Reading Time: < 1 minute
ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾಸಂಸ್ಥೆಯಾದ ವಿರಾಜಪೇಟೆಯ ಅನ್ವಾರುಲ್ ಹುದಾ ಸಂಸ್ಥೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣರವರು ಭೇಟಿ ನೀಡಿದರು. ವಿದ್ಯಾಸಂಸ್ಥೆಯ ಶಿಲ್ಪಗಳಾದ ಶೈಖುನ ಅಶ್ರಫ್ ಅಹ್ಸನಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಪೊನ್ನಣ್ಣ ನವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಇದೇ ಸಂದರ್ಭ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ ಮೊಮೆಂಟೋ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿತೈಷಿಗಳಾದ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹನೀಫ್ ಚೋಕಂಡಳ್ಳಿ,ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಫೀಕ್ ಕೊಮ್ಮತ್ತೋಡ್, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ,ಮತೀನ್, ಶಾಲೆಯ ಮುಖ್ಯ ಶಿಕ್ಷಕರಾದ ಚಂದ್ರ ಕುಮಾರ್ ಮತಿತ್ತರರು ಉಪಸ್ಥಿತರಿದ್ದರು.
ಅನ್ವಾರುಲ್ ಹುದಾ ಕಾಲೇಜಿನ ಉಪನ್ಯಾಸಕರಾದ ಯಾಕೂಬ್ ಮಾಸ್ಟರ್ ಸ್ವಾಗತಿಸಿ ವಂದಿಸಿದರು.