✨ ಮೂರ್ನಾಡಿನಲ್ಲಿ ಅಕ್ಟೋಬರ್ 20ರಂದು ವೈಭವೋಪೇತ ೩೩ನೇ ವರ್ಷದ ಆಯುಧ ಪೂಜಾ ಮಹೋತ್ಸವ! 🪓💐

ಮೂರ್ನಾಡು: ಅದ್ದೂರಿ ಆಯುಧ ಪೂಜಾ ಮಹೋತ್ಸವ
🛞 ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ

✨ ಮೂರ್ನಾಡಿನಲ್ಲಿ ಅಕ್ಟೋಬರ್ 20ರಂದು ವೈಭವೋಪೇತ ೩೩ನೇ ವರ್ಷದ ಆಯುಧ ಪೂಜಾ ಮಹೋತ್ಸವ! 🪓💐

ಭವ್ಯ ವೇದಿಕೆ, ವಿದ್ಯುತ್ ದೀಪಾಲಂಕಾರ, ಕಣ್ಮನ ಸೆಳೆಯುವ ವಾಹನ ಮೆರವಣಿಗೆ ಮತ್ತು ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗುತ್ತಿದೆ ಮೂರ್ನಾಡು ಪಟ್ಟಣ 🌟

✍️
ವರದಿ: ಟಿ.ಸಿ. ನಾಗರಾಜ್
ಮೂರ್ನಾಡು ವರದಿಗಾರರು
🚚 🚜 🚗 🏍️ 🚌

೩೩ನೇ ವಾರ್ಷಿಕ ಆಯುಧ ಪೂಜೆ & ಸಾಂಸ್ಕೃತಿಕ ಸಂಭ್ರಮ

Search Kodagu Widget
Official

ಸರ್ಚ್‌ ಕೂರ್ಗ್‌ ಸುದ್ದಿ ಅಪ್‌ಡೇಟ್ಸ್

ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ

ಪಿಎಂಶ್ರೀ ಕೆಪಿಎಸ್ ಮೈದಾನ & ನಾಡ್‌ಮಂದ್ ಭವ್ಯ ವೇದಿಕೆ | ಸಂಜೆ ಸಭಾ ಕಾರ್ಯಕ್ರಮ & ಸನ್ಮಾನ

📍 ಮೂರ್ನಾಡು: ಇಲ್ಲಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ವತಿಯಿಂದ ಮೂರ್ನಾಡಿನಲ್ಲಿ ಅದ್ಧೂರಿ ಆಯುಧ ಪೂಜಾ ಮಹೋತ್ಸವವು ದಿನಾಂಕ 20ರಂದು ಸಂಭ್ರಮ ಸಡಗರದಿಂದ ನೆರವೇರಲಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಇಲ್ಲಿನ ಪಿಎಂಶ್ರೀ ಕೆಪಿಎಸ್ ಸರಕಾರಿ ಪ್ರೌಢಶಾಲೆಯ ಮೈದಾನ ಹಾಗೂ ನಾಡ್‌ಮಂದ್‌ನಲ್ಲಿ ನಿರ್ಮಿಸಲಾಗುತ್ತಿರುವ ಭವ್ಯ ಅಲಂಕೃತ ವೇದಿಕೆಯಲ್ಲಿ ೩೩ನೇ ವರ್ಷದ ಆಯುಧ ಪೂಜೆಯ ಸಂಭ್ರಮಾಚರಣೆಗೆ ಮೂರ್ನಾಡು ಪಟ್ಟಣವು ವಿದ್ಯುತ್ ಅಲಂಕೃತಗೊಂಡು ಅತ್ಯಂತ ಶೃಂಗಾರದಿಂದ ಸಜ್ಜಾಗುತ್ತಿದೆ.

⏰ ೨:೦೦ ಗಂಟೆಗೆ ಸಾಮೂಹಿಕ ಪೂಜೆ

ಅಪರಾಹ್ನ 2.00 ಗಂಟೆಗೆ ಸಕಲ ವಿಧಿ-ವಿಧಾನಗಳೊಂದಿಗೆ ಅಲಂಕೃತ ವಾಹನಗಳಿಗೆ ಸಾಮೂಹಿಕ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.

🥁 ಬೆಳ್ತಂಗಡಿಯ ಬೊಂಬೆ ಕುಣಿತ

ಮೆರವಣಿಗೆಯಲ್ಲಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಬೆಳ್ತಂಗಡಿಯ ಶೆಟ್ಟಿ ಬೊಂಬೆ ಬಳಗದಿಂದ ಬೊಂಬೆ ಕುಣಿತ ಮತ್ತು ವಾದ್ಯಗೋಷ್ಟಿ ಮೆರವಣಿಗೆಯ ರಂಗನ್ನು ಇಮ್ಮಡಿಗೊಳಿಸಲಿದೆ!

