ನರಿಯಂದಡ (ಚೆಯ್ಯಂಡಾಣೆ) - NARIYANDADA (Cheyandane)

ನರಿಯಂದಡ ಗ್ರಾಮ ಪಂಚಾಯತಿಯು ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ.ಸದರಿ ಗ್ರಾಮ ಪಂಚಾಯತಿಯು ವಿರಾಜಪೇಟೆ ತಾಲ್ಲೂಕಿಗೆ ಹತ್ತಿರವಾಗಿರುತ್ತದೆ.ಗ್ರಾಮ ಪಂಚಾಯತಿ ವ್ಯಾಪ್ತಿಯು ಒಟ್ಟು 7991 ಹೆಕ್ಟೇರ್ ಭೂ ಪ್ರದೇಶವನ್ನು ಹೊಂದಿರುತ್ತದೆ. ಗ್ರಾಮ ಪಂಚಾಯತಿಯ ೊಟ್ಟು ಜನಸಂಖ್ಯೆ 5605 ಆಗಿರುತ್ತದೆ. ಈ ಪೈಕಿ ಪರಿಶಿಷ್ಟ ಜಾತಿ 532, ಪರಿಶಿಷ್ಟ ಪಂಗಡ 248 ಹಾಗೂ ಇತರೇ ಜನಾಂಗದ ಜನಸಂಖ್ಯೆ4825 ಆಗಿರುತ್ತದೆ. ಗ್ರಾಮ ಪಂಚಾಯತಿಯಲ್ಲಿ ಪರಿಸಿಷ್ಟ ಜಾತಿ ಪರಿಸಿಷ್ಟ ಪಂಗಡ ಎಂದರೆ ಕುಡಿಯರು, ಮೇದರು ಅಲ್ಲದೆ ಕೊಡವರು, ಗೌಡರು ಹಾಗೂ ಮುಸ್ಲಿಂ ಜನಾಂಗಕ್ಕೆ ಸೇರಿದವರು ಇದ್ದಾರೆ. ಇದರಲ್ಲಿ ಶೇ 70%ರಷ್ಟು ಜನರು ಕೃಷಿಯನ್ನು ಅವಲಂಬಿಸಿರುತ್ತಾರೆ. ಶೇ 25%ರಷ್ಟು ಜನರು ಕೂಲಿಯನ್ನು ಅವಲಂಬಿಸಿರುತ್ತಾರೆ.ಉಳಿದ ಶೇ. 5%ರಷ್ಟು ಜನರು ಸರ್ಕಾರಿ ನೌಕರರು ಹಾಗೂ ಇನ್ನಿತರ ಕುಶಲ ಕರ್ಮಿ ಕುಟುಂಬದವರಾಗಿರುತ್ತಾರೆ.
ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಂದಾಯ ಗ್ರಾಮಗಳಾದ,ಕರಡ ನರಿಯಂದಡ,ಚೇಲವಾರ,ಕೋಕೇರಿ ಅರಪಟ್ಟು,ಸೇರಿದಂತೆ ಪೊದವಾಡ ಎಂಬ ಉಪಗ್ರಾಮವು ಸೇರಿರುತ್ತದೆ. ಹಚ್ಚ ಹಸಿರು ಕೊಡಗು ಜಿಲ್ಲೆಯ ಬೆಟ್ಟಗುಡ್ಡಗಳಿಂದ ಕೂಡಿದ ಮಡಿಕೇರಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಲ್ಲಿ ನರಿಯಂದಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಚೇಲವಾರ ಮತ್ತು ಕರಡ ಗ್ರಾಮದ ಸುತ್ತಲೂ ಬೆಟ್ಟಗುಡ್ಡಗಳು ಆವರಿಸಿದೆ.ಚೇಲವಾರ ಗ್ರಾಮದಲ್ಲಿ ನೋಡಲು ಅಂದವಾದ ಜಲಪಾತವು ಇದೆ.ಈ ಜಲಪಾತವನ್ನು ಹೊರ ಜಿಲ್ಲೆಗಳಿಂದ ಅನೇಕ ಪ್ರವಾಸಿಗರು ಬಂದು ನೋಡಿ ಆನಂದ ಪಡುತ್ತಾರೆ.
ಜನವರಿ 31ಶುಕ್ರವಾರದಿಂದ ಕಡಂಗ ಕೊಕ್ಕಂಡಬಾಣೆ ಮಖಾಂ ಊರೂಸ್
ಕಡಂಗ: ಇತಿಹಾಸ ಪ್ರಸಿದ್ಧ ಕಡಂಗ ಕೊಕ್ಕ0ಡ ಬಾಣೆ ಊರೂಸ್ ಕಾರ್ಯಕ್ರಮವು ಜನವರಿ 31 ಶುಕ್ರವಾರ ದಿಂದ ಫೆಬ್ರವರಿ 04 ಮಂಗಳವಾರದ ವರೆಗೆ ನೆಡೆಯಲಿದೆ. ಶುಕ್ರವಾರದ ಜುಮಾ ನಮಾಜಿನ ಬಳಿಕ ಮುಹಿಯದ್ದಿನ್ ಜುಮಾ ಮಸೀದಿಯಿಂದ ಭಂಡಾರ ಹೊತ್ತು ಕೊಕ್ಕಂಡ ಬಾಣೆ ದರ್ಗಾದವರೆಗೆ ಬೃಹತ್ ಮೆರವಣಿಗೆ ನೆಡೆಸಲಾಗುವುದು. ತದನಂತರ ಮಖಾಂ ಅಲಂಕಾರ ಮತ್ತು ಪ್ರಾರ್ಥನೆಗೆ ಮುಹಿಯದ್ದೀನ್ ಜುಮಾ ಮಸೀದಿ ಖತೀಬ್ ಉಸ್ತಾದರಾದ ರಫೀಕ್ ಲತೀಫ್ ನೇತೃತ್ವಗೈಲಿದ್ದಾರೆ. ಊರೂಸ್ ನ ಧ್ವಜರೋಹಣ ಕಾರ್ಯಕ್ರಮವನ್ನು ಅಧ್ಯಕ್ಷರಾದ ಕುಂಜಿ ಅಬ್ದುಲ್ಲ ಪಿ ಎಂ ರವರು [...]
ಸರಕಾರಕ್ಕೆ ಮನವಿ ಮಾಡಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಒತ್ತಡ ತರಲಾಗಿದೆ; ಪೆಮ್ಮಂಡ ಕಾವೇರಮ್ಮ ದಿನೇಶ್
ಸರಕಾರಕ್ಕೆ ಮನವಿ ಮಾಡಿ ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಿಸಲು ಒತ್ತಡ ತರಲಾಗಿದೆ; ಪೆಮ್ಮಂಡ ಕಾವೇರಮ್ಮ ದಿನೇಶ್ ಪೆಮ್ಮಂಡ ಕಾವೇರಮ್ಮ ದಿನೇಶ್: ಅಧ್ಯಕ್ಷರು ಗ್ರಾ.ಪಂ. ನರಿಯಂದಡ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನರಿಯಂದಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪೆಮ್ಮಂಡ ಕಾವೇರಮ್ಮ ದಿನೇಶ್ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ಪೆಮ್ಮಂಡ ಕಾವೇರಮ್ಮ ದಿನೇಶ್ ರವರು “ನಾನು ರಾಜಕೀಯ [...]
ವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ರೂಪಿಸಲಾಗಿದೆ; ಕೋಡಿರ ಎಂ. ವಿನೋದ್ ನಾಣಯ್ಯ
ಸರ್ಚ್ ಕೊಡಗು ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್
ವಾಟ್ಸಾಪ್ ಕಮ್ಯುನಿಟಿ ಸೇರಿಕೊಳ್ಳಿಸರ್ಚ್ ಕೊಡಗು ನಮ್ಮ ವಾಟ್ಸಾಪ್ ಚಾನಲ್ ಲಿಂಕ್
ವಾಟ್ಸಾಪ್ ಚಾನಲ್ ಫಾಲೋ ಮಾಡಿವಿಶ್ವಕರ್ಮ ಯೋಜನೆಯಡಿಯಲ್ಲಿ ಸ್ಥಳೀಯ ಯುವಕರಿಗೆ ಉದ್ಯೋಗ ಸೃಷ್ಠಿಸಲು ಯೋಜನೆ ರೂಪಿಸಲಾಗಿದೆ; ಕೋಡಿರ ಎಂ. ವಿನೋದ್ ನಾಣಯ್ಯ ಕೋಡಿರ ಎಂ. ವಿನೋದ್ ನಾಣಯ್ಯ, ಉಪಾಧ್ಯಕ್ಷರು: ಗ್ರಾ.ಪಂ. ನರಿಯಂದಡ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುವ ನರಿಯಂದಡ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕೋಡಿರ ವಿನೋದ್ ನಾಣಯ್ಯ ಅವರನ್ನು “ಸರ್ಚ್ ಕೂರ್ಗ್ ಮೀಡಿಯಾ” ದ "ನಮ್ಮ ಕೊಡಗು-ನಮ್ಮಗ್ರಾಮ" ಅಭಿಯಾನದಡಿಯಲ್ಲಿ ಸಂದರ್ಶಿಸಿ ಮಾಹಿತಿಯನ್ನು ಪಡೆಯಲಾಯಿತು. “ಸರ್ಚ್ ಕೂರ್ಗ್ ಮೀಡಿಯಾ” ದೊಂದಿಗೆ ಮಾತನಾಡಿದ ವಿನೋದ್ ನಾಣಯ್ಯನವರು, “ನಾನು ರಾಜಕೀಯ ಕ್ಷೇತ್ರಕ್ಕೆ [...]
ನಾಪೋಕ್ಲು ಬಳಿಯ ಚೆರಿಯಪರಂಬು ಮಖಾಂ ಉರೂಸ್; ಸರ್ವಧರ್ಮ ಸಮ್ಮೇಳನ
ಧರ್ಮವನ್ನು ಬದುಕಿನ ಬೆಳಕಾಗಿಸ ಬೇಕೇ ಹೊರೆತು ಬೆಂಕಿಯಾಗಿ ಅಲ್ಲ; ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ನಾಪೋಕ್ಲು: ಧರ್ಮವೆಂದರೆ ಬದುಕಿನ ಒಂದು ಬೆಳಕು ಆ ಧರ್ಮವನ್ನು ನಾವು ಬೆಳಕಾಗಿ ಉಪಯೋಗಿಸಬೇಕೆ ಹೊರತು ಬೆಂಕಿಯಾಗಿ ಅಲ್ಲ ಎಂದು ವಿರಾಜಪೇಟೆ ಬಳಿಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ನಾಪೋಕ್ಲು ಬಳಿಯ ಚೆರಿಯಪರಂಬು ದರ್ಗಾದ ವಾರ್ಷಿಕ ಉರೂಸ್ ಸಮಾರಂಭದ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಯಾವ ಧರ್ಮವು ಹಿಂಸೆಯನ್ನು ಬೋಧನೆ ಮಾಡುವುದಿಲ್ಲ, ಎಲ್ಲಾ [...]
ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಪೋಕ್ಸೋ ಕಾಯಿದೆ ಬಗ್ಗೆ ಅರಿವು ಕಾರ್ಯಕ್ರಮ
ಚೆಯ್ಯಂಡಾಣೆ, ಫೆ 8: ವಿರಾಜಪೇಟೆಯ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಲೈಂಗಿಕ ದೌರ್ಜನ್ಯ , ಪೋಕ್ಸೋ ಕಾಯಿದೆ,ಮಹಿಳಾ ಶೋಷಣೆ ,ಮಾದಕ ದ್ರವ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿರಾಜಪೇಟೆ ನಗರ ಪೋಲೀಸ್ ಠಾಣೆಯ ನಿರೀಕ್ಷಕರಾದ ಗಣಪತಿ ಹಾಗೂ ಮಹಿಳಾ ಪೊಲೀಸ್ ನಿರೀಕ್ಷರಾದ ಗೀತಾ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು. ಈ ಸಂದರ್ಭ ಬಾಲಕಿಯರ ನಿಲಯದ ಕರಾಟೆ ತರಬೇತುದಾರರಾದ ರೇಖಾ ಬೋಪ್ಪಣ್ಣ ಉಪಸ್ಥಿತರಿದ್ದರು. ವಾರ್ಡನ್ ಸುಮಯ್ಯ ಸ್ವಾಗತಿಸಿ,ವಂದಿಸಿದರು.
ಕುಂಜಿಲ ಕಕ್ಕಬ್ಬೆ ಗ್ರಾಮದ ಕೆಪಿ ಬಾಣೆ ಸರ್ಕಾರಿ ಶಾಲೆಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ
ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ -ಶಾಸಕ ಎ.ಎಸ್. ಪೊನ್ನಣ್ಣ ನಾಪೋಕ್ಲು: ಜಗತ್ತಿನ ಬದಲಾವಣೆಗೆ ಅನುಗುಣವಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು. ನಾಪೋಕ್ಲು ಬಳಿಯ ಕಕ್ಕಬ್ಬೆ ಕುಂಜಿಲ ಗ್ರಾಮದ ಕೆ ಪಿ ಬಾಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಡಿಜಿಟಲ್ ಗ್ರಂಥಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಿನ ಆಧುನಿಕ ಯುಗದಲ್ಲಿ ಡಿಜಿಟಲೀಕರಣ [...]
ಪಯ್ಯವೂರ್ ಈಶ್ವರ ದೇವಸ್ಥಾನದ ವಾರ್ಷಿಕೋತ್ಸವ
ಚೆಯ್ಯಂಡಾಣೆ, ಫೆ 7. ಕೇರಳ ರಾಜ್ಯದ ಪಯ್ಯವೂರ್ ಈಶ್ವರ ದೇವಸ್ಥಾನದ ವಾರ್ಷಿಕ ಹಬ್ಬವು ಇದೇ ತಿಂಗಳು ದಿನಾಂಕ 12.02.2024 ರಿಂದ 23.02.2024 ವರೆಗೆ ನಡೆಯಲಿದೆ. ಈ ವಾರ್ಷಿಕ ಹಬ್ಬಕ್ಕೆ ತಕ್ಕ ಮುಖ್ಯಸ್ಥರಾದ ಬೋವ್ವೆರಿಯಂಡ ಮತ್ತು ಮುಂಡಿಯ್ಯೊಳಂಡ ಕುಟುಂಬಸ್ಥರು ದಿನಾಂಕ 10.02.2024 ರ ಶನಿವಾರ ದಂದು ಬೆಳಿಗ್ಗೆ ಚೇಲವಾರ ಕಬ್ಬೆ ಬೆಟ್ಟದ ಮೂಲಕ ಕಾಲು ನಡಿಗೆಯಲ್ಲಿ ಕೇರಳದ ಪಯ್ಯವೂರ್ ಈಶ್ವರ ದೇವಸ್ಥಾನಕ್ಕೆ ಎತ್ತು ಪೋರಾಟ ಮೂಲಕ ಅಕ್ಕಿ ತಲುಪಿಸಳಿದ್ದು ಸೋಮವಾರ ಬೆಳಿಗ್ಗೆ ಅಕ್ಕಿಯನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ. ದಿನಾಂಕ [...]
ಚೆಯ್ಯಂಡಾಣೆಯಲ್ಲಿ ಜೆಜೆಎಂ ಕಾಮಗಾರಿ ಪೂರ್ಣ-ದೊರಕದ ನೀರು -ಲೋಕಾಯುಕ್ತಕ್ಕೆ ದೂರು ರಾಜೇಶ್ ಅಚ್ಚಯ್ಯ
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಚೆಸ್ಕಾಂ ನಿರ್ಲಕ್ಷ್ಯದಿಂದ ನೀರು ದೊರೆಯುತ್ತಿಲ್ಲ ಎಂದು ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷ ರಾಜೇಶ್ ಅಚ್ಚಯ್ಯ ಆರೋಪಿಸಿದ್ದು, ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾಗಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ರಾಜೇಶ್ ಅಚ್ಚಯ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಟ್ರಾನ್ಸ್ಫಾರ್ಮರ್ ಆಳವಡಿಸಿದ್ದು, ಮೀಟರ್ ಕೂಡ ಅಳವಡಿಸಲಾಗಿದೆ. ಆದರೆ ಚೆಸ್ಕಾಂ ನಿರ್ಲಕ್ಷ್ಯತೋರಿ ಪವರ್ ಸಪ್ಲೈ ಮಾತ್ರ ನೀಡುತ್ತಿಲ್ಲ,ಈ [...]
ಚೆಯ್ಯಂಡಾಣೆ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಕೊಡುಗೆ
ಚೆಯ್ಯಂಡಾಣೆ: ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಚೇಲಾವರ ಪೊನ್ನೋಲ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಟ್ರಾಕ್ ಸೂಟ್ ಅನ್ನು ನಿವೃತ್ತ ಕರ್ನಲ್ ನಾರಾಯಣ ಮೂರ್ತಿ ಹಾಗೂ ಶ್ರೀಮತಿ ಜಯಲಕ್ಷ್ಮಿ ನಾರಾಯಣ ಮೂರ್ತಿ,ಗ್ರಾಮ ಪಂಚಾಯಿತಿ ನಿಕಟ ಪೂರ್ವ ಅಧ್ಯಕ್ಷರಾದ ಬಿದ್ದಂಡ ರಾಜೇಶ್ ಅಚ್ಚಯ್ಯ,ನರಿಯಂದಡ ಕೇಂದ್ರ ಪ್ರೌಢಶಾಲೆಯ ಅಧ್ಯಕ್ಷ ಚೇನಂಡ ಗಿರೀಶ್ ಪೂಣಚ್ಚ,ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಪತ್ರಕರ್ತ ಅಶ್ರಫ್ ಸಿ.ಎ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಆರ್.ಆಶಾ ಕುಮಾರಿ, ಶಾಲಾ ಹಿರಿಯ ಮುಖ್ಯ ಶಿಕ್ಷಕಿ ಪ್ರೇಮಾ [...]
ಕಡಂಗದ ವಿಜಯ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ
ಕಡಂಗ: ಕಡಂಗ ವಿಜಯ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಶನಿವಾರ ಶಾಲೆಯ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಿಜಯ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಬಲ್ಲ್ಯಾ0ಡ ಪಿ ಬಿದ್ದಪ್ಪನವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು ಬಳಿಕ ಮಾತನಾಡಿದ ಅವರು ಪ್ರೌಢಶಾಲಾ ವಿಭಾಗದಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಂದಿನ ವರ್ಷ ಶಾಲೆ ಮುಚ್ಚುವ ಹಂತದಲ್ಲಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಯಲ್ಲಿ ಹಾಜರಾಗಿ ಎಂದು ವಿದ್ಯಾ ಸಂಸ್ಥೆಯ ಪರವಾಗಿ ಸಂಸ್ಥೆಯ ಶಿಕ್ಷಣಕ್ಕೆ ಒತ್ತು ನೀಡಬೇಕಾಗಿ ಸಭಿಕರಲ್ಲಿ ಕರೆ ನೀಡಿದರು. ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ [...]
