Reading Time: < 1 minute
ಬಾಳಲೆ ಸಮೀಪದ ಕೊಟ್ಟಗೇರಿ ನಿವಾಸಿ ಅರಮಣಮಾಡ ಪೊನ್ನಮ್ಮ ಸೋಮಯ್ಯ ಇತ್ತೀಚೆಗೆ ಸಿಂಗಾಪುರದಲ್ಲಿ ನಡೆದ ಅಂತರರಾಷ್ಟ್ರೀಯ ಕರಾಟೆಯಲ್ಲಿ ಕಂಚಿನ ಪದಕ ಪಡೆಯುವ ಮೂಲಕ ಸಾದನೆ ಮಾಡಿದ್ದಾರೆ.
ಚೆಪ್ಪುಡೀರ ಅರುಣ್ ಮಾಚಯ್ಯ ನೇತೃತ್ವದಲ್ಲಿ ಸಿಂಗಾಪುರದಲ್ಲಿ ನಡೆದ 16ನೇ ಏಷಿಯಾ ಪೆಸಿಫಿಕ್ ಶಿಟೋರಿಯೋ ಕರಾಟೆ ಚಾಂಪಿಯನ್ ಶಿಪ್’ನಲ್ಲಿ ಭಾಗವಹಿಸುವ ಮೂಲಕ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ಗೋಣಿಕೊಪ್ಪಲಿನ ಜಮ್ಮಡ ಜಯ ಜೋಯಪ್ಪ ಹಾಗೂ ಕಾರ್ತಿಕ್ ದೇವಯ್ಯ ಅವರಲ್ಲಿ ತರಬೇತಿ ಪಡೆಯುತ್ತಿರುವ ಪೊನ್ನಮ್ಮ
ಬಾಳೆಲೆ ಸಮೀಪದ ಕೊಟ್ಟಗೇರಿಯವರಾದ ಅರಮಣಮಾಡ ವಿನು ಸೋಮಯ್ಯ ಹಾಗೂ ಶಿಲ್ಪ ಸೋಮಯ್ಯ ಅವರ ಪುತ್ರಿ.