🎺 ವರ್ಣರಂಜಿತ ವಾಹನ ಮೆರವಣಿಗೆ

ಪೂಜಾ ಕಾರ್ಯಕ್ರಮದ ನಂತರ ಮೂರ್ನಾಡಿನ ಮುಖ್ಯ ರಸ್ತೆಯಲ್ಲಿ ನೂರಾರು ಅಲಂಕೃತ ವಾಹನಗಳ ಆಕರ್ಷಕ ಮೆರವಣಿಗೆ ಜರುಗಲಿದೆ. ಮೆರವಣಿಗೆಯ ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಊರಿನ ನಾಗರಿಕರು ಸೇರಲಿದ್ದಾರೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್
🏛️

ಸಭಾ ಕಾರ್ಯಕ್ರಮ & ಗಣ್ಯರ ಉಪಸ್ಥಿತಿ

ಸಂಜೆಯ ವೇಳೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷರಾದ ಅಶ್ವತ್ಥ್ ರೈ. ಬಿ.ಬಿ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳು & ಗೌರವ ಉಪಸ್ಥಿತಿ:

✨ ಚಿರಿಯಪಂಡ ಎಸ್. ಸುರೇಶ್ ನಂಜಪ್ಪ (ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರು) ✨ ಅವರೇಮಾದಂಡ ಶರಣ್ ಪೂಣಚ್ಚ (ಸಿಗ್ಮಾ ನೆಟ್‌ವರ್ಕ್ಸ್, ಬೆಂಗಳೂರು) 👮 ಹೆಚ್.ವಿ. ಚಂದ್ರಶೇಖರ್ (ಮಡಿಕೇರಿ ಗ್ರಾಮಾಂತರ ಸಿಪಿಐ) 💼 ಸತೀಶ್ ಬಿ. ಗುಡ್ಡೇರ (ಚೆನ್ನೈ ಉದ್ಯಮಿ) 🎓 ಸ್ವರ್ಣಲತಾ (ಮುಖ್ಯೋಪಾಧ್ಯಾಯಿನಿ, ಕೆಪಿಎಸ್ ಪ್ರೌಢಶಾಲೆ) 👩‍🏫 ಬಿ.ಎಸ್. ಪುಷ್ಪಾವತಿ (ಸಹಶಿಕ್ಷಕಿ, ಪಿಎಂಶ್ರೀ ಶಾಲೆ) 📚 ಬಿ.ಎಂ. ಕಲ್ಪನಾ ಸಾಮ್ರಾಟ್ (ಪ್ರಾಂಶುಪಾಲೆ, ಪ್ರಥಮ ದರ್ಜೆ ಕಾಲೇಜು) 🌾 ವಿಠಲ್ ಪೂವಯ್ಯ ಪಳಂಗಂಡ (ಅಧ್ಯಕ್ಷರು, ಕೃಷಿ ಗ್ರಾಮೀಣ ಸಹಕಾರ ಸಂಘ) 🤝 ಅಚ್ಚಕಾಳೇರ ರವಿ ನಾಣಯ್ಯ (ಅಧ್ಯಕ್ಷರು, ಬೆಂಗಳೂರು ಕೊಡವ ಸ್ನೇಹ ಕೂಟ) 🩺 ಡಾ. ಮೇಚಿರ ಸುಭಾಷ್ ನಾಣಯ್ಯ (ಅಧ್ಯಕ್ಷರು, ಕೊಡವ ಭಾಷಿಕ ಸಮುದಾಯಗಳ ಒಕ್ಕೂಟ) 👥 ತೇಲಪಂಡ ಸುಬ್ಬಯ್ಯ (ಅಧ್ಯಕ್ಷರು, ಮೂರ್ನಾಡು ಕೊಡವ ಸಮಾಜ) 🌿 ಪಾಣತ್ತಲೆ ಟಿ. ಹರೀಶ್ (ಅಧ್ಯಕ್ಷರು, ಮೂರ್ನಾಡು ಗೌಡ ಸಮಾಜ) 🎖️ ಎನ್.ಕೆ. ಕುಂಞಿರಾಮ (ಗೌರವಾಧ್ಯಕ್ಷರು, ತ್ರಿನೇತ್ರ ಸಂಘ) 💡 ಮುಕ್ಕಾಟಿರ ರವಿ ಚೀಯಣ್ಣ (ಅಧ್ಯಕ್ಷರು, ಜ್ಞಾನಜ್ಯೋತಿ ವಿದ್ಯಾಸಂಸ್ಥೆ) 🕌 ಕೆ.ಎ. ಅಬ್ದುಲ್ ಮಜೀದ್ (ಅಧ್ಯಕ್ಷರು, ಮುಸ್ಲಿಂ ಜಮಾಅತ್) ⛪ ಕೆ.ಜೆ. ಮ್ಯಾಥ್ಯೂ ಜೋಸೆಫ್ (ಉಪಾಧ್ಯಕ್ಷರು, ಇನ್‌ಫೆಂಟ್ ಜೀಸಸ್ ಚರ್ಚ್)

