ಅಣಬೆ ಬೇಸಾಯ Mushroom farming

Reading Time: 6 minutesWhatsApp Links ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ ವಾಟ್ಸಾಪ್ ಚಾನಲ್‌ ಫಾಲೋ ಮಾಡಿ  

WhatsApp Links
WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ
Reading Time: 6 minutes

ಅಣಬೆ ಬೇಸಾಯ

ಅಣಬೆ ಪ್ರಕೃತಿದತ್ತವಾಗಿ ಎಲ್ಲಾ ರೀತಿಯ ಮಣ್ಣು, ಕಾಡು, ಕೃಷಿ ಮತ್ತು ಬರಡು ಭೂಮಿಯಲ್ಲಿ ಎಲ್ಲಾ ಋತುಮಾನದಲ್ಲಿ ವಿಶೇಷವಾಗಿ ಮಳೆಗಾಲದಲ್ಲಿ ಬೆಳೆಯುತ್ತದೆ. ಹಲವಾರು ಜಾತಿಯ ಅಣಬೆಗಳು ಕಾಣಸಿಗುತ್ತದೆಯಾದರೂ ಕೇವಲ 1000 ಜಾತಿಯ ಅಣಬೆಗಳು ಸೇವಿಸಲು ಯೋಗ್ಯವಾಗಿದೆ. ತಂತ್ರಜಾÐನ ಬಳಸಿ ಕೆಲವೊಂದು ಜಾತಿಯ ಅಣಬೆಯನ್ನು ಪೌಷ್ಠಿಕಾಂಶವುಳ್ಳ ಕೃಷಿ ತ್ಯಾಜ್ಯದಲ್ಲಿ ಬೆಳೆಯಬಹುದು.

ಬೆಳೆಯಲು ಯೋಗ್ಯವಾದ ತಳಿಗಳು
ಭಾರತದಲ್ಲಿ 3 ವಿಧದ ಅಣಬೆಗಳನ್ನು ಬೆಳೆಯಲಾಗುತ್ತಿದೆ. ಅವುಗಳೆಂದರೆ,
1. ಬಿಳಿ ಮೊಗ್ಗು ಅಣಬೆ (ಅಗಾರಿಕಸ್ ಬಯೋಸ್ಪೋರಸ್)
2. ಹುಲ್ಲು ಅಣಬೆ (ವೊಲ್‍ವೇರಿಯ ವೊಲ್ವೇಸಿ)
3. ಆಯಿಸ್ಟರ್ ಅಣಬೆ (ಪ್ಲೂರೋಟಸ್)

22ರಿಂದ 250 ಸೆ. ಮಧ್ಯಮ ಉಷ್ಣತೆಯಲ್ಲಿ ಆಯಿಸ್ಟರ್ ಅಣಬೆಯನ್ನು ಬೆಳೆಯಬಹುದು. ಸುಮಾರು 6 ವಿಧದ ತಳಿಗಳಾದ ಪ್ಲೂರೋಟಸ್ ಎಸ್ಟ್ರೀಯಾಟಸ್, ಪ್ಲೂರೋಟಸ್ ಫ್ಲೊರಿಡಾ, ಪ್ಲೂರೋಟಸ್ ಪ್ಲೇಬೆಲೇಟಸ್, ಪ್ಲೂರೋಟಸ್ ಸಿಟ್ರಿನೋಪೀಲೇಟಸ್, ಪ್ಲೂರೋಟಸ್ ಸಜೋರ್‍ಕಾಜು ಮತ್ತು ಪ್ಲೂರೋಟಸ್ ಈವೊಸ್ ಆಯಿಸ್ಟರ್ ಅಣಬೆಯನ್ನು ಕೃತಕವಾಗಿ ಬೆಳೆಯಬಹುದು.

ಆಯಿಸ್ಟರ್ ಅಣಬೆ ಕೃಷಿಯಿಂದಾಗುವ ಅನುಕೂಲಗಳು
• ಕೃಷಿ ತ್ಯಾಜ್ಯ ಬಳಸಿ ಬೆಳೆಯಬಹುದು.
• ಬೇರೆ ಅಣಬೆ ತಳಿಗಳಿಗೆ ಹೋಲಿಸಿದರೆ ರೋಗದ ಬಾಧೆ ಕಡಿಮೆ.
• ಕಡಿಮೆ ಹೂಡಿಕೆಯಿಂದ ಅಣಬೆ ಬೆಳೆಯಬಹುದು.
• ಗ್ರಾಮೀಣ ಪ್ರದೇಶಗಳಿಗೆ ಸೂಕ್ತವಾಗಿದ್ದು, ಸ್ವ-ಉದ್ಯೋಗ ಅವಕಾಶ ಕಲ್ಪಿಸುತ್ತದೆ.

