ಮಡಿಕೇರಿ: ಕರಗ ಶಕ್ತಿ ದೇವತೆಗಳ ಇತಿಹಾಸ
ಕೊಡಗಿನ ಜನರಿಂದ ಪ್ರತಿಷ್ಠಾಪಿಸಲ್ಪಟ್ಟು ಮಡಿಕೇರಿ ನಗರದಲ್ಲಿ ನೆಲೆಸಿದ್ದ ಐದು ಶಕ್ತಿದೇವತೆಗಳಾದ “ಮಡಿಕೇರಿ ನಗರದ ಆದಿ ದೇವತೆ ಕರವಲೆ ಶ್ರೀ ಮಹಿಷಮರ್ದಿನಿ ಭಗವತಿ, ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕೋಟೆಮಾರಿಯಮ್ಮ, ಮತ್ತು ಶ್ರೀ ಕಂಚಿಕಾಮಾಕ್ಷಿಯಮ್ಮ” ಇದರಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ಹಾಗೂ ಆದಿ ದೇವತೆ ಕರವಲೆ ಶ್ರೀ ಮಹಿಷಮರ್ದಿನಿ ಭಗವತಿ ಅಮ್ಮನವರು ನೂರಾರು ವರ್ಷಗಳಿಂದ ನಗರದ ಜನತೆಯ ಎಲ್ಲಾ ಸಂಕಷ್ಟಗಳನ್ನು ನಿವಾರಿಸುವುದರ ಮೂಲಕ ನಾಡಿನ ನೆಚ್ಚಿನ ಆರಾಧ್ಯ ದೈವರಾಗಿ ಮೆರೆಯುತ್ತಿದ್ದಾರೆ. ಈ ಶಕ್ತಿ ದೇವತೆಗಳಿರುವುದರಿಂದ ನಾಡಿಗೆ ಯಾವ ಆಪತ್ತುಗಳಾಗಲಿ ಮಾರಕ ಸಾಂಕ್ರಾಮಿಕ ರೋಗಗಳಾಗಲಿ ಬರುವುದಿಲ್ಲವೆಂದು ನಾಡಿನ ಜನತೆಯ ಬಲವಾದ ನಂಬಿಕೆ.
ನೂರಾರು ವರ್ಷಗಳ ಹಿಂದೆ ಕೊಡಗಿನ ಮಡಿಕೇರಿ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಶಕ್ತಿ ದೇವತೆಗಳ ಕರಗಗಳನ್ನು ಅಲಂಕರಿಸಿ ನಗರ ಪ್ರದಕ್ಷಿಣೆ ಮಾಡಿಸಿದರು. ಪವಾಡವೆಂಬಂತೆ ಸಾಂಕ್ರಾಮಿಕ ರೋಗಗಳಿಂದ ನಗರ ಮುಕ್ತವಾಯಿತು. ಈ ಸಂಪ್ರದಾಯವನ್ನು ನೂರಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಮಹಾಯುದ್ಧಗಳ ಸಮಯದಲ್ಲಿಯೂ ಮಡಿಕೇರಿ ದಸರಾ ಕರಗ ಹೊರಡಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ. ಮಹಾಲಯ ಅಮಾವಾಸ್ಯೆ ಮರುದಿನ ಸಾಂಪ್ರದಾಯಿಕ ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ. ಅಂದು ನಾಲ್ಕು ಕರಗಗಳು ಪೇಟೆ ಶ್ರೀ ರಾಮ ಮಂದಿರ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತದೆ. ಇದಕ್ಕೂ ಒಂದು ಪೌರಾಣಿಕ ಹಿನ್ನಲೆ ಇದೆ. ಶಕ್ತಿ ಮಾತೆ ಎಂದರೆ (ಪಾರ್ವತಿ) ದುಷ್ಟ ಸಂಹಾರಕ್ಕೆ ಹೊರಡುವ ಮೊದಲು ದೇವಾನುದೇವತೆಗಳಿಂದ ವಿವಿಧ ಆಯುಧಗಳನ್ನು ಪಡೆದುಕೊಳ್ಳುತ್ತಾಳೆ. ಆ ಸಮಯದಲ್ಲಿ ದೇವಿ ಮೊದಲು ಹೋಗುವುದು ತನ್ನ ಅಣ್ಣನಾದ ವಿಷ್ಣುವಿನಲ್ಲಿಗೆ. ಈ ಹಿನ್ನಲೆಯಲ್ಲಿ ದೇವತೆಗಳು ನವರಾತ್ರಿ ಸಂದರ್ಭ ಕರಗಗಳು ಐದು ದಿನಗಳ ಕಾಲ ನಗರ ಸಂಚಾರ ಮಾಡುತ್ತವೆ. ಕೊನೆಗೆ ವಿಜಯದಶಮಿಯಂದು ದಶಮಂಟಪಗಳ ಜೊತೆಗೂಡಿ ಬನ್ನಿ ಮಂಟಪಕ್ಕೆ ತೆರಳಿ ಬನ್ನಿ ಕಡಿದು ನವರಾತ್ರಿ ದಸರಾ ಮಹೋತ್ಸವವು ಸಂಪನ್ನಗೊಳ್ಳುತ್ತದೆ.
