ಹಿಂದೂ ಮಲಯಾಳಿ ಸಂಘದ ವತಿಯಿಂದ ಮೂರ್ನಾಡುವಿನಲ್ಲಿ 17ನೇ ವರ್ಷದ ಓಣಂ ಆಚರಣೆ
ಮೂರ್ನಾಡು: ಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜಿಸಲಾದ 17ನೇ ವರ್ಷದ ಓಣಂ ಹಬ್ಬವು ದಿನಾಂಕ 28ರಂದು ನಡೆಯಲಿದೆ.
ಮೂರ್ನಾಡು ಗೌಡ ಸಮಾಜದಲ್ಲಿ ಆಯೋಜಿಸಲಾದ ಓಣಂ ಹಬ್ಬದ ಪ್ರಯುಕ್ತ ಬೆಳಿಗ್ಗೆ 7.30 ಗಂಟೆಗೆ ಹೂವಿನ ರಂಗೋಲಿ(ಪೂಕಳಂ) ಸ್ಪರ್ಧೆ ನಡೆಯಲಿದೆ. ನಂತರ ಹಿಂದೂ ಮಲಯಾಳಿ ಸಮುದಾಯದವರಿಂದ ಮೂರ್ನಾಡಿನ ಮುಖ್ಯ ಬೀದಿಯಲ್ಲಿ ನಡೆಯುವ ಮೆರವಣಿಗೆಯಲ್ಲಿ ಕೇರಳದ ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು, ಮಕ್ಕಳು ಮತ್ತು ಮಹನೀಯರು, ಚೆಂಡೆ ಮೇಳದವರು, ಮಾವೇಲಿ ಪಾತ್ರಧಾರಿಗಳು ಪಾಲ್ಗೊಳ್ಳಲಿದ್ದಾರೆ.
ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ. ಬಾಬು ಅಧ್ಯಕ್ಷತೆ ವಹಿಸುವ ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ಶಾಸಕ ಡಾ. ಮಂಥರ್ ಗೌಡ, ಮಾಜಿ ಶಾಸಕ ಅಪ್ಪಚ್ಚು ರಂಜನ್, ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಅಧ್ಯಕ್ಷ ವಿ.ಎಂ ವಿಜಯನ್, ಜಿಲ್ಲಾ ಪೊಲೀಸ್ ವೃತ್ತ ನೀರಿಕ್ಷಕ ಹೆಚ್.ವಿ ಚಂದ್ರಶೇಖರ್, ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಮುಖ್ಯ ಕಾರ್ಯದರ್ಶಿ ಎನ್.ವಿ. ಉನ್ನಿಕೃಷ್ಣ, ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಸ್ಥಾಪಕಾಧ್ಯಕ್ಷ ಕೆ.ಎಸ್. ರಮೇಶ್, ಮಡಿಕೇರಿ ಎಸ್.ಎನ್.ಡಿ.ಪಿ ಅಧ್ಯಕ್ಷ ಟಿ.ಆರ್. ವಾಸುದೇವ್, ಮಡಿಕೇರಿ ಕೆ.ಎನ್.ಎಸ್.ಎಸ್.ನ ಅಧ್ಯಕ್ಷ ಕೆ.ಕೆ. ಹರೀಶ್ ಕುಮಾರ್, ಜಿಲ್ಲಾ ಸಮಿತಿಯ ಮಾಜಿ ಮುಖ್ಯ ಕಾರ್ಯದರ್ಶಿ ಪಿ.ಕೆ. ಶಶಿಕುಮಾರ್, ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ ಪಿ. ರವೀಂದ್ರನ್, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್. ಕುಶನ್ ರೈ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎ. ಹಂಸ ಹೊದವಾಡ, ಹಾಗೂ ವಿಶೇಷ ಆಹ್ವಾನಿತರಾಗಿ ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿಯ ಸದಸ್ಯರಾದ ಆರ್. ಗಿರೀಶ್, ಕೆ.ವಿ. ಸುಬ್ರಮಣಿ ಮತ್ತು ರತಿಕೇಶನ್ ಅವರುಗಳು ಪಾಲ್ಗೊಳ್ಳಲಿದ್ದಾರೆ. ಅಪರಾಹ್ನ ಓಣಂ ಸಧ್ಯ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಚಿತ್ರ & ವರದಿ: ಟಿ.ಸಿ. ನಾಗರಾಜ್, ಮೂರ್ನಾಡು
ಮೂರ್ನಾಡು
17ನೇ ವರ್ಷದ ಓಣಂ ಆಚರಣೆ
ಹಿಂದೂ ಮಲಯಾಳಿ ಸಂಘದ ವತಿಯಿಂದ ಆಯೋಜನೆ
ದಿನಾಂಕ
ದಿನಾಂಕ 28ರಂದು
ಸ್ಥಳ
ಮೂರ್ನಾಡು ಗೌಡ ಸಮಾಜ
ದಿನದ ಕಾರ್ಯಕ್ರಮಗಳು
- 🌼
ಬೆಳಿಗ್ಗೆ 7:30 ಗಂಟೆಗೆ:
ಹೂವಿನ ರಂಗೋಲಿ (ಪೂಕಳಂ) ಸ್ಪರ್ಧೆ ನಡೆಯಲಿದೆ. - 🥁
ನಂತರ:
ಮೂರ್ನಾಡಿನ ಮುಖ್ಯ ಬೀದಿಯಲ್ಲಿ ಮೆರವಣಿಗೆ.
