Shri Chowdeshwari Temple Balaka Baktha Mandali Dasara Samithi Madikeri Dasara ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ದಸರಾ ಸಮಿತಿ
ಶ್ರೀ ಚೌಡೇಶ್ವರಿ ದೇವಾಲಯ
ಸರ್ಚ್ ಕೂರ್ಗ್ ಸುದ್ದಿ ಅಪ್ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಮಡಿಕೇರಿ ದಸರಾ ಉತ್ಸವದ 4ನೇ ಮಂಟಪ • 61+ ವರ್ಷಗಳ ಭಕ್ತಿ ಪರಂಪರೆ
ಮಡಿಕೇರಿ ದಸರಾ ಚೌಡೇಶ್ವರಿ ಮಂಟಪ ವೈಭವ
ಪವಿತ್ರ ದರ್ಶನ ಹಾಗೂ ಪಲ್ಲಕ್ಕಿ ಉತ್ಸವ
ರಾಜರ ಕಾಲದ ಪುರಾತನ ದೇವಾಲಯ
ಕೊಡಗಿನ ರಾಜನಾಗಿದ್ದ ಲಿಂಗರಾಜನು ನಿರ್ಮಿಸಿರುವ ಈ ಪುಣ್ಯ ಕ್ಷೇತ್ರವು ಭಕ್ತಿ ಮತ್ತು ಪರಂಪರೆಯ ಸಂಗಮವಾಗಿದೆ. ಚೌಡೇಶ್ವರಿ ಅಮ್ಮನವರ ದೈವಿಕ ಕೃಪಾಕಟಾಕ್ಷವು ಇಡೀ ನಾಡಿನ ಸಮಸ್ತ ಜನರಿಗೆ ಸದಾ ನೆರಳಾಗಿದೆ.
ಪ್ರತಿವರ್ಷ ದುರ್ಗಾ ಜಯಂತಿಯಂದು ಮೂಲ ವಿಗ್ರಹವನ್ನೇ ಪಲ್ಲಕ್ಕಿಯಲ್ಲಿಟ್ಟು ಅದ್ಧೂರಿ ಮೆರವಣಿಗೆ ಮಾಡಲಾಗುತ್ತದೆ. ಈ ನಯನಮನೋಹರ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಭಕ್ತ ಸಮೂಹವೇ ನೆರೆಯುತ್ತದೆ.
ಪ್ರಾಸ್ತಾವಿಕ
ಮಡಿಕೇರಿ ದಸರಾ ಉತ್ಸವದಲ್ಲಿ ನಾಲ್ಕನೆಯ ಮಂಟಪವಾಗಿ ಗಮನ ಸೆಳೆಯುವ ಚೌಡೇಶ್ವರಿ ದಸರಾ ಕಳೆದ 61 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ. ಇದು ಕೊಡಗಿನ ಸಾಂಸ್ಕೃತಿಕ ಪರಂಪರೆಯ ಪ್ರಮುಖ ಭಾಗವಾಗಿದ್ದು, ಪ್ರತಿ ವರ್ಷ ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ.
ಹಿನ್ನಲೆ ಮತ್ತು ಇತಿಹಾಸ
ಈ ದೇಗುಲವು ಮಡಿಕೇರಿ ನಗರದ ಮಾರುಕಟ್ಟೆಯ ಸಮೀಪವಿದ್ದು, ಪ್ರಸ್ತುತ ದೇವಾಂಗ ಜನಾಂಗದವರ ಸ್ವಾಧೀನದಲ್ಲಿದೆ. ಈ ದೇಗುಲವನ್ನು ಕೊಡಗಿನ ರಾಜನಾಗಿದ್ದ ಲಿಂಗರಾಜನು ನಿರ್ಮಿಸಿರುವನೆಂದು ನಂಬಲಾಗಿದೆ. ಇದು ಈ ಸ್ಥಳದ ಪ್ರಾಚೀನತೆಗೆ ಮತ್ತು ಐತಿಹಾಸಿಕ ಮಹತ್ವಕ್ಕೆ ಸಾಕ್ಷಿಯಾಗಿದೆ.
ಗರ್ಭಗುಡಿಯಲ್ಲಿದ್ದ ಅಮ್ಮನವರ ಮೂಲ ವಿಗ್ರಹವನ್ನು 1966ರಲ್ಲಿ ಬದಲಾಯಿಸಲಾಯಿತ್ತಾದರೂ, ಮೂಲ ವಿಗ್ರಹ ಇಂದಿಗೂ ಭದ್ರವಾಗಿದ್ದು ವಾರ್ಷಿಕ ಉತ್ಸವದಂದು (ದುರ್ಗಾ ಜಯಂತಿ) ಅದೇ ವಿಗ್ರಹವನ್ನು ಪಲ್ಲಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಇದು ಭಕ್ತರ ಅಪಾರ ಶ್ರದ್ಧೆಯ ಪ್ರತೀಕವಾಗಿದೆ.