*ಹಕ್ಕುಗಳನ್ನು ಕಾಯ್ದಿರಿಸಲಾಗಿದೆ*
ಇಲ್ಲಿ ಪ್ರಕಟಣೆಗೊಂಡಿರುವ ಮಾಹಿತಿಗಳ ಹಕ್ಕುಗಳನ್ನು, ‘ರಾಷ್ಟ್ರ ಜಾಗೃತಿ’ ಪತ್ರಿಕೆ ಹಾಗೂ SEARCH COORG MEDIA ಕಾಯ್ದಿರಿಸಲಾಗಿದೆ. ಇಲ್ಲಿ ಪ್ರಕಟಣೆಗೊಂಡಿರುವ ಮಾಹಿತಿಯನ್ನು ಯಾವುದೇ ರೀತಿಯ ಮಾಧ್ಯಮದಲ್ಲಿ ಪ್ರಕಟ ಪಡಿಸಲು ಅಥವಾ ಪ್ರಸಾರ ಪಡಿಸಲು ‘ರಾಷ್ಟ್ರ ಜಾಗೃತಿ’ ಪತ್ರಿಕೆ ಹಾಗೂ SEARCH COORG MEDIA ಸಂಸ್ಥೆಯ ಅಪ್ಪಣೆಯನ್ನು ಪಡೆಯ ಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ EMAIL : searchcoorg@gmail.com , MOb: 9483047519
ಮಡಿಕೇರಿ ದಸರಾ 2025
ಪೌರಾಣಿಕ ಕಥೆಗಳು, ಅದ್ಭುತ ಆಚರಣೆಗಳು ಮತ್ತು ಸಾಂಸ್ಕೃತಿಕ ವೈಭವದ ಹಬ್ಬ.
ಮಡಿಕೇರಿ ದಸರಾ 2025ರ ಹೆಚ್ಚಿನ ಮಾಹಿತಿಗಾಗಿ ಡೌನ್‌ಲೋಡ್ ಮಾಡಿ ಸರ್ಚ್ ಕೂರ್ಗ್ App
ಪ್ರಮುಖ ಮಾಹಿತಿ
- •
ದಸರಾ ಉತ್ಸವ: ಮಡಿಕೇರಿ ದಸರಾ ಉತ್ಸವವು ನಾಲ್ಕು ಶಕ್ತಿ ದೇವತೆಗಳ ಆರಾಧನೆ ಮತ್ತು ಹತ್ತು ದಿನಗಳ ವೈಭವದ ಉತ್ಸವಕ್ಕೆ ಹೆಸರುವಾಸಿಯಾಗಿದೆ.
- •
ಜೀವಂತ ದೃಶ್ಯಗಳು: ವಿಶಿಷ್ಟವಾದ ಕಲಾ ಪ್ರಕಾರಗಳು, ಪೌರಾಣಿಕ ಕಥೆಗಳನ್ನು ಆಧರಿಸಿದ ಅದ್ಭುತ ದೃಶ್ಯಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಳ್ಳುತ್ತವೆ.
- •
ಕರಗ ಮಹೋತ್ಸವ: ಈ ಹಬ್ಬದ ಪ್ರಮುಖ ಆಕರ್ಷಣೆಯಾದ ಕರಗ ಮಹೋತ್ಸವವು ರಾತ್ರಿಪೂರ್ತಿ ನಡೆಯುವ ವರ್ಣರಂಜಿತ ಮೆರವಣಿಗೆಯಾಗಿದೆ.