ಚೆಯ್ಯಂಡಾಣೆಯಲ್ಲಿ 75ನೇ ಗಣರಾಜ್ಯೋತ್ಸವ ಆಚರಣೆ: ನಿವೃತ ಕರ್ನಲ್ ನಾರಾಯಣ ಮೂರ್ತಿಯವರಿಂದ ಶಾಲೆಗೆ ಉಚಿತವಾಗಿ ಪುಸ್ತಕ ಕೊಡುಗೆ
ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಸೇರಲು ಆಸಕ್ತಿ ವಹಿಸಬೇಕು : ಕರ್ನಲ್ ನಾರಾಯಣ ಮೂರ್ತಿ ಚೆಯ್ಯ0ಡಾಣೆ: ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಪಾಲ್ಗೊಂಡು ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಸೇರುವವರಾಗಬೇಕೆಂದು ನಿವೃತ ಕರ್ನಲ್ ನಾರಾಯಣ ಮೂರ್ತಿ ಹೇಳಿದರು. ಚೆಯ್ಯಂಡಾಣೆಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರ ಮೂಲಕ ಉತ್ತಮ ಪ್ರಜೆಗಳಾಗಬೇಕು, ಪೋಷಕರೂ ಕೂಡ ಶಾಲೆಗಳಿಗೆ ಬಂದು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದಿ ವಿದ್ಯಾರ್ಥಿಗಳಿಗೆ ಮಾರ್ಗ ದರ್ಶಕರಾಗ [...]
ಜನವರಿ,28 ರಿಂದ ಎಡಪಾಲ ಅಂಡತ್‌ಮಾನಿ ಮಖಾಂ ಉರೂಸ್
ಉರೂಸ್ ಅಂಗವಾಗಿ ವಿವಿಧ ಕಲಾ ತಂಡಗಳಿಂದ ದಫ್ ಸ್ವರ್ಧೆ ಚೆಯ್ಯ0ಡಾಣೆ: ಸ್ಥಳೀಯ ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ ಇದೆ ಬರುವ ತಾ.28 ರಿಂದ 30 ವರೆಗೆ ಅತೀ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದು ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ತಿಳಿಸಿದ್ದಾರೆ. ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಕಚೇರಿಯಲ್ಲಿ ಕರೆಯಲಾದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು ಕೊಡಗು ಜಿಲ್ಲೆಯಲ್ಲಿ 300 ವರ್ಷಗಳ ಇತಿಹಾಸವಿರುವ ಹಲವಾರು ಪವಾಡಗಳಿಗೆ ಹೆಸರಾದ ಎಡಪಾಲ ಅಂಡತ್ ಮಾನಿ ದರ್ಗಾ [...]
ಕಡಂಗ ಪಟ್ಟಣದಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನ
ಕಡಂಗ: ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಮತ್ತು ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಇವರ ವತಿಯಿಂದ ಕಡಂಗ ಪಟ್ಟಣದಲ್ಲಿ ಸಂಚಾರ ನಿರ್ವಹಣೆ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಅಭಿಯಾನವನ್ನು ಪಟ್ಟಣದ ಮುಖ್ಯರಸ್ತೆಯಲ್ಲಿ ನಿರ್ವಹಿಸಾಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ವಿರಾಜಪೇಟೆ ಠಾಣಾಧಿಕಾರಿ ವಾಣಿ ಶ್ರೀ ತಮ್ಮ ತಮ್ಮ ವಾಹನಗಳ ಎಲ್ಲಾ ರಿತಿಯ ದಾಖಲೆಗಳು ಸ್ಪಷ್ಟವಾಗಿ ಇಟ್ಟುಕೊಳ್ಳಿ ಇನ್ಸೂರೆನ್ಸ್ ಮತ್ತು ಆರ್ ಸಿ ಬುಕ್ ಗಳು ಕಡ್ಡಾಯವಾಗಿ ಸರಿಪಡಿಸಿಕೊಳ್ಳಬೇಕು , ಬೈಕ್ ಸವಾರರು ಹೆಲ್ಮೆಟ್ ಗಳನ್ನು ಕಡ್ಡಾಯವಾಗಿ ಹಾಕಿ ಸಂಚಾರ ನಿಯಮವನ್ನು [...]
ಎಸ್.ಕೆ.ಎಸ್.ಎಸ್.ಎಫ್. ಎಡಪಾಲ ಶಾಖೆಯ ಅಧ್ಯಕ್ಷರಾಗಿ ಎಂ.ಎ. ಶಮೀಮುದ್ದೀನ್ ಆಯ್ಕೆ
ಚೆಯ್ಯ0ಡಾಣೆ ಜ 11. ಸಮಸ್ತ ಕೇಂದ್ರೀಯ ಸುನ್ನಿ ವಿದ್ಯಾರ್ಥಿಗಳ ಒಕ್ಕೂಟ ಎಡಪಾಲ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಎಡಪಾಲದಲ್ಲಿ ನಡೆಯಿತು. ಶಾಖೆಯ ವಾರ್ಷಿಕ ಮಹಾ ಸಭೆಯು ಅಧ್ಯಕ್ಷರಾದ ಶಮೀಮುದ್ದೀನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಳಿಕ ಎಸ್ ಕೆ ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ ಪ್ರತಿನಿಧಿ ಹನೀಫ್ ಫೈಝಿರವರ ನೇತೃತ್ವದಲ್ಲಿ 2024 -26 ರ ಅವಧಿಯ ಹೊಸ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಮೀಮುದ್ದೀನ್ ಎಂ.ಎ,ಪ್ರಧಾನ ಕಾರ್ಯದರ್ಶಿಯಾಗಿ ಜಲೀಲ್ ಕುರಿಕಡೆ,ಕೋಶಾಧಿಕಾರಿಯಾಗಿ ಶರಫುದ್ದೀನ್, ಕಾರ್ಯದರ್ಶಿಯಾಗಿ [...]
ಜಿಲ್ಲಾಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವದ ವಸ್ತು ಪ್ರದರ್ಶನ ಸ್ಪರ್ಧೆ
ಕೊಡಗು ಜಿಲ್ಲಾ ಪಂಚಾಯತ್ ಉಪ ನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ ಮಡಿಕೇರಿ ಕೊಡಗು ಜಿಲ್ಲೆ, ಇವರ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜುವಿನಲ್ಲಿ ಮಡಿಕೇರಿ ಪ್ರೌಢಶಾಲಾ ವಿಭಾಗ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ಕಲಿಕೋತ್ಸವ ವಸ್ತು ಪ್ರದರ್ಶನದ ನಡೆಸಲಾಯಿತು ತೋಟಗಾರಿಕಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೂರ್ನಾಡು ಪ್ರೌಢಶಾಲೆ, ದ್ವಿತೀಯ ಸ್ಥಾನವನ್ನು ಪಾರಾಣೆ ಪ್ರೌಢಶಾಲೆ ಮತ್ತು ತೃತೀಯ ಸ್ಥಾನವನ್ನು ನರಿಯ0ದಡ ಕೇಂದ್ರ ಪ್ರೌಢಶಾಲೆ ಪ್ರಶಸ್ತಿ ಪಡೆಯಲಾಯಿತು ಹೊಲಿಗೆ ವಿಭಾಗದಲ್ಲಿ ಪ್ರಥಮ ಸ್ಥಾನ ಸ0ತ ಮೈಕಲರ ಪ್ರೌಢಶಾಲೆ ಮಡಿಕೇರಿ ,ದ್ವಿತೀಯ [...]
ಚೆಯ್ಯಂಡಾಣೆಯಲ್ಲಿ ಶ್ರೀ ಪಯ್ಯವೂರ್ ಶಿವ ಕ್ಷೇತ್ರದ ವಿಶೇಷ ಸಭೆ
ಚೆಯ್ಯ0ಡಾಣೆ: ಕೇರಳದ ಪಯ್ಯವೂರ್ ನಲ್ಲಿ ವರ್ಷಪ್ರತಿ ನಡೆಯಲಿರುವ ಊಟ್ ಮಹೋತ್ಸವದ ಪ್ರಯುಕ್ತ ನಾಡ್ ಗೆ ಒಳಪಟ್ಟ ಗ್ರಾಮಸ್ಥರ ವಿಶೇಷ ಸಭೆಯು ಸ್ಥಳೀಯ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಕ್ಕಮುಖ್ಯಸ್ಥ ಕುಟುಂಬಸ್ಥರ ಹಿರಿಯರಾದ ಮುಂಡಿಯೊಳಂಡ ತಮ್ಮಯ್ಯ ಹಾಗೂ ಬೊವೈರಿಯಂಡ ತಿಮ್ಮಯ್ಯ ನವರ ನೇತೃತ್ವದಲ್ಲಿ ನಡೆಯಿತು. ನಾಡ್ ಗೆ ಒಳಪಟ್ಟ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಕೇರಳದಿಂದ ಸಭೆಗೆ ಆಗಮಿಸಿದ ದೇವಸಂ ಬೋರ್ಡ್ ನಾ ಬಿಜು ರವರನ್ನು ಗ್ರಾಮಸ್ಥರು ತರಾಟೆಗೆ ತೆಗದು ಕೊಂಡ ಘಟನೆ ನಡೆಯಿತು. ನಾಡ್ [...]
ಚೇಲಾವರದಲ್ಲಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು. ಜನವರಿ 1 ರಿಂದ 15ವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು ಇದರ ಅಂಗವಾಗಿ ಚೇಲಾವರದ ಪೋನ್ನೊಲ ಸಾರ್ಥವು ಬೈತೂರ್ ಕಾರ್ಯಾರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಚೇಲಾವರದ ಮನೆ ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ನಾಡು ತಕ್ಕರಾದ ಪಟ್ಟಚೆರುವಂಡ ಜಿಮ್ಮ ಚಿಟ್ಟಿಯಪ್ಪ,ಪ್ರಮುಖರಾದ ಪಟ್ಟಚೆರುವಂಡ ಹರಿ ಮುತ್ತಪ್ಪ ,ಚರ್ಮಣ, ಮುಂಡಿಯೋಳಂಡ ಪ್ರವೀಣ್ ಈರಪ್ಪ,ಬಾಚಮಂಡ ಲೋಕೇಶ್, ಪವನ್ ಮಂಜು,ಕುಟ್ಟನ ಶೀತಾರಾಂ, [...]
ಚೆಯ್ಯಂಡಾಣೆಯಲ್ಲಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು. ಜನವರಿ 1 ರಿಂದ 15ವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು, ಇದರ ಅಂಗವಾಗಿ ನರಿಯಂದಡ ಭಗವತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ನರಿಯಂದಡ ಬ್ಲಾಕ್ 1 ಹಾಗೂ ಬ್ಲಾಕ್ 2 ರಲ್ಲಿ ಮಂತ್ರಾಕ್ಷತೆ ಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಭಗವತಿ ದೇವಸ್ಥಾನದ ಅಧ್ಯಕ್ಷ ಬಟ್ಟಿಯಂಡ ಜಯರಾಂ,ರಾಮ ಭಕ್ತಿ ಸಮಿತಿಯ ಸದಸ್ಯರು ಹಾಗೂ ಪ್ರಮುಖರಾದ ಕುಕ್ಕೆಮನೆ ನಾರಾಯಣ ಮೂರ್ತಿ, ಪೋಕ್ಕುಳಂಡ್ರ ದನೋಜ್, ಮಕ್ಕಿಮನೆ ಸುಧೀರ್, ಚೆಯ್ಯ0ಡ ಲವ [...]
ಕರಡದಲ್ಲಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ
ಚೆಯ್ಯ0ಡಾಣೆ, ಜ 1: ಕರಡ ಗ್ರಾಮದಲ್ಲಿ ಅಯೋಧ್ಯೆ ಮಂತ್ರಾಕ್ಷತೆಯನ್ನು ಮನೆಗಳಿಗೆ ತೆರಳಿ ವಿತರಿಸಲಾಯಿತು. ಜನವರಿ 1 ರಿಂದ 15ವರೆಗೆ ಮಂತ್ರಾಕ್ಷತೆ ವಿತರಣೆ ಅಭಿಯಾನವಿದ್ದು, ಇದರ ಅಂಗವಾಗಿ ಕರಡ ಗ್ರಾಮದಲ್ಲಿ ವಿತರಣೆ ನಡೆಯಿತು. ಈ ಸಂದರ್ಭದಲ್ಲಿ ಜಗದೀಶ್ ಭೀಮಯ್ಯ, ಸೋಮಯ್ಯ, ಸುಷ ಮೊಣ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯ ವಿಲಿನ್, ಸುಧಾ, ದೇವಯ್ಯ, ಅಚ್ಚಯ್ಯ ಹಾಜರಿದ್ದರು.
SKSSF ಎಡಪಾಲ ಶಾಖೆ ವಾರ್ಷಿಕ ಮಹಾ ಸಭೆ
ಕಡಂಗ: ಸಮಸ್ತ ಕೇಂದ್ರೀಯ ಸುನ್ನಿ ವಿದ್ಯಾರ್ಥಿಗಳ ಒಕ್ಕೂಟ ಎಡಪಾಲ ಶಾಖೆಯ ವಾರ್ಷಿಕ ಮಹಾಸಭೆಯು ಡಿಸೆಂಬರ್ 25 ಆದಿತ್ಯವಾರ ಸಲೀಂರವರ ಮನೆಯಲ್ಲಿ ನಡೆಯಿತು. ಶಾಖೆಯ ಅಧ್ಯಕ್ಷರಾದ ಶಮೀಮುದ್ದೀನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಪ್ರಧಾನ ಕಾರ್ಯದರ್ಶಿ ಹಾರಿಸ್ ಬಾಖವಿರವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಜಿಲ್ಲಾ ಸಮಿತಿ ಪ್ರತಿನಿಧಿ ಹನೀಫ್ ಫೈಝಿರವರು ಉದ್ಘಾಟನೆಗೈದರು. ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಮುಹಮ್ಮದ್ ರವರು ಮಾತನಾಡಿ ಸಂಘಟನೆಯ ಪ್ರಾರಂಭಕಾಲದ ಬೆಳವಣಿಗೆಗಳ ಕುರಿತು ಮೆಲುಕು ಹಾಕಿದರು. ನಂತರ ಮಾತನಾಡಿದ SKSSF ಕರ್ನಾಟಕ ರಾಜ್ಯ ಸಮಿತಿ [...]
ಕಡಂಗ: ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ
ಕಡಂಗ: ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಕಡಂಗ: ಸ್ಥಳೀಯ ಪ್ರಾರ್ಥಮಿಕ ಶಾಲೆಯಲ್ಲಿ 2022- 23ನೇ ಸಾಲಿನ 5, 6, 7ನೇ ತರಗತಿಯಲ್ಲಿ ಓದುತ್ತಿದ್ದ ಮೂವರು ಪ್ರತಿಭಾನ್ವಿತ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಕೆನರಾ ಬ್ಯಾಂಕ್ ವತಿಯಿಂದ ತಲಾ ಎರಡು ಸಾವಿರದ ಐನೂರು ರೂಪಾಯಿಗಳ ಶಿಷ್ಯವೇತನವನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕರಾದ ಶ್ರೀಮತಿ ಪಿ.ಎಂ.ಶಾಂತಕುಮಾರಿ ಅವರು ಚೆಕ್‌ನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಅಧ್ಯಾಪಕರುಗಳು ಹಾಜರಿದ್ದರು.
ಪಟ್ಟಚೇರುವಳಂಡ ಕುಟುಂಬದಿಂದ ವಿವಿಧ ಇಲಾಖೆಯಲ್ಲಿ ಸೇವೆ ಗೈದ ನಿವೃತರಿಗೆ ಸನ್ಮಾನ
ಚೆಯ್ಯ0ಡಾಣೆ, ಡಿ 25. ಸ್ಥಳೀಯ ಚೆಯ್ಯ0ಡಾಣೆ ಸಮೀಪದ ಚೇಲಾವರದ ಪಟ್ಟಚೇರುವಳಂಡ ಕುಟುಂಬಸ್ಥರು ವಿವಿದ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಗೈದು ನಿವೃತ್ತಿ ಹೊಂದಿದ ಕುಟುಂಬದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸನ್ಮಾನ ಸ್ವೀಕರಿಸಿದವರು ಪಿ.ಪಿ. ಬೆಳ್ಳಿಯಪ್ಪ ನಿವೃತ ಸಹ ನೋಂದಣಾಧಿಕಾರಿ, ಪಿ.ಬಿ. ಅಯ್ಯಪ್ಪ ನಿವೃತ ಸೈನಿಕ, ಪಿ.ಎ. ಕಾವೇರಮ್ಮ ನಿವೃತ ಪೊಲೀಸ್, ಪಿ.ಬಿ.ಕಾವೇರಮ್ಮ ನಿವೃತ ಪ್ರಿನ್ಸಿಪಾಲ್, ಪಿ.ಸಿ. ಜೋಬಿ ಹಾಗೂ ಪಿ.ಎಸ್. ರಾಧಾ ನಿವೃತ ವಿದ್ಯಾಭ್ಯಾಸ ಇಲಾಖೆ, ಪಿ.ಎಸ್. ಸರಸು ನಿವೃತ ಮುಖ್ಯ ಶಿಕ್ಷಕಿ, ಪಿ.ಬಿ. [...]
ಚೆಯ್ಯ0ಡಾಣೆಯಲ್ಲಿ ಗ್ರಾ.ಪಂ. ಮಟ್ಟದ ಗಣಿತ ಸ್ವರ್ಧೆ
ಚೆಯ್ಯ0ಡಾಣೆ,ಡಿ 22. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಮುದಾಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಸಹಯೋಗದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಸರ್ಕಾರಿ ಶಾಲಾ ಮಕ್ಕಳ ಗಣಿತ ಸ್ವರ್ಧೆ ಆಯೋಜಿಸಲಾಗಿತ್ತು. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ, ಕರಡ, ಕೊಕೇರಿ, ಕಿಕ್ಕರೆ, ಎಡಪಾಲ, ಚೆಯ್ಯ0ಡಾಣೆ ಶಾಲೆಯ ಒಟ್ಟು 90 ವಿದ್ಯಾರ್ಥಿಗಳು ಸ್ವರ್ದೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ [...]
ಕಡಂಗದಲ್ಲಿ ಸಾಮೂಹಿಕ ವಿವಾಹ ಮತ್ತು ನೊರೇ ಅಜ್ಮಿರ್ ಕಾರ್ಯಕ್ರಮ
ಕಡಂಗ: ಎಸ್.ವೈ.ಎಸ್. ಹಾಗೂ ಎಸ್.ಕೆ.ಎಸ್.ಎಸ್.ಎ. ಕಡಂಗ ಶಾಖೆ ವತಿಯಿಂದ 5 ಬಡ ಹೆಣ್ಣುಮಕ್ಕಳ ಸಾಮೂಹಿಕ ವಿವಾಹ ಹಾಗೂ ನೂರೇ ಅಜ್ಮಿರ್ ಕಾರ್ಯಕ್ರಮ ಕಡ0ಗ ಕೊಕ್ಕ0ಡ ಬಾಣೆ ದರ್ಗಾ ಸಮೀಪದಲ್ಲಿ ಜನವರಿ 13 ರಂದು ನಡೆಸಲಾಗುವುದು ಎಂದು ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಇಸಾಕ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಸ್ತ ಸದಸ್ಯ ಎಂ.ಎಂ. ಅಬ್ದುಲ್ಲಾ ಫೈಝಿ ರವರು ನಿರ್ವಹಿಸಲಿದ್ದಾರೆ ಕಾರ್ಯಕ್ರಮದ ದುಆ ಮಜಲಿಸ್ಗೆ ಜೈನುಲ್ ಅಬೀದಿನ್ ತಂಗಳ್ ಬೆಳ್ತಂಗಡಿ ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಮುಖ್ಯ ಪ್ರವಚನ ನೂರೇ [...]
