ಮಡಿಕೇರಿ ದಸರಾ 2026: ಶತಮಾನಗಳ ಇತಿಹಾಸ, 4 ಕರಗಗಳು, 10 ಮಂಟಪಗಳು ಮತ್ತು 10 ದಿನಗಳ ಸಂಪೂರ್ಣ ಮಾಹಿತಿ 🌺✨
ಮಡಿಕೇರಿ ದಸರಾ - 2026
ನಾಡಹಬ್ಬದ ಸಂಭ್ರಮಕ್ಕೆ ಸುಸ್ವಾಗತ!
✨ ಎಲ್ಲಿಯಾದರೂ ಟ್ಯಾಪ್ ಮಾಡಿ ಪಟಾಕಿ ಹಾರಿಸಿ ✨
🪔 ಮಡಿಕೇರಿ ದಸರಾ ಮಂಗಳ ದೀಪೋತ್ಸವ
ಸರ್ಚ್ ಕೂರ್ಗ್ ಸುದ್ದಿ ಅಪ್ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ದೀಪವನ್ನು ಸ್ಪರ್ಶಿಸಿ ಅಥವಾ ಬಟನ್ ಒತ್ತಿ ಶಕ್ತಿ ದೇವತೆಯ ಕೃಪೆಗೆ ಪಾತ್ರರಾಗಿ
ದೀಪೇನ ಸಾಧ್ಯತೇ ಸರ್ವಂ ಸಂಧ್ಯಾ ದೀಪೋ ನಮೋಸ್ತುತೇ ||"

ಪ್ರಾಸ್ತವಿಕ
🌺 ಮಡಿಕೇರಿ ದಸರಾ ನಾಡಹಬ್ಬದ 26 ನೇ ವರ್ಷದ ವಿಶೇಷ ಸಂಚಿಕೆ 🎉
"ಮಡಿಕೇರಿ ದಸರಾ ಮಹೋತ್ಸವ"ಕ್ಕೆ 236ನೇ ವರ್ಷದ ದೈವಿಕ ಸಂಭ್ರಮ!
ಮಡಿಕೇರಿ "ದಸರಾ ಜನೋತ್ಸವ"ಕ್ಕೆ 62ನೇ ವರ್ಷದ ಲೋಕೋತ್ಸವ ಸಂಭ್ರಮ!
ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು 🐘 ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲೂ, ಇತರ ಜಿಲ್ಲೆಗಳಿಂದಲೂ, ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು 👥 ವೀಕ್ಷಿಸಲು ಬರುತ್ತಿದ್ದಾರೆ.
ಮಹಾಲಯ ಅಮವಾಸೆಯ ಮಾರನೆಯ ದಿನದಿಂದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು 🌸 ಸಿಂಗರಿಸಿ ಮೆರವಣಿಗೆಯ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಹಬ್ಬಕ್ಕೆ ಚಾಲನೆ ದೊರೆಯಲ್ಪಡುತ್ತದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದೊಂದಿಗೆ ಹತ್ತನೇ ದಿನದ ವಿಜಯದಶಮಿಯಂದು ನಗರದ ದಶದೇಗುಲಗಳ ದಶಮಂಟಪಗಳೊಂದಿಗೆ 🛕, ನಾಲ್ಕು ಶಕ್ತಿ ದೇವತೆಗಳ ಕರಗಗಳ ಭವ್ಯ ಶೋಭಾಯಾತ್ರೆಯು 🎺🥁 ನಡೆಯಲ್ಪಡುತ್ತದೆ.


