ಸರ್ಚ್‌ ಕೂರ್ಗ್‌ ಮೀಡಿಯಾ

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Ganeshotsava

Ganeshotsava

Reading Time: 4 minutesಮಡಿಕೇರಿ ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಮತ್ತೊಂದು ಮಂಟಪ ಶಾಂತಿನಿಕೇತನದ ಗಣೇಶನ ಮಂಟಪ   ಮಡಿಕೇರಿ ನಗರದ ಮೈಸೂರು ರಸ್ತೆಯ ಬದಿಯಲ್ಲಿರುವ ಶಾಂತಿನಿಕೇತನ ಬಡಾವಣೆಯಲ್ಲಿ ಕಳೆದ 36 ವರ್ಷಗಳಿಂದ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿರುವ ಶಾಂತಿನಿಕೇತನ ಯುವಕ ಸಂಘವು ಈ ವರ್ಷ ಮಡಿಕೇರಿ ದಸರಾ ದಶಮಂಟಪಗಳಿಗೆ ಸಮನಾದ ಮಂಟಪವನ್ನು ಹೊರಡಿಸಿ ಜನ ಮೆಚ್ಚುಗೆಗೆ ಪಾತ್ರವಾಗಿದೆ. ವರ್ಷದಿಂದ ವರ್ಷಕ್ಕೆ ಭಿನ್ನ-ವಿಭಿನ್ನ ರೀತಿಯಲ್ಲಿ ಗಣೇಶ ಮತ್ತು ಇತರ ಕಲಾಕೃತಿಗಳನ್ನು ಪ್ರತಿಷ್ಠಾಪಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿರುವ ‘ಶಾಂತಿನಿಕೇತನ ಯುವಕ ಸಂಘ’ವು ಈ ಬಾರಿ ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಮಂಟಪವನ್ನು ಇಳಿಸಿ ದಸರಾ ದಶಮಂಟಪಗಳ ಹುಬ್ಬೆರಿಸುವಂತೆ ಮಾಡಿತು. ಈ ಬಾರಿ ‘ಶ್ರೀ ಗಣೇಶ ಪುರಾಣದ ಶಮಂತಖೋಪಕ್ಯಾನ ಎಂಬ ಕಥಾ ಭಾಗವನ್ನು ಆಯ್ದುಕೊಂಡು, ಭಾದ್ರಪದ ಚೌತಿಯ ದಿನ ಚಂದ್ರನನ್ನು ನೋಡಿದ್ದರಿಂದ ಶ್ರೀ ಕೃಷ್ಣನಿಗೆ “ಶಮಂತಕಮಣಿ” ಯನ್ನು ಕದ್ದ ಆಪಾದನೆ ಬಂತು. ಆದರೆ ಸತ್ಯ ಏನೆಂದು ಲೋಕಕ್ಕೆ ತೋರಿಸಿಕೊಟ್ಟ ‘ಶ್ರೀ ಗಣೇಶನ’ ಆರಾಧನೆಯೊಂದಿಗೆ ಶ್ರೀ ಕೃಷ್ಣ ಪರಮಾತ್ಮ ತನ್ನ ಆರಾಧನೆಯನ್ನು ನೀಗಿಸಿಕೊಂಡ ಪ್ರಸಂಗವನ್ನು ಈ ಬಾರಿ ಕಲಾಕೃತಿಯಲ್ಲಿ ಅಳವಡಿಸಲಾಗಿತ್ತು. ದಸರಾ ದಶಮಂಟಪಗಳಿಗೆ ಸರಿಸಾಟಿಯಾದ ಶಾಂತಿನಿಕೇತನ ಯುವಕ ಸಂಘದ “ಶಮಂತಖೋಪಕ್ಯಾನ” ಕಥಾ ಹಂದರದ ಭವ್ಯವಾದ ಮಂಟಪವನ್ನು ಸಂಘದ ಅಧ್ಯಕ್ಷ ಚೇತನ್‍ರವರ ಮಾರ್ಗದರ್ಶನದಲ್ಲಿ ಕಲಾವಿದರಾಗಿದ್ದ ದಿ.