ಬೇಸಾಯ
ಕಚ್ಛಾವಸ್ತುಗಳ ತಯಾರಿ
ಲಿಗ್ನಿನ್ ಮತ್ತು ಸೆಲ್ಯುಲೋಸ್ ಇರುವ ಹುಲ್ಲು, ಗೋಧಿ, ರಾಗಿ ಜೋಳದ ದಂಟು ಮುಂತಾದ ಅನೇಕ ಹೊಸ ಮತ್ತು ಒಣಗಿದ ಕೃಷಿ ಕೃಷಿ ತ್ಯಾಜ್ಯಗಳನ್ನು ಬಳಸಿ ಅಣಬೆಯನ್ನು ಬೆಳೆಯಬಹುದು. ಸುಲಭವಾಗಿ ದೊರೆಯುವ ಭತ್ತದ ಹುಲ್ಲನ್ನು ಸಣ್ಣದಾಗಿ ಕತ್ತರಿಸಿ (2-3” ಅಳತೆಗೆ) 8-10 ತಾಸು ನೀರಿನಲ್ಲಿ ನೆನೆಸಬೇಕು. ಗೋಣಿ ಚೀಲದಲ್ಲಿ ಹುಲ್ಲನ್ನು ತುಂಬಿಸಿ ನೆನೆಸುವುದು ಸುಲಭದ ವಿಧಾನ.

ಪಾಶ್ಚರೀಕರಣ
ಪ್ಯಾಶ್ಚರೀಕರಣದ ಮುಖ್ಯ ಉದ್ಧೇಶ ಸೂಕ್ಷ್ಮ ಹಾನಿಕಾರಕ ಜೀವಾಣುಗಳನ್ನ್ನು ಸಾಯಿಸುವುದು. ಇದರಲ್ಲಿ ಎರಡು ವಿಧಾನಗಳಿವೆ.

1 ಬಿಸಿ ನೀರಿನ ಬಳಕೆ: ಅಗಲ ಬಾಯಿಯಿರುವ ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ಕತ್ತರಿಸಿದ ಹುಲ್ಲಿನ ಒದ್ದೆಯಾದ ಚೀಲವನ್ನು ಬಿಸಿ ನೀರಿನಲ್ಲಿ ಮುಳುಗಿಸಿ, 80 ರಿಂದ 900 ಸೆಲ್ಸಿಯಸ್ ಉಷ್ಣತೆಯಲ್ಲಿ 30-40 ನಿಮಿಷ ಕುದಿಸಬೇಕು. ಇದು ಅತ್ಯಂತ ಜನಪ್ರಿಯ ವಿಧಾನ.

2 ಹಬೆಯ ಬಳಕೆ: ಮುಚ್ಚಿದ ಕೋಣೆಯಲ್ಲಿ ತುಂಬಿದ ಹುಲ್ಲಿನ ಚೀಲಗಳನ್ನು ಕಪಾಟುಗಳಲ್ಲಿ ಅಥವಾ ರಂಧ್ರವಿರುವ ಟ್ರೇಗಳಲ್ಲಿ ಇಡಲಾಗುವುದು. 650 ಸೆಲ್ಸಿಯಸ್ ಉಷ್ಣಾಂಶವಿರುವ ಹಬೆಯನ್ನು ಒತ್ತಡದ ಮುಖಾಂತರ ಕೋಣೆಯಲ್ಲಿ 5-6 ಗಂಟೆ ಹರಿಸಲಾಗುವುದು. ಪಾಶ್ಚರೀಕರಣವಾದ ಹುಲ್ಲನ್ನು ಚೀಲದ ತುಂಬಿಸುವ ಕೋಣೆಗೆ ತಂಪು ಮಾಡಲು ಸ್ಥಳಾಂತರಿಸಲಾಗುವುದು.

