ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿಮೂರ್ನಾಡು: ಇತ್ತೀಚಿಗೆ ನಡೆದ ರಾಜ್ಯ ಮಟ್ಟದ 16ನೇ ಈಶ ಗ್ರಾಮೋತ್ಸವದ ಪಂದ್ಯಾಟದಲ್ಲಿ ಕಾಂತೂರು–ಮೂರ್ನಾಡು ಮಹಿಳಾ ತಂಡವು ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚಿಕ್ಕಬಳ್ಳಾಪುರದ ಸದ್ಗುರು ಸನ್ನಿಧಿಯಲ್ಲಿ ಆಯೋಜಿಸಲಾಗಿದ್ದ ಈಶ ಗ್ರಾಮೋತ್ಸವದಲ್ಲಿ ಥ್ರೋಬಾಲ್ ಪಂದ್ಯಾಟದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 14 ತಂಡಗಳ ನಡುವೆ ರೋಮಾಂಚಕ ಪ್ರದರ್ಶನಗಳು ನಡೆದು, ಕೊಡಗು ಜಿಲ್ಲೆಯ ಕಾಂತೂರು–ಮೂರ್ನಾಡು ಮಹಿಳಾ ತಂಡ ಮತ್ತು ಮರಗೋಡು ಬ್ಲಾಕ್ ಪ್ಯಾಂಥರ್ಸ್ ಮಹಿಳಾ ಕ್ಲಬ್ ತಂಡಗಳು ಫೈನಲ್ಗೆ ಪ್ರವೇಶಿಸಿತು. ಈ ಎರಡು ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಕಾಂತೂರು–ಮೂರ್ನಾಡು ಮಹಿಳಾ ತಂಡ ವಿಜಯ ಸಾಧಿಸಿತು. ಈ ತಂಡವು ಇದೆ ತಿಂಗಳು 28ರಂದು ಕೊಯಂಬುತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯುವ ರಾಷ್ಟಮಟ್ಟದ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ.
ವರದಿ: ಟಿ.ಸಿ. ನಾಗರಾಜ್, ಮೂರ್ನಾಡು.