🌺 ಮಡಿಕೇರಿ ದಸರಾ 🎉
ಇತಿಹಾಸ, ಮಹತ್ವ ಮತ್ತು ವೈಶಿಷ್ಟ್ಯಗಳು 🏛️
ವಿಜಯದಶಮಿಯಂದು ರಾತ್ರಿ 10 ಗಂಟೆಗೆ ಪ್ರಾರಂಭವಾಗುವ ಶೋಭಾಯಾತ್ರೆಯು ಮಾರನೆಯ ದಿನ ಸಂಜೆಯವರೆಗೂ ನಡೆಯುತ್ತದೆ 🥁. ಈ ಶೋಭಾಯಾತ್ರೆಯು ಮೈಸೂರು ದಸರೆಯ ಶೋಭಾಯಾತ್ರೆಗಿಂತಲೂ ಭಿನ್ನವಾಗಿರುತ್ತದೆ. ಇದೇ ಮಡಿಕೇರಿ ದಸರಾ ಮಹೋತ್ಸವದ ವಿಶಿಷ್ಟತೆ ✨.
ಮಡಿಕೇರಿ ದಸರಾ ನಾಡಹಬ್ಬದ ಬಗ್ಗೆ ವಿವರಗಳನ್ನು ನಿಮಗೆ ತಿಳಿಸುವ ಜೊತೆಯಲ್ಲೆ ಮಡಿಕೇರಿ ದಸರಾ ಪ್ರಾರಂಭವಾದ ಇತಿಹಾಸದ ಬಗ್ಗೆ ಹೇಳಬೇಕಾಗಿದೆ 📖. ಇಲ್ಲಿಯವರೆಗೆ ಮಡಿಕೇರಿ ದಸರಾ ನಾಡಹಬ್ಬ ಪ್ರಾರಂಭವಾದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ, ಆದರೆ ಇದರ ಬಗ್ಗೆ ಒಂದು ಅಧ್ಯಯನ ನಡೆಸಿದಾಗ ಕೆಲವು ಮಹತ್ತರವಾದ ಅಂಶಗಳು ಮಡಿಕೇರಿ ದಸರಾ ಪ್ರಾರಂಭದ ಬಗ್ಗೆ ಇತಿಹಾಸದ ಪುಟಗಳಿಂದ ದೊರೆಯುತ್ತದೆ 🏛️.
🌸 ಈ ಕುರಿತು ಮಡಿಕೇರಿ ದಸರಾ ಪ್ರಾರಂಭವಾದ ಹಿನ್ನಲೆ, ಇತಿಹಾಸದ ಬಗ್ಗೆ, ಶಕ್ತಿ ದೇವತೆಗಳ ಕರಗಗಳ ಇತಿಹಾಸ 🔱, ದಶದೇಗುಲಗಳ 🛕, ದಶಮಂಟಪಗಳ ಬಗ್ಗೆ 🎪 ವಿವರಗಳನ್ನು ಇಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ! ✨
🌺 1790 ರಲ್ಲಿ ಪ್ರಾರಂಭಗೊಂಡ "ಮಡಿಕೇರಿ ದಸರಾ ಮಹೋತ್ಸವ"ಕ್ಕೆ 236ನೇ ವರ್ಷದ ಸಂಭ್ರಮ 🎉
236 ವರ್ಷಗಳ ದೈವಿಕ ಇತಿಹಾಸ ಹಾಗೂ ಸಾಂಸ್ಕೃತಿಕ ಭವ್ಯತೆ! 🏛️✨
ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು 🐘 ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು 👥 ವೀಕ್ಷಿಸಲು ಬರುತ್ತಿದ್ದಾರೆ.
ಮಹಾಲಯ ಅಮವಾಸೆಯ ಮಾರನೆಯ ದಿನದಿಂದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು 🌸 ಸಿಂಗರಿಸಿ ಮೆರವಣಿಗೆಯ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಹಬ್ಬಕ್ಕೆ ಚಾಲನೆ ದೊರೆಯಲ್ಪಡುತ್ತದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದೊಂದಿಗೆ ಹತ್ತನೇ ದಿನದ ವಿಜಯದಶಮಿಯಂದು ನಗರದ ದಶದೇಗುಲಗಳ ದಶಮಂಟಪಗಳೊಂದಿಗೆ 🛕, ನಾಲ್ಕು ಶಕ್ತಿ ದೇವತೆಗಳ ಕರಗಗಳ ಭವ್ಯ ಶೋಭಾಯಾತ್ರೆಯು 🎺🥁 ನಡೆಯಲ್ಪಡುತ್ತದೆ.