(ಕೇರಳದ ಸಾಂಪ್ರದಾಯಿಕ ಉಡುಪಿನಲ್ಲಿ ಮಹಿಳೆಯರು, ಮಕ್ಕಳು, ಮಹನೀಯರು, ಚೆಂಡೆ ಮೇಳ, ಮಾವೇಲಿ ಪಾತ್ರಧಾರಿಗಳು ಪಾಲ್ಗೊಳ್ಳಲಿದ್ದಾರೆ.) - 🍚
ಅಪರಾಹ್ನ:
ಓಣಂ ಸಧ್ಯ (ಸಾಂಪ್ರದಾಯಿಕ ಭೋಜನ). - 🎭
ಸಧ್ಯದ ನಂತರ:
ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಗೌರವ ಅತಿಥಿಗಳು ಮತ್ತು ಆಹ್ವಾನಿತರು
ಅಧ್ಯಕ್ಷತೆ: ಶ್ರೀ ಕೆ. ಬಾಬು, ಹಿಂದೂ ಮಲಯಾಳಿ ಸಂಘದ ಅಧ್ಯಕ್ಷರು
ಮುಖ್ಯ ಅತಿಥಿಗಳು:
- ಡಾ. ಮಂಥರ್ ಗೌಡ, ಮಡಿಕೇರಿ ಶಾಸಕ
- ಅಪ್ಪಚ್ಚು ರಂಜನ್, ಮಾಜಿ ಶಾಸಕ
- ಕೆ.ಜಿ. ಬೋಪಯ್ಯ, ಮಾಜಿ ವಿಧಾನ ಸಭಾಧ್ಯಕ್ಷ
- ವಿ.ಎಂ ವಿಜಯನ್, ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ
- ಹೆಚ್.ವಿ ಚಂದ್ರಶೇಖರ್, ಜಿಲ್ಲಾ ಪೊಲೀಸ್ ವೃತ್ತ ನಿರೀಕ್ಷಕ
- ಎನ್.ವಿ. ಉನ್ನಿಕೃಷ್ಣ, ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿ ಮುಖ್ಯ ಕಾರ್ಯದರ್ಶಿ
- ಕೆ.ಎಸ್. ರಮೇಶ್, ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿ ಸ್ಥಾಪಕಾಧ್ಯಕ್ಷ
- ಟಿ.ಆರ್. ವಾಸುದೇವ್, ಮಡಿಕೇರಿ ಎಸ್.ಎನ್.ಡಿ.ಪಿ ಅಧ್ಯಕ್ಷ
- ಕೆ.ಕೆ. ಹರೀಶ್ ಕುಮಾರ್, ಮಡಿಕೇರಿ ಕೆ.ಎನ್.ಎಸ್.ಎಸ್.ನ ಅಧ್ಯಕ್ಷ
- ಪಿ.ಕೆ. ಶಶಿಕುಮಾರ್, ಜಿಲ್ಲಾ ಸಮಿತಿಯ ಮಾಜಿ ಮುಖ್ಯ ಕಾರ್ಯದರ್ಶಿ
- ಪಿ. ರವೀಂದ್ರನ್, ಕುಶಾಲನಗರ ಕೇರಳ ಸಮಾಜದ ಅಧ್ಯಕ್ಷ
- ಬಿ.ಎಸ್. ಕುಶನ್ ರೈ, ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ
- ಹೆಚ್.ಎ. ಹಂಸ ಹೊದವಾಡ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ
ವಿಶೇಷ ಆಹ್ವಾನಿತರು (ಹಿಂದೂ ಮಲಯಾಳಿ ಸಂಘದ ಜಿಲ್ಲಾ ಸಮಿತಿ ಸದಸ್ಯರು):
- ಆರ್. ಗಿರೀಶ್
- ಕೆ.ವಿ. ಸುಬ್ರಮಣಿ
- ರತಿಕೇಶನ್

