MRF Mandappa Rural Friends, Sports & Recreation Club, Murnad

Reading Time: 4 minutesWhatsApp Links ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ ವಾಟ್ಸಾಪ್ ಚಾನಲ್‌ ಫಾಲೋ ಮಾಡಿ  

WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: 4 minutes

Mandappa Rural Friends (MRF),
Sports & Recreation Club, Murnad

ಪ್ರಾಸ್ತಾವಿಕ – Introduction

ಸಂದರ್ಶನ – Interview

ಹಾಕಿ ಕೂರ್ಗ್ ಸಹಯೋಗದಲ್ಲಿ ಮಂದಪ್ಪ ರೂರಲ್ ಫ್ರೆಂಡ್ಸ್(ಎಂಆರ್ಎಫ್) ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಮೈದಾನದಲ್ಲಿ 2017 ನವೆಂಬರ್ 11 ರಿಂದ 14ರವರೆಗೆ ಬಾಚೆಟ್ಟಿರ ಮಂದಣ್ಣ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿ.

  ಹಾಕಿ ಕೂರ್ಗ್ ಸಂಸ್ಥೆಯಲ್ಲಿ ನೋಂದಾಯಿಸಲ್ಪಟ್ಟ ಕೊಡಗಿನ ಪ್ರತಿಷ್ಠಿತ 14 ಹಾಕಿ ತಂಡಗಳ ನಡುವೆ ಪ್ರಶಸ್ತಿಗಾಗಿ ಪೈಪೋಟಿ ನಡೆಯಲಿದೆ. ಪ್ರತಿ ತಂಡದಲ್ಲಿ ಐವರು ಅತಿಥಿ ಆಟಗಾರರನ್ನು ಸೇರ್ಪಡೆಗೊಳಿಸಲು ಅವಕಾಶ ನೀಡಲಾಗಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದ ಖ್ಯಾತನಾಮ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ನಾಕ್ಔಟ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಎಂ.ಆರ್.ಎಫ್. ಮೂರ್ನಾಡು, ಹಾತೂರು ಯೂತ್ ಕ್ಲಬ್, ಈಶ್ವರ ಯೂತ್ ಕ್ಲಬ್ ಬೇಗೂರು, ಈಗಲ್ಸ್ ಅಮ್ಮತ್ತಿ, ಎಸ್.ಆರ್.ಸಿ. ಕಾಕೋಟುಪರಂಬು, ಟವರ್ಸ್ ಇಲೆವೆನ್ ವೀರಾಜಪೇಟೆ, ಯುನೈಟೆಡ್ ಫ್ರೆಂಡ್ಸ್ ಕ್ಲಬ್ ಬೇರಳಿನಾಡು, ಬ್ಲೂಸ್ಟಾರ್ ಪೆÀÇದ್ದಮಾನಿ, ಬಿಬಿಸಿ ಗೋಣಿಕೊಪ್ಪಲು, ಕೋಣನಕಟ್ಟೆ ಇಲೆವೆನ್, ಡಾಲ್ಫಿನ್ಸ್ ಸೋಮವಾರಪೆÉೀಟೆ, ಚಾರ್ಮರ್ಸ್ ಮಡಿಕೆÉೀರಿ, ಮಹದೇವ ಸ್ಪೋಟ್ರ್ಸ್ ಕ್ಲಬ್ ಬಲಮುರಿ ಮತ್ತು ಪೆÀÇನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡಗಳು ಪಾಲ್ಗೊಳ್ಳಲಿವೆ. ಅಂತಿಮ ಪಂದ್ಯ ತಾ. 14 ರಂದು ಬೆಳಗ್ಗೆ 10 ಗಂಟೆಗೆ ನಡೆಯ ಲಿದೆ. ಪಂದ್ಯಾವಳಿಯ ಪ್ರಮುಖ ಪ್ರಾಯೋಜಕತ್ವವನ್ನು ಮೇಜರ್ ಬಡುವಂಡ ಯು. ಅಚ್ಚಪ್ಪ, ನೆರವಂಡ ಕೆ. ನಂಜಪ್ಪ ಮತ್ತು ಮಕ್ಕಳು, ಚೌರೀರ ಸುನಿ ಅಚ್ಚಯ್ಯ ಮತ್ತು ಮಕ್ಕಳು, ಮೇಕೇರಿರ ಯು. ಮಾಯವ್ವ ಮತ್ತು ಮಕ್ಕಳು ನೀಡಿದ್ದು, ಪಂದ್ಯಾವಳಿಗೆ ಒಟ್ಟು 5 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಪಂದ್ಯಾವಳಿಯ ವಿಜೇತ ತಂಡಕ್ಕೆ 50 ಸಾವಿರ ರೂ. ನಗದು, ಪಾರಿತೋಷಕ ಮತ್ತು ವೈಯಕ್ತಿಕ ಬಹುಮಾನ, ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ 30 ಸಾವಿರ ನಗದು, ಪಾರಿತೋಷಕ ಮತ್ತು ವೈಯಕ್ತಿಕ ಬಹುಮಾನ, ಸೆಮಿಫೈನಲ್ನಲ್ಲಿ ಸೋಲುವ ಎರಡು ತಂಡಗಳಿಗೆ ತಲಾ 10 ಸಾವಿರ ನಗದು ಬಹುಮಾನ ಸೇರಿದಂತೆ ಒಟ್ಟಾಗಿ 1.25 ಲಕ್ಷ ಮೊತ್ತದ ಬಹುಮಾನಗಳನ್ನು ನೀಡಲಾಗುತ್ತದೆ. ಸಮಾರೋಪ ಸಮಾರಂಭದಲ್ಲಿ ಕ್ಲಬ್ನÀ ಕಟ್ಟಡ ದಾನಿಗಳು ಹಾಗೂ ದಿ.ಬಾಚೆಟ್ಟಿರ ಮಂದಪ್ಪನವರ ತಂದೆ ತಾಯಂದಿರಾದ ಬಾಚೆಟ್ಟಿರ ಕಮಲು ಮತ್ತು ಲಾಲು ಮುದ್ದಯ್ಯ, ಸಮಾಜ ಸೇವಕರಾದ ಮೇಜರ್ ಬಡುವಂಡ ಯು. ಅಚ್ಚಪ್ಪ ಮತ್ತು ಹಾಕಿ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ ಅವರೆಮಾದಂಡ ಪಚ್ಚು ಕುಶಾಲಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಮಾಹಿತಿ ನೀಡಿದವರು: ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಗೌರವ ಕಾರ್ಯದರ್ಶಿ, ಮಂದಪ್ಪ ರೂರಲ್ ಫ್ರೆಂಡ್ಸ್(ಎಂಆರ್ಎಫ್) ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x