ಬೀಜ ಬಿತ್ತನೆ/ ಚೀಲ ತುಂಬುವಿಕೆ
ಅಣಬೆ ಬೀಜ ಬಿತ್ತುವುದನ್ನು ಸ್ಪಾನಿಂಗ್ ಎಂದು ಕರೆಯುತ್ತಾರೆ.
ಪದರದಲ್ಲಿ ಬೀಜ ಬಿತ್ತನೆ: ಇದು ಜನಪ್ರಿಯ ವಿಧಾನ. ಪಾಶ್ಚರೀಕರಿಸಿದ ಹುಲ್ಲು ಕೋಣೆಯ ಉಷ್ಣಾಂಶಕ್ಕೆ ತಂಪಾದ ನಂತರ ಚೀಲಕ್ಕೆ ತುಂಬಿಸಲು ತಯಾರಿ ಮಾಡಿಕೊಳ್ಳಬೇಕು. 16”x 24” ಗಾತ್ರದ ಪ್ಲಾಸ್ಟಿಕ್ ಚೀಲದಲ್ಲಿ 8-10 ಸೆ. ಮೀ. ದಪ್ಪದ 3-5 ಪದರಗಳನ್ನು ತುಂಬಬೇಕು. ಪ್ರತೀ ಪದರಗಳಲ್ಲಿ 40-50 ಗ್ರಾಂ ಅಣಬೆ ಬೀಜವನ್ನು ಹರಡಬೇಕು. ಚೀಲವನ್ನು ಹೆಚ್ಚು ಬಿಗಿಯಾಗಿ ಅಥವಾ ಸಡಿಲವಾಗಿ ತುಂಬಬಾರದು. ಚೀಲವನ್ನು ಕಟ್ಟಿ ಅಣಬೆ ಬೆಳೆಯುವ ಕೋಣೆಗೆ ಸ್ಥಳಾಂತರಿಸಬೇಕು.

ಕಾವು ಕೊಡುವುದು: ಮೈಸೀಲಿಯಂ ಬೆಳೆಯಲು ಬೀಜ ಬಿತ್ತಿದ ಚೀಲಗಳನ್ನು 25-280 ಸೆ. ಉಷ್ಣಾಂಶದಲ್ಲಿ ಇಡಲಾಗುವುದು. ಈ ಸಮಯದಲ್ಲಿ ಕಡಿಮೆ ಗಾಳಿ ಬೆಳಕಿನ ಅವಶ್ಯಕತೆಯಿದೆ. ಉಷ್ಣತೆ ಹೆಚ್ಚಾದಲ್ಲಿ ಸ್ವಚ್ಛ ಗಾಳಿ ಮತ್ತು ನೀರನ್ನು ಉಪಯೋಗಿಸಿ ಉಷ್ಣತೆ ಕಡಿಮೆ ಮಾಡಬೇಕು. 18-20 ದಿನದಲ್ಲಿ ಶಿಲೀಂದ್ರ ನೂಲಿನಂತೆ ಬೆಳೆಯಲು ಪ್ರಾರಂಭಿಸಿ ಚೀಲದೊಳಗೆ ಎಲ್ಲಾ ಕಡೆ ಹರಡಿಕೊಳ್ಳುತ್ತದೆ.

ಕೊಯ್ಲು:
ಮೈಸೀಲಿಯಂ ಎಲ್ಲಾ ಕಡೆ ಹರಡಿದ ಕೆಲ ಸಮಯದಲ್ಲಿ ಅಣಬೆ ಗೋಚರಿಸಲು ಪ್ರಾರಂಭವಾಗುತ್ತದೆ. ಚೀಲವನ್ನು ಈ ಸಮಯದಲ್ಲಿ ಕೊಯ್ಲಿನ ಕೋಣೆಗೆ ವರ್ಗಾಯಿಸಿ ಚೀಲವನ್ನು ತೆಗೆದುಹಾಕಬೇಕು. ಈ ಕೋಣೆಯಲ್ಲಿ ಸ್ವಚ್ಛ ಗಾಳಿ ಮತ್ತು ಮಂದ ಬೆಳಕಿನ ವ್ಯವಸ್ಥೆಯಿರಬೇಕು. ತಾಪಮಾನ 24-260 ಸೆ. ಮತ್ತು ಆದ್ರ್ರತೆ ಶೇಕಡ 80-85 ರಷ್ಟಿರಬೇಕು. ಒಂದು ವಾರದಲ್ಲಿ ಸೂಜಿ ತಲೆಯಂತ ರಚನೆಗಳು ಗೋಚರಿಸುತ್ತವೆ. 3ನೇ ವಾರದಲ್ಲಿ ಅಣಬೆ ಕೊಯ್ಯಲು ತಯಾರಾಗುತ್ತದೆ. ಬೆಳಗಿನ ಸಮಯದಲ್ಲಿ ನೀರು ಚಿಮಿಕಿಸುವುದಕ್ಕಿಂತ ಮೊದಲೆ ಕೊಯ್ಲು ಮಾಡಬೇಕು. 5-6 ದಿನಗಳ ನಂತರ ಪುನಃ ಅಣಬೆಗಳು ಗುಂಪಿನಲ್ಲಿ ಗೋಚರಿಸುತ್ತವೆ. ಅಣಬೆ ಚೀಲಗಳನ್ನು ತೇವಾಂಶದಿಂದಿಡಲು ಸ್ಪ್ರೇಯರ್‍ಗಳನ್ನು ಬಳಸಬೇಕು. ಒಂದು ಚೀಲದಿಂದ 50-60 ದಿನಗಳಲ್ಲಿ 3-4 ಬೆಳೆಗಳನ್ನು ಪಡೆಯಬಹುದು.