🌺 ಐತಿಹಾಸಿಕ ನಾಡಹಬ್ಬದ ಪ್ರಮುಖ ದಿನಾಂಕಗಳು 🏛️
🗓️ ತಾ|| 11-10-2026 ರಂದು ಸಂಜೆ 4 ಗಂಟೆಗೆ ಇತಿಹಾಸ ಪ್ರಸಿದ್ಧ ಮಡಿಕೇರಿಯ ಗದ್ದುಗೆ ಬಳಿಯಿರುವ ಪಂಪಿನ ಕೆರೆಯ ಬಳಿ 🏞️ ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಸಿಂಗರಿಸಿ 🔱 ಮಡಿಕೇರಿ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ 🥁. ಅಲ್ಲಿಂದ 9 ದಿನಗಳ ನವರಾತ್ರಿ ಉತ್ಸವದೊಂದಿಗೆ 🌸, ತಾ|| 20-10-2026 ರ ಆಯುಧಪೂಜಾ ಮಹೋತ್ಸವ ⚔️ ಹಾಗೂ ತಾ|| 21-10-2026 ರ ರಾತ್ರಿ 10 ಗಂಟೆಯಿಂದ ನಾಲ್ಕು ಶಕ್ತಿದೇವತೆಗಳ ಕರಗಗಳೊಂದಿಗೆ ನಗರದ ದಶದೇಗುಲಗಳ ದಶಮಂಟಪಗಳ ಭವ್ಯ ಶೋಭಾಯಾತ್ರೆಯು 🎪🛕 ಮಡಿಕೇರಿ ನಗರದಲ್ಲಿ ಅದ್ಧೂರಿಯಾಗಿ ಜರುಗಲಿದೆ 🎺. ತಾ|| 22-10-2026 ರಂದು ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಪವಿತ್ರ ಪೂಜೆಯೊಂದಿಗೆ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ವಿಧ್ಯುಕ್ತ ತೆರೆ ಬೀಳಲಿದೆ 🌾✨.
ಕರಗೋತ್ಸವ ಚಾಲನೆ
🏞️ ಪಂಪಿನ ಕೆರೆಯಿಂದ ನಾಲ್ಕು ಶಕ್ತಿದೇವತೆಗಳ ಕರಗಗಳ ಪೂಜೆ ಮತ್ತು ನಗರ ಸಂಚಾರದೊಂದಿಗೆ ದಸರೆಗೆ ಅಧಿಕೃತ ಚಾಲನೆ.
ದಶಮಂಟಪ ಶೋಭಾಯಾತ್ರೆ
⚔️ 20ರಂದು ಆಯುಧಪೂಜೆ; 21ರ ರಾತ್ರಿಯಿಡೀ ಭವ್ಯ ಬೆಳಕಿನ ದಶಮಂಟಪಗಳ ಜಾಗರಣೆ ಶೋಭಾಯಾತ್ರೆ 🥁🎺.
ಬನ್ನಿ ಕಡಿಯುವ ಪೂಜೆ
🌾 ಐತಿಹಾಸಿಕ ಬನ್ನಿ ಮಂಟಪದಲ್ಲಿ ಬನ್ನಿ ಕಡಿದು ವಿಜಯೋತ್ಸವದೊಂದಿಗೆ ನಾಡಹಬ್ಬಕ್ಕೆ ವಿಧ್ಯುಕ್ತ ಮುಕ್ತಾಯ ✨.


ಶಕ್ತಿ ದೇವತೆಗಳ ಕರಗೋತ್ಸವ ಪವಿತ್ರ ಅಧ್ಯಾಯಗಳು ಮತ್ತು ಇತಿಹಾಸ 🌺
ನಾಲ್ಕು ಶಕ್ತಿ ದೇವತೆಗಳ ಧಾರ್ಮಿಕ ವಿಧಿವಿಧಾನಗಳು ಹಾಗೂ ಜನೋತ್ಸವದ ಸಮಗ್ರ ನೋಟ 🙏

ಮಡಿಕೇರಿ ದಸರಾ ಇತಿಹಾಸ ಐತಿಹಾಸಿಕ ಹಿನ್ನೆಲೆ & ಪರಂಪರೆ 📜
ರಾಜರ ಕಾಲದಿಂದ ಇಂದಿನವರೆಗೆ ನಡೆದುಬಂದ ವೈಭವದ ಸಾಂಸ್ಕೃತಿಕ ಪಯಣ 👑

ಕೊಡಗಿನ ನವರಾತ್ರಿ ಉತ್ಸವ ರಾಜವಂಶಗಳ ಐತಿಹಾಸಿಕ ಹಿನ್ನೆಲೆ 👑
ಗಂಗ, ಚೆಂಗಾಳ್ವ ಹಾಗೂ ವಿಜಯನಗರ ಅರಸರ ಕಾಲದಿಂದ ನಡೆದುಬಂದ ದಸರಾ ಸಂಪ್ರದಾಯ 📜

ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಗ್ರ ವಿವರಗಳು & ವೇದಿಕೆ ಸಂಭ್ರಮ 🎭
ಸಂಗೀತ, ನೃತ್ಯ, ಜಾನಪದ ಕಲೆ ಹಾಗೂ ಸಾಂಸ್ಕೃತಿಕ ರಸಮಂಜರಿ ಕಾರ್ಯಕ್ರಮಗಳ ಪಟ್ಟಿ 🎶💃



Good