Reading Time: < 1 minute
ಮೂರ್ನಾಡು: ಕೊಡಗು ಮುಸ್ಲಿಂ ಕ್ರಿಕೆಟ್ ಟ್ರಸ್ಟ್ ನ ಸಭೆಯು ಮೂರ್ನಾಡುವಿನ ಉಸ್ತಾದ್ ಹೋಟೆಲ್ ಸಭಾಂಗಣದಲ್ಲಿ ಟ್ರಸ್ಟನ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಕತೂರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಟ್ರಸ್ಟಿನ ಕಾರ್ಯದರ್ಶಿ, ಆದಂ ಕುಶಾಲನಗರ ನಿರ್ವಹಿಸಿದರು.
ಸಭೆಯಲ್ಲಿ ಮುಂದಿನ ವರ್ಷ ನಡೆಯುವ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ಚರ್ಚಿಸಲಾಯಿತು ಟ್ರಸ್ಟಿನ ನೂತನ ಉಪಾಧ್ಯಕ್ಷರಾಗಿ ವಿರಾಜಪೇಟೆ, ರಾಜಿಕ್ ಸಿ.ಎ. ರವರನ್ನು ಆಡಳಿತ ಸರ್ವ ಸದಸ್ಯರ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಅದೇ ರೀತಿ ಟ್ರಸ್ಟ್ ಗೆ ನಿರ್ದೇಶಕರಾಗಿ ಗೋಣಿಕೊಪ್ಪಲುವಿನ ಫೈಜ್ ಅಹಮದ್ರವರನ್ನು ಟ್ರಸ್ಟಿಗೆ ಸೇರಿಸಲಾಯಿತು. ಸಭೆಯಲ್ಲಿ ಮುಸ್ಲಿಂ ಕ್ರಿಕೆಟ್ ಕಪ್ ಸ್ಥಾಪಕ ರಶೀದ್ ಎಡಪಾಲ ಮತ್ತು ಸದಸ್ಯರು ಪಾಲ್ಗೊಂಡಿದ್ದರು.