ಕಡಂಗದಲ್ಲಿ ಎಸ್.ಎಸ್.ಎಫ್. ವಿರಾಜಪೇಟೆ ಡಿವಿಷನ್ ಮಟ್ಟದ ಸಾಹಿತ್ಯೋತ್ಸವ
ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸಬೇಕು : ಕೋಡಿರ ವಿನೋದ್ ನಾಣಯ್ಯ ಚಾಂಪಿಯನ್ ಆಗಿ ಪಾಲಿಬೆಟ್ಟ ಸೆಕ್ಟರ್ /ರನ್ನರ್ಸ್ ಆಗಿ ಕಡಂಗ ಸೆಕ್ಟರ್ ಕಡಂಗ: ತನ್ನ ಧರ್ಮವನ್ನು ಪ್ರೀತಿಸಿ ಅನ್ಯ ಧರ್ಮವನ್ನು ಗೌರವಿಸಬೇಕು, ನಾವು ಹುಟ್ಟುವಾಗ ಯಾವ ಧರ್ಮದಲ್ಲಿ ಹುಟ್ಟುತ್ತೆವೆ ಎಂದು ನಮಗೆ ಗೊತ್ತಿರುವುದಿಲ್ಲ ಆದರೆ ಹುಟ್ಟಿದ ನಂತರ ಒಂದು ಧರ್ಮಕ್ಕೆ ಸೀಮಿತವಾಗುತ್ತೇವೆ, ಅದರೊಂದಿಗೆ ಭವ್ಯ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದ್ದೇವೆ ಎಂದು ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ಹೇಳಿದರು. ಇವರು [...]
ಅರಪಟ್ಟು ಶ್ರೀ ಭಗವತಿ ದೇವಸ್ಥಾನದಲ್ಲಿ ಶ್ರೀ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ
ಕಡಂಗ: ಅರಪಟ್ಟು ಗ್ರಾಮದ ಶ್ರೀ ಭಗವತಿ ದೇವಸ್ಥಾನದಲ್ಲಿ ಶ್ರೀ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಇಂದು ವಿಶೇಷ ಪೂಜೆ ನಡೆಯಿತು .ಈ ಸಂದರ್ಭ ಸುಬ್ರಮಣ್ಯ ದೇವರಿಗೆ ಭಕ್ತಾಧಿಗಳ ಪರವಾಗಿ ಎಳನೀರು ಹಾಗೂ ಹಾಲಿನ ಅಭಿಷೇಕ ನಡೆಸಲಾಯಿತು. ನಂತರ ದೇವರಿಗೆ ಮಹಾಮಂಗಳಾರತಿ ಜೊತೆ ಮಹಾಪೂಜೆ ನಡೆಯಿತು.ತೀರ್ಥ ಪ್ರಸಾದ ವಿತರಣೆಯ ನಂತರ ನೆರೆದಿದ್ದ ಭಕ್ತರಿಗೆ ಅನ್ನಪ್ರಸಾದವನ್ನು ಕೋಡಿರ ಸುಭಾಶ್ ಮುತ್ತಣ್ಣ ಮತ್ತು ಸಂಸಾರದವರು ಏರ್ಪಡಿಸಿದ್ದರು. ದೇವಸ್ಥಾನದ ಅರ್ಚಕರಾದ ಕೀರ್ತಿಶ್ ರವರು ಪೂಜಾ ವಿಧಿವಿಧಾನವನ್ನು ನಡೆಸಿಕೊಟ್ಟರು. ಈ ಸಂದರ್ಭ ದೇವಸ್ಥಾನದ ಅಧ್ಯಕ್ಷರಾದ ಚಿತ್ರ [...]
ಎಡಪಾಲಕೇರಿ ಅಯ್ಯಪ್ಪ ದೇವಸ್ಥಾನದ ಅಧ್ಯಕ್ಷರಾಗಿ ಬೆಳಿಯಂಡ್ರ ಹರಿಪ್ರಸಾದ್ ಆಯ್ಕೆ
ಚೆಯ್ಯ0ಡಾಣೆ, ಡಿ 15. ಚೆಯ್ಯ0ಡಾಣೆಯ ನರಿಯಂದಡ ಗ್ರಾಮದ ಎಡಪಾಲಕೇರಿ ಅಯ್ಯಪ್ಪ ದೇವಸ್ಥಾನದಲ್ಲಿ ಸತತ 7 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪೊಕ್ಕುಳಂಡ್ರ ಮನೋಹರ (ಅಜಿತ್) ಹಾಗೂ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ ಪೊಕ್ಕುಳಂಡ್ರ ಸತ್ಯರವರ ವೈಯುಕ್ತಿಕ ಕಾರಣಗಳಿಗೆ ರಾಜಿನಾಮೆ ಸಲ್ಲಿಸಿದರು. ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬೆಳಿಯಂಡ್ರ ಹರಿಪ್ರಸಾದ್ ಹಾಗೂ ಕಾಯ೯ದಶಿ೯ಯಾಗಿ ಪೊಕ್ಕುಳಂಡ್ರ ಅಭಿಲಾಷ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ತೋಟ೦ಬೈಲು ಅನಂತ್ ಕುಮಾರ್, ಉಪಾಧ್ಯಕ್ಷರಾಗಿ ಪೊಕ್ಕುಳ೦ಡ್ರ ಸೂರಜ್ ಆಯ್ಕೆಯಾದರೆ, ಸಲಹಾ ಸಮಿತಿ ಗೌರವ ಸದಸ್ಯರಾಗಿ ಪೊಕ್ಕುಳ೦ಡ್ರ ಮನೋಹರ, ಪೊಕ್ಕುಳ೦ಡ್ರ ಸತ್ಯ, [...]
ಅರಪಟ್ಟು ಕಡಂಗದಲ್ಲಿ ಕಾರ್ತಿಕ ದೀಪೋತ್ಸವ
ಕಡಂಗ: ಅರಪಟ್ಟು ಶ್ರೀ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಮಂಗಳವಾರದಂದು ಕಾರ್ತಿಕ ದೀಪೋತ್ಸವ ನಡೆಸಲಾಯಿತು. ಗ್ರಾಮದ ದೇವಸ್ಥಾನದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಊರಿನ ಭಕ್ತರು ದೇವಾಲಯದ ಸುತ್ತಲೂ ಹಣತೆಯನ್ನಿರಿಸಿ ದೀಪ ಹಚ್ಚುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಪೂಜೆಯ ಅಂಗವಾಗಿ ಮೊದಲಿಗೆ ಸಾಮೂಹಿಕ ರುದ್ರಾಭಿಷೇಕ ನಡೆದು ನಂತರ ಮಹಾಪೂಜೆ ನಡೆಯಿತು ಪೂಜಾ ಕೈಂಕಾರ್ಯವನ್ನು ಅರ್ಚಕರಾದ ಕೀರ್ತಿಶ್ ಹಾಗೂ ಅಖಿಲೇಶ್ ಸಹೋದರರು ನಡೆಸಿಕೊಟ್ಟರು. ಪೂಜೆಯಲ್ಲಿ ಊರಿನ ಅನೇಕ ಭಕ್ತರು, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಶ್ರೀ ನೆರಪಂಡ ಚಿತ್ರ ಬೆಳ್ಳಿಯಪ್ಪ ಹಾಗೂ [...]
ವಿಜೃಂಭಣೆಯಿಂದ ನಡೆದ ಎಡಪಾಲಕೇರಿ ಅಯ್ಯಪ್ಪ ದೇವರ ಮಹಾ ಪೂಜೆ
ಚೆಯ್ಯ0ಡಾಣೆ ಡಿ 15. ಚೇಯ್ಯ೦ಡಾಣೆ ನರಿಯಂದಡ ಗ್ರಾಮದ ಎಡಪಾಲಕೇರಿ ಅಯ್ಯಪ್ಪ ದೇವರ ಮಹಾಪೂಜೆ ವಿಜೃಂಭಣೆಯಿಂದ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. 28 ದಿನ ಪೂಜೆಯನ್ನು ಅರ್ಚಕರಾದ ಶಿವಶರ್ಮ ನೆರವೇರಿಸಿ 29ನೇ ದಿನದ ಮಹಾ ಪೂಜೆಯನ್ನು ಕೆದಮುಳೂರು ಈಶ್ವರ ದೇವಸ್ಥಾನದ ಅರ್ಚಕರಾದ ರಾಧಾ ಕೃಷ್ಣ ನೆರವೇರಿಸಿದರು. ಭಕ್ತಾದಿಗಳಿಗೆ ಮಧ್ಯಾಹ್ನದ ಭೋಜದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪೋಲ್ಗೊಂಡಿದರು.
ಕ್ರೀಡಾ ತರಬೇತುದಾರ ಅಬ್ದುಲ್ಲ ಪೊಯಕೆರೆ ರವರಿಗೆ ಸನ್ಮಾನ
ಕ್ರೀಡಾ ತರಬೇತುದಾರ ಅಬ್ದುಲ್ಲ ಪೊಯಕೆರೆ ರವರಿಗೆ ಸನ್ಮಾನ ಕಡಂಗ: ಫೋರ್ ಸ್ಟಾರ್ ಕ್ರೀಡಾ ಸಂಘ ಎಡಪಾಲ ವತಿಯಿಂದ ತಂಡದ ತರಬೇತುದಾರಾಗಿ ಹತ್ತು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅಬ್ದುಲ್ಲ ಪೊಯಕೆರೆ ರವರಿಗೆ ಸಂಘದ ಕಚೇರಿಯಲ್ಲಿ ಊರಿನ ಪ್ರಮುಖರ ಸಮ್ಮುಖದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಡೆದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ತಂಡವಾಗಿದೆ ಎಡಪಾಲ ಫೋರ್ ಸ್ಟಾರ್ ತಂಡ. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಫೋರ್ ಸ್ಟಾರ್ ಅಧ್ಯಕ್ಷ ಹನೀಫ ಎರಟೆಂಡ [...]
ಕಿಕ್ಕರೆಯಲ್ಲಿ ಎಸ್ ಎಸ್ ಎಫ್ ಕಡಂಗ ಸೆಕ್ಟರ್ ಸಾಹಿತ್ಯೋತ್ಸವ
ಸಾಹಿತ್ಯೋತ್ಸವ ಯುವ ಪ್ರತಿಭೆಗಳನ್ನು ಹೊರ ತರುವ ವೇದಿಕೆ : ಅಬ್ದುಲ್ ಸಲಾಂ ಶಾಮಿಲಿ ಇರ್ಫಾನಿ ಚೆಯ್ಯ0ಡಾಣೆ, ಡಿ 11. ಯುವ ಪ್ರತಿಭೆಗಳನ್ನು ಹೊರ ತರಲು ಎಸ್ ಎಸ್ ಎಫ್ ಹಮ್ಮಿಕೊಳ್ಳುತ್ತಿರುವ ಸಾಹಿತ್ಯೋತ್ಸವ ಕಾರ್ಯಕ್ರಮ ವೇದಿಕೆ ಶ್ಲಾಘನೀಯವಾದದ್ದು ಎಂದು ಅಬ್ದುಲ್ ಸಲಾಂ ಶಾಮಿಲಿ ಇರ್ಫಾನಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಇವರು ಸುನ್ನಿ ಸ್ಟೂಡೆಂಟ್ ಫೆಡರೇಷನ್ ಅಸೋಸಿಯೇಷನ್ (ಎಸ್ ಎಸ್ ಎಫ್) ಕಡಂಗ ಸೆಕ್ಟರ್ ವತಿಯಿಂದ ಕಿಕ್ಕರೆ ಇರ್ಷಾದುಲ್ ಇಸ್ಲಾಂ ಮದರಸ ಸಭಾಂಗಣ ಸೆಕ್ಟರ್ ಸಾಹಿತ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ [...]
ನಾಪೋಕ್ಲು ಓಎಸ್ಎಫ್ ಅಧ್ಯಕ್ಷರಾಗಿ ತಶ್ರೀಫ್ ಆಯ್ಕೆ
ನಾಪೋಕ್ಲು : ನಾಪೋಕ್ಲುವಿನ ಮೊಹಿಯದ್ದೀನ್ ಜುಮಾ ಮಸೀದಿಯ ಆದಿನದಲ್ಲಿ ಕಾರ್ಯಾಚರಿಸುವ ಓಎಸ್ಎಫ್ ( ಹಳೇ ವಿದ್ಯಾರ್ಥಿಗಳ ಸಂಘ ) ಇದರ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ನಾಪೋಕ್ಲುವಿನ ತಶ್ರೀಫ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಪೋಕ್ಲು ಪಟ್ಟಣದಲ್ಲಿರುವ ಮೊಹಿಯದ್ದೀನ್ ಜುಮಾ ಮಸೀದಿಯ ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಶುಹೈಬ್ ಅವರ ಅದ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಪಿ.ಐ, ಉಪಾಧ್ಯಕ್ಷರಾಗಿ ಕೆ.ಎ. ಝಕರಿಯ, ಸಹಕಾರಿದರ್ಶಿಯಾಗಿ ಯೂನಸ್, ಖಜಾಂಚಿಯಾಗಿ ಟಿ.ಎಂ.ಹಾರಿಸ್, [...]
ಚೆಯ್ಯಂಡಾಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ
ಚೆಯ್ಯ0ಡಾಣೆ,ಡಿ 8. ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಗ್ರಾಮಗಳ ಹಾಗೂ ನರಿಯಂದಡ ಗ್ರಾ.ಪಂ.ವ್ಯಾಪ್ತಿಯ ಚೆಯ್ಯ0ಡಾಣೆ,ಕರಡ,ಕಡಂಗ ಪ್ರಾಥಮಿಕ ಶಾಲೆಯ ಹಾಗೂ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಮಕ್ಕಳ ಗ್ರಾಮ ಸಭೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಯಶಸ್ವಿಯಾಗಿ ಜರುಗಿತು. ಮಹಿಳಾ ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ ವಹಿಸಿದರೆ, ಮಕ್ಕಳ ಗ್ರಾಮ ಸಭೆಯ ಅಧ್ಯಕ್ಷಯನ್ನು ನರಿಯಂದಡ ಪ್ರೌಢ ಶಾಲೆಯ ಶಾಲಾ ನಾಯಕಿ ದೇಚಮ್ಮ ವಹಿಸಿದರು. ಸಾಮಾಜಿಕ ಕಾರ್ಯಕರ್ತೆ ಸ್ವಾತಿ ಮಕ್ಕಳ [...]
ಕರಡ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಕಾಲು ಚೆಂಡು ಪಂದ್ಯವಳಿ: ಕಡಂಗ ಫ್ರೆಂಡ್ಸ್ ಚಾಂಪಿಯನ್
ಕರಡ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಕಾಲು ಚೆಂಡು ಪಂದ್ಯವಳಿ: ಕಡಂಗ ಫ್ರೆಂಡ್ಸ್ ಚಾಂಪಿಯನ್ ಕಡಂಗ: ಕರಡ ಫ್ರೆಂಡ್ಸ್ ವತಿಯಿಂದ ಆಯೋಜಿಸಿದ್ದ ಕಾಲು ಚೆಂಡು ಪಂದ್ಯವಳಿಯನ್ನು ಕರಡ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು. ಪಂದ್ಯಾವಳಿಯನ್ನು ಕರಡ ಪ್ರಾಥಮಿಕ ಶಾಲಾ ಶಿಕ್ಷಕಿ ದಮಯಂತಿ ಮತ್ತು ಐತಿಚಂಡ ಪ್ರಕಾಶ್ ಕಾರ್ಯಪ್ಪನವರು ದೀಪ ಬೆಳಗಿಸುವುದರ ಮೂಲಕ ಪಂದ್ಯವಳಿಗೆ ಚಾಲನೆ ನೀಡಿದರು. ಫೈನಲ್ ಪಂದ್ಯದಲ್ಲಿ ಕಡಂಗ ಫ್ರೆಂಡ್ಸ್ ತಂಡ ಕುಂಜಿಲ ತಂಡವನ್ನು ಮಣಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಸಭಾಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಂಡ0ಡ ರಘು ಪತಿ, [...]
ಚೇಲಾವರದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ವಸತಿಗೃಹಕ್ಕೆ ಬೀಗ ಜಡಿದ ಕಂದಾಯ ಇಲಾಖೆ
ಚೆಯ್ಯಂಡಾಣೆ ಡಿ 6: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಗ್ರಾಮದ ಕಂದಾಯ ಇಲಾಖೆಗೆ ಸೇರಿದ ಸರ್ವೆ ನಂ 154/9ರಲ್ಲಿ ಅರಣ್ಯ ಇಲಾಖೆಯವರು ಅನಧಿಕೃತವಾಗಿ ನಿರ್ಮಿಸಿದ್ದ ವಸತಿಗೃಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದರಿ ಜಾಗವು ಕಂದಾಯ ಇಲಾಖೆಗೆ ಸೇರಿದ್ದು, ಇಲ್ಲಿರುವ ಕಟ್ಟಡವನ್ನು ತೆರವುಗೊಳಿಸುವಂತೆ ತಹಶೀಲ್ದಾರರು 11.10.2023 ರಂದು ಆದೇಶ ನೀಡಲಾಗಿತ್ತು. ಅದರಂತೆ 05.12.2023 ರಂದು ಅರಣ್ಯ ಇಲಾಖೆ ನಿರ್ಮಿಸಿದ ವಸತಿ ಗೃಹದ ಕಟ್ಟಡವನ್ನು ಚೇಲಾವರ ಗ್ರಾಮದ ಗ್ರಾಮಸ್ಥರು ಹಾಗೂ ನರಿಯಂದಡ ಗ್ರಾಮದ ಅಭಿವೃದ್ಧಿ ಅಧಿಕಾರಿಯವರ ಸಮ್ಮುಖದಲ್ಲಿ ಕಂದಾಯ ಇಲಾಖೆಯ [...]
ಚೆಯ್ಯಂಡಾಣೆಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನ ಗ್ರಾಮ ಸಭೆ
ಚೆಯ್ಯಂಡಾಣೆ, ಡಿ 4. ನರಿಯಂದಡ ಗ್ರಾಮ ಪಂಚಾಯಿತಿಯ 2023-24 ನೇ ಸಾಲಿನ ಮೊದಲ ಹಂತದ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯು ನರಿಯಂದಡ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ನೋಡೆಲ್ ಅಧಿಕಾರಿಯಾಗಿ ಆಗಮಿಸಿದ ಮಡಿಕೇರಿ ತಾಲೂಕು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಸನ್ನ ವಹಿಸಿ ಮಾತನಾಡಿದರು. ಹಣಕಾಸು ಯೋಜನೆಯ ವರದಿಯನ್ನು ಹಾಗೂ ಕಾಮಗಾರಿಯ ಲೆಕ್ಕ ಪತ್ರದ ಮಾಹಿತಿಯನ್ನು ಸಾಮಾಜಿಕ ಲೆಕ್ಕ ಪರಿಶೋಧಕಿ ನುಸೈಬ ಮಂಡಿಸಿದರು. ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧಕ ಸುಂದರೇಶ್ ಮಾತನಾಡಿ ಲೆಕ್ಕ [...]
