ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿರಾಷ್ಟ್ರೀಯ ಗ್ರಂಥಾಲಯ ಸಪ್ತಾಹ 2023ರ ಅಂಗವಾಗಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ” ವನ್ನು ಆಚರಿಸಲಾಯಿತು.
ಕಾರ್ಯಕ್ರಮ ದ ಉದ್ಘಾಟನೆ ಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಕುಶನ್ ಬಿ ಎಸ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಮೌಳಿ ಕೆ ಎಂ ನೆರವೇರಿಸಿಕೊಟ್ಟರು . ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು, ಸಾರ್ವಜನಿಕರು, ಪಂಚಾಯಿತಿ ಸಿಬ್ಬಂದಿ ವರ್ಗದವರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ಶ್ರೀಮತಿ ಕೋಮಲ ಟಿ. ಬಿ ಅವರು ಗ್ರಂಥಾಲಯದ ವಿವಿಧ ಡಿಜಿಟಲ್ ಸೇವೆಗಳು ಮತ್ತು ಸದಸ್ಯತ್ವ ನೋಂದಣಿ ಬಗೆಗಿನ ಮಾಹಿತಿಯನ್ನು ತಿಳಿಸಿದರು. ಅಲ್ಲದೆ ಕಾರ್ಯಕ್ರಮದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಗ್ರಂಥಪಾಲಕರಾದ ಶ್ರೀಮತಿ ರಿನೀ, ಮರಗೋಡು ಗ್ರಾಮ ಪಂಚಾಯಿತಿ ಗ್ರಂಥಪಾಲಕರಾದ ಶ್ರೀಮತಿ ವಸಂತಿ, ಮಕ್ಕಂದೂರು ಗ್ರಾಮ ಪಂಚಾಯಿತಿ ಗ್ರಂಥಪಾಲಕರಾದ ಶ್ರೀ ಮತಿ ಗೀತಾ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿ ಗ್ರಂಥಪಾಲಕರಾದ ಶ್ರೀಮತಿ ದಿವ್ಯರವರು ಹಾಜರಿದ್ದರು.
ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಹಿನ್ನಲೆ: 14ನೇ ನವೆಂಬರ್ 1919ಭಾರತೀಯ ಗ್ರಂಥಾಲಯ ಚಳುವಳಿಯಲ್ಲಿಯೇ ಒಂದು ಸುಸ್ಮರಣೀಯ ದಿನ. ಆ ದಿನ ಮೊಟ್ಟ ಮೊದಲ ಅಖಿಲ ಭಾರತ ಸಾರ್ವಜನಿಕ ಗ್ರಂಥಾಲಯದ ಸಮ್ಮೆಳನದ ಉದ್ಘಾಟನೆಯನ್ನು ಮದ್ರಾಸಿನ (ಚೆನ್ನೈ )ಗೋಖಲೆ ಭವನದಲ್ಲಿ ಬರೋಡೆಯ ಗ್ರಂಥಾಲಯಗಳ ನಿರ್ದೇಶಕರಾದ ದಿವಂಗತ ಜೆ. ಎಸ್. ಕುಡಾಲ್ಕರ್ ಅವರು ನೆರವೇರಿಸಿದರು. ಇದರಷ್ಟೇ ಮುಖ್ಯವೆನಿಸುವ ಪಂಡಿತ್ ಜವಹಾರಲಾಲ್ ನೆಹರು ಅವರ ಜನ್ಮ ದಿನ ಕೂಡ 14ನೇ ನವೆಂಬರ್ ಆಗಿದ್ದು, ಅಂದಿನ ದಿನದಿಂದ ಒಂದು ವಾರ ಪೂರ್ತಿ ಗ್ರಂಥಾಲಯ ಸಪ್ತಾಹವೆಂದು ಆಚರಿಸುವುದೆಂದು 1968ರಲ್ಲಿ ತೀರ್ಮಾನಿಸಲಾಯಿತು. ಮಕ್ಕಳು ನೆಹರು ಅವರ ಹೃದಯಕ್ಕೆ ಅತೀ ಸಮೀಪ ವಿದ್ದಂತೆಯೇ ಪುಸ್ತಕಗಳು ಹಾಗೂ ಗ್ರಂಥಾಲಯಗಳು ಸಹ ಮಚ್ಚಿನವಾಗಿದ್ದುದರಿಂದ ನವೆಂಬರ್ 14ರಿಂದಲೇ ಒಂದು ವಾರ ಪೂರ್ತಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹವೆಂದು ಪ್ರತಿ ವರ್ಷವೂ ಆಚರಿಸಬೇಕೆಂದು ಭಾರತೀಯ ಗ್ರಂಥಾಲಯ ಸಂಘವು ತೀರ್ಮಾನಿಸಿರುತ್ತದೆ.