ಅಣಬೆಯ ಪೌಷ್ಠಿಕಾಂಶದ ಗುಣ
• ಅಣಬೆ ಕಡಿಮೆ ಕೊಬ್ಬು ಮತ್ತು ಪಿಷ್ಟದ ಅಂಶ ಒಳಗೊಂಡಿದೆ.
• ಇದು ಮಧುಮೇಹಿ ಮತ್ತು ರಕ್ತದೊತ್ತಡ ಇರುವವರಿಗೆ ಒಳ್ಳೆಯ ಆಹಾರ.
• ಹೆಚ್ಚಿನ ತೇವಾಂಶ, ಪ್ರೋಟೀನ್, ನಾರಿನಾಂಶ, ಕಡಿಮೆ ಕೊಬ್ಬು ಮತ್ತು ಕಾರ್ಬೊಹೈಡ್ರೇಟನ್ನು ಒಳಗೊಂಡಿದೆ.
• ಅಣಬೆ ಸಂಪೂರ್ಣ ಸಸ್ಯಹಾರವಾಗಿದೆ. ರುಚಿ ಮತ್ತು ಸುವಾಸನೆಯಿಂದ ಜನಪ್ರಿಯವಗಿದೆ. ಸೂಪ್, ಪುಲಾವ್, ಕಟ್‍ಲೆಟ್, ಬೋಂಡಾ, ಸಾಂಬಾರು, ಸ್ಯಾಂಡ್‍ವಿಚ್, ಸಮೋಸ ಮತ್ತು ಉಪ್ಪಿನಕಾಯಿ ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ.

ನಿರ್ವಹಣೆ
• ಹೊಸ ಕಚ್ಛಾವಸ್ತುಗಳನ್ನು ಬಳಸಬೇಕು.
• ಉತ್ತಮ ಬೆಳೆಗಾಗಿ ನೀರಿನ ನಿರ್ವಹಣೆ ಮಹತ್ತರವಾಗಿದೆ.
• ಕೆಲಸದ ವೇಳೆ ಶುಚಿತ್ವವನ್ನು ಕಾಪಾಡಬೇಕು.
• ಚೀಲ ತುಂಬುವ ಮತ್ತು ಅಣಬೆ ಬೆಳೆಯುವ ಕೋಣೆಗೆ ವಾರಕ್ಕೊಮ್ಮೆ ಪಾರ್ಮಾಲ್ಡಿಹೈಡ್ (5 ಮಿಲಿ/ಲೀ) ಮತ್ತು ಡೈಕ್ಲೋರೋವಾಸ್ (1 ಮಿಲಿ/ಲೀ) ಸಿಂಪಡಿಸಬೇಕು.
• ಕಿಟಕಿ ಬಾಗಿಲುಗಳಿಗೆ ತಂತಿಯ ಬಲೆಗಳನ್ನು ಅಳವಡಿಸಿ ಕೋಣೆಗೆ ಇಲಿ ಮತ್ತು ನೊಣ ಪ್ರವೇಶಿಸದಂತೆ ಎಚ್ಚರ ವಹಿಸಬೇಕು.
• ಒಂದು ಬೆಳೆಯಿಂದ ಇನ್ನೊಂದಕ್ಕೆ ಕನಿಷ್ಟ 3-4 ದಿನಗಳ ಅಂತರವಿಡುವುದರಿಂದ ಬೆಳೆ ಕಲುಷಿತಗೊಳ್ಳುವುದನ್ನು ತಡೆಯಬಹುದು.

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x