ಚೆಯ್ಯಂಡಾಣೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ
ನಾಡಿನ ಸರ್ವಾಂಗೀಣ ಪ್ರಗತಿಗೆ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘ ಸಹಕಾರಿ : ಶಾಂತ ಮಲ್ಲಿಕಾರ್ಜುನ ಸ್ವಾಮಿಜಿ ಚೆಯ್ಯಂಡಾಣೆ, ಡಿ 3. ನಾಡಿನಾದ್ಯಂತ ಲಕ್ಷಾಂತರ ಜನರ ಬದುಕಿಗೆ ಬೆಳಕನ್ನು ಚೆಲ್ಲಿದಂತಹ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮನುಷ್ಯನ ಸರ್ವಾಂಗೀಣ ಪ್ರಗತಿಗೆ ಬೇಕಾದಂತಹ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಮನುಷ್ಯನ ಜೀವನದ ಗುಣಮಟ್ಟವನ್ನು ಮೇಲೆತರಲು ಮಾಡಿರುವ ಸೇವೆ ಶ್ಲಾಘನೀಯ ಎಂದು ಅರಮೇರಿ ಕಳಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ [...]
ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಗೆ ನೂತನ ಸಾರಥ್ಯ
ಕೊಡಗಿನ ಅನಿವಾಸಿಗಳ ಒಕ್ಕೂಟವಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರೇಬಿಯಾ ಇದರ ವಾರ್ಷಿಕ ಮಹಾಸಭೆಯು ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಹಂಸ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ರಿಯಾದ್ ಅಲ್ಮಾಸ್ ಆಡಿಟೋರಿಯಂನಲ್ಲಿ ನಡೆಯಿತು. ಮರ್ಕಝುಲ್ ಹಿದಾಯ ಕೊಟ್ಟಮುಡಿ ಇದರ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಸಖಾಫಿ ಮುಖ್ಯ ಅತಿಥಿಯಾಗಿ ಆಗಮಿಸಿದರು. ಸೌದಿ ಅರೇಬಿಯಾದಲ್ಲಿರುವ ಕೊಡಗಿನ ಯಾವುದೇ ಅನಿವಾಸಿಗಳು ಜಾತಿ ಮತ ಭೇದವಿಲ್ಲದೆ ಸಂಕಷ್ಟಕ್ಕೆ ಒಳಗಾದರೆ ಅವರಿಗೆ ಬೇಕಾದ ಸಹಾಯ ಹಸ್ತಗಳನ್ನು ನೀಡಲು, ಸಂಘಟನೆಯ ಸದಸ್ಯರುಗಳ ಕುಂದು ಕೊರತೆಗಳನ್ನು ತಿಳಿದು ಅವರಿಗೆ [...]
ಡಿ :3 ರಂದು ಚೆಯ್ಯಂಡಾಣೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ
ಚೆಯ್ಯಂಡಾಣೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ( ರಿ) ಹಾಗೂ ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟ ನರಿಯಂದಡ ಇದರ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಚೆಯ್ಯ0ಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಡಿ-3 ರಂದು ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮ ಪೂಜ್ಯ ಡಾ-ಡಿ.ವೀರೇಂದ್ರ ಹೆಗಡೆಯವರು ಹಾಗೂ ಮಾತೃಶ್ರೀ ಹೇಮಾವತಿ ಹೆಗಡೆಯವರ ಶುಭಾಶೀರ್ವಾದಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ. ತಾ 3 ರ ಆದಿತ್ಯವಾರ ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ [...]
ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾವಳಿ: ಕೊಕೇರಿ ಹಾಗೂ ಬಾವಲಿ ತಂಡ ಫೈನಲ್ ಗೆ ಲಗ್ಗೆ
ಕರಡದಲ್ಲಿ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾವಳಿ ಕೊಕೇರಿ ಹಾಗೂ ಬಾವಲಿ ತಂಡ ಫೈನಲ್ ಗೆ ಲಗ್ಗೆ ಪರಾಜಿತ 9 ತಂಡಕ್ಕೆ ಟೈಸನ್ ಕೊಳಿ ಹಾಗೂ ಒಂದು ಕುಪ್ಪಿ ವಿಶೇಷ ಬಹುಮಾನ ಚೆಯ್ಯಂಡಾಣೆ ನ 24. ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ಆಯೋಜಿಸಿರುವ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟದಲ್ಲಿ ಬಾವಲಿ ಹಾಗೂ ಕೊಕೇರಿ ತಂಡ ಫೈನಲ್ ಹಂತಕ್ಕೆ ತಲುಪಿದೆ. ಪಂದ್ಯಾಟ ವಿವರ ಮೊದಲ ಪಂದ್ಯಾಟವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ [...]
ಕರಡದಲ್ಲಿ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟಕ್ಕೆ ಚಾಲನೆ
ಕರಡದಲ್ಲಿ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟಕ್ಕೆ ಚಾಲನೆ ಗ್ರಾಮೀಣ ಕ್ರೀಡಾಕೂಟದಿಂದ ಉತ್ತಮ ಬಾಂದವ್ಯ ವೃದ್ಧಿ: ಕೋಡಿರ ಪ್ರಸನ್ನ ತಮ್ಮಯ್ಯ ಪರಾಜಿತ ತಂಡಕ್ಕೆ ಟೈಸನ್ ಕೊಳಿ ಹಾಗೂ ಒಂದು ಕುಪ್ಪಿ ವಿಶೇಷ ಬಹುಮಾನ ಚೆಯ್ಯ0ಡಾಣೆ ನ 23. ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ಇದರ ವತಿಯಿಂದ ಇಂದಿನಿಂದ 25 ರವರೆಗೆ ಮೊದಲ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಗ್ರಾಮೀಣ ಕ್ರೀಡಾಕೂಟದಿಂದ ಉತ್ತಮ ಬಾಂದವ್ಯ ವೃದ್ಧಿಯಾಗಲಿದೆ.ಕರಡ ಪ್ರಥಮ ಕೌಟುಂಬಿಕ [...]
ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗುವ ಜಾಬಿರ್ ನಿಝಾಮಿ ಗೆ ಸನ್ಮಾನ
ಕಡಂಗ: ಸ್ಥಳೀಯ ಶಾದಿಮಹಲ್ ಸಭಾಂಗಣದಲ್ಲಿ ಕೆಡಿಎಸ್ ಮುಸ್ಲಿಂ ಯೂತ್ ಚಾರೀಟಿ ಕಡಂಗ ವತಿಯಿಂದ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಾಮಾಜಿಕ ಜಾಲತಾಣದ ಮೂಲಕ ಕೊಡಗಿನ ಹಾಗೂ ಕರ್ನಾಟಕ ಹಾಗೂ ಕೇರಳದ ನಾನಾ ಭಾಗಗಳಲ್ಲಿ ಹಲವಾರು ರೋಗಿಗಳಿಗೆ ಹಾಗೂ ಬಡ ಅನಾಥ ಕುಟುಂಬಕ್ಕೆ ಸಹಾಯಕ್ಕಾಗಿ ಜಾಲತಾಣಗಳ ಮೂಲಕ ವಿಡಿಯೋ ಮಾಡಿ ಜನ ಮನ ಗೆದ್ದ ಚಾರೀಟಿ ಕಾರ್ಯಕರ್ತ ನಾಪೋಕ್ಲು ಸಮೀಪದ ಚೆರಿಯಪರಂಬು ನಿವಾಸಿ ಜಾಬಿರ್ ನಿಝಾಮಿ (ಸೇವ್ ದಿ ಡ್ರಿಮ್ಸ್ ಟ್ರಸ್ಟ್) ಯವರನ್ನು ಕಡಂಗದ ಕೆಡಿಎಸ್ ಮುಸ್ಲಿಂ ಯೂತ್ ಚಾರೀಟಿ [...]
23 ರಿಂದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟ
23 ರಿಂದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟ ಒಟ್ಟು 11 ಬಲಿಷ್ಠ ತಂಡಗಳ ಹೋರಾಟ ಪಂದ್ಯಾಟಕ್ಕೆ ಸಜ್ಜು ಗೊಳ್ಳುತ್ತಿರುವ ಮೈದಾನ ಚೆಯ್ಯ0ಡಾಣೆ ನ 20. ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ಇದರ ವತಿಯಿಂದ ನ.23 ರಿಂದ 25 ರವರೆಗೆ ಮೊದಲ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಬೇಪುಡಿಯಂಡ ಬಿದ್ದಪ್ಪನವರು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕರಡದಲ್ಲಿರುವ ಪ್ರಾಥಮಿಕ ಶಾಲಾ [...]
ಚೆಯ್ಯಂಡಾಣೆಯಲ್ಲಿ ಯಶಸ್ವಿಯಾಗಿ ನಡೆದ ಉಚಿತ ರೇಬೀಸ್ ಲಸಿಕಾ ಶಿಬಿರ
ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ಹಾಗೂ ಪಶು ಇಲಾಖೆಯ ಸಂಯುಕ್ತ ಅಶ್ರಯದಲ್ಲಿ ಚೆಯ್ಯ0ಡಾಣೆ ಪಶು ವೈದ್ಯಾ ಶಾಲೆಯಲ್ಲಿ ಉಚಿತ ರೇಬೀಸ್ ಲಸಿಕಾ ಶಿಬಿರವು ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ನರಿಯಂದಡ ಗ್ರಾಮಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಗ್ರಾಮಸ್ಥರು ತಮ್ಮ ಮನೆಯಲ್ಲಿ ಸಾಕು ನಾಯಿಗಳನ್ನು ತಂದು ಉಚಿತ ಶಿಬಿರದ ಪ್ರಯೋಜನಗಳನ್ನು ಪಡೆದುಕೊಂಡರು. ಶಿಬಿರದಲ್ಲಿ 70 ಕ್ಕೂ ಹೆಚ್ಚು ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಯಿತು. ಕಾರ್ಯಕ್ರಮದಲ್ಲಿ ನಾಪೋಕ್ಲು ಪಶು ಆಸ್ಪತ್ರೆಯ ವೈದ್ಯರಾದ ಡಾ- ಶಿಲ್ಪಾ,ನಿವೃತ್ತ ಹಿರಿಯ ಪಶು ವೈದ್ಯಪರೀಕ್ಷರಾದ ಡಾ -ಪಳಂಗಪ್ಪ, [...]
ಚೆಯ್ಯಂಡಾಣೆ ಸ.ಮಾ.ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣದಿನ
ಚೆಯ್ಯ0ಡಾಣೆ ನ 11. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಡಾ - ಮೌಲಾನ ಅಬ್ದುಲ್ ಕಲಾಂ ಅಜಾದ್ ರವರ ಜನ್ಮ ದಿನಾಚರಣೆಯ ರಾಷ್ಟ್ರಿಯ ಶಿಕ್ಷಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಭಾರತದ ಮೊದಲ ಶಿಕ್ಷಣ ಮಂತ್ರಿ ಭಾರತ ರತ್ನ ಡಾ- ಮೌಲಾನ ಅಬ್ದುಲ್ ಕಲಾಂ ಅಜಾದ್ ರವರನ್ನು ಸ್ಮರಿಸುವ ಸಲುವಾಗಿ ರಾಷ್ಟ್ರೀಯ ಶಿಕ್ಷಣದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ, ಶಿಕ್ಷಕಿಯರಾದ ಜಯಪ್ರದ, ದಮಯಂತಿ, ಅತಿಥಿ ಶಿಕ್ಷಕಿ ಸತ್ಯಮ್ಮ , ವಿದ್ಯಾರ್ಥಿಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು.
ಚೆಯ್ಯಂಡಾಣೆ ಸ.ಮಾ.ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆ
ಚೆಯ್ಯ0ಡಾಣೆ, ನ 10. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶಾರದಾ ಪೂಜೆಯನ್ನು ಆಚರಿಸಲಾಯಿತು. ಪೂಜಾ ಕಾರ್ಯದ ನೇತೃತ್ವವನ್ನು ಅರ್ಚಕರಾದ ಶಿವಶರ್ಮ ನೆರವೇರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಶಾರದಾಂಬೆಯ ಕುರಿತು ವಿವಿಧ ಹಾಡುಗಳು ಮುಡಿಬಂತು. ಈ ಸಂದರ್ಭ ಶಾಲೆಯ ಎಸ್ ಡಿ ಎಂಸಿ ಅಧ್ಯಕ್ಷ ರತ್ನಾ,ಚೆಯ್ಯ0ಡಾಣೆ ಕ್ಲಸ್ಟರ್ ನ ಸಿಆರ್ ಪಿ ಉಷಾ, ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ, ಶಿಕ್ಷಕ ವೃಂದದವರು, ಪೋಷಕರು ಮತಿತ್ತರು ಉಪಸ್ಥಿತರಿದ್ದರು.
ಚೆಯ್ಯ0ಡಾಣೆ ಸ.ಮಾ.ಪ್ರಾ ಶಾಲೆಯಲ್ಲಿ ವಾಲ್ಮೀಖಿ ಜಯಂತಿ
ಚೆಯ್ಯ0ಡಾಣೆ ಸ.ಮಾ.ಪ್ರಾ ಶಾಲೆಯಲ್ಲಿ ವಾಲ್ಮೀಖಿ ಜಯಂತಿ ಚೆಯ್ಯ0ಡಾಣೆ, ಅ 28. ಸ್ಥಳೀಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಖಿ ಜಯಂತಿಯನ್ನು ಆಚರಿಸಲಾಯಿತು. ಶಿಕ್ಷಕಿ ಜಯಪ್ರಧ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭ ಮುಖ್ಯ ಶಿಕ್ಷಕಿ ಎಚ್.ಆರ್.ಪ್ರೇಮ ಕುಮಾರಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕರಡ ಸ.ಹಿ.ಪ್ರಾ ಶಾಲೆಯಲ್ಲಿ ವಾಲ್ಮೀಖಿ ಜಯಂತಿ
ಕರಡ ಸ.ಹಿ.ಪ್ರಾ ಶಾಲೆಯಲ್ಲಿ ವಾಲ್ಮೀಖಿ ಜಯಂತಿ ಚೆಯ್ಯ0ಡಾಣೆ, ಅ 28. ಸ್ಥಳೀಯ ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಖಿ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಲೀಲಾವತಿ ದಿನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಡಂಗದಲ್ಲಿ ಎಸ್ ವೈ ಎಸ್: ರಾಜ್ಯ ನಾಯಕರ ಜ್ಯೂಬಿಲಿ ಜರ್ನಿ ಕಾರ್ಯಕ್ರಮ .
ಕಡಂಗದಲ್ಲಿ ಎಸ್ ವೈ ಎಸ್: ರಾಜ್ಯ ನಾಯಕರ ಜ್ಯೂಬಿಲಿ ಜರ್ನಿ ಕಾರ್ಯಕ್ರಮ . ಚೆಯ್ಯ0ಡಾಣೆ ಅ 26. ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್‌ವೈಎಸ್) 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಯುಕ್ತ "ಪರಂಪರೆಯ ಪ್ರತಿನಿಧಿಗಳಾಗೋಣ"ಎಂಬ ಧ್ಯೇಯ ವಾಕ್ಯದಡಿಯಲ್ಲಿ 2024 ರ ಜನವರಿ 24 ರಂದು ಮಂಗಳೂರಿನಲ್ಲಿ ನಡೆಯಲಿರುವ ಮಹಾ ಸಮ್ಮೇಳನದ ಪ್ರಚಾರಾರ್ಥ ಎಸ್ ವೈ ಎಸ್ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ ರಾಜ್ಯ ಸಮಿತಿ ನಾಯಕರ ಜ್ಯೂಬಿಲಿ ಜರ್ನಿ ಕಾರ್ಯಕ್ರಮವು ಕಡಂಗ ಬದ್ರಿಯಾ ಮದರಸ ಸಭಾಂಗಣದಲ್ಲಿ [...]
ಚೆಯ್ಯಂಡಾಣೆಯಲ್ಲಿ ಆಯೋಜನೆಗೊಂಡ ಕೃಷಿ ತರಬೇತಿ ಕಾರ್ಯಾಗಾರ
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವತಿಯಿಂದ ರೈತ ಮತ್ತು ರೈತ ಮಹಿಳೆಯರ ಕೃಷಿ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ನರಿಯಂದಡ ಸಂಜೀವಿನಿ ಒಕ್ಕೂಟದ ಸದಸ್ಯರಿಗೆ ಒಂದು ದಿನದ ಅಣಬೆ ಬೇಸಾಯದ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು. ಒಕ್ಕೂಟದ ಕೃಷಿ ಸಖಿ ಹಾಗೂ ಕೂಡಿಗೆ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಸ್ವರ್ಣ ಶ್ರೀ ತರಬೇತಿಯ ನೇತೃತ್ವ ವಹಿಸಿ ಅಣಬೆ ಕೃಷಿಯನ್ನು ಯಾವ ರೀತಿ ಮಾಡಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿ ಅಣಬೆ ಬೀಜವನ್ನು ತಂದು ಪೂರ್ಣ [...]
ಸೌದಿ ಅರೇಬಿಯಾದಲ್ಲಿ ಕೊಡಗಿನ ಪ್ರವಾಸಿಗರ ಮೀಲಾದ್ ಸಂಗಮ
ಚೆಯ್ಯ0ಡಾಣೆ: ಕೊಡಗಿನ ಸುನ್ನಿ ಪ್ರವಾಸಿಗಳ ಒಕ್ಕೂಟವಾದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಶನ್ ಸೌದಿ ಅರೇಬಿಯ ರಾಷ್ಟ್ರೀಯ ಸಮಿತಿ ವತಿಯಿಂದ ಪ್ರತಿ ವರ್ಷ ನಡೆಸಿ ಕೊಂಡು ಬರುವ ಮೀಲಾದ್ ಸಮಾವೇಶ ಈ ವರ್ಷವೂ ಅತಿ ವಿಜೃಂಭಣೆಯಿಂದ ಇತ್ತೀಚಿಗೆ ರಿಯಾದ್ ನಲ್ಲಿರುವ ಅಲ್ ಮಾಸ್ ಆಡಿಟೋರಿಯಮಿನಲ್ಲಿ ನಡೆಯಿತು. ಬುರ್ದಾ ಮತ್ತು ಮೌಲಿದ್ ಮಜ್ಲಿಸ್ ನೊಂದಿಗೆ ಹಂಸ ಮುಸ್ಲಿಯಾರ್ ಮಾಪಿಳತ್ತೋಡು ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಕ್ಕೆ ಚಾಲನೆ ನೀಡಲಾಯಿತು. ನಂತರ ವಿದ್ಯಾರ್ಥಿಗಳ ಕಾರ್ಯಕ್ರಮ ಹಾಗೂ ಮೀಲಾದ್ ಸಮಾವೇಶ ನಡೆಸಲಾಯಿತು. ಕೊಡಗು ಸುನ್ನಿ [...]
