ಮೂರ್ನಾಡು ವಿದ್ಯಾಸಂಸ್ಥೆಯ ಕಾಲೇಜಿನ ವಾರ್ಷಿಕೋತ್ಸವ

Reading Time: 2 minutes

ಮೂರ್ನಾಡು: ಮೂರ್ನಾಡು ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜಿನ ನವೀಕೃತಗೊಂಡ ಕಟ್ಟಡದ ಮೇಲ್ಛಾವಣಿಯ ಉದ್ಘಾಟನಾ ಸಮಾರಂಭ ಮತ್ತು ಕಾಲೇಜಿನ ವಾರ್ಷಿಕೋತ್ಸವ ಇತ್ತೀಚೆಗೆ ಜರುಗಿತು.

ಮೈಸೂರಿನ ನಾರಾಯಣ ಹಾಸ್ಪಿಟಲ್‌ನ ರೀಜನಲ್ ಹೆಚ್.ಆರ್ ಆದ ಮಾಳೇಟಿರ ನಿರ್ಮಲಾ ಮಾದಪ್ಪ ಕಾಲೇಜಿನ ನವೀಕೃತಗೊಂಡ ಕಟ್ಟಡದ ಮೇಲ್ಛಾವಣಿಯನ್ನು ಉದ್ಘಾಟಿಸಿ ವಿದ್ಯಾಸಂಸ್ಥೆಯ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು ನಾನು ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಯಾಗಿದ್ದು, ನಾರಾಯಣ ಹಾಸ್ಪಿಟಲ್ಸ್ ಮೂಲಕ ಕಾಲೇಜಿನ ಕಟ್ಟಡದ ಮೇಲ್ಛಾವಣಿಯನ್ನು ನವೀಕರಣಗೊಳಿಸಲು ಒಂದು ಸದಾವಕಾಶ ಸಿಕ್ಕಿದ್ದು, ವಿದ್ಯೆ ಕಲಿಸಿದ ಸಂಸ್ಥೆಯ ಬೆಳವಣಿಗೆಗೆ ಕೈ ಜೋಡಿಸಲು ತುಂಬಾ ಸಂತೋಷವಾಗುತ್ತದೆ. ಜಿಲ್ಲೆಯಲ್ಲಿ ಈ ವಿದ್ಯಾಸಂಸ್ಥೆಯು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ವಿದ್ಯಾರ್ಥಿಗಳು ಈ ವಿದ್ಯಾಸಂಸ್ಥೆಯ ಸದುಪಯೋಗ ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ಬದುಕು ರೂಪಿಸಿಕೊಂಡು, ತನಗೆ ವಿದ್ಯೆ ನೀಡಿದ ಸಂಸ್ಥೆಯ ಶ್ರೇಯಸ್ಸನ್ನು ಬಯಸುವಂತಾಗಬೇಕು. ಶಿಕ್ಷಣದಿಂದ ಮಾತ್ರ ಸಾಧನೆಗೈಲು ಸಾಧ್ಯ ಎಂದು ಹೇಳಿದರು.

WhatsApp Group Banner

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌

ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿ

ಸರ್ಚ್‌ ಕೊಡಗು ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌

ವಾಟ್ಸಾಪ್ ಚಾನಲ್‌ ಫಾಲೋ ಮಾಡಿ

ಸಮಾರಂಭದ ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಸಿ. ಜಗತ್ ತಿಮ್ಮಯ್ಯ ವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಎನ್.ಪಿ. ಮಾದಪ್ಪ, ಕಾರ್ಯದರ್ಶಿ ಪಿ.ಎಂ. ಅಪ್ಪಣ್ಣ, ಖಜಾಂಚಿ ವಿ.ಎ. ಯತೀಶ್, ನಿರ್ದೇಶಕರಾದ ಇ.ಯು. ಸೋಮಣ್ಣ, ಪುದಿಯೊಕ್ಕಡ. ಎ. ಹರೀಶ್, ಪಿ.ಎ. ಹರೀಶ್, ಎಂ.ಕೆ. ಚಂಗಪ್ಪ, ಕೆ.ಜಿ. ರಾಮಮೂರ್ತಿ, ಕಾಲೇಜಿನ ಪ್ರಾಂಶುಪಾಲೆ ಪಿ.ಎಂ. ದೇವಕ್ಕಿ ಮತ್ತು ರೈಡ್ ಫಾರ್ ಕಾಸ಼್ನ ಎನ್‌ಜಿಒ ಸದಸ್ಯರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲೆ ಬಿ.ಎಂ. ಸರಸ್ವತಿ, ನಾರಾಯಣ ಹಾಸ್ಪಿಟಲ್‌ನ ಸಿಎಸ್‌ಆರ್ ಫಂಡ್‌ನಿAದ ಕಟ್ಟಡ ನವೀಕರಣಕ್ಕೆ ಸಹಾಯ ನೀಡಿದ ನಾರಾಯಣ ಹಾಸ್ಪಿಟಲ್‌ನ ಯುನಿಟಿ ಹೆಡ್ ಪವನ್ ಕುಮಾರ್ ಮತ್ತು ಮಾಳೇಟಿರ ನಿರ್ಮಲಾ ಮಾದಪ್ಪ ಅವರುಗಳನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.

ವರದಿ: ಟಿ.ಸಿ. ನಾಗರಾಜ್, ಮೂರ್ನಾಡು

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x