ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿReading Time: < 1 minute
ಮೂರ್ನಾಡು: ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಭಾರತೀಯ ನೃತ್ಯ ಕಲಾ ಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ಶೇಕಡ. 100% ರಷ್ಟು ಫಲಿತಾಂಶವನ್ನು ನೀಡಿದ್ದಾರೆ.
ನೃತ್ಯ ಕಲಾ ಶಾಲೆಯ ಮೂರ್ನಾಡಿನ ವಿದ್ಯಾರ್ಥಿಗಳಾದ ವಿ.ವಿ. ಭಾರ್ಗವಿ, ಕೆ.ಎಂ. ಸೃಷ್ಟಿ, ಪಿ.ಟಿ. ಸವಿನ ಮತ್ತು ಸಿದ್ದಾಪುರದ ವಿದ್ಯಾರ್ಥಿಗಳಾದ ವಿ.ಜೆ. ಸೌಜನ್ಯ, ಕೆ.ಕೆ. ದಿವ್ಯ, ಬಿ. ಸಾನಿಕ ಇವರುಗಳು ಉನ್ನತ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ.
ವಿ.ವಿ. ಭಾರ್ಗವಿ ಶೇಕಡ. 90.3 ಅಂಕಗಳನ್ನು ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾಳೆ ಎಂದು ಭಾರತೀಯ ನೃತ್ಯ ಕಲಾ ಶಾಲೆಯ ನೃತ್ಯ ಗುರು ವಿದುಷಿ ಜಲಜ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಟಿ.ಸಿ. ನಾಗರಾಜ್, ಮೂರ್ನಾಡು.