ನರಿಯಂದಡ ಅಯ್ಯಪ್ಪ ಯುವಕ ಸಂಘದಲ್ಲಿ ಆಯುಧ ಪೂಜೆ
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಅಯ್ಯಪ್ಪ ಯುವಕ ಸಂಘದಲ್ಲಿ ವಾಹನಗಳಿಗೆ ಸಾಮೂಹಿಕ ಪೂಜೆ ನಡೆಯಿತು. 40 ಕ್ಕೂ ಹೆಚ್ಚು ವಾಹನಗಳು ಗಳಿದ್ದವು ಅಲಂಕೃತ ವಾಹನಗಳ ಸಾಲು ಗಮನ ಗಮನಸೆಳೆಯಿತು. ಪೂಜಾ ಕಾರ್ಯಕ್ರಮವನ್ನು ಅರ್ಚಕರಾದ ಶಿವಶರ್ಮ ನೆರವೇರಿಸಿದರು. ಈ ಸಂದರ್ಭ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷರಾದ ಬೆಳಿಯಂಡ್ರ ಹರಿಪ್ರಸಾದ್, ಉಪಾಧ್ಯಕ್ಷರಾದ ಮಂಜಾಪುರ ಛಾಯಾಪ್ರಕಾಶ್, ಕೋಶಾಧಿಕಾರಿ ಮನೋಹರ್, ಕಾರ್ಯದರ್ಶಿ ಸತ್ಯ,ಮಾಜಿ ಅಧ್ಯಕ್ಷರಾದ ಅನಂತ್ ಕುಮಾರ್ ತೋಟಂಬೈಲು, ಹಿರಿಯರಾದ ಪೋಕ್ಕುಳಂಡ್ರ ಪಳಂಗಪ್ಪ, ನಾಣಯ್ಯ, ಲಕ್ಷ್ಮಣ,ಬಾಲಕೃಷ್ಣ,ಮತಿತ್ತರರು ಉಪಸ್ಥಿತರಿದ್ದರು. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ನರಿಯಂದಡ ಭಗವತಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬ
ಸ್ಥಳೀಯ ನರಿಯಂದಡ ಭಗವತಿ ದೇವಸ್ಥಾನದಲ್ಲಿ ತಾ 15ರ ಭಾನುವಾರದಿಂದ ನವರಾತ್ರಿ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಪ್ರತಿದಿನ ಸಂಜೆ 6 ಗಂಟೆ ಯಿಂದ 7.30 ರ ವರೆಗೆ ಪೂಜೆ ನಡೆಯುತ್ತದೆ. ಪ್ರತಿವರ್ಷ ಇಲ್ಲಿ 9 ದಿನಗಳ ಕಾಲ ನವರಾತ್ರಿ ಹಬ್ಬವನ್ನು ಆಚರಿಸಿ ತಾ- 24 ರಂದು ಹತ್ತನೇ ದಿನ ವಿಜಯ ದಶಮಿ ಪ್ರಯುಕ್ತ ಪೂಜೆ ನಡೆಯಲಿದೆ ಎಂದು ಭಗವತಿ ದೇವಸ್ಥಾನ ಅಧ್ಯಕ್ಷರಾದ ಬಟ್ಟಿಯಂಡ ಜಯರಾಂ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಕರಡ ಅಂಗವಾಡಿ ಕೇಂದ್ರದಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ
ಚೆಯ್ಯ0ಡಾಣೆ: ಸ್ಥಳೀಯ ಕರಡ ಅಂಗನವಾಡಿ ಕೇಂದ್ರದಲ್ಲಿ ಸ್ವಚ್ಛ ಕೈಗಳು ಸುಸ್ಥಿರ ಅಭಿವೃದ್ಧಿ ಕೀಲಿ ಎಂಬ ಘೋಷವಾಕ್ಯದಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆಯನ್ನು ಆಚರಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಕೆ.ಪಿ. ಈಶ್ವರಿ ಸ್ವಚ್ಛತೆ ಮತ್ತು ಕೈ ತೊಳೆಯುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತ ವಿಧಾನದ ಮೂಲಕ ಮಾಹಿತಿ ನೀಡಿದರು. ಈ ಸಂದರ್ಭ ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಅಂಗನವಾಡಿ ವಿದ್ಯಾರ್ಥಿಗಳು, ಆಶಾಕಾರ್ಯಕರ್ತೆ ಪುಷ್ಪಲತಾ, ಗ್ರಂಥಪಾಲಕಿ ರೆನಿ ಮತಿತ್ತರರು ಉಪಸ್ಥಿತರಿದ್ದರು. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಚೇಲಾವರ ಭಗವತಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬ
ಚೆಯ್ಯ0ಡಾಣೆ: ಸ್ಥಳೀಯ ಚೇಲಾವರದ ಚೋಲಿ ಭಗವತಿ ದೇವಸ್ಥಾನದಲ್ಲಿ ತಾ 15ರ ಭಾನುವಾರದಿಂದ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿದಿನ ಸಂಜೆ 5.30 ರಿಂದ 7.30 ರ ವರೆಗೆ ಪೂಜೆ ಹಾಗೂ ಉಪಹಾರ ಇರುತ್ತದೆ. ಪ್ರತಿವರ್ಷ ಇಲ್ಲಿ 9 ದಿನಗಳ ಕಾಲ ನವರಾತ್ರಿ ಹಬ್ಬವನ್ನು ಆಚರಿಸಿ ತಾ- 24 ರಂದು ಹತ್ತನೇ ದಿನ ವಿಜಯ ದಶಮಿ ಪ್ರಯುಕ್ತ ಪೂಜೆ ಹಾಗೂ ಮಧ್ಯಾಹ್ನ ಭೋಜನ ನಂತರ ಕಾರ್ಯಕ್ರಮ ಸಮಾಪ್ತಿ ಗೊಳ್ಳಲಿದೆ. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಚೆಯ್ಯಂಡಾಣೆ: ಕಾವೇರಿ ತೀರ್ಥ ವಿತರಣೆ
ಮಲ್ಮ ಯುವಕ ಸಂಘ ಕಕ್ಕಬ್ಬೆ ವತಿಯಿಂದ 18ನೇ ವರ್ಷದ ಕಾವೇರಿ ತೀರ್ಥ ವಿತರಣೆ ಚೆಯ್ಯ0ಡಾಣೆ ಪಟ್ಟಣದಲ್ಲಿ ನಡೆಯಿತು. ಕಕ್ಕಬ್ಬೆ ಮೂಲಕ ಹಾದು ಚೆಯ್ಯ0ಡಾಣೆ ಪಟ್ಟಣದವರೆಗೆ ಕಾವೇರಿ ತೀರ್ಥ ವಿತರಿಸಲಾಯಿತು. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಕರಡದಲ್ಲಿ 44 ನೇ ವರ್ಷದ ಕೈಲ್ ಮೂರ್ತ ಕ್ರೀಡಾಕೂಟ
ಚೆಯ್ಯ0ಡಾಣೆ: ಕರಡ ಹಾಗೂ ಅರಪಟ್ಟು ಗ್ರಾಮಸ್ಥರು ಆಯೋಜಿಸಿದ 44 ನೇ ವರ್ಷದ ಕೈಲ್ ಮೂರ್ತ ಕ್ರೀಡಾಕೂಟ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ನಡಿಕೇರಿಯಂಡ.ಎಂ.ಸೋಮಯ್ಯ ವಹಿಸಿದರು. ಕ್ರೀಡಾಕೂಟವನ್ನು ದೈಹಿಕ ಶಿಕ್ಷಕಿ ಮೋನಿಕಾ ಕಾವೇರಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಟ್ರಪಂಡ.ಜಿ.ಕುಟ್ಟಪ್ಪ,ಪಾಂಡಂಡ.ಬಿ.ಪ್ರಕಾಶ್,ಅಂಬಾಡಿರ.ಎ. ಅಪ್ಪಯ್ಯ,ಮಾತಂಡ ತನುಜ ಬಿದ್ದಪ್ಪ,ಮಾಚಿಮಾಡ ಪುಷ್ಪ ಪೂವಯ್ಯ ಪಾಲ್ಗೊಂಡಿದರು. ಮಹಿಳೆಯರಿಗೆ,ಪುರುಷರಿಗೆ, ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ವರ್ದೆ ನಡೆಯಿತು. ಕರಡ ಹಾಗೂ ಅರಪಟ್ಟು ಗ್ರಾಮಸ್ಥರಿಗೆ ನಡೆದ ಹಾಕಿ [...]
ಕಡಂಗ ದಲ್ಲಿ ‘ಸ್ವಚ್ಛತೆಯೇ ಸೇವೆ’ ಅಭಿಯಾನ
ಕಡಂಗ: ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಪಟ್ಟು ಕಡಂಗ ಪಟ್ಟಣದಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ಪಂಚಾಯಿತಿ ಹಾಗೂ ಆಟೋ ಚಾಲಕರ ಸಂಘದ ವತಿಯಿಂದ ನಡೆಸಲಾಯಿತು. ಮಹಾತ್ಮ ಗಾಂಧೀಜಿಯವರ ಜನ್ಮ ದಿನವಾದ ಇಂದು ಸ್ವಚ್ಛತಾ ದಿನದ ಅಂಗವಾಗಿ ಪಟ್ಟಣದ ಮುಖ್ಯರಸ್ತೆಗಳಲ್ಲಿನ ಕಸಗಳನ್ನು ಶೇಖರಿಸಿ ಗ್ರಾಮವನ್ನು ಸ್ವಚ್ಛತೆಯಿಂದ ಇಡಲಾಯಿತು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಯರವರು ಸ್ವಚ್ಛತೆ ಕಾಪಾಡಲು ನಮ್ಮೆಲ್ಲರ ಕರ್ತವ್ಯ ಹಾಗೂ ಸ್ವಚ್ಛತೆಯಿಂದ ಆಗುವ ಪ್ರಾಮುಖ್ಯತೆಯನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮ [...]
ಕರಡದಲ್ಲಿ ನಾನು ಓದುವ ಪುಸ್ತಕಗಳ ಅಭಿಯಾನ ಕಾರ್ಯಕ್ರಮ
ಚೆಯ್ಯ0ಡಾಣೆ, ಅ 3. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಕ್ಕಳು ಓದುವುದರಲ್ಲಿ ಮತ್ತು ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಓದುವ ಬೆಳಕು ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಇದರ ಅಂಗವಾಗಿ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ ಕರಡ ಗ್ರಂಥಾಲಯದಲ್ಲಿ 'ಸೆಪ್ಟೆಂಬರ್' ತಿಂಗಳಲ್ಲಿ ನಾನು ಓದುವ ಪುಸ್ತಕ' ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದರು. ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಆಶಾಕುಮಾರಿ ಮಾತನಾಡಿ ವಿದ್ಯಾರ್ಥಿಗಳು ಪುಸ್ತಕ ಹಾಗೂ ಪತ್ರಿಕೆಗಳನ್ನು ಹೆಚ್ಚಾಗಿ [...]
ಕಡಂಗ ಮುಹ್ಯದ್ದೀನ್ ಜಮಹತ್ ವತಿಯಿಂದ ಈದ್‌ಮಿಲಾದ್ ಆಚರಣೆ
ಜುಮಾ ಮಸೀದಿಯಿಂದ ಕೋಕ್ಕಂಡ ಬಾಣೆ ದರ್ಗಾಕ್ಕೆ ಪ್ರವಾದಿ ಸಂದೇಶ ಜಾಥಾ ಕಡಂಗ, ಸೆ 28. ಮುಹ್ಯದ್ದೀನ್ ಜುಮಾ ಮಸೀದಿ ಹಾಗೂ ಮದರಸ ವತಿಯಿಂದ ವಿಜೃಂಭಣೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುಲ್ಲ ದ್ವಜಾರೋಹಣ ನೆರವೆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜುಮಾ ಮಸೀದಿಯಿಂದ ಅದ್ದೂರಿ ಮೆರವಣಿಗೆ ಪಟ್ಟಣದಲ್ಲಿ ಸಾಗಲಾಯಿತು. ವಿದ್ಯಾರ್ಥಿಗಳಿಂದ ಧಫ್,ಸ್ಕೌಟ್, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರ್ಥನೆಯನ್ನು ಜಮಹತ್ ಖತೀಬ್ ಲತೀಫ್ ಲತೀಫಿ ನೆರವಿರಿಸಿದರು ಈ ಸಂದರ್ಭದಲ್ಲಿ ಮದರಸ ಮುಖ್ಯೋಪಾಧ್ಯಾಯದರಾದ [...]
ಎಡಪಾಲದಲ್ಲಿ ಈದ್‌ಮಿಲಾದ್ ಆಚರಣೆ
ಜುಮಾ ಮಸೀದಿಯಿಂದ ಅಂಡತ್ ಮಾನಿ ದರ್ಗಾಕ್ಕೆ ಪ್ರವಾದಿ ಸಂದೇಶ ಜಾಥಾ ಚೆಯ್ಯ0ಡಾಣೆ, ಸೆ 28. ಎಡಪಾಲದ ಜುಮಾ ಮಸೀದಿ ಹಾಗೂ ನಜ್ಮುಲ್ ಹುದಾ ಮದರಸ ವತಿಯಿಂದ ವಿಜೃಂಭಣೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಪೋಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು.ಶಾಫಿ ದ್ವಜಾರೋಹಣ ನೆರವೆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜುಮಾ ಮಸೀದಿಯಿಂದ ಆರಂಭ ಗೊಂಡ ಜಾಥಾ ಅಂಡತ್ ಮಾನಿ ದರ್ಗಾಕ್ಕೆ ತೆರಳಿ ಅಲ್ಲಿ ಮುದರಿಸ್ ನಿಝರ್ ಪೈಝಿ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ವಿದ್ಯಾರ್ಥಿಗಳಿಂದ ಧಫ್,ಸ್ಕೌಟ್, [...]
ಕಡಂಗ ಬದ್ರಿಯ ಜಮಹತ್ ವತಿಯಿಂದ ಈದ್‌ಮಿಲಾದ್ ಆಚರಣೆ
ಜುಮಾ ಮಸೀದಿಯಿಂದ ಕೋಕ್ಕಂಡ ಬಾಣೆ ದರ್ಗಾಕ್ಕೆ ಪ್ರವಾದಿ ಸಂದೇಶ ಜಾಥಾ ಕಡಂಗ, ಸೆ 28. ಬದ್ರಿಯ ಜುಮಾ ಮಸೀದಿ ಹಾಗೂ ತಾಜುಲ್ ಉಲಮಾ ಮದರಸ ವತಿಯಿಂದ ವಿಜೃಂಭಣೆಯಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಅಬ್ದುರಹ್ಮಾನ್ ಅರಫಾ ದ್ವಜಾರೋಹಣ ನೆರವೆರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜುಮಾ ಮಸೀದಿಯಿಂದ ಅದ್ದೂರಿ ಮೆರವಣಿಗೆ ಪಟ್ಟಣದಲ್ಲಿ ಸಾಗಲಾಯಿತು. ವಿದ್ಯಾರ್ಥಿಗಳಿಂದ ಧಫ್,ಸ್ಕೌಟ್, ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಾರ್ಥನೆಯನ್ನು ಜಮಹತ್ ಖತೀಬ್ ಇಸ್ಮಾಯಿಲ್ ಲತೀಫಿ ನೆರವಿರಿಸಿದರು. ಈ [...]
ನರಿಯಂದಡ ಗ್ರಾಮ ಪಂಚಾಯಿತಿಯ ವತಿಯಿಂದ ಸ್ವಚ್ಛತೆಯ ಸೇವೆ ಕಾರ್ಯಕ್ರಮ
ಚೆಯ್ಯ0ಡಾಣೆ, ಸೆ 26. ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ,ಕೊಡಗು ಜಿಲ್ಲಾ ಪಂಚಾಯಿತಿ,ತಾಲೂಕು ಪಂಚಾಯಿತಿ ಮಡಿಕೇರಿಯ ಇದರ ವತಿಯಿಂದ ಸ್ವಚ್ಛತೆಯ ಸೇವೆ ಎಂಬ ತ್ಯಾಜ್ಯ ಮುಕ್ತ ಭಾರತ ಅಭಿಯಾನ ಜಾಥಾ ಕಾರ್ಯಕ್ರಮದ ನಡೆಯಿತು. ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಜಾಥಾಕ್ಕೆ ಚಾಲನೆ ನೀಡಿದರು. ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ ಸ್ವಚ್ಛತೆಯ ಬಗ್ಗೆ ಪ್ರತಿಜ್ಞಾ ವಿಧಿ ಬೋದಿಸಿದರು. ಇದೆ ಸಂದರ್ಭ ಸಂಜೀವಿನಿ ಒಕ್ಕೂಟದ ಸದಸ್ಯರು ಒಕ್ಕೂಟಕ್ಕೆ ಸೇರ್ಪಡೆ ಗೊಳಿಸುವ ಘೋಷಣೆ,ಸಾಮಾಜಿಕ ಕ್ರೋಡಿಕರಣ ಜಾಥಾ ನಡೆಸಿದರು. [...]
ಚೆಸ್ಕಾಂ ಬಿಲ್ ವಸೂಲಾತಿಗೆ ಬಂದ ಸಿಬ್ಬಂದಿಯನ್ನು ತರಾಟೆಗೆ ತೆಗೆದು ಕೊಂಡ ಗ್ರಾಮಸ್ಥರು
ಚೆಯ್ಯ0ಡಾಣೆ: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಬಿಲ್ ನೀಡದೆ ಇದ್ದು ಪಂಚಾಯಿತಿ ಕಟ್ಟಡದಲ್ಲಿ ವಿದ್ಯುತ್ ಹಣ ಪಡೆಯಲು ಬಂದ ಚೆಸ್ಕಾಂ ಸಿಬ್ಬಂದಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ಬಿಲ್ ನೀಡುತ್ತಿದ್ದರು. ಅದರಂತೆ ಪ್ರತಿ ತಿಂಗಳು ಗ್ರಾಮಸ್ಥರು ಪಂಚಾಯಿತಿ ಕಟ್ಟಡದಲ್ಲಿ ಚೆಸ್ಕಾಂ ಸಿಬ್ಬಂದಿ ಹಣ ವಸೂಲಾತಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕಳೆದ ಮೂರು ತಿಂಗಳುಗಳಿಂದ ವ್ಯಾಪ್ತಿಯಲ್ಲಿ ಯಾವುದೇ ವಿದ್ಯುತ್ ಬಿಲ್ ನೀಡಿಲ್ಲ.ಆದರೆ ಚೆಸ್ಕಾಂ [...]
ನರಿಯಂದಡ ಗ್ರಾಮ ಪಂಚಾಯಿತಿ ಜಮಾಬಂದಿ ಸಭೆ
ಚೆಯ್ಯ0ಡಾಣೆ, ಸೆ 26. ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿಯ 2022-23ನೇ ಸಾಲಿನ ಜಮಾಬಂದಿ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಡಿಕೇರಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಹೇಮಂತ್ ವಹಿಸಿದರು. ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ 15 ನೇ ಹಣಕಾಸು ಅನುದಾನದ ಕಾಮಗಾರಿಗಳ ವಿವರಣೆಯನ್ನು ನೀಡಿದರು. ಗ್ರಾ.ಪಂ.ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಬಿದ್ದಪ್ಪ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯ ಯೋಜನೆಯ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳ ವಿವರವನ್ನು ನೀಡಿದರು. ಅದರಲ್ಲಿ [...]
