Reading Time: < 1 minute
(ಸಾಂದರ್ಭಿಕ ಚಿತ್ರ)
ಸೆಪ್ಟೆಂಬರ್ 07ರಂದು ಮೂರ್ನಾಡುವಿನಲ್ಲಿ ಯೋಗಾರೋಗ್ಯ ವಿಶಿಷ್ಟ ಕಾರ್ಯಕ್ರಮ
ಮೂರ್ನಾಡು: ಮೂರ್ನಾಡುವಿನ ವಿವೇಕ ಜಾಗ್ರತ ಬಳಗ ಮತ್ತು ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನ ಪ್ರತಿಷ್ಠಾನ-ಯೋಗಬನದ ಸಹಯೋಗದಲ್ಲಿ ಯೋಗಾರೋಗ್ಯ ವಿಶಿಷ್ಟ ಕಾರ್ಯಕ್ರಮವನ್ನು 2025ರ ಅಕ್ಟೋಬರ್ 7ರಂದು ಆಯೋಜಿಸಲಾಗಿದೆ.
ಮೂರ್ನಾಡು ಕೊಡವ ಸಮಾಜದಲ್ಲಿ ಅಪರಾಹ್ನ 2.30ರಿಂದ 4.30 ಗಂಟೆಯವರೆಗೆ ಆನಂದ, ಆರೋಗ್ಯ, ಆಯಷ್ಯ ವೃದ್ಧಿಗಾಗಿ, ಸಂತೃಪ್ತಿ, ಸಮಾಧಾನ, ಸಂತೃಪ್ತಿಯ ಸಾರ್ಥಕದ ಬದುಕಿಗಾಗಿ ಸರಳ ವೈಜ್ಞಾನಿಕ ಮಾಹಿತಿ ನೀಡುವ ಈ ಕಾರ್ಯಕ್ರಮದಲ್ಲಿ ಕೋಟದ ಮಕ್ಕಳ ತಜ್ಞ ವೈದ್ಯರಾದ ಡಾ. ಮಾಧವ ಪೈ ವಿಶೇಷ ಮಾಹಿತಿ ನೀಡಲಿದ್ದಾರೆ ಎಂದು ವಿವೇಕ ಜಾಗ್ರತ ಬಳಗದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಸಿದ್ದಾರೆ.

