
- ಸಂಘದ ಸ್ಥಾಪನೆ: 24.08.1976
- ಸ್ಥಾಪಕ ಅಧ್ಯಕ್ಷರು: ಕೊಂಗೇಟಿರ ಅಪ್ಪಯ್ಯ
- ಹಾಲಿ ಅಧ್ಯಕ್ಷರು: ಬಲ್ಲಾರಂಡ ಮಣಿ ಉತ್ತಪ್ಪ
- ಹಾಲಿ ಉಪಾಧ್ಯಕ್ಷರು: ಮರದಾಳು ಉಲ್ಲಾಸ
- ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಕೆ.ಎಸ್. ನಂದಿನಿ
ರೈತಾಪಿ ವರ್ಗದವರ ಏಳಿಗೆಯ ಧ್ಯೇಯದೊಂದಿಗೆ ದಿನಾಂಕ 24.08.1976 ರಲ್ಲಿ ಶ್ರೀ ಕೊಂಗೇಟಿರ ಅಪ್ಪಯ್ಯ ನವರಿಂದ ಸ್ಥಾಪಿಸಲ್ಪಟ್ಟ ಸಂಘವು ಚೇರಳ ಶ್ರೀಮಂಗಲ ಸಹಕಾರ ಸಂಘ ಮತ್ತು ಈರಳೆವಳಮುಡಿ ಸೇವಾ ಸಹಕಾರ ಸಂಘವನ್ನು ವಿಲೀನಗೊಳಿಸಿ ಚೆಟ್ಟಳ್ಳಿ ಪ್ಯಾಕ್ಸ್ ಆಗಿರುತ್ತದೆ. ಪ್ರಸ್ತುತ ಬಲ್ಲಾರಂಡ ಮಣಿಉತ್ತಪ್ಪನವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಚೇರಳ, ಶ್ರೀಮಂಗಲ, ಕೂಡ್ಲೂರು ಚೆಟ್ಟಳ್ಳಿ ಮತ್ತು ಈರಳೆವಳಮುಡಿ ಗ್ರಾಮಗಳ ಕಾರ್ಯವ್ಯಾಪ್ತಿ.
- ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.
- ಸಾಲ ಸೌಲಭ್ಯಗಳನ್ನು ಪೂರೈಸುವ ಕೆಲಸ.
- ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.
- ಸಹಕಾರ ಸಂಘದ ಒಂದೇ ಸೂರಿನಡಿ ರೈತರು, ಬೆಳೆಗಾರರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ.
- ಕ್ರಿಮಿನಾಶಕ ಸೇರಿದಂತೆ ಕೃಷಿಗೆ ಪೂರಕವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಚೆಟ್ಟಳ್ಳಿ ಜನತೆಗೆ ದೂರದ ಊರುಗಳಿಗೆ ತೆರಳುವ ಕಷ್ಟ ತಪ್ಪಿದಂತಾಗಿದೆ.
- ಸಂಘದ ಮೂಲಕ ಸದಸ್ಯರು ಹಾಗೂ ಸದಸ್ಯರ ಮಕ್ಕಳಿಗೆ ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಗೆ ಸಾಲದ ಸೌಲಭ್ಯವನ್ನು ನೀಡಲಾಗುತ್ತಿದ್ದು, ಇದೊಂದು ವಿನೂತನ ಪ್ರಯೋಗವಾಗಿದೆ. ಈ ಕ್ರಮದಿಂದ ಯುವ ಸಮೂಹ ಸ್ವಂತ ವಾಹನ ಹೊಂದಿ ಸ್ವಯಂ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ.
