ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಆದೂರು ಶ್ರೀ ಭಗವತೀ ಕ್ಷೇತ್ರ
ದೇವಾಲಯದ ಬಗ್ಗೆ
ನೂರಾರು ವರ್ಷಗಳ ಹಿಂದೆ, ಬಲ್ಲಾಳ ರಾಜವಂಶಸ್ಥರ ಕಾಲದಲ್ಲಿ ಈ ದೈವಸ್ಥಾನವು ನಿರ್ಮಾಣಗೊಂಡಿತೆಂದು ಪ್ರತೀತಿ. ಆದೂರು ಮುಗೇಯಬೋವಿ ದೈವಸ್ಥಾನವು ಇತರ ದೈವಸ್ಥಾನಗಳಿಗಿಂತ ವ್ಯತ್ಯಸ್ತವಾಗಿ ಚೈತನ್ಯಪೂರ್ಣವಾದ ನೆಲ-ಜಲ ಕಂಡುಕೊಳ್ಳುತ್ತಾ ಪೂಜ್ಯ ಮೂವರು ದೇವಿಯರು ಒಂದೇ ಪೀಠದಲ್ಲಿ ಕುಳಿತಿರುವ ಅಪೂರ್ವ ಸಾನ್ನಿಧ್ಯವೂ ಇದಾಗಿದೆ. ಈ ಪ್ರದೇಶದ ಗ್ರಾಮ ದೇವಸ್ಥಾನವಾದ ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದೊಂದಿಗೆ ಶ್ರೀ ಭಗವತೀ ದೈವಸ್ಥಾನವು ಅವಿನಾಭಾವ ಸಂಬಂಧವನ್ನು ಹೊಂದಿದೆ. ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆನ್ನೇಯದಲ್ಲಿ ಹರಿಯುವ ತೊರೆಯ ದಡದಲ್ಲಿ ಪೂಜ್ಯದೇವಿಯರ ಶಕ್ತಿ ಚೈತನ್ಯವು ತುಂಬಿ ತುಳುಕಿ ಮೆರೆಯುತ್ತಾ, ನಂಬಿ ಬರುವ ಭಕ್ತರನ್ನು ಸದಾ ಪೊರೆಯುವ ಆಶಾಚೈತನ್ಯವಾಗಿರುತ್ತದೆ.
ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮತ್ತು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವರ ಸಾನಿಧ್ಯಗಳೊಂದಿಗೆ ಬೆಸೆದುಕೊಂಡು, ಅತೇ ಚಾರಿತ್ರಿಕ ಮಹತ್ವವಿರುವ ಶ್ರೀ ಭಗವತೀ ದೈವಸ್ಥಾನವು ಉತ್ತರ ಮಲಬಾರಿನ ಭಗವತೀ ಸಾನಿಧ್ಯಗಳಲ್ಲಿಯೇ ಪ್ರತ್ಯೇಕತೆಯನ್ನು ಹೊಂದಿರುವ ಅಪೂರ್ವ ಕ್ಷೇತ್ರವಾಗಿದೆ.
ಸೇವೆಗಳು
ಸೇವೆಗಳ ವಿವರ:
ಉತ್ಸವಗಳು
351 ವರ್ಷಗಳ ಬಳಿಕ ಪೆರುಂಕಳಿಯಾಟ ಮಹೋತ್ಸವ 2025 ಜನವರಿ 19ರಿಂದ 24ವರೆಗೆ
ಪೂಜಾ ಸಮಯ
ಪ್ರತಿ ನಿತ್ಯ: ಬೆಳ್ಳಿಗೆ 7 ಗಂಟೆಯಿಂದ 12 ಗಂಟೆಯವರಗೆ
ವ್ಯವಸ್ಥಾಪನ ಸಮಿತಿ
ಅಧ್ಯಕ್ಷರು: ಶ್ರೀ ದಾಮೋದರ ಕಾವುಗೋಳಿ
ಮೊ: 7736476947
ಪ್ರಧಾನ ಕಾರ್ಯದರ್ಶಿ: ಶ್ರೀ ಮಾಧವ ಭಂಡಾರಮನೆ
ಮೊ: 9995049653
ಕೋಶಾಧಿಕಾರಿ: ಶ್ರೀ ವಿಕ್ರಮ.ಎನ್
ಮೊ: 9037233672
ದೇಣಿಗೆ
ಅಕೌಂಟ್ ಡಿಟೈಲ್ಸ್:
Adhursreebagahavathi Temple
A/C No: 851410110003470
IFSC: BKID0008514
Bank of India Kasaragod Branch
ಸಂಪರ್ಕ
Adhur Shree Bagavathi Temple,
Cherkala – Jalsoor Rd,
Adhur – 671543
Kasaragod Dist., Kerala State
ದೇವಾಲಯದ ಬಗ್ಗೆ ಹೆಚ್ಚಿನ ಚಿತ್ರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ದೇವಾಲಯದ ಗೂಗಲ್ ಮ್ಯಾಪ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