Reading Time: < 1 minute
ಮೂರ್ನಾಡು: ಕಾಂತೂರು-ಮೂರ್ನಾಡು ಗ್ರಾಮಪಂಚಾಯಿತಿ ವತಿಯಿಂದ ‘ಸ್ವಚ್ಛತೆಯೇ ಸೇವೆ’ ಅಭಿಯಾನ ಗಾಂಧಿ ಜಯಂತಿಯಂದು ನಡೆಯಿತು.
ಮೂರ್ನಾಡುವಿನ ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ಶ್ರೀ ರಾಮಮಂದಿರ ಸೇವಾ ಸಮಿತಿ ಗಾಂಧಿನಗರ ಹಾಗೂ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಇವರ ಜಂಟಿ ಆಶ್ರಯದಲ್ಲಿ ಮೂರ್ನಾಡು ಪ್ರಾಥಮಿಕ ಹಾಗೂ ಪ್ರೌಢ ಶಾಲೆ ರಸ್ತೆ, ಅರೋಗ್ಯ ಕೇಂದ್ರ ಪಕ್ಕದಲಿ, ಅರೋಗ್ಯ ಕೇಂದ್ರದ ವಸತಿ ನಿಲಯ ಹಾಗೂ ನಾಪೋಕ್ಲು ರಸ್ತೆ ಈ ಭಾಗದಲ್ಲಿ ‘ಸ್ವಚ್ಛತೆಯೇ ಸೇವೆ’ ಅಭಿಯಾನದ ಶ್ರಮದಾನ ಕಾರ್ಯಕ್ರಮ ನಡೆಯಿತು.
‘ಸ್ವಚ್ಛತೆಯೇ ಸೇವೆ’ ಅಭಿಯಾನದ ಶ್ರಮದಾನದಲ್ಲಿ ಭಾಗವಹಿಸಿದ ಸರ್ವರಿಗೂ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ವತಿಯಿಂದ ಈ ಸಂದರ್ಭದಲ್ಲಿ ಹೃದಯ ತುಂಬಿದ ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.