2007 ರಲ್ಲಿ ರೂ. 4.70 ಲಕ್ಷ ನಷ್ಟದಲ್ಲಿ ಸಾಗಿದ್ದ ಈ ಸಹಕಾರ ಸಂಘವನ್ನು ಬಲ್ಲಾರಂಡ ಮಣಿಉತ್ತಪ್ಪನವರು ತಮ್ಮ ಹೋರಾಟ ಮನೋಭಾವ, ನೇರ-ದಿಟ್ಟ, ಕಠಿಣ ದೃಢ ಸಂಕಲ್ಪಗಳೊಂದಿಗೆ ಕಳೆದ 23 ವರ್ಷಗಳಿಂದ ಸಂಘದಲ್ಲಿ ತೊಡಗಿಸಿ ಕೊಂಡು ಕಳೆದ 3 ಅವಧಿಗಳಿಂದ ಅಧ್ಯಕ್ಷರಾಗಿದ್ದು, ಸಿಬ್ಬಂದಿ ವರ್ಗದವರ ಅಪಾರ ಪರಿಶ್ರಮದೊಂದಿಗೆ ಹಂತ ಹಂತವಾಗಿ ಮೇಲೇರಿಸುತ್ತಾ 2020 ರ ವೇಳೆಗೆ ರೂ. 31 ಲಕ್ಷಗಳಿಗೂ ಮೇಲ್ಪಟ್ಟು ಲಾಭದೆಡೆಗೆ ಮುನ್ನಡೆಸಲು ಯಶಸ್ವಿಯಾಗಿದ್ದಾರೆ.
31-03-2020 ಕ್ಕೆ 1153 ಸದಸ್ಯರು
31-03-2020 ಕ್ಕೆ 1,17,45,030.00 ರೂಪಾಯಿ.
- ಸಂಚಯ ಠೇವಣಿ
- ನಿರಖು ಠೇವಣಿ
- ಸಿಬ್ಬಂದಿ ವರ್ಗದ ಠೇವಣಿ
- ಪಿಗ್ಮಿ ಠೇವಣಿ
- ಕ್ಷೇಮ ನಿಧಿ
- ಕಟ್ಟಡ ನಿಧಿ
- ಸವಕಳಿ ನಿಧಿ
- ಮರಣ ನಿಧಿ
- ಇತರೆ ನಿಧಿಗಳು
- ಕೆಡಿಸಿಸಿ ಬ್ಯಾಂಕ್ ಮಡಿಕೇರಿ. ಪಾಲು ಹಣ
- ಕೆಡಿಸಿಸಿ ಬ್ಯಾಂಕ್ ಮಡಿಕೇರಿ. ಕ್ಷೇಮ ನಿಧಿ
- ಕೆಡಿಸಿಸಿ ಬ್ಯಾಂಕ್ ಮಡಿಕೇರಿ ಮುಖ್ಯ ಶಾಖೆ. ನಿರಖು ಠೇವಣಿ
- ಕೆಡಿಸಿಸಿ ಬ್ಯಾಂಕ್ ಮಡಿಕೇರಿ ಕಾಲೇಜು ರಸ್ತೆ ಶಾಖೆ. ನಿರಖು ಠೇವಣಿ
- ಕೆಡಿಸಿಸಿ ಬ್ಯಾಂಕ್ ಸಿದ್ದಾಪುರ ಶಾಖೆ. ನಿರಖು ಠೇವಣಿ
- ಕೆಡಿಸಿಸಿ ಬ್ಯಾಂಕ್ ಕುಶಾಲನಗರ ಶಾಖೆ. ನಿರಖು ಠೇವಣಿ
- ಇತರೆ ಸಂಸ್ಥೆಗಳಲ್ಲಿ ಪಾಲು ಹಾಗೂ ನಿರಖು ಠೇವಣಿ
- ಕೆ.ಸಿ.ಸಿ. ಫಸಲು ಸಾಲ
- ಆಭರಣ ಈಡಿನ ಸಾಲ
- ಆಸಾಮಿ ಸಾಲ
- ವಾಹನ ಸಾಲ
- ನಿರಖು ಠೇವಣಿ ಸಾಲ
- ಪಿಗ್ಮಿ ಠೇವಣಿ ಆಧಾರದ ಸಾಲ
- ಸ್ವಸಹಾಯ ಸಂಘ ಸಾಲ
- ವ್ಯಾಪಾರ ಸಾಲ
- ಸಿಬ್ಬಂದಿ ಭವಿಷ್ಯ ನಿಧಿ ಸಾಲ
- ಜಾಮೀನು ಸಾಲ
- ಗೊಬ್ಬರ ಸಾಲ
- ಕರಿಮೆಣಸು ಅಡವು ಸಾಲ
- ವಿದ್ಯಾಭ್ಯಾಸ ಸಾಲ
2019-20 ರಲ್ಲಿ ಸಂಘದ ಒಟ್ಟು ವಹಿವಾಟು: 1,12,60,15,325.00 ರೂಪಾಯಿಗಳು.
