ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.
ಹೊಂಗೆ ಹೂವ ತೊಂಗಳಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನ ಕಹಿ ಬಾಳಿನಲಿ
ಹೋವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ.
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ.
ಒಂದೇ ಒಂದು ಜನ್ಮದಲಿ
ಒಂದೇ ಬಾಲ್ಯ ಒಂದೇ ಹರೆಯು
ನಿಮಗದಷ್ಟೇ ಏತಕೋ.
ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದು?
ಎಲೆ ಸನತ್ಕುಮಾರ ದೇವ
ಎಲೆ ಸಹಾಸ ಚಿರಂಜೀವ
ನಿನಗೆ ಲೀಲೆ ಸೇರದೂ.
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ
ಹೊಸ ಹರುಷವ
ಹೊಸತು ಹೊಸತು ತರುತಿದೆ.

ಕರ್ನಾಟಕದಲ್ಲಿ ಚಾಂದ್ರಮಾನ ಯುಗಾದಿಗೆ ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ. ಸೃಷ್ಟಿ ಕರ್ತನಾದ ಬ್ರಹ್ಮನು ಈ ಪ್ರಪಂಚವನ್ನು ಸೃಷ್ಟಿಸಿದನೆಂದೂ, ಆ ದಿನವನ್ನೇ ಯುಗಾದಿಯಾಗಿಯೂ ಆ ದಿನವೆ ಶಾಲಿವಾಹನನು (ಸಾಮಾನ್ಯ ಶಕ 79 ರ ಸುಮಾರಿಗೆ ) ಚಕ್ರವರ್ತಿಯಾಗಿ ಪಟ್ಟಾಭಿಶಕ್ತನಾದನೆಂದೂ ಆದ್ದರಿಂದ ಈ ಚರಿತ್ರಕಾಲ ಶಾಲಿವಾಹನ ಶಕ ಆಯಿತೆಂದು ಪೌರಾಣಿಕ ಹಿನ್ನಲೆ ಹೆಳುತ್ತದೆ.
ಅಂದು ಬೆಳಿಗ್ಗೆ ಎಣ್ಣೆ+ಸೀಕೆಕಾಯಿಯಿಂದ ಸ್ನಾನಮಾಡಿ ಶುಭ್ರವಸ್ತ್ರಗಳನ್ನು ಧರಿಸಿ, ಮನೆಯನ್ನು ಶುಚಿಮಾಡಿ, ತಳಿರು ತೋರಣಗಳಿಂದ ಸಿಂಗರಿಸಿ ಬೇವು ಬೆಲ್ಲವನ್ನು ಸೇವಿಸುವುದು ವಾಡಿಕೆ. ಜೀವನದಲ್ಲಿ ಬರುವ ಕಷ್ಟ_ಸುಖಗಳನ್ನು ಸಮನಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನು ಸಾರುವ ಹೋಸ ವರ್ಷವು ಸರ್ವಜನಾಂಗಕ್ಕೂ ಶಾಂತಿಯನ್ನು, ನೆಮ್ಮದಿಯನ್ನು ನೀಡಲಿ ಎಂಬುದಾಗಿ ಹಾರೈಸೋಣ.

✍. ಕಾನತ್ತಿಲ್ ರಾಣಿ ಅರುಣ್