ಈದ್ ಮಿಲಾದ್ ಪ್ರಯುಕ್ತ ಎಡಪಾಲದಲ್ಲಿ ಸ್ವಚ್ಛತಾ ಕಾರ್ಯಕ್ರಮ
ಚೆಯ್ಯ0ಡಾಣೆ ಸೆ 25. ಎಡಪಾಲದ ಪೋಯಕೆರೆ ಫ್ರೆಂಡ್ಸ್ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮ ನಡೆಯಿತು. ಬಾವಲಿ ಮುಖ್ಯ ರಸ್ತೆಯಿಂದ ಎಡಪಾಲ ಮಾರ್ಗವಾಗಿ ಕಡಂಗಕ್ಕೆ ಸಂಚರಿಸುವ,ಎಡಪಾಲ ಜುಮಾ ಮಸೀದಿಗೆ ತೆರಳುವ ರಸ್ತೆಯ ಎರಡು ಬದಿಗಳಲ್ಲಿ ಬೆಳೆದು ನಿಂತಿದ್ದ ಕಾಡುಗಳನ್ನು ಯಂತ್ರೋಪಕರಣಗಳನ್ನು ಬಳಸಿ ಸ್ವಚ್ಛಗೊಳಿಸಿ ಹಾಗೂ ರಸ್ತೆಯಲ್ಲಿ ಹಾಕಿದ್ದ ಪ್ಲಾಸ್ಟಿಕ್ ಬಾಟಲಿ,ಕಸಕಡ್ಡಿ ಮತಿತ್ತರ ತ್ಯಾಜ್ಯ ಗಳನ್ನು ಸಂಗ್ರಹಿಸಿದರು ವಿಲೇವಾರಿ ಮಾಡಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಪೋಯಕೆರೆ ಫ್ರೆಂಡ್ ನ ಉಮ್ಮರ್ ಸಿಆರ್ ಪಿ, ಬಷೀರ್ ಬಿಎಸ್ಆರ್, [...]
ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜದ ವತಿಯಿಂದ ಸಂತೋಷ ಕೂಟ
ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ವರ್ದೆಯಲ್ಲಿ ಚೇನಂಡ ಬೋಪಣ್ಣ ವಿನ್ನರ್ ಚೆಯ್ಯ0ಡಾಣೆ ಸೆ 25: ಜನಾಂಗದ ಆಚಾರ ವಿಚಾರ ಪದ್ಧತಿ ಪರಂಪರೆಗಳನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಕೊಡವ ಸಮಾಜ ಮತ್ತು ಇತರ ಸಂಘ-ಸಂಸ್ಥೆಗಳದ್ದು ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್ ಪೊನ್ನಣ್ಣ ಹೇಳಿದರು. ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜದ ವತಿಯಿಂದ ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾದ ಕೈಲ್ ಮೂರ್ತ ಹಬ್ಬದ ಸಂತೋಷಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ [...]
ಸೆ.25ರಂದು ಅರಪಟ್ಟುವಿನಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ
ಚೆಯ್ಯ0ಡಾಣೆ: ಅರಪಟ್ಟು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ವತಿಯಿಂದ ತಾ - 25 (ಇಂದು) ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಇಂದು ಪೂರ್ವಾಹ್ನ 11 ಗಂಟೆಗೆ ಆಯುಷ್ ಆರೋಗ್ಯ ಕ್ಷೇಮಕೆಂದ್ರದಲ್ಲಿ ( ಸರಕಾರಿ ಆಯುರ್ವೇದ ಚಿಕಿತ್ಸಾಲಯ ಅರಪಟ್ಟು) 30ವರ್ಷ ಮೆಲ್ಪಟ್ಟವರಿಗೆ ಉಚಿತವಾಗಿ ರಕ್ತದೊತ್ತಡ (ಬಿಪಿ )) ಹಾಗೂ ಮಧುಮೇಹ (ಸಕ್ಕರೆ ಕಾಯಿಲೆ ) ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಸಾರ್ವನಿಕರು ಹೆಚ್ಚಿನ ಸಂಖ್ಯೆಯಲ್ಲಿ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜ ವತಿಯಿಂದ ಸಂತೋಷ ಕೂಟ
ಚೆಯ್ಯ0ಡಾಣೆ, ಸೆ 22. ಚೆಯ್ಯಂಡಾಣೆ ಕೇಂದ್ರ ಕೊಡವ ಸಮಾಜದ ವತಿಯಿಂದ ಕೈಲ್ ಮೂರ್ತ ಹಬ್ಬದ ಪ್ರಯುಕ್ತ ಸಂತೋಷಕೂಟ ಕಾರ್ಯಕ್ರಮ ತಾ.24 ಭಾನುವಾರ ಬೆಳಿಗ್ಗೆ 11 ಗಂಟೆಗೆ ಕೊಡವ ಸಮಾಜದ ಅಧ್ಯಕ್ಷ ಮುಂಡಿಯೋಳಂಡ ಬಿದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ಚೆಯ್ಯಂಡಾಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ,ವಿಧಾನಪರಿಷತ್ ಸದಸ್ಯರಾದ ಮಂಡೇಪಂಡ ಸುಜಾ ಕುಶಾಲಪ್ಪ, ನಿವೃತ ಭೂಸೇನೆಯ ಕರ್ನಲ್ ನೇರಪಂಡ ಸಾಗರ್ ಚಿಣ್ಣಪ್ಪ, [...]
ಕಾಕೋಟುಪರಂಬು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಫರ್ಧೆ
ಕಡಂಗ: ಕಾಕೋಟುಪರಂಬು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಕಡಂಗ ವಿಜಯ ಪ್ರೌಢಶಾಲಾ ಸಭಾಂಗಣದಲ್ಲಿ ನಡೆಸಲಾಯಿತು . ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಪ್ರೌಢಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಬಲ್ಲಿಯಂಡ ಬಿದ್ದಪ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ವಿರಾಜಪೇಟೆ ಕ್ಷೇತ್ರದ ಶಿಕ್ಷಣಾಧಿಕಾರಿ ಎಂ ಪ್ರಕಾಶ್ ರವರು ಮಾತನಾಡಿ ಮಕ್ಕಳ ಪ್ರತಿಭೆ ಅನಾವರಣಗೊಳ್ಳಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ಪ್ರತಿಯೊಬ್ಬರಲ್ಲಿ ಒಂದಲ್ಲ ಒಂದು ಪ್ರತಿಬೆ ಅಡಗಿರುತ್ತದೆ ಆ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಅದರಲ್ಲೂ [...]
ನಾಪೋಕ್ಲು ಕೆಪಿಎಸ್ ಶಾಲೆಯಲ್ಲಿ ಪೋಷನ್ ಅಭಿಯಾನ ಕಾರ್ಯಕ್ರಮ
ನಾಪೋಕ್ಲು : ಸ್ಥಳೀಯ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲೆಯಲ್ಲಿ ಪೋಷಣ್ ಅಭಿಯಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ. ಎ.ಹಾರಿಸ್, ಶಾಲೆಯ ಮುಖ್ಯಶಿಕ್ಷಕಿ ಚಂದ್ರಕಲಾ, ಶಿಕ್ಷಕಿ ಸೌಮ್ಯ, ನಳಿನಿ,ಮಾತನಾಡಿ ದಿನನಿತ್ಯ ಜೀವನದಲ್ಲಿ ಪೌಷ್ಟಿಕ ಆಹಾರ ಸೇವನೆಯಿಂದ ಮನುಷ್ಯನ ಆರೋಗ್ಯದಲ್ಲಿ ಉಂಟಾಗುವ ಉಪಯೋಗಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭ ಶಾಲೆಯ ಶಿಕ್ಷಕವೃಂದ,ಅಡುಗೆ ಸಿಬ್ಬಂಧಿಗಳು ವಿದ್ಯಾರ್ಥಿಗಳು ಹಾಜರಿದ್ದರು. [...]
ಎಡಪಾಲದಲ್ಲಿ ಎ.ಎಸ್. ಪೊನ್ನಣ್ಣನಿಗೆ ಅದ್ದೂರಿ ಸ್ವಾಗತ
ಚೆಯ್ಯ0ಡಾಣೆ, ಸೆ 20. ಸಮೀಪದ ಎಡಪಾಲ ಗ್ರಾಮಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ನಂತರ ಪ್ರಥಮ ಬಾರಿಗೆ ಆಗಮಿಸಿದ ಎ.ಎಸ್. ಪೊನ್ನಣ್ಣ ನವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಪಟಾಕಿ ಸಿಡಿಸಿ ಜೈಕಾರ ಹಾಕಿ ಸ್ವಾಗತಿಸಿ ಗ್ರಾಮಕ್ಕೆ ಬರ ಮಾಡಿಕೊಂಡರು. ಸ್ಥಳೀಯ ಮದರಸ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಎ.ಎಸ್. ಪೊನ್ನಣ್ಣ ನಮ್ಮೆಲ್ಲ ನಾಯಕರು ಕಾರ್ಯಕರ್ತರು ಒಗ್ಗಟ್ಟಿನಿಂದ ಈ ಬಾರಿಯ ಚುನಾವಣೆ ನಡೆಸಿ ಎರಡು ಕ್ಷೇತ್ರದಲ್ಲಿ ನಮಗೆ ಗೆಲುವನ್ನ ತಂದಿದ್ದೀರಾ ಇದು ಕರ್ನಾಟಕದ [...]
ಕಡಂಗ ಸುತ್ತಮುತ್ತಲಿನ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಎ.ಎಸ್. ಪೊನ್ನಣ್ಣ ಭೇಟಿ
ಕಡಂಗ: ವಿರಾಜಪೇಟೆ ಶಾಸಕರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎಎಸ್ ಪೊನ್ನಣ್ಣ ವರು ಸೋಮವಾರ ಬೆಳಿಗ್ಗೆ ವಿವಿಧ ಕಾರ್ಯಕ್ರಮಗಳಿಗೆ ಕಡಂಗ ಹಾಗೂ ಸುತ್ತಮುತ್ತಲಿನ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿದರು. ಕಡಂಗ ಮೊಹಿಯದ್ದೀನ್ ಜುಮಾ ಮಸೀದಿಗೆ ಭೇಟಿ ನೀಡಿ ಮಸೀದಿಯ ಅಹ್ವಾಲುಗಳನ್ನು ಸ್ವೀಕರಿಸಿದರು ಈ ಸಂದರ್ಭದಲ್ಲಿ ಮಸೀದಿ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು ಮಸೀದಿ ಅಧ್ಯಕ್ಷರಾದ ಅಬ್ದುಲ, ಮತ್ತು ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ತದನಂತರ ಅರಪಟ್ಟು ಗ್ರಾಮದಲ್ಲಿರುವ ಶ್ರೀ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿದರು ಈ ಸಂದರ್ಭದಲ್ಲಿ ದೇವಸ್ಥಾನದ [...]
ಅರಪಟ್ಟು ಶ್ರೀ ಬಲಮುರಿ ಮಹಾಗಣಪತಿ ಸಮಿತಿ ವತಿಯಿಂದ 32ನೇ ವಾರ್ಷಿಕ ಗೌರಿ ಗಣೇಶ ಹಬ್ಬ
ಕಡಂಗ: ಅರಪಟ್ಟು ಗ್ರಾಮದ ಶ್ರೀ ಬಲಮರಿ ಮಹಾಗಣಪತಿ ಸೇವಾ ಸಮಿತಿಯಿಂದ 32ನೇ ವರ್ಷದ ಶ್ರೀ ಗೌರಿ ಗಣೇಶೋತ್ಸವವನ್ನು ಮಂಗಳವಾರ ದಿ0ದ ಸೋಮವಾರದವರೆಗೆ ನಡೆಸಲಾಗುವುದು. ಮಂಗಳವಾರ ಬೆಳಿಗ್ಗೆ 7.30 ಗಂಟೆಗೆ ಗಣಪತಿ ಹೋಮ ನಡೆಸಲಾಯಿತು. ಬೆಳಿಗ್ಗೆ 9:00ಗೆ ಶ್ರೀ ಗಣಪತಿಯ ವಿಸರ್ಜನಾ ಮೂರ್ತಿಯ ಪ್ರತಿಷ್ಠಾಪನೆ ವಿಘ್ನೇಶ್ವರನ ಪೂಜೆ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಸಲಾಯಿತು . ವಿಘ್ನೇಶ್ವರ ವಿಸರ್ಜನಾ ಮೂರ್ತಿಯನ್ನು ಕೂಡಿರ ಪ್ರಸನ್ನ ತಮ್ಮಯ್ಯ ಮತ್ತು ಅವರ ಸಂಸಾರವು ನೀಡಿದರು. ಪೂಜಾ ಕಾರ್ಯಕ್ರಮಕ್ಕೆ ಅರ್ಚಕರಾದ ಕೀರ್ತಿಶ್ ನೇತೃತ್ವವಿವಹಿಸಿದರು ಈ [...]
ಕೊಕೇರಿಗೆ ಶಾಸಕರಾದ ಎ.ಎಸ್.ಪೊನ್ನಣ್ಣ ಭೇಟಿ: ಕಾವೇರಿ ಮಹಿಳಾ ಮಂಡಲ ಕಟ್ಟಡದಲ್ಲಿ ಅದ್ದೂರಿ ಸ್ವಾಗತ
ಚೆಯ್ಯ0ಡಾಣೆ, ಸೆ 20. ಚೆಯ್ಯ0ಡಾಣೆ ಸಮೀಪದ ಕೊಕೇರಿ ಗ್ರಾಮದ ಕಾವೇರಿ ಮಹಿಳಾ ಮಂಡಲದ ಕಟ್ಟಡದಲ್ಲಿ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರಾ.ಎಸ್. ಪೊನ್ನಣ್ಣ ನವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಗ್ರಾಮಸ್ಥ ಚೇನಂಡ ಜೆಪ್ಪು ದೇವಯ್ಯ ಮಾತನಾಡಿ ಈವಾಗ ತಾನೇ ನೂತನವಾಗಿ ಆಯ್ಕೆಯಾದ ಶಾಸಕರು ನೀವು, ನಿಮ್ಮ ಈ ಅವಧಿಯಲ್ಲಿ ನೀವು ಮುತುವರ್ಜಿ ವಹಿಸಿ ನಮ್ಮ ಗ್ರಾಮದ ಮೇಲೆ ಅಭಿಮಾನವಿಟ್ಟು ನಮ್ಮ ಕೊಕೇರಿ ಗ್ರಾಮದ ಕೊಕೇರಿ ಕೊಳಕೇರಿ ಮಾರ್ಗದ 6 ಕಿ.ಮಿಟರ್ ರಸ್ತೆಯನ್ನು ಡಾಂಬರಿಕರಣ [...]
ನರಿಯಂದಡ ಗ್ರಾಮ ಪಂಚಾಯಿತಿಗೆ ಶಾಸಕ ಎ.ಎಸ್.ಪೊನ್ನಣ್ಣ ಭೇಟಿ
ಚೆಯ್ಯ0ಡಾಣೆ, ಸೆ 19. ಸ್ಥಳೀಯ ನರಿಯಂದಡ ಗ್ರಾಮಪಂಚಾಯಿತಿ ಕಾರ್ಯಾಲಯಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು,ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಭೇಟಿ ನೀಡಿ ಕುಂದು ಕೊರೆತೆಗಳನ್ನು ಆಲಿಸಿದರು. ಈ ಸಂದರ್ಭ ಜೆಜೆಎಂ ನಾ ತೌಸೀಫ್ ಶಾಸಕರ ಬಳಿ ಕೂಡಲೇ ವಿದ್ಯುತ್ ಪವರ್ ಸಪ್ಲೈ ನೀಡಿದರೆ ನೀರಿನ ಸಮಸ್ಯೆ ಬಗ್ಗೆ ಹರಿಯಲಿದೆ ಎಂದು ಗಮನಕ್ಕೆ ತಂದರು ಇದೆ ಸಂದರ್ಭ ಶಾಸಕರು ಮಡಿಕೇರಿ ವಿದ್ಯುತ್ ಪರಿವಿಕ್ಷಕರಿಗೆ ಕರೆ ಮಾಡಿ ಕೂಡಲೇ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಜೆಜೆಎಂ ನಾ ನೀರಿನ ಸೌಲಭ್ಯಕ್ಕೆ [...]
ಚೆಯ್ಯಂಡಾಣೆಯಲ್ಲಿ ಗೌರಿ ಗಣೇಶ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ
ಚೆಯ್ಯಂಡಾಣೆ,19. ಸ್ಥಳೀಯ ಗಣೇಶ ಸೇವಾ ಸಮಿತಿಯ ವತಿಯಿಂದ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ಶ್ರೀ ಗೌರಿ ಗಣೇಶೋತ್ಸವ ವಿಜೃಂಭಣೆ ಯಿಂದ ನಡೆಯಿತು. ಬೆಳಿಗ್ಗೆ 6 ಗಂಟೆಗೆ ಶ್ರೀ ಗಣಪತಿ ಹೋಮ,ನಂತರ ಗೌರಿ ಮತ್ತು ಮಹಾ ಗಣಪತಿ ಮೂರ್ತಿಗಳ ಪ್ರತಿಷ್ಠಾಪನೆ, ಮಹಾ ಮಂಗಳಾರತಿ,ಪ್ರಸಾದ ವಿನಿಯೋಗ ನಡೆಯಿತು.ನೆರದಿದ್ದ ಭಕ್ತದಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಕೂಡ ಮಾಡಲಾಗಿತ್ತು. ಪೂಜಾ ಕಾರ್ಯಗಳನ್ನು ಅರ್ಚಕರಾದ ಪೃಥ್ವಿ ರವರು ನೆರವೇರಿಸಿದರು. ಮಧ್ಯಾಹ್ನದ ನಂತರ ಮಹಾಗಣಪತಿ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ಮುಖ್ಯ ಬೀದಿಗಳಲ್ಲಿ [...]
ಚೇಲಾವರ ಜಲಪಾತಕ್ಕೆ ಎ.ಎಸ್.ಪೊನ್ನಣ್ಣ ಭೇಟಿ
ಮೂಲಭೂತ ಸೌಕರ್ಯಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಚೆಯ್ಯ0ಡಾಣೆ ಸೆ 19. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇಲಾವರ ಜಲಪಾತಕ್ಕೆ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಭೇಟಿ ನೀಡಿ ಜಲಪಾತದ ಹಾಗೂ ಗ್ರಾಮದ ವಿವಿಧ ಸಮಸ್ಯೆಗಳ ಬಗ್ಗೆ ಖುದ್ದು ಪರಿಶೀಲಿಸಿದರು. ಚೇಲಾವರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರಾದ ಪಟ್ಟಚೆರುವಳಂಡ ಕಿರಣ್ ಮಾತನಾಡಿ ದಿನನಿತ್ಯ ಪ್ರವಾಸಿಗರು ಹೆಚ್ಚಾಗಿ ಆಗಮಿಸಿಸುತಿದ್ದು ಅವರಿಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಪಾರ್ಕಿಂಗ್, ರಸ್ತೆ ಆಗಲೀಕರ ಮತಿತ್ತರ ವ್ಯವಸ್ಥೆಯನ್ನು [...]
ನರಿಯಂದಡ ಗ್ರಾಮ ಪಂಚಾಯಿತಿ ಗ್ರಾಮ ಸಭೆ
ಕಾಡಾನೆ,ಆಸ್ಪತ್ರೆ,ವಿದ್ಯುತ್, ಸ್ಮಶಾನ ಜಾಗ ಸಮಸ್ಯೆ ಬಗ್ಗೆ ಸಾರ್ವಜನಿಕರ ಅಸಮಾಧಾನ ಅಟ್ಟದಲ್ಲಿ ಒಂದು ಕಛೇರಿ, ಬೆಟ್ಟದಲ್ಲಿ ಒಂದು ಕಛೇರಿ; ಚಂಡೀರ ಮುದ್ದಪ್ಪ ಚೆಯ್ಯ0ಡಾಣೆ, ಸೆ 16: ನರಿಯಂದಡ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಸ್ಥಳೀಯ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ನಡೆಯಿತು. ಸಾರ್ವಜನಿಕರ ಪರವಾಗಿ ಪಟ್ರಪಂಡ ಜಗದೀಶ್ ಮಾತನಾಡಿ ಕಾಡಾನೆ ಹಾವಳಿ ಒಂದು ಕಡೆಯಾದರೆ ಇದೀಗ ಕೀಮಲೆ ಕಾಡಿನಲ್ಲಿ ಚಿರತೆ ಕೂಡ ಪ್ರತ್ಯಕ್ಷ ಗೊಂಡಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ,ಹಲವು ವರ್ಷದಿಂದ [...]
ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ
ಚೆಯ್ಯ0ಡಾಣೆ, ಸೆ 15. ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢ ಶಾಲೆಯಲ್ಲಿ ವಿಶ್ವ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಯಿತು.ವಿಶ್ವ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ವಿಶ್ವ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನದ ಮಹತ್ವದ ಕುರಿತು ಶಾಖೆಯ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.ಈ ಸಂದರ್ಭ ಸಾಕ್ಷರತಾ ಕ್ಲಬ್ ನ ಸಂಚಾಲಕ ಶಿಕ್ಷಕಿ ಬಿ.ಪಿ. ಸುನೀತಾ ಸಂವಿದಾನದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಈ ಸಂದರ್ಭ ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಕಡಂಗ ಸ.ಹಿ.ಪ್ರಾ. ಶಾಲೆ ಯಲ್ಲಿ ಪೋಷಣ್ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮ
ಕಡ0ಗ: ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ್ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಆಯುಷ್ ಇಲಾಖೆಯ ವೈದ್ಯಧಿಕಾರಿ ಡಾ. ಶೈಲಜಾ ಮಾತಾನಾಡಿ ಆಹಾರದಲ್ಲಿರುವ ಪೌಷ್ಟಿಕಾ0ಶದ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಶಾಲೆಯ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಪಿಎಂ ಶಾಂತಕುಮಾರಿ ರವರು ಪೌಷ್ಟಿಕ ಆಹಾರ ಸೇವನೆಯಿಂದ ಉಂಟಾಗುವ ಉಪಯೋಗಗಳ ಕುರಿತು ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಪೌಷ್ಟಿಕ ಆಹಾರಗಳನ್ನು ತಯಾರಿಸಿ ಹಾಗೂ ಹಣ್ಣು,ತರಕಾರಿ, [...]
ಮಹ್ಮೂದ್ ಮುಸ್ಲಿಯಾರ್ ಅನುಸ್ಮರಣೆ ಮತ್ತು ಸ್ವಲಾತ್ ಮಜ್ಲಿಸ್
ಚೆಯ್ಯ0ಡಾಣೆ: ಕೊಡಗು ಸುನ್ನೀವೆಲ್ಫೇರ್ ಅಸೋಸಿಯೆಷನ್ ಕತಾರ್ ಸಮಿತಿಯ ವತಿಯಿಂದ ಮಹ್ಮೂದ್ ಮುಸ್ಲಿಯಾರ್ (ಎಡಪಾಲ) ಅವರ ಅನುಸ್ಮರಣೆ ಮತ್ತು ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಕತಾರ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಜೀವನದಲ್ಲಿ ಅತಿಯಾದ ಸೂಕ್ಷ್ಮತೆಯನ್ನು ಪಾಲಿಸುತ್ತಿದ್ದ ಮಹ್ಮೂದ್ ಮುಸ್ಲಿಯಾರ್ ಕೊಡಗಿನ ಸುನ್ನೀ ಸಮೂಹದ ಏಳಿಗೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಒಬ್ಬ ಮಹಾನ್ ಸಾತ್ವಿಕ ಪಂಡಿತರಾಗಿದ್ದರು ಎಂದು ತಮ್ಮ ಅನುಭವಗಳನ್ನು ಸ್ಮರಿಸಿದರು. [...]
ನರಿಯಂದಡ ಗ್ರಾಮದ ಬ್ಲಾಕ್ 1ರ ವಾರ್ಡ್ ಸಭೆ
ಚೆಯ್ಯ0ಡಾಣೆ ಸೆ 13. ನರಿಯಂದಡ ಗ್ರಾಮ ಪಂಚಾಯಿತಿಯ 2023-24 ಸಾಲಿನ ನರಿಯಂದಡ ಗ್ರಾಮದ ಬ್ಲಾಕ್ 1ರ ವಾರ್ಡ್ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ವಾರ್ಡ್ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಬಿದ್ದಂಡ ರಾಜೇಶ್ ಅಚ್ಚಯ್ಯ ವಹಿಸಿ ಮಾತನಾಡಿ ನಮ್ಮ ಅವಧಿಯಲ್ಲಿ ಉತ್ತಮ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣ ಮಾಡಿದ್ದೇವೆ ಹಾಗೂ ಹಲವಾರು ಜನಪರ ಕಾಮಗಾರಿಗಳನ್ನು ನಡೆಸಿದ್ದೇವೆ ಇನ್ನು ಮುಂದಕ್ಕೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನ ಜನರ ಸಮಸ್ಯೆಗಳಿಗೆ ಸ್ವಂದಿಸುತ್ತೆನೆ ಎಂದರು. ಗ್ರಾಮ ಪಂಚಾಯಿತಿ [...]
ಕರಡ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮ
ವಿವಿಧ ಬಗ್ಗೆಯ ಪೌಷ್ಟಿಕ ಆಹಾರ ತಯಾರಿಸಿ ಗಮನ ಸೆಳೆದ ಅಂಗನವಾಡಿ ಕಾರ್ಯಕರ್ತೆಯರು ಚೆಯ್ಯ0ಡಾಣೆ, ಸೆ 13. ಸಮೀಪದ ಕರಡ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಅಭಿಯಾನ ಹಾಗೂ ಪೌಷ್ಟಿಕ ಆಹಾರ ಶಿಬಿರ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೌಶಿ ಕಾವೇರಮ್ಮ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆಯ ಅಧಿಕಾರಿ ಶೀಲಾ ಮಾತನಾಡಿ ಅಪೌಷ್ಟಿಕತೆಯನ್ನು ಹೋಗಲಾಡಿಸುವ ಉದ್ದೇಶದಿಂದ ಈ ಒಂದು ಕಾರ್ಯಕ್ರಮವನ್ನು [...]
ಕಡಂಗ: ಸಮವಸ್ತ್ರ ಹಾಗೂ ಶೂ ಸಾಕ್ಸ್ ವಿತರಣೆ
ಚೆಯ್ಯ0ಡಾಣೆ, ಸೆ 12: ಸ್ಥಳೀಯ ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನೀಡುತ್ತಿರುವ 2023-24 ನೇ ಸಾಲಿನ ಎರಡನೇ ಜೊತೆ ಸಮವಸ್ತ್ರದ ಬಟ್ಟೆ, ಶೂ ಹಾಗೂ ಸಾಕ್ಸ್ ಗಳ್ಳನ್ನು ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಂಡ ಕೌಶಿ ಕಾವೇರಮ್ಮ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ,ಮುಖ್ಯ ಶಿಕ್ಷಕಿ ಶಾಂತಿ ಕುಮಾರಿ, ಎಸ್ ಡಿ ಎಂ ಸಿ ಅಧ್ಯಕ್ಷೆ ಫಾತಿಮಾ,ಅಭಿವೃದ್ಧಿ ಅಧಿಕಾರಿ [...]
ಅರಪಟ್ಟು ಗ್ರಾಮದ ಬ್ಲಾಕ್ 1 ಹಾಗೂ 2 ವಾರ್ಡ್ ಸಭೆ
ಚೆಯ್ಯ0ಡಾಣೆ ಸೆ 12: ನರಿಯಂದಡ ಗ್ರಾಮ ಪಂಚಾಯಿತಿಯ 2023-24 ಸಾಲಿನ ಅರಪಟ್ಟು ಗ್ರಾಮದ ವಾರ್ಡ್ 1 ಮತ್ತು 2 ವಾರ್ಡ್ ಸಭೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು. ವಾರ್ಡ್ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ. ಸುಬೀರ್ ವಹಿಸಿ ಮಾತನಾಡಿ ಎರಡೂವರೆ ವರ್ಷದ ಅವಧಿಯಲ್ಲಿ ನಮ್ಮ ಗ್ರಾಮ ಪಂಚಾಯಿತಿ ಉತ್ತಮ ಕಾಮಗಾರಿಗಳನ್ನು ಕೈಗೊಂಡಿದ್ದು, ಗ್ರಾಮ ಪಂಚಾಯಿತಿಗೆ ಕಟ್ಟಡಕ್ಕೆ ಸರಿಯಾದ ದಾಖಲಾತಿ ಕೂಡ ಇರಲಿಲ್ಲ ಅದನ್ನು ಕೂಡ ಈ ಅವಧಿಯಲ್ಲಿ ಸರಿಪಡಿಸಿ ಉತ್ತಮವಾದ ಪಂಚಾಯಿತಿ [...]
ನರಿಯಂದಡ ಗ್ರಾಮ ಪಂಚಾಯಿತಿ ವಾರ್ಡ್ ಹಾಗೂ ಗ್ರಾಮ ಸಭೆ
ಚೆಯ್ಯ0ಡಾಣೆ, ಸೆ 8: ನರಿಯಂದಡ ಗ್ರಾಮ ಪಂಚಾಯಿತಿಯ 2023-24 ನೇ ಸಾಲಿನ ನರಿಯಂದಡ, ಅರಪಟ್ಟು ಗ್ರಾಮದ (1)ಹಾಗೂ (2), ಕರಡ, ಕೊಕೇರಿ, ಚೇಲಾವರ, ಗ್ರಾಮಗಳ ವಾರ್ಡ್ ಸಭೆಯನ್ನು ಆಯಾಯ ವಾರ್ಡ್ ನ ಸದಸ್ಯರ ಅಧ್ಯಕ್ಷತೆಯಲ್ಲಿ ದಿನಾಂಕ 11.09.2023 ರಿಂದ 13.09.2023 ವರೆಗೆ ಮತ್ತು ಗ್ರಾಮ ಸಭೆಯನ್ನು 16.09.2023 ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷೆಯಲ್ಲಿ ಹಾಗೂ ನೋಡೆಲ್ ಅಧಿಕಾರಿಗಳಾದ ಶ್ರೀಮತಿ ಸೀತಾಲಕ್ಷ್ಮಿ ಟಿ.ಎಸ್. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಉಪಸ್ಥಿತಿಯಲ್ಲಿ ಉಪಾಧ್ಯಕ್ಷರು ಹಾಗೂ ಸರ್ವ [...]
ಕಡಂಗದಲ್ಲಿ ಮಜಲಿಸುನೂರ್ ವಾರ್ಷಿಕ ಕಾರ್ಯಕ್ರಮ
ಕಡಂಗ: ಎಸ್ ವೈ ಎಸ್ ಮತ್ತು ಎಸ್ ಕೆ ಎಸ್ ಎಸ್ ಎಫ್ ಶಾಖಾವತಿಯಿಂದ ಹತ್ತನೇ ವಾರ್ಷಿಕ ಮಜಿಲಿಸುನೂರ್ ಹಾಗೂ ಇಸ್ಲಾಮಿಕ್ ಕಥಾಪ್ರಸಂಗವು ಕಡಂಗ ಶಾದಿ ಮಹಲ್ ಸಭಾಂಗಣದಲ್ಲಿ ನಡೆಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತ್ ಅಧ್ಯಕ್ಷ ಅಬ್ದುಲ್ಲ ರವರು ನಿರ್ವಹಿಸಿದರು. ಪ್ರಾರ್ಥನೆ ಖತೀಬ್ ಉಸ್ತಾದರಾದ ಲತೀಫ್ ಲತೀಫಿ ನಿರ್ವಹಿಸಿ ಕೊಟ್ಟರು. ಮಜಿಲಿಸುನ್ನೋರ್ ಕಾರ್ಯಕ್ರಮ ಕ್ಕೆ ಕೊಡಗು ಜಿಲ್ಲಾ ನಾಯಿಬ್ ಕಾಜಿ ಅಬ್ದುಲ್ಲಾ ಮುಸ್ಲಿಯರ್ ಎಡಪಲ್ಲರವರು ನೇತೃತ್ವ ವಹಿಸಿದರು. ಸ್ವಾಗತವನ್ನು ಮದರಸ ಮುಖ್ಯೋಪಾಧ್ಯಾಯರಾದ ಶುಹೈಬ್ ಫೈಜಿ ರವರು ನೆರವೇರಿಸಿದರು. [...]
ಕೊಕೇರಿ ಚೇರುವಾಳಂಡ ಪುಲಿಮಕ್ಕಿ ಐನ್ ಮನೆಯಲ್ಲಿ ಕೈಲ್ ಪೋಳ್ದ್ ಆಚರಣೆ
ಚೆಯ್ಯ0ಡಾಣೆ, ಸೆ, 04: ಚೆಯ್ಯ0ಡಾಣೆ ಸಮೀಪದ ಕೊಕೇರಿ ಚೇರುವಾಳಂಡ ಪುಲಿಮಕ್ಕಿ ಐನ್ ಮನೆಯಲ್ಲಿ ಕೈಲ್ ಪೋಳ್ದ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿದರು. ಐನ್ ಮನೆಯಲ್ಲಿ ನೆಲ್ಲಕ್ಕಿ, ನಡುಬಾಣೆಯಲ್ಲಿ ಕೋವಿ, ಓಡಿಕತ್ತಿ, ತಂಡ್ ವಿವಿಧ ಆಯುಧಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಈ ಸಂದರ್ಭ ಪಟ್ಟೆದಾರ ಗಣೇಶ್ ಗಣಪತಿ, ರಾಕೇಶ್ ಸುಬ್ಬಯ್ಯ, ಮುದಪ್ಪ, ಭೀಮಯ್ಯ, ಸುಬ್ಬಯ್ಯ, ಚೇತನ್, ಕಾವೇರಪ್ಪ, ಪುನೀತ್, ಆಶಾ, ಶಿಸಿ ಕಾವೇರಮ್ಮ, ಪುಷ್ಪ, ಸರೋಜ, ಮದುರ, ಯಮುನಾ, ಆಚಲ್, ಮಾನ್ವಿ ಮತಿತ್ತರರು ಇದ್ದರು. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಕೇಮ್‌ವೆಲ್ ಬಯೋಫಾರ್ಮಾ ಸಂಸ್ಥೆಯಿಂದ ಉಚಿತ ವಿತರಣೆ
ಕಡಂಗ: ಸರ್ಕಾರಿ ಶಾಲೆ ಕಡಂಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಕೇಮ್‌ವೆಲ್ ಬಯೋಫಾರ್ಮಾ ಸಂಸ್ಥೆ ವತಿಯಿಂದ ಉಚಿತ ಬ್ಯಾಗ್ , ನೋಟ್ ಪುಸ್ತಕ, ರೇಖಾಗಣಿತ ಪೆಟ್ಟಿಗೆ ಇನ್ನಿತರ ವಸ್ತುಗಳನ್ನು ಸಂಸ್ಥೆಯು ಉಪಾಧ್ಯಕ್ಷರಾದ ಶ್ರೀಯುತ ಮಾಳೆಯಂಡ ಪ್ರಕಾಶ್ ನಾಣಯ್ಯರವರು ವಿತರಿಸಿದರು. ನಂತರ ಮಾತನಾಡಿ ವಿದ್ಯಾರ್ಥಿಗಳು ಸೌಲಭ್ಯದ ಸದುಪಯೋಗವನ್ನು ಪಡೆದುಕೊಂಡು ಉನ್ನತ ಹುದ್ದೆಗೇರುವಂತೆ ಪ್ರಯತ್ನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಶಾಲಾ ಸ್ಥಳದಾನಿಗಳು, ಶಿಕ್ಷಕರು ಹಾಗು ವಿದ್ಯಾರ್ಥಿಗಳು ಹಾಜರಿದ್ದರು. ವರದಿ: ನೌಫಲ್ ಕಡಂಗ
ಕಡಂಗದಲ್ಲಿ ಪೀಪಲ್ ಕಾನ್ಫರೆನ್ಸ್ ಕಾರ್ಯಕ್ರಮ
ಕಡಂಗ.ಸೆ 04: ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ ಎಸ್ ಎಸ್ ) ಕಡಂಗ ಯೂನಿಟ್ ವತಿಯಿಂದ ಬದ್ರಿಯ ಮದರಸ ಸಭಾಂಗಣದಲ್ಲಿ ನಾವು ಭಾರತೀಯರು ಎಂಬ ದೇಯ ವಾಕ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಎಸ್ ಎಸ್ ಎಫ್ 50 ನೇ ವರ್ಷಚರಣೆಯ ಅಂಗವಾಗಿ ಎಲ್ಲಾ ಯುನಿಟ್ ಗಳಲ್ಲಿ ಆಯೋಜಿಸುವ ಪೀಪಲ್ ಕಾನ್ಫರೆನ್ಸ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಸ್ ಎಫ್ ಕಡಂಗ ಯೂನಿಟ್ ಅಧ್ಯಕ್ಷ ರಾಫಿ ಝನಿ ವಹಿಸಿದರು. ಉದ್ಘಾಟನೆಯನ್ನು ಸ್ಥಳೀಯ ಬದ್ರಿಯಾ ಮಸೀದಿ ಖತೀಬ್ ಇಸ್ಮಾಯಿಲ್ [...]
ಚೆಯ್ಯಂಡಾಣೆ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
ಚೆಯ್ಯ0ಡಾಣೆ, ಸೆ, 01: ನಾಪೋಕ್ಲು ಬಳಿಯ ಚೆರಿಯಪರಂಬು ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಬಾಲಕ ಮತ್ತು ಬಾಲಕಿಯರ ವಿಭಾಗದ ಬಾಲ್ ಬ್ಯಾಡ್ಮಿಂಟನ್ ಹಾಗೂ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ಜಯಗಳಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ದೈಹಿಕ ಶಿಕ್ಷಕರಾಗಿ ಪಿ.ಬಿ.ಪೊನ್ನಪ್ಪ ಹಾಗೂ ಬಿ.ಎಸ್.ಭವ್ಯ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್
ಚೆಯ್ಯ0ಡಾಣೆ ಸೆ, 01: ಎಡಪಾಲ ಅಂಡತ್ ಮಾನಿ ಮಖಾಂ ಉರೂಸ್ 2024 ನೇ ಜನವರಿ 28 ರಿಂದ 30 ನೇ ತಾರೀಕಿನ ವರೆಗೆ ನಡೆಸಲು ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಕೆ.ಯು.ಶಾಫಿ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಚೆಯ್ಯಂಡಾಣೆಯಲ್ಲಿ ಆಕ್ರಮ ಗಾಂಜಾ ಮಾರಾಟಕ್ಕೆ ಯತ್ನ ಆರೋಪಿ ಬಂಧನ
ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ಬಿರುಸಿನ ಕಾರ್ಯಾಚರಣೆ ಚೆಯ್ಯ0ಡಾಣೆ ಆ 31. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಚೆಯ್ಯಂಡಾಣೆ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ಚೇಲಾವರಕ್ಕೆ ತೆರಳುವ ರಸ್ತೆಯಲ್ಲಿರುವ ಪ್ರಯಾಣಿಕರ ಬಸ್ ತಂಗುದಾಣದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ನಾಪೋಕ್ಲು ಪೊಲೀಸರು ಯಶಸ್ವಿಯಾಗಿದ್ದಾರೆ. ವಿರಾಜಪೇಟೆಯ ಪೆರುಂಬಾಡಿ ಚೆಕ್ ಪೋಸ್ಟ್ ಹತ್ತಿರದ ನಿವಾಸಿ ಲಾರಿ ಚಾಲಕ ಶರ್ಫುದ್ದಿನ್ ಪಿ.ಎ.(27) ಬಂಧಿತ ಆರೋಪಿಯಾಗಿದ್ದಾನೆ. ಚೆಯ್ಯಡಾಣೆಯ ನರಿಯಂದಡ ಕೇಂದ್ರ ಪ್ರೌಢ ಶಾಲೆಯ ಚೇಲಾವರಕ್ಕೆ ತೆರಳುವ ಪ್ರಯಾಣಿಕರ ಬಸ್ಸು [...]
