DASD ಪ್ರಾಯೋಜಿತ ರೈತರ ತರಬೇತಿ ಕಾರ್ಯಕ್ರಮ: “ಶುಂಠಿ ಮತ್ತು ಅರಿಶಿನದಲ್ಲಿ ಉತ್ತಮ ಕೃಷಿ ಪದ್ದತಿಗಳು”

WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: 3 minutes

DASD ಪ್ರಾಯೋಜಿತ ರೈತರ ತರಬೇತಿ ಕಾರ್ಯಕ್ರಮ: “ಶುಂಠಿ ಮತ್ತು ಅರಿಶಿನದಲ್ಲಿ ಉತ್ತಮ ಕೃಷಿ ಪದ್ದತಿಗಳು”

ICAR- ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೈಸಸ್ ರಿಸರ್ಚ್, ಕೋಯಿಕ್ಕೋಡ್ ಇವರ ವತಿಯಿಂದ 15.02.2024 ರಂದು “ಶುಂಠಿ ಮತ್ತು ಅರಿಶಿನದಲ್ಲಿ ಉತ್ತಮ ಕೃಷಿ ಪದ್ದತಿಗಳು” ಕುರಿತು ಒಂದು ದಿನದ ರೈತರಿಗೆ ತರಬೇತಿಯನ್ನು ICAR-CTRI, ಸಂಶೋಧನಾ ಕೇಂದ್ರ, ಹುಣಸೂರಿನಲ್ಲಿ ಆಯೋಜಿಸಿತ್ತು. ಈ ತರಬೇತಿಯನ್ನು ಅರೆಕಾನಟ್ ಮತ್ತು ಸಾಂಬಾರ ಪದಾರ್ಥಗಳ ಅಭಿವೃದ್ಧಿ ನಿರ್ದೇಶನಾಲಯ, ಕೋಯಿಕ್ಕೋಡ್ ಪ್ರಾಯೋಜಿಸಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಐಸಿಎಆರ್-ಐಐಎಸ್‌ಆರ್, ಆರ್‌ಎಸ್, ಅಪ್ಪಂಗಳ, ಇದರ ಮುಖ್ಯಸ್ಥರಾದ ಡಾ.ಎಸ್.ಜೆ.ಅಂಕೇಗೌಡ ಅವರು ತಂಬಾಕಿಗೆ ಪರ್ಯಾಯ ಬೆಳೆಯಾಗಿ ಶುಂಠಿ ಮತ್ತು ಅರಿಶಿನವನ್ನು ಬೆಳೆಯುವ ಮಹತ್ವವನ್ನು ಒತ್ತಿ ಹೇಳಿದರು.

ಐಸಿಎಆರ್-ಐಐಎಸ್‌ಆರ್, ಇದರ ಪ್ರಧಾನ ವಿಜ್ಞಾನಿಯಾದ  ಡಾ. ಕೆ.ಕಂಡಿಯನ್ನನ್ ಅವರು ಭಾರತದಲ್ಲಿ ಮಸಾಲೆಗಳ ಪ್ರಾಮುಖ್ಯತೆ ಮತ್ತು ಜಾಗತಿಕ ಭವಿಷ್ಯವನ್ನು ಎತ್ತಿ ತೋರಿಸಿದರು. ಜೊತೆಗೆ, ಅವರು ಮಸಾಲೆ ವಲಯದಲ್ಲಿ ತೋಟಗಾರಿಕೆ ಸಮಗ್ರ ಅಭಿವೃದ್ಧಿಗಾಗಿ ಮಿಷನ್ (MIDH) ಚಟುವಟಿಕೆಗಳ ಬಗ್ಗೆ ವಿವರಿಸಿದರು.