ಅಣ್ಣುರವರ ಪುತ್ರ ರವಿಯವರು ಕಲಾಕೃತಿಯನ್ನು ನಿರ್ಮಿಸಿದ್ದರು. ಕಲಾವಿದ ರÀವಿಯರ ಕೈಚಳಕದಲ್ಲಿ ಇಲ್ಲಿಯವರೆಗೆ ದಸರಾ, ಗಣೇಶೋತ್ಸವ, ಕಾವೇರಿ ಸಂಕ್ರಮಣದ ಮಂಟಪ, ಮಡಿಕೇರಿ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಾಲಯದ ಆವರಣದಲ್ಲಿ ನಿರ್ಮಿಸಲಾದ ಬೃಹತ್ ಶಿವಾಲಯ ಮುಂತಾದ ಹತ್ತು ಹಲವು ಕಲಾಕೃತಿಗಳು ನಿರ್ಮಾಣಗೊಂಡಿದೆ. ರವಿಯವರೊಂದಿಗೆ ಸಹ ಕಲಾವಿದರಾದ ಸುರೇಶ್, ವಿನು, ರಾಜೇಶ್, ವರುಣ್, ಪಪ್ಪು, ಶೇಖರ್, ಮನು ಸತತ 2 ತಿಂಗಳಿಂದ ಶ್ರಮ ವಹಿಸಿ “ಶ್ರೀ ಗಣೇಶ ಪುರಾಣದ ಶಮಂತಖೋಪಕ್ಯಾನ ಕಥಾ ಹಂದರದ ಕಲಾಕೃತಿಗಳನ್ನು ನಿರ್ಮಿಸಿದರು. ಮಂಟಪದ ಸ್ಟುಡಿಯೋ ಸೆಟ್ಟಿಂಗ್‍ನ್ನು ಗುರು ಲೈಟಿಂಗ್ಸ್‍ನ ಲೋಕೇಶ್ ಮಾಡಿದರು. ಪೂಜಾ ಲೈಟಿಂಗ್ಸ್‍ನವರಿಂದ ಆರ್ಚ್‍ಲೈಟಿಂಗ್ಸ್ ಬೋರ್ಡ್ ಅಳವಡಿಸಲಾಗಿತ್ತು. ಮಂಟಪದ ಚಲನವಲನವನ್ನು ವಿಜಯ ಹಾಗೂ ಲಾರೆನ್ಸ್ ನಿರ್ವಹಿಸಿದರು. ಶಾಂತಿನಿಕೇತನ ಯುವಕ ಸಂಘದ ಈ ಭವ್ಯ ಕಲಾಕೃತಿಯ ಮಂಟಪವು ಜನ-ಮನ ಸೂರೆಗೊಂಡು ಪ್ರಶಂಸೆಗೆ ಪಾತ್ರವಾಗಿದ್ದು, ಒಂದು ರೀತಿಯಲ್ಲಿ ಗಣೇಶೋತ್ಸವ ಕೂಡಾ ಮಡಿಕೇರಿಯಲ್ಲಿ ದಸರಾ ಜನೋತ್ಸವಕ್ಕೆ ಸರಿಸಾಟಿಯಾಗಿ ನಿಲ್ಲುವುದರತ್ತ ತನ್ನ ಹೆಜ್ಜೆಯನ್ನಿರಿಸುವುದು ಕಂಡು ಬಂತು. ಇದೆಲ್ಲಕ್ಕೂ ಶಾಂತಿನಿಕೇತನ ಯುವಕ ಸಂಘದ ಅಧ್ಯಕ್ಷರಾದ ಶ್ರೀ ಚೇತನ್ ಮತ್ತು ಬಳಗದ ಪ್ರತಿಯೊಬ್ಬ ಸದಸ್ಯರ ಶ್ರಮ ಇಲ್ಲಿ ಶ್ಲಾಘÀನೀಯ. ಇವರ ಈ ಜನ ಮನೊರಂಜನೆಯ ಗಣೇಶೋತ್ಸವವು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿಭಿನ್ನ ರೀತಿಯಲ್ಲಿ ಮೂಡಿ ಬಂದು ಜನರ ಮನೋರಂಜನೆಗೆ ಸಾಕ್ಷಿಯಾಗಲಿ ಎಂಬುದೇ ನಮ್ಮ ಆಶಯ. …ಮೀಡಿಯಾ ಕೂರ್ಗ್ ನ್ಯೂಸ್ ಡೆಸ್ಕ್    

Kodandarama

Kodandarama

Reading Time: 2 minutesಈ ದೇಗುಲವು ನಗರದ ಮಾರುಕಟ್ಟೆಯಿಂದ ಉತ್ತರಕ್ಕೆ ಕಾಲ್ನಡಿಗೆ ದೂರದಲ್ಲಿದೆ. ಮಡಿಕೇರಿಯ ತೋಟಗಾರಿಕಾ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ನಿಂಗಪ್ಪ ಎಂಬುವರು ಸ್ಥಳೀಯ ಯುವಕರ ಗುಂಪನ್ನು ಕಟ್ಟಿಕೊಂಡು ಸಮಿತಿಯೊಂದನ್ನು ರಚಿಸಿ, ದಾನಿಗಳ ನೆರವಿನಿಂದ 1977 ರಲ್ಲಿ ಈ ದೇಗುಲವನ್ನು ನಿರ್ಮಿಸಿದರು. ಮೊದಲಿಗೆ ಶ್ರೀ ರಾಮನ ಚಿತ್ರಪಟವನ್ನು ಇಟ್ಟು ಪೂಜೆ ಮಾಡಲಾಗುತ್ತಿತ್ತು. ಇದನ್ನು ನಿಂಗಪ್ಪನವರೇ ನಿರ್ವಹಿಸುತ್ತಿದ್ದರು. ದೇಗುಲಕ್ಕೆ ಮೂರ್ತಿಯು ಬೇಕೆನಿಸಿದಾಗ ಹತ್ತಾರು ಕಡೆ ಅಲೆದು ಕೊನೆಗೆ ಮೈಸೂರು ಅರಮನೆ ಸಮೀಪವಿರುವ ಹಾಲ್ನಳ್ಳಿಯ ಶಿಲ್ಪಿಗಳಿಂದ ಸುಂದರವಾದ ಕೋದಂಡಧಾರಿರಾಮ ಜೊತೆಗೆ ಸೀತಾ ಮಾತೆ, ಲಕ್ಷ್ಮಣ ಮತ್ತು ಆಂಜನೇಯ, ಅಲ್ಲದೆ ವಿನಾಯಕನ ವಿಗ್ರಹವನ್ನು ಕೃಷ್ಣಶಿಲೆಯಿಂದ ನಿರ್ಮಿಸಿ ತರಲಾಯಿತು. ಅದಕ್ಕೆ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರ ಸಹಕಾರವಿತ್ತು. ದೇವತಾ ವಿಗ್ರಹಗಳ ಪ್ರತಿಷ್ಠಾಪನೆಯು ವಿಜ್ರಂಭಣೆÉಯಿಂದ ನೆರವೇರಿತು. ಇದೇ ಸಂದರ್ಭದಲ್ಲಿ ದೇವಾಲಯದ ವತಿಯಿಂದ ದಸರಾ ಮಂಟಪವನ್ನು ಹೊರಡಿಸಲು ನಿರ್ಧರಿಸಲಾಯಿತು. ದೇವಸ್ಥಾನದ ಆಡಳಿತವನ್ನು ನಿರ್ವಹಿಸುತ್ತಿದ್ದ ನಿಂಗಪ್ಪನವರು ದೇವಸ್ಥಾನವನ್ನು ಸಾರ್ವಜನಿಕರÀ ಹೆಸರಿನಲ್ಲಿ ನೋಂದಾಯಿಸಿ ಹಾಗೆಯೇ ಆಡಳಿತವನ್ನು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶ್ರೀ ರಾಮ ಸೇವಾ ಸಮಿತಿಯವರಿಗೆ ವಹಿಸಿಕೊಟ್ಟರು. ನವಗ್ರಹ ಮೂರ್ತಿಗಳನ್ನೂ ಹೊಂದಿರುವ ದೇಗುಲವು ಸುಂದರವಾಗಿದೆ. ರಾಮನವಮಿ, ನವರಾತ್ರಿ, ಮುಂತಾದ ಉತ್ಸವಗಳನ್ನು ವಿಜ್ರಂಭಣೆಯಿಂದ ಇಲ್ಲಿ ಆಚರಿಸಲಾಗುತ್ತದೆ.  

error: Content is protected !!