1966 ರಲ್ಲಿ ಚೌಡೇಶ್ವರಿ ಮಾತೆಯ ವಿಗ್ರಹವಲ್ಲದೆ ಗರ್ಭಗುಡಿಗೆ ಹೊಂದಿಕೊಂಡಂತೆ ಎಡ-ಬಲಗಳಲ್ಲಿ ರಾಮ ಮತ್ತು ಸತ್ಯನಾರಾಯಣ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಅಲ್ಲದೆ, ಮಡಿಕೇರಿಯಲ್ಲಿ ಪ್ರಥಮವೆಂಬಂತೆ ‘ನವಗ್ರಹ’ವನ್ನು ಸಹ ಇದೇ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.
ಪ್ರಮುಖ ಉತ್ಸವಗಳು
ಇಲ್ಲಿ ಪ್ರತಿವರ್ಷ ದುರ್ಗಾಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವುದರ ಜೊತೆಗೆ, ನವರಾತ್ರಿ, ದೀಪಾವಳಿ, ಶಿವರಾತ್ರಿ, ಶ್ರೀ ಕೃಷ್ಣ ಜನ್ಮಾಷ್ಠಮಿ, ಗೌರಿಗಣೇಶ ಹಬ್ಬಗಳನ್ನು ಆಚರಿಸಲಾಗುತ್ತದೆ.
ವಿಶೇಷವಾಗಿ, ಕಾರ್ತಿಕ ಮಾಸದ ನಿತ್ಯ ಪೂಜೆಗಳು ಮತ್ತು ಭಕ್ತಾಧಿಗಳೇ ಸೇರಿ ನಡೆಸುವ ರಂಗಪೂಜೆ ಇಲ್ಲಿನ ವಿಶೇಷ ಆಕರ್ಷಣೆಯಾಗಿದೆ.

ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ
64ನೇ ವರ್ಷದ ದಸರಾ ಮಹೋತ್ಸವ – 2026 ಮಂಟಪದ ಸಮಗ್ರ ವಿವರಗಳು
ಮಡಿಕೇರಿ ದಸರಾ ಮಹೋತ್ಸವದ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿಯು ಈ ಬಾರಿ 64ನೇ ವರ್ಷದ ದಸರಾ ಉತ್ಸವವನ್ನು ಅತ್ಯಂತ ಭಕ್ತಿ ಮತ್ತು ವೈಭವದೊಂದಿಗೆ ಆಚರಿಸುತ್ತಿದೆ.
ಕಥಾ ಸಾರಾಂಶ
🐘 "ಗಣಪತಿಗೆ ಗಜಮುಖ ಪ್ರಾಪ್ತಿ ಹಾಗೂ ಗಣಪತಿಯಿಂದ ಗಜಾಸುರನ ವಧೆ" ✨
💡 ನವರಾತ್ರಿ ದೀಪಾಲಂಕಾರ:
ನವರಾತ್ರಿ ಮಹೋತ್ಸವದ ಪ್ರಯುಕ್ತ ಮಂಡಳಿಯ ವತಿಯಿಂದ ಭವ್ಯ ಆಕರ್ಷಕ ಲೈಟಿಂಗ್ ವ್ಯವಸ್ಥೆ.
👁️ ಜನಸೇವೆ & ಸಮಾಜಮುಖಿ ಕಾರ್ಯ:
ದಸರಾ ಸಂಭ್ರಮದ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜನೆ.
(ಇಪ್ಪತೈದು ಲಕ್ಷ ರೂಪಾಯಿಗಳು)
ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ
Chowdeshwari Rockers (CR)
ಮಡಿಕೇರಿ ದಸರಾ ಮಹೋತ್ಸವ – 64ನೇ ವರ್ಷ | Madikeri Dasara Mantapa
🌺 ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ 🌺
ವರ್ಷವಾರು ಮಂಟಪ ವಿವರಗಳು ಹಾಗೂ ಕಲಾ ಸಾರಾಂಶಗಳ ಸಂಗ್ರಹ (2025 - 2017)
🌟 ವಿಶೇಷ ಆಕರ್ಷಣೆಗಳು:
ನವರಾತ್ರಿಯಂದು ಮಹದೇವ ಪೇಟೆಯ ಪೂರ್ತಿ ಮೈಸೂರು ದಸರಾ ಲೈಟಿಂಗ್ ಮಾದರಿಯಲ್ಲಿ ದೀಪಾಲಂಕಾರ ವ್ಯವಸ್ಥೆ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರ.

ಶ್ರೀ ಚೌಡೇಶ್ವರಿ ರಾಕರ್ಸ್ (CR) ತಂಡದ ಅಧಿಕೃತ ಝಲಕ್ ಹಾಗೂ ದಸರಾ ಸಂಭ್ರಮದ ಕ್ಷಣಗಳನ್ನು ವೀಕ್ಷಿಸಿ: