Reading Time: < 1 minute
ಕೊಡಗಿನ ಪ್ರತಿಷ್ಠಿತ ಸಮನ್ವಯ ವಿದ್ಯಾಸಂಸ್ಥೆಯಾದ ಅನ್ವಾರುಲ್ ಹುದಾ ವಿರಾಜಪೇಟೆ ಇದರ ವಿದ್ಯಾರ್ಥಿ ಸಂಘಟನೆಯಾದ
ನಹ್ದತುಸ್ಸುನ್ನ – (ಅನ್ವಾರ್ ಸ್ಟೂಡೆಂಟ್ ಯೂನಿಯನ್) ಇದರ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸುವ ದಸ್ತಗೀರ್ ಕಾನ್ಫರೆನ್ಸ್ ತಾ-9 (ಇಂದು) ಆರಂಭಗೊಳ್ಳಲಿದೆ.
ವಿದ್ಯಾರ್ಥಿಗಳ ಕಲಾಮೇಳವು ತಾ -9 ಗುರವಾರದಿಂದ ಆರಂಭಗೊಂಡು 12ರ ಭಾನುವಾರದ ವರೆಗೆ ವಿವಿಧ ಕಾರ್ಯಕ್ರಮಗಳಾದ ಬುರ್ದಾ ಮಜ್ಲಿಸ್, ಅಸ್ಮಾಹುಲ್ ಉಸ್ನ, ಇಂಟರ್ ಕ್ಯಾಂಪಸ್ ಫೆಸ್ಟ್, ಹಾಗೂ ವಿವಿಧ ಕಲಾ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮಕ್ಕೆ ಹಲವಾರು ಉಲಮಾ,ಉಮರಾ,ಸಾದತ್ ಗಳು ಹಾಗೂ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿ ಶಿಹಾಬ್ ಅನ್ವಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.