ಐಸಿಎಆರ್-ಐಐಎಸ್‌ಆರ್, ಇದರ ಪ್ರಧಾನ ವಿಜ್ಞಾನಿಯಾದ ಡಾ.ಪಿ.ರಾಜೀವ್ ಅವರು ಸಾಂಬಾರ ಪದಾರ್ಥಗಳು ಕಡಿಮೆ ಪ್ರಮಾಣದ ಮತ್ತು ಹೆಚ್ಚಿನ ಮೌಲ್ಯದ ಬೆಳೆಗಳಾಗಿವೆ, ಇದು ರೈತರಿಗೆ ಹೆಚ್ಚುವರಿ ಆದಾಯವನ್ನು ನೀಡುತ್ತದೆ. ಉತ್ತಮ ಕೃಷಿ ಪದ್ಧತಿಗಳ (GAP) ತರಬೇತಿ ಕಾರ್ಯಕ್ರಮವು ಶುಂಠಿ ಮತ್ತು ಅರಿಶಿನದ ಸುಧಾರಿತ ಪ್ರಭೇದಗಳು, ಉತ್ಪಾದನೆ ಮತ್ತು ಸಸ್ಯ ಸಂರಕ್ಷಣಾ ತಂತ್ರಜ್ಞಾನಗಳಿಗೆ ಒತ್ತು ನೀಡಿತು ಎಂದು ತಿಳಿಸಿದರು.

ತಾಂತ್ರಿಕ ಅಧಿವೇಶನದಲ್ಲಿ ಡಾ. ಅಕ್ಷಿತಾ ಹೆಚ್.ಜೆ ಅವರಿಂದ ಶುಂಠಿ ಮತ್ತು ಅರಿಶಿನದ ಸುಧಾರಿತ ಪ್ರಭೇದಗಳ ಕುರಿತು ಉಪನ್ಯಾಸಗಳನ್ನು ನೀಡಲಾಯಿತು; ಡಾ. ಎಸ್. ಜೆ. ಅಂಕೇಗೌಡರಿಂದ ಶುಂಠಿ ಮತ್ತು ಅರಿಶಿನದಲ್ಲಿ ಉತ್ತಮ ಕೃಷಿ ಪದ್ಧತಿ ಮತ್ತು ಡಾ. ಮೊಹಮ್ಮದ್ ಫೈಸಲ್ ಅವರಿಂದ ಶುಂಠಿ ಮತ್ತು ಅರಿಶಿನದಲ್ಲಿ ಬೆಳೆ ರಕ್ಷಣೆ. ತರಬೇತಿ ವೇಳೆ ರೈತರು ವ್ಯಕ್ತಪಡಿಸಿದ ಅನುಮಾನಗಳಿಗೆ ಸ್ಪಷ್ಟನೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಗಣ್ಯರಾದ ಹುಣಸೂರಿನ ಐಸಿಎಆರ್-ಸಿಟಿಆರ್‌ಐ ಆರ್‌ಎಸ್ ಮುಖ್ಯಸ್ಥರಾದ ಡಾ.ಎಸ್.ರಾಮಕೃಷ್ಣನ್ ಉಪಸ್ಥಿತರಿದ್ದು ಸರ್ವರನ್ನೂ ಔಪಚಾರಿಕವಾಗಿ ಸ್ವಾಗತಿಸಿದರು. ಡಾ.ಅಕ್ಷಿತಾ ಎಚ್.ಜೆ ವಂದಿಸಿದರು. ಕರ್ನಾಟಕದ ವಿವಿಧ ಪ್ರದೇಶಗಳಿಂದ 120ಕ್ಕೂ ಹೆಚ್ಚು ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಫಾರಸುಗಳು:
* ಶುಂಠಿ ಮತ್ತು ಅರಿಶಿನದ ಸುಧಾರಿತ ತಳಿಗಳ ಗುಣಮಟ್ಟದ ನಾಟಿ ಸಾಮಗ್ರಿಗಳಿಗೆ ಹೆಚ್ಚಿನ ಬೇಡಿಕೆಯಿದೆ, ಪರವಾನಗಿದಾರರ ಮೂಲಕ ಹೆಚ್ಚಿನ ಬೀಜವನ್ನು ಉತ್ಪಾದಿಸಲು ಪ್ರಯತ್ನಗಳನ್ನು ತೆಗೆದುಕೊಳ್ಳಬೇಕಾಗಿದೆ.

* ಈ ಬೆಳೆಗಳ ಸುಧಾರಿತ ತಂತ್ರಜ್ಞಾನಗಳ ಬಗ್ಗೆ ನಿಯಮಿತ ತರಬೇತಿಯ ಅಗತ್ಯವಿದೆ.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x