2020 ರ ವೇಳೆಗೆ ರೂ. 31 ಲಕ್ಷಗಳಿಗೂ ಮೇಲ್ಪಟ್ಟು ಲಾಭ.
ಚೆಟ್ಟಳ್ಳಿ ಪಟ್ಟಣವನ್ನು ದೇವರನಾಡೆಂದು ಬಿಂಬಿಸಲೆಂಬಂತೆ ಜಾತ್ಯಾತೀತವಾಗಿ, ರಾಜಕೀಯ ರಹಿತವಾಗಿ, ಸಂಪೂರ್ಣ ದೇಣಿಗೆಗಳಿಂದಲೇ ಮೂರ್ತಿಗಳನ್ನು ನಿರ್ಮಿಸಿರುವುದು ಹೆಮ್ಮೆಯ ವಿಷಯವಾಗಿದೆ.
ರಾಷ್ಟ್ರಪ್ರೇಮ, ದೇಶಭಕ್ತಿಗಳ್ನು ಮೂಡಿಸಲೆಂಬಂತೆ ಚೆಟ್ಟಳ್ಳಿ ವಲಯದ ದೇಶಕ್ಕಾಗಿ ದುಡಿದ, ಗಡಿಯಲ್ಲಿ ಹೋರಾಡಿದ ಮಾಜಿ ಯೋಧರನ್ನು, ದೇಶದ ಆಂತರಿಕ ಭದ್ರತೆ, ಉಗ್ರವಾದಿ, ಆತಂಕವಾದಿಗಳ ದಮನದಲ್ಲಿ ಕಾರ್ಯ ನಿರ್ವಹಿಸಿದ ಪೊಲೀಸ್ ಇಲಾಖಾ ಸಿಬ್ಬಂದಿಗಳನ್ನು ಗುರುತಿಸಿ ಗೌರವಿಸಿದ ಹೆಗ್ಗಳಿಕೆಯೂ ಸಂಘದ ಆಡಳಿತ ಮಂಡಳಿಗಿದೆ.
ಜಿಲ್ಲಾಮಟ್ಟದಲ್ಲಿ ಅಷ್ಟೇ ಅಲ್ಲ ರಾಜ್ಯ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದಲೂ ಬಹುಮಾನ ಪಡೆದಿದೆ.
ಮಾಹಿತಿ ಲಭ್ಯವಿಲ್ಲ.
ಶೇಕಡ 100% ರಷ್ಟು.
“ಎ” ತರಗತಿ.
ಸಂಘವು ಎರಡು ಶಾಖೆಗಳನ್ನು ಹೊಂದಿದ್ದು ಸಂಘದಲ್ಲಿ ಗೊಬ್ಬರ, ಹತ್ಯಾರು, ಸಿಮೆಂಟ್, ಕೃಷಿ ಉಪಕರಣ ಮೊದಲಾದುವುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಮಾರಾಟಮಾಡಲಾಗುತ್ತಿದೆ. ಪಡಿತರ ವಸ್ತುಗಳನ್ನು ಸಹ ವಿತರಣೆ ಮಾಡುತ್ತಿದೆ. ಗೊಬ್ಬರವನ್ನು ಚಿಲ್ಲರೆ ಹಾಗೂ ಸಗಟಾಗಿ ಮಾರಾಟ ಮಾಡ ಲಾಗುತ್ತಿದೆ. ಗೊಬ್ಬರ ದಾಸ್ತಾನು ಮಾಡಲು 250 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ಹೊಂದಿದೆ.
ಬಲ್ಲಾರಂಡ ಮಣಿಉತ್ತಪ್ಪ, ಸಹಕಾರಿಗಳು: ಚೆಟ್ಟಳ್ಳಿ. Chettalli