ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಎಸ್ ಎಸ್ ಎಫ್ ಐವತ್ತನೇ ವಾರ್ಷಿಕೋತ್ಸವ (ಗೋಲ್ಡನ್ ಫಿಫ್ಟಿ) ಮಹಾ ಸಮ್ಮೇಳನ ಸೆಪ್ಟೆಂಬರ್ 10ರಂದು ಬೆಂಗಳೂರು ಅರಮನೆ ಮೈದಾನದಲ್ಲಿ
ಐತಿಹಾಸಿಕವಾಗಿ ನಡೆಯಲಿದೆ. ಇದರ ಪ್ರಚಾರಾರ್ಥ ಕೊಡಗು ಜಿಲ್ಲೆಯ ಎಸ್ ಎಸ್ ಎಫ್ ಪೊನ್ನಪೇಟೆ ಸೆಕ್ಟರ್ ವತಿಯಿಂದ ಗೋಣಿಕೊಪ್ಪ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಯಿತು.
ಎಸ್ ವೈ ಎಸ್ ನಾಯಕರಾದ ನಝೀರ್ ನಈಮಿಯವರ ಪ್ರಾರ್ಥನೆಯೊಂದಿಗೆ ಆರ್ ಎಂಸಿ ಯಿಂದ ಪ್ರಾರಂಭಗೊಂಡ ರ‍್ಯಾಲಿ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಸಮಾಪ್ತಿಗೊಂಡಿತು.
ಪೊನ್ನ0ಪೇಟೆ ಸೆಕ್ಟರ್ ಅಧ್ಯಕ್ಷರಾದ ಮಿರ್ಷಾದ್ ಅನ್ವಾರಿ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭ
ಮುಖ್ಯ ಭಾಷಣಕಾರರಾಗಿ ಎಸ್ ಎಸ್ ಎಫ್ ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ನಮ್ಮ ದೇಶದ ವೈಶಿಷ್ಟ್ಯತೆಗಳ ಕುರಿತು ವಿವರಿಸಿ ಎಲ್ಲರೂ ಒಟ್ಟಾಗಿ ಪರಸ್ಪರ ಸೌಹಾರ್ದತೆಯೊಂದಿಗೆ ಬಾಳಲು ಕರೆ ನೀಡಿದರು ಹಾಗೂ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಯಶಸ್ವಿಗೆ ಸರ್ವರೂ ಸಹಕರಿಸಲು ಕರೆ ನೀಡಿದರು.
ಜಿಲ್ಲಾದ್ಯಕ್ಷರಾದ ಝುಬೈರ್ ಸಅದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ ಕಾರ್ಯದರ್ಶಿಗಳಾದ ಗಫೂರ್ ಮಾಪಿಳತ್ತೋಡು, ಕಮರುದ್ದೀನ್ ಸಖಾಫಿ, ಎಸ್ ವೈ ಎಸ್ ಅಧ್ಯಕ್ಷರಾದ ಸಲಾಂ ಗೋಣಿಕೊಪ್ಪ, ಸಿದ್ದೀಕ್ ಹುಂಡಿ, ಸಲಾಂ ಇನ್ಫೊ ಪಾರ್ಕ್ ಡಿವಿಷನ್ ನಾಯಕರಾದ ಕಮರುದ್ದೀನ್ ಅನ್ವಾರಿ ಅಹ್ಸನಿ ರಷಾದ್ ರಂಷಾದ್ ಇಸ್ಮಾಯಿಲ್ ಅನ್ವಾರಿ, ತನ್ವೀರ್ ಅನ್ವಾರಿ, ಇಸ್ಮಾಯಿಲ್ ಹನೀಫಿ ಉಪಸ್ಥಿತರಿದ್ದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಶಫೀಕ್ ತಿತಿಮತಿ ಸ್ವಾಗತಿಸಿ ವಂದಿಸಿದರು.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