🎖️ ಸಾಧಕರಿಗೆ ಸನ್ಮಾನ & ಸ್ಪರ್ಧಾ ಬಹುಮಾನಗಳು

ಸಭಾ ಕಾರ್ಯಕ್ರಮದಲ್ಲಿ ಕಳೆದ ಸಾಲಿನ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 3 ಪ್ರತಿಭಾವಂತ ವಿದ್ಯಾರ್ಥಿಗಳು, ಹಾಗೆಯೇ ಸಮಾಜದ ಸೇವೆಗೆ ಕೊಡುಗೆ ನೀಡಿದ ಒಬ್ಬರು ನಿವೃತ್ತ ಶಿಕ್ಷಕರು ಹಾಗೂ ಓರ್ವ ಮಾಜಿ ಸೈನಿಕರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಗುವುದು.

🏆 ಆಕರ್ಷಕ ಬಹುಮಾನ ವಿತರಣೆ

ಉತ್ಸವದ ಅಂಗವಾಗಿ ವಿಶೇಷವಾಗಿ ಅಲಂಕೃತಗೊಂಡ ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ, ಆರು ಚಕ್ರ ವಾಹನಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಹಾಗೂ ಟ್ರೋಫಿ ಬಹುಮಾನಗಳನ್ನು ನೀಡಲಾಗುತ್ತದೆ.

🍲

ಸಾರ್ವಜನಿಕ ಅನ್ನಸಂತರ್ಪಣೆ

ಕಾರ್ಯಕ್ರಮಕ್ಕೆ ಆಗಮಿಸುವ ಸಮಸ್ತ ಸಾರ್ವಜನಿಕರಿಗೆ ರಾತ್ರಿ ಊಟೋಪಚಾರದ (ಮಹಾ ಅನ್ನಸಂತರ್ಪಣೆ) ವ್ಯವಸ್ಥೆಯನ್ನು ಸಂಘದ ವತಿಯಿಂದ ಅತ್ಯಂತ ಅಚ್ಚುಕಟ್ಟಾಗಿ ಕಲ್ಪಿಸಲಾಗಿದೆ.

⚡ NO FOMO • 100% ಕೊಡಗು ವೈಬ್ಸ್
ಕೊಡಗಿನ ಅಪ್ಡೇಟ್ಸ್ & ಸಂದರ್ಶನಗಳು ಮಿಸ್ ಆದ್ರೆ ಹೆಂಗೆ ಬ್ರೋ? 📲🔥

ಸುದ್ದಿ, ವಿಶೇಷ ಇಂಟರ್ವ್ಯೂಗಳು 🎙️ ಹಾಗೂ ಪ್ರಮುಖ ಕಂಟೆಂಟ್ಸ್‌ಗಳಿಗೆ ಈಗಲೇ ಆ್ಯಪ್ ಡೌನ್‌ಲೋಡ್ ಮಾಡಿ!

📲 ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ 👉
🆓 100% ಉಚಿತ • ಲೈಟ್‌ವೈಟ್ ಆ್ಯಪ್

ಸಂಘದ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರು ಸೇರಿ 33ನೇ ವರ್ಷದ ಆಯುಧ ಪೂಜೆ ಸಮಾರಂಭವನ್ನು ಅಭೂತಪೂರ್ವ ಯಶಸ್ವಿಗೊಳಿಸಲು ಬಿರುಸಿನ ಸಿದ್ಧತೆಗಳನ್ನು ಕೈಗೊಂಡಿದ್ದಾರೆ.

ಮೂಲ ವರದಿ / ಹೆಚ್ಚಿನ ಮಾಹಿತಿ

ಸಂಪೂರ್ಣ ವರದಿ ಮತ್ತು ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

📖 ಇನ್ನಷ್ಟು ಓದಿ (Read More)
Search Coorg Media
Search Coorg Media
Articles: 938
0 0 votes
Article Rating
Subscribe
Notify of
guest
0 Comments
Newest
Oldest Most Voted
0
Would love your thoughts, please comment.x
()
x