ಕಡಂಗದಲ್ಲಿ ಚೆಯ್ಯಂಡಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಚೆಯ್ಯ0ಡಾಣೆ, ಸೆ 01: ಕಡಂಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚೆಯ್ಯ0ಡಾಣೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷೆತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷೆ ಫಾತಿಮಾ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಉದ್ಘಾಟಿಸಿ ಮಾತನಾಡಿ ನಾವು ಶಾಲೆಗೆ ಹೋಗುತ್ತಿರುವ ಹಳೆಯ ಸವಿನೆನಪ್ಪನ್ನು ಸ್ಮರಿಸಿದರು ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಸರಕಾರ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು ಶಿಕ್ಷಕರು ವಿದ್ಯಾರ್ಥಿಗಳನ್ನು ಮುಂದೆ ತರಲು ಪ್ರಯತ್ನಿಸಬೇಕು, ಇಂದಿನ ಮಕ್ಕಳೇ [...]
ಕರಡ ಕೀಮಲೆ ಕಾಡ್ ನಲ್ಲಿ ಚಿರತೆ ಪ್ರತ್ಯಕ್ಷ
ಚೆಯ್ಯಂಡಾಣೆ,ಆ 31: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಸಮೀಪದ ಕೀಮಲೆ ಕಾಡ್ ನಲ್ಲಿ ಸೋಮವಾರ ಸ್ಥಳೀಯ ನಿವಾಸಿ ಹೇಮಂತ್ ರವರ ಸಿಸಿಟಿವಿ ಯಲ್ಲಿ ಚಿರತೆಯೊಂದು ಸಂಚರಿಸುವ ವಿಡಿಯೋ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದೇ ಗ್ರಾಮದ ಚಡಗರ ಕಿಶನ್ ಎಂಬುವರ ಸಾಕು ನಾಯಿಯನ್ನು ಚಿರತೆ ಕೊಂದು ಹಾಕಿದ್ದು ಶಾಲಾ ವಿದ್ಯಾರ್ಥಿಗಳು,ಕಾರ್ಮಿಕರು ಭಯದಲ್ಲಿ ಸಂಚರಿಸುವ ಪರಸ್ಥಿತಿ ನಿರ್ಮಾಣವಾಗಿದೆ ಸಂಬಂಧಪಟ್ಟ ಅರಣ್ಯ ಇಲಾಖೆ ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು ಹಾಗೂ ಈ ವ್ಯಾಪ್ತಿಯಲ್ಲಿ ನಿರಂತರ ಕಾಡಾನೆ ದಾಳಿ [...]
ಕಡಂಗದಲ್ಲಿ ಚೆಯ್ಯಂಡಾಣೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಚೆಯ್ಯಂಡಾಣೆ, ಆ 28: ಚೆಯ್ಯಂಡಾಣೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕಡಂಗ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಯ್ಯಂಡಾಣೆ ವಲಯ ಕಾಂಗ್ರೆಸ್ ಅಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ವಹಿಸಿದರು. ಸಭೆಯಲ್ಲಿ ಕೊಡಗು ಡಿಸಿಸಿ ಸದಸ್ಯರಾದ ನಂಬಿಯಪಂಡ ಮಣಿ ಅಯ್ಯಮ್ಮ ಮಾತನಾಡಿ ಪಕ್ಷಕ್ಕೆ ಎಲ್ಲರ ಸಹಕಾರ ಮುಖ್ಯ ಹಿರಿಯ ಕಾರ್ಯಕರ್ತರನ್ನು ಗೌರವಿಸಿ ಕಿರಿಯರನ್ನು ಮನಗಂಡರೆ ಮಾತ್ರ ಪಕ್ಷ ಸಂಘಟಿಸಲು ಸಾಧ್ಯ ಪಕ್ಷದಲ್ಲಿ ಯಾವುದೇ ಬಿನ್ನಾಭಿಪ್ರಾಯ ಇದ್ದರೆ ಅದನ್ನು ತ್ವರಿತವಾಗಿ ಪರಿಹರಿಸಬೇಕು ಆದರೆ ಮಾತ್ರ [...]
ಮಿಸ್ ಮೈಸೂರ್ 2023 ರ ವಿನ್ನರ್ ಆಗಿ ಕೊಡಗಿನ ಬಿದ್ದಂಡ ಸುರಕ್ಷಿತ
ಚೆಯ್ಯಂಡಾಣೆ: ಎಸ್ ಎಸ್ ಕಲಾ ಸಂಗಮದ ವತಿಯಿಂದ ಮಿಸ್,ಮಿಸೆಸ್ ಅಂಡ್ ಕಿಡ್ಸ್ ಸೀಸನ್ ಫೋರ್ ಕಾರ್ಯಕ್ರಮ ಮೈಸೂರಿನ ಗುರು ರೆಸಿಡೆನ್ಸಿ ಹೋಟೆಲ್ ನಲ್ಲಿ ನಡೆಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 60 ಕ್ಕೂ ಹೆಚ್ಚು ಸ್ವರ್ದಿಗಳು ಭಾಗವಹಿಸಿದರು. ಇದರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೆಯ್ಯ0ಡಾಣೆಯ ಕೊಕೇರಿ ಗ್ರಾಮದ ನಿವೃತ ದೈಹಿಕ ಶಿಕ್ಷಕ ಬಿದ್ದಂಡ ರಾಜ ಉತ್ತಪ್ಪ ಹಾಗೂ ಸಿಂತಿಯ ಉತ್ತಪ್ಪ ಪುತ್ರಿ ಬಿದ್ದಂಡ ಸುರಕ್ಷಿತ ಮಿಸ್ ಮೈಸೂರ್ ವಿನ್ನರ್ ಆಗಿ ಹೊರಹೋಮ್ಮಿದ್ದಾರೆ. ಮಿಸ್ ಮೈಸೂರ್ ಫ್ಯಾಶನ್ ಕಾರ್ಯಕ್ರಮದಲ್ಲಿ [...]
ಎಸ್.ಎಸ್.ಎಫ್. ಕಡಂಗ ಸೆಕ್ಟರ್ ವತಿಯಿಂದ ಬೈಕ್ ಜಾಥಾ
ಬೆಂಗಳೂರುವಿನಲ್ಲಿ ನಡೆಯಲಿರುವ ಎಸ್ ಎಸ್ ಎಫ್ ಗೋಲ್ಡನ್ ಫಿಫ್ಟಿಗೆ ಪ್ರಚಾರ ಚೆಯ್ಯಂಡಾಣೆ, ಆ 20: ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ ಎಸ್ ಎಫ್ ) ಕಡಂಗ ಸೆಕ್ಟರ್ ವತಿಯಿಂದ ಸೆಪ್ಟೆಂಬರ್ 10 ರಂದು ಬೆಂಗಳೂರುವಿನಲ್ಲಿ ನಡೆಯಲಿರುವ ಎಸ್ ಎಸ್ ಎಫ್ ಗೋಲ್ಡನ್ ಫಿಫ್ಟಿ ಮಹಾ ಸಮ್ಮೇಳನದ ಪ್ರಚಾರಾರ್ಥ ಬೈಕ್ ಜಾಥಾ ಹಮ್ಮಿಕೊಳ್ಳಲಾಗಿತ್ತು. *lಶೈಖುನಾ ಮಹ್ಮೂದ್ ಉಸ್ತಾದರ ಮಖ್ಬರ ಝಿಯಾರತ್ ನೊಂದಿಗೆ ಕಿಕ್ಕರೆ ಯಿಂದ ಪ್ರಾರಂಭಗೊಂಡ ಬೈಕ್ ಜಾಥಾ ಎಡಪಾಲ, ಕೊಕ್ಕಂಡಬಾಣೆ ಮೂಲಕ ಸಂಚರಿಸಿ ಕಡಂಗ ಪಟ್ಟಣದಲ್ಲಿ ಸಮಾಪ್ತಿ [...]
ನರಿಯಂದಡ ಕೇಂದ್ರ ಪ್ರೌಢಶಾಲೆಯ ವಾರ್ಷಿಕ ಮಹಾ ಸಭೆ
ಚೆಯ್ಯಂಡಾಣೆ, ಆ 19: ಸ್ಥಳೀಯ ನರಿಯಂದಡ ಕೇಂದ್ರ ಪ್ರೌಢಶಾಲೆಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ನರಿಯಂದಡ ಕೇಂದ್ರ ಪ್ರೌಢಶಾಲೆಯ ಆಡಳಿತ ಮಂಡಳಿಯ ಉಪಾಧ್ಯಕ್ಷ ಚೈಯ್ಯ0ಡ ಪೆಮ್ಮಯ್ಯರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಶಾಲೆಯ ಶಿಕ್ಷಕಿ ಮಮತಾ ಮಂಡಿಸಿದರು. ಶೈಕ್ಷಣಿಕ ವರದಿಯನ್ನು ಮುಖ್ಯ ಶಿಕ್ಷಕಿ ಭವ್ಯ ಮಂಡಿಸಿದರು. ನಂತರ ನಡೆದ ಇತರ ಚರ್ಚೆಯಲ್ಲಿ ಸದಸ್ಯರಾದ ಚೇನಂಡ ಜೆಪ್ಪು ದೇವಯ್ಯ ಮಾತನಾಡಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ನಮ್ಮ ಬೆಂಬಲವಿದೆ ಇದಕ್ಕೆ ವಿರುದ್ಧವಾಗಿ ನಡೆದರೆ [...]
ಗ್ರಾ.ಪಂ.ಸದಸ್ಯ ಹಾಗೂ ಸಹೋದರರಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ
ಚೆಯ್ಯಂಡಾಣೆ ಆ 18: ಸಮೀಪದ ಎಡಪಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುವ ಬಡ ವಿದ್ಯಾರ್ಥಿಗಳಿಗೆ ನರಿಯಂದಡ ಗ್ರಾ.ಪಂ. ಸದಸ್ಯ ಮಮ್ಮದ್ ಹಾಗೂ ಸಹೋಧರ ಸಮದ್ ರವರು ಉಚಿತವಾಗಿ ಬ್ಯಾಗ್ ವಿತರಿಸಿದರು. ಈ ಸಂದರ್ಭ ಎಸ್ ಡಿ ಎಂ ಸಿ ಅಧ್ಯಕ್ಷ ಅಬ್ದುಲ್ಲ, ಶಾಲಾ ಮುಖ್ಯ ಶಿಕ್ಷಕಿ ಶ್ಯಾಮಲ, ಎಸ್ ಡಿಎಂಸಿ ಸದಸ್ಯರು, ಶಿಕ್ಷಕ ವೃಂದದವರು, ಪೋಷಕರು ಉಪಸ್ಥಿತರಿದ್ದರು. ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ
ಚೆಯ್ಯಂಡಾಣೆಯಲ್ಲಿ ಮರುಕಳಿಸಿದ ಕಾಡಾನೆ ದಾಳಿ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ವಾಹನಕ್ಕೆ ದಾಳಿ
ಚೆಯ್ಯಂಡಾಣೆ, ಆ 17: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಕೇರಿ ಗ್ರಾಮದಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಿದ ಸಿಪ್ಟ್ ಕಾರಿನ ಮೇಲೆ ಕಾಡಾನೆ ದಾಳಿ ನಡೆಸಿದ್ದು ಕಾರು ಜಖಂಗೊಂಡಿದೆ. ನಿನ್ನೆ ಬೆಳಿಗ್ಗೆ ನೆಲ್ಲಮಕ್ಕಡ ವಿವೇಕ್ ರವರ ಮನೆಯ ಅಂಗಳದಲ್ಲಿ ನಿಲ್ಲಿಸಿದ ಕಾರಿಗೆ ಈ ವ್ಯಾಪ್ತಿಯಲ್ಲಿ ತಿರುಗಾಡುತಿದ್ದ ಒಂಟಿ ಸಲಗ ದಾಳಿ ನಡೆಸಿದೆ ಕಳೆದ ಕೆಲ ದಿನಗಳ ಹಿಂದೆ ವಿವೇಕ್ ರವರ ಮತ್ತೊಂದು ವಾಹನಕ್ಕೆ ಕಾಡಾನೆ ಹಿಂಡು ದಾಳಿ ನಡೆಸಿತ್ತು. ದಾಳಿಕ್ಕೊಳಗಾದ ವಾಹನದ ಮಾಲೀಕ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿ ನಿರಂತರ [...]
ನರಿಯಂದಡ ಗ್ರಾಮ ಪಂಚಾಯಿತಿ ವತಿಯಿಂದ ಸನ್ಮಾನ
ಚೆಯ್ಯಂಡಾಣೆ, ಆ 17. ನರಿಯಂದಡ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ಕಟ್ಟಡಕ್ಕೆ ಸಹಕರಿಸಿದ ದಾನಿಗಳಿಗೆ ಹಾಗೂ ಕಟ್ಟಡ ಕಟ್ಟಲು ತೆರೆಮೆರೆಯಲ್ಲಿ ಕಾರ್ಯನಿರ್ವಹಿಸಿದ ಗುತ್ತಿಗೆದಾರರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ವಹಿಸಿದರು. ದಾನಿಗಳ ಪರಿಚಯವನ್ನು ಗ್ರಾ.ಪಂ. ಉಪಾಧ್ಯಕ್ಷರಾದ ಕೋಡಿರ ವಿನೋದ್ ನಾಣಯ್ಯ ಮಾಡಿ ಗ್ರಾ.ಪಂ. ಆರ್ಥಿಕ ಕೊರತೆ ಬಂದಾಗ ಬೆನ್ನೆಲುಬಾಗಿ ಸಹಕರಿಸಿದ ದಾನಿಗಳನ್ನು ನೆನೆಯುವ ಕಾರ್ಯಕ್ರಮ ಇದಾಗಿದ್ದು ಇದಕ್ಕೆ ತೆರೆಮೆರೆಯಲ್ಲಿ ಹಲವಾರು ದಾನಿಗಳು ಹಾಗೂ ಗುತ್ತಿಗೆ ದಾರರು ಸಹಕರಿಸಿದ್ದಾರೆ [...]
ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯ
ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯತ್ತ ನನ್ನ ಹೆಜ್ಜೆ; ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಕಾರ್ಯಾಚರಿಸುತ್ತಿರುವ ನರಿಯಂದಡ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 35 ಕಿ.ಮೀ. ದೂರದಲ್ಲಿದೆ. ತಾಲ್ಲೂಕು ಕೇಂದ್ರ ಮಡಿಕೇರಿಯಿಂದ 35 ಕಿ.ಮೀ ದೂರದಲ್ಲಿದೆ .ಸದರಿ ಗ್ರಾಮ ಪಂಚಾಯತಿಯು ವಿರಾಜಪೇಟೆ ತಾಲ್ಲೂಕಿಗೆ ಹತ್ತಿರವಾಗಿರುತ್ತದೆ. ಪ್ರಸ್ತುತ ನರಿಯಂದಡ ಗ್ರಾಮ ಪಂಚಾಯತಿಯ ಅಧ್ಯಕ್ಷರಾಗಿ ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯನವರು ಕಾರ್ಯನಿರ್ವಹಿಸುತ್ತಿದ್ದಾರೆ. ನರಿಯಂದಡ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸುತ್ತಿರುವ ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯನವರನ್ನು “ಸರ್ಚ್ ಕೂರ್ಗ್ [...]
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಬಿದ್ದಂಡ ಎಂ ರಾಜೇಶ್ ಅಚ್ಚಯ್ಯ President 9483785791
- ಮಂಜುಳಾ ಬಿ ಹೆಚ್ Vice President 9482036920
- ಹೆಚ್ ಎಂ ರಾಜು Member 876248239
- ಮಮ್ಮದ್ ಕೆ ಇ Member 9480083780
- ಎಂ ಬಿ ಈರಪ್ಪ Member 9480771310
- ಯು ಪಿ ಕವಿತ Member 9481951081
- ರಜೀನ ವೈ ಆರ್ Member 7022462818
- ಪೆಮ್ಮಂಡ ಕೌಶಿ ಕಾವೇರಮ್ಮ Member 9482839068
- ಸಿ ಇ ಸುಬೀರ್ Member 8277278460
- ಕೆ ಎಂ ನಾಣಯ್ಯ Member 9448005634
- ಎಂ ವಿ ನೇತ್ರಾವತಿ Member 8762291797
- ವಿಲೀನ್ ಬಿ ಜಿ Member 9535361826
- ಪಿ ಜಿ ರಾಣಿ Member 9480170804
- ಎನ್ ಟಿ ವಾಣಿ Member 9480670560
- ಪುಷ್ಪ ಬಿ ಎಸ್ Member 9481451291
ಪಂಚಾಯ್ತಿ ಸಂಪರ್ಕ
ವಿಳಾಸ: ಚೆಯ್ಯಂಡಾಣೆ ಅಂಚೆ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ.
Tel: 08274-259041
Pdo:
Mob:
Email: mad.nariyandada@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
2015 – 2020
- ಬಿಲ್ಲವರ ಬೇಬಿ ಶಿವಪ್ಪ President 9483254269
- ಸೋಮಣ್ಣ ರವಿ ಎಂ.ಪಿ. Vice President 9482275859
- ಬಿ.ಈ. ಶಾಂತಿ Member 8762986730
- ಬೆಳಿಯಂಡ್ರ ರತೀಶ್ ಕುಮಾರ್ ಶರಣ್ Member 9448504899
- ಅನಂತ್ ಕುಮಾರ್ ಟಿ.ಪಿ. Member 9449475655
- ರೋಹಿಣಿ Member 9880564224
- ನಂಬಿಯಪಂಡ ವಾಣಿ Member 9480670560
- ಕೋಡಿರ ತಮ್ಮಯ್ಯ ಪ್ರಸನ್ನ Member 9448273342
- ಕೆ.ಜೆ. ಪ್ರಕಾಶ್ Member 9482193033
- ಯು.ಎ. ಪ್ರಕಾಶ್ Member 8762604071
- ಕೆ.ಬಿ. ರಾಜಲಕ್ಷ್ಮಿ Member 8762235069
- ಚಂಗಪ್ಪ ರಂಜು Member 8277131972
- ಮುಂಡ್ಯೋಳಂಡ ಜಿ. ಲಲಿತ Member 9480020926
- ಭಾರತಿ ಪಿ.ಜಿ. Member 8277020973
- ಐತಿಚಂಡ ಕೆ ವನಿತ ಪ್ರಕಾಶ್ Member 8762348449
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ


