ನು ನಡೆಸುತ್ತಿದೆ.
ಸ್ನೇಹಿತರ ಬಳಗ ಕೊಪ್ಪ ದಸರಾ ಸಮಿತಿ
ಪಾಲಿಬೆಟ್ಟ ರಸ್ತೆಯ ಹಲವು ಸ್ನೇಹಿತರು ಒಟ್ಟುಗೂಡಿ ಸಿ.ಟಿ.ಪ್ರೇಮ್ ಗಣಪತಿರವರ ನೇತೃತ್ವದಲ್ಲಿ ಸ್ನೇಹಿತರ ಬಳಗ ಕೊಪ್ಪ ಎಂಬ ಹೆಸರಿನಲ್ಲಿ ಈ ಸಮಿತಿಯನ್ನು ಪ್ರಾರಂಭಿಸಿದರು. ಪ್ರೇಮ್ ಗಣಪತಿಯವರೊಂದಿಗೆ ಡಿ.ವಿ.ಪ್ರೇಮ್ ಮಣಿ, ಗೋಪಿ, ರಾಜಶೇಖರ್ ಮುಂತಾದವರು ಪ್ರಮುಖರು.
ನವಚೇತನ ದಸರಾ ಸಮಿತಿ
1990ರಲ್ಲಿ ಗೋಣಿಕೊಪ್ಪಲಿನ ಮಾರುಕಟ್ಟೆಯ ವ್ಯಾಪಾರಿಗಳು ಆಗಿನ ಪುರಸಭಾ ಉಪಾಧ್ಯಕ್ಷ ಕೆ.ಎಂ.ಗಣೇಶ್ ತಿಮ್ಮಯ್ಯರವರ ಅಧ್ಯಕ್ಷತೆಯಲ್ಲಿ ನವಚೇತನ ದಸರಾ ಸಮಿತಿ ಪ್ರಾರಂಭಿಸಿದರು. ಆಯುಧಪೂಜೆ ದಿನದಂದು ಅನ್ನಸಂತರ್ಪಣೆ ನಡೆಸಿ ವಿಜಯದಶಮಿಯಂದು ವಿಜೃಂಭಣೆಯ ಉತ್ಸವ ನಡೆಸುತ್ತಿದ್ದಾರೆ.
ಶ್ರೀ ಶಾರದಾಂಬ ದಸರಾ ಸಮಿತಿ
ಅರುವತ್ತೊಕ್ಕಲು ಗ್ರಾಮದಿಂದ ಗೋಣಿಕೊಪ್ಪಲಿನ ದಸರಾ ಉತ್ಸವಕ್ಕೆ ಸಹಕಾರಿಯಾಗಿ ಶ್ರೀ ಶಾರದಾಂಬ ದಸರಾ ಸಂಸ್ಥೆಯನ್ನು ಎ.ಜೆ.ಬಾಬು, ಫಿಲಿಫೋಸ್ ಮ್ಯಾಥ್ಯು, ಜಗನ್ನಿವಾಸ್ ಇನ್ನಿತರ ಸ್ನೇಹಿತರು ಟಿ.ಕೆ.ಪುರುಷೋತ್ತಮ್ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದರು.
ನಮ್ಮ ದಸರಾ ಸಮಿತಿ
ಹರಿಶ್ಚಂದ್ರ ಪುರದ ಹಲವು ಸ್ನೇಹಿತರು ಸೇರಿ ನಮ್ಮ ದಸರಾ ಸಮಿತಿ ಎಂಬ ಹೆಸರಿನಲ್ಲಿ ಕುಪ್ಪಂಡ ಅಶೋಕ್ರವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದರು. ನಂತರ ಸುಂದರ್, ಕೊಪ್ಪಿರ ಸೋಮಯ್ಯ, ದಾಮೋದರ ಹಾಗೂ ಇನ್ನಿತರರ ಪ್ರಯತ್ನದಿಂದ ವಿಜೃಂಭಣೆಯಿಂದ ಮುನ್ನಡೆಯುತ್ತಿದೆ.
ಸರ್ವರ ದಸರಾ ಸಮಿತಿ
ಗೋಣಿಕೊಪ್ಪಲಿನ ಎರಡನೇ ವಿಭಾಗದ ಸ್ನೇಹಿತರು ಸರ್ವರ ದಸರಾ ಸಮಿತಿ ಎಂಬ ಸಂಸ್ಥೆಯನ್ನು ಪ್ರಾರಂಭಿಸಿದರು. ಸೌಹಾರ್ದತೆ ಮತ್ತು ಸಾಂಸ್ಕೃತಿಕ ಏಕತೆಯೊಂದಿಗೆ ವಿಜಯದಶಮಿ ಉತ್ಸವದಲ್ಲಿ ನಿರಂತರವಾಗಿ ಭಾಗವಹಿಸುತ್ತಿದೆ.
ಯುವ ದಸರಾ ಸಮಿತಿ
ಗೋಣಿಕೊಪ್ಪಲಿನ ಯುವ ಶಕ್ತಿಯನ್ನು ಒಗ್ಗೂಡಿಸಿ, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ದಸರಾ ವೈಭವವನ್ನು ಇಮ್ಮಡಿಗೊಳಿಸಲು ಸಮರ್ಪಿತವಾಗಿ ಕಾರ್ಯನಿರ್ವಹಿಸುತ್ತಿರುವ ಯುವ ದಸರಾ ಸಮಿತಿ.
ಭಗವತಿ ದಸರಾ ಸಮಿತಿ
ಶ್ರೀ ಭಗವತಿ ದೇವಿಯ ಕೃಪಾಶೀರ್ವಾದದೊಂದಿಗೆ ಸಾಂಪ್ರದಾಯಿಕ ವೈಭವ ಮತ್ತು ಶ್ರದ್ಧಾಭಕ್ತಿಗಳಿಂದ ದಸರಾ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಭಗವತಿ ದಸರಾ ಸಮಿತಿ.
ಕಾಡ್ಲ ಅಯ್ಯಪ್ಪ ದಸರಾ ಸಮಿತಿ
ಕಾಡ್ಲ ಅಯ್ಯಪ್ಪ ಭಕ್ತವೃಂದ ಮತ್ತು ಗ್ರಾಮಸ್ಥರ ಸಹಯೋಗದೊಂದಿಗೆ ದಸರಾ ನಾಡಹಬ್ಬದಲ್ಲಿ ಶೋಭಾಯಾತ್ರೆ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡುತ್ತಿರುವ ಸಮಿತಿ.