ಮೂರ್ನಾಡು ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯಲಿರುವ ಅನ್ನ ಸಂತರ್ಪಣೆ ಸೇವೆಯ ದೃಶ್ಯ.
ಮೂರ್ನಾಡು:
ಇಲ್ಲಿನ ಶ್ರೀ ಗಜಾನನ ಯುವಕ ಸಂಘದ ವತಿಯಿಂದ ದಿನಾಂಕ 26ರಂದು ಸುಬ್ರಮಣ್ಯ ಷಷ್ಟಿಯ ಪ್ರಯುಕ್ತ ಮೂರ್ನಾಡಿನ ಅಯ್ಯಪ್ಪ ದೇವಸ್ಥಾನದಲ್ಲಿ ಭಕ್ತಾಧಿಗಳು ಮತ್ತು ಸಾರ್ವಜನಿಕರಿಗೆ 3ನೇ ವರ್ಷದ ಅನ್ನ ಸಂತರ್ಪಣೆ ಸೇವೆಯನ್ನು ಕೈಗೊಳ್ಳಲಾಗಿದೆ.
❝
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಊರಿನ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸುತ್ತೇವೆ. ❞
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷರಾದ ಕೊಟ್ಟಂಗಡ ನವೀನ್ ಅವರು, ಸುಬ್ರಮಣ್ಯ ಷಷ್ಟಿಯ ಪವಿತ್ರ ದಿನದಂದು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದು ಶ್ರೀ ಗಜಾನನ ಯುವಕ ಸಂಘದ ವತಿಯಿಂದ ಯಶಸ್ವಿಯಾಗಿ ನಡೆಯುತ್ತಿರುವ 3ನೇ ವರ್ಷದ ಸೇವಾ ಕಾರ್ಯವಾಗಿದೆ.