ಕರಗಗಳ ಮೊದಲ ದಿನದ ಪೂಜೆ:

ಶರವನ್ನವರಾತ್ರಿಯ ಪಾಡ್ಯದಂದು ದೇವಾಲಯಗಳಲ್ಲಿ ಹೋಮ-ಹವನ ನಡೆಸಲಾಗುವುದು. ನಂತರ ಸಂಜೆ ನಾಲ್ಕು ದೇವಾಲಯದವರು ಕುಕ್ಕೆಯಲ್ಲಿ ಮಡಿಕೆ, ದೇವರ ಪ್ರಭಾವಳಿ, ಹೂವು, ಪೂಜಾ ಸಾಮಾಗ್ರಿಗಳು, ಬಿಂದಿಗೆ, ಕಠಾರಿ, ಬೆತ್ತ, ಇನ್ನಿತರ ದೇವರ ಅಲಂಕಾರಿಕ ವಸ್ತುಗಳನ್ನು ಹೊತ್ತು ಮಡಿಕೇರಿ ನಗರದ ಪಂಪಿನ ಕೆರೆಗೆ ಬರುತ್ತಾರೆ. ಇದಕ್ಕೆ ದೇವರು ಜಳಕಕ್ಕೆ ಹೋಗುವುದು ಎನ್ನುತಾರೆ.
ಅಲ್ಲಿ ನಾಲ್ಕು ಶಕ್ತಿದೇವತೆಗಳ ಅರ್ಚಕರುಗಳು ಸ್ನಾನ ಮಾಡಿ, ಶುಭ್ರವಸ್ತ್ರಗಳನ್ನು ಧರಿಸಿ, ದೇವತೆಗಳಿಗೆ ಪೂಜೆ ಸಲ್ಲಿಸಲಾಗುವುದು. ನಂತರ ಸಂಕಲ್ಪವನ್ನು ಕೈಗೊಂಡು ಕಂಕಣ ಕಟ್ಟಿ, ಬಿಂದಿಗೆ, ಕಠಾರಿ, ಬೆತ್ತ, ಭಂಡಾರ ಮುಂತಾದವುಗಳಿಗೂ ಕಂಕಣ ಕಟ್ಟಲಾಗುವುದು. ಅಲ್ಲಿಂದ ಅರ್ಚಕರು ಕರಗವನ್ನು ಶ್ರದ್ಧಾ ಭಕ್ತಿಯಿಂದ ಹೊತ್ತುಕೊಂಡು ಮಹದೇವಪೇಟೆಯ ಮೂಲಕ ಬಂದು ಶ್ರೀ ಚೌಡೇಶ್ವರಿ ದೇಗುಲದಲ್ಲಿ ಪೂಜೆ ಸ್ವೀಕರಿಸುತ್ತಾರೆ. ಅಂದು ನಗರದ ನಿವಾಸಿಗಳು ತಳಿರು ತೋರಣಗಳಿಂದ ತಮ್ಮ ಮನೆಗಳನ್ನೂ, ಮುಖ್ಯ ಬೀದಿಗಳನ್ನೂ ಅಲಂಕರಿಸುತ್ತಾರೆ. ದಾರಿಯುದ್ದಕ್ಕೂ ಕರಗ ದೇವತೆಗಳಿಗೆ, ಪೂಜೆಯನ್ನು ನೀಡುತ್ತಾರೆ. ಹಾಗೇ ಬರುವ ಕರಗವು ಪೇಟೆ ಶ್ರೀರಾಮ ಮಂದಿರಕ್ಕೆ ಆಗಮಿಸಿ ಪೂಜೆ ಸ್ವೀಕರಿಸದ ನಂತರ ಆಯಾ ದೇಗುಲಗಳಿಗೆ ಹಿಂತಿರುಗುತ್ತಾರೆ.
(ಸ್ವಾತಂತ್ರ್ಯ ಪೂರ್ವದಲ್ಲಿ “ಮಡಿಕೇರಿ ನಗರದ ಆದಿ ದೇವತೆ ಕರವಲೆ ಶ್ರೀ ಮಹಿಷಮರ್ದಿನಿ ಭಗವತಿ ದೇವರಿಗೆ ಮೊದಲು ಪೂಜೆ ಸಲ್ಲಿಸಿ ಮಡಿಕೇರಿ ದಸರಾ ಕರಗ ಮಹೋತ್ಸವಕ್ಕೆ ಚಾಲನೆ ದೊರಕುತ್ತಿತ್ತು ಎಂದು ಮಡಿಕೇರಿ ದಸರಾ ಬಗ್ಗೆ ಮಾಹಿತಿ ತಿಳಿದ ಹಿರಿಯರಿಂದ ತಿಳಿದು ಬರುತ್ತದೆ.)
ಮಡಿಕೇರಿ ದಸರಾ 2025
ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.
ಮಡಿಕೇರಿ ದಸರಾ 2025ರ ಹೆಚ್ಚಿನ ಮಾಹಿತಿಗಾಗಿ ಡೌನ್‌ಲೋಡ್ ಮಾಡಿ ಸರ್ಚ್ ಕೂರ್ಗ್ App
ಪ್ರಮುಖ ಮಾಹಿತಿ
-
•
ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.
-
